ಲ್ಯಾಪ್‌ಟಾಪ್ ಖರೀದಿಸುವ ಮುನ್ನ ಇತ್ತ ಗಮನಹರಿಸಿ

By Shwetha
|

ನೀವು ಯಾವುದೇ ಉತ್ಪನ್ನವನ್ನು ಖರೀದಿಸುವ ಮುನ್ನ ಅದರ ಬಗ್ಗೆ ಪೂರ್ವಾಲೋಚನೆಯನ್ನು ಮಾಡುವುದು ಇನ್ನಷ್ಟು ಮಾಹಿತಿ ಸಂಗ್ರಹಿಸುವುದು ಅದರ ಮೌಲ್ಯವನ್ನು ಏರಿಸುತ್ತದೆ ಮತ್ತು ಉತ್ಪನ್ನದ ಸುದೀರ್ಘ ಬಾಳ್ವೆಯನ್ನು ನಿಮಗೆ ಒದಗಿಸುತ್ತದೆ.

ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹೀಗೆ ಪ್ರತಿಯೊಂದು ತಾಂತ್ರಿಕ ಉತ್ಪನ್ನಕ್ಕೂ ಅತಿ ಮುಖ್ಯವಾದ ವಿಷಯ ಸಂಗ್ರಹಣೆ ಇರುತ್ತದೆ. ತಂತ್ರಜ್ಞಾನದ ಗುಣಮಟ್ಟ ಕೂಡ ಸೇರಿಕೊಂಡಿರುತ್ತದೆ ಇದೆಲ್ಲಾ ಮಾಹಿತಿ ನಿಮಗೆ ಲಭ್ಯವಾಗುವುದು ಈ ಉತ್ಪನ್ನದ ಬಗ್ಗೆ ಯಾರಾದರೂ ಮಾಹಿತಿ ನೀಡಿದಾಗ ಮಾತ್ರವೇ. ಹೊಸ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಪ್ರಸ್ತುತ ಲಗ್ಗೆ ಇಡುತ್ತಿದ್ದು ಅದರ ಬಗೆಗಗಿನ ತಿಳುವು ಕೂಡ ಅಗತ್ಯವಾಗಿರುತ್ತದೆ.

ಇಂದಿನ ಲೇಖನದಲ್ಲಿ ನಾವು ಲ್ಯಾಪ್‌ಟಾಪ್ ಖರೀದಿಯ ಬಗೆಗಿನ ಮಾಹಿತಿಗಳನ್ನು ಸಚಿತ್ರವಾಗಿ ಇಲ್ಲಿ ವಿವರಿಸುತ್ತಿದ್ದೇವೆ. ಲ್ಯಾಪ್‌ಟಾಪ್ ಖರೀದಿಯನ್ನು ಹೇಗೆ ಮಾಡಬೇಕು? ಖರೀದಿಸುವಾಗ ಏನೆಲ್ಲಾ ಅಂಶಗಳ ಬಗ್ಗೆ ಗಮನ ನೀಡಬೇಕು ಎಂಬುದನ್ನು ಇಲ್ಲಿ ವಿವರಿಸುತ್ತಿದ್ದೇವೆ.

#1

#1

ನಿಮಗೆ ಗ್ಯಾಜೆಟ್ ಪ್ರಿಯವಾಗಿದ್ದಲ್ಲಿ ಟಚ್ ಸ್ಕ್ರೀನ್ ಉಳ್ಳ ಲ್ಯಾಪ್‌ಟಾಪ್ ಅನ್ನು ನೀವು ಖರೀದಿಸಬಹುದು. ವಿಂಡೋಸ್ 8 ಇಂಟರ್ಫೇಸ್ ಟಚ್‌ಸ್ಕ್ರೀನ್‌ನೊಂದಿಗೆ ಬಲಸಲು ಸುಲಭವಾಗಿರುತ್ತದೆ.
ಟಚ್ ಸ್ಕ್ರೀನ್ ಲ್ಯಾಪ್‌ಟಾಪ್‌ಗಳು ಬಳಸಲು ತುಂಬಾ ಸುಲಭವಾಗಿದ್ದು ನೀವು ಸರಳವಾಗಿಯೇ ವೆಬ್ ಪುಟಗಳನ್ನು ಸ್ಕ್ರಾಲ್ ಮಾಡಬಹುದು. ಚಿತ್ರಗಳನ್ನು ಬ್ರೌಸ್ ಮಾಡಬಹುದು ಹಾಗೂ ಸಾಂಪ್ರದಾಯಿಕ ಕೀಬೋರ್ಡ್ ಮೋಡ್‌ಗೆ ನೀವು ಹಿಂತಿರುಗಬಹುದು.

#2

#2

12 ಅಥವಾ 13 ಇಂಚಿನ ಲ್ಯಾಪ್‌ಟಾಪ್‌ಗಳು ಉತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ನಿಮ್ಮ ಬಳಕೆಯ ಕೇಂದ್ರ, ಕಚೇರಿ ಅಥವಾ ಮನೆಯಾಗಿದ್ದರೆ 14 ಅಥವಾ 15 ಇಂಚಿನ ಲ್ಯಾಪ್‌ಟಾಪ್‌ಗಳನ್ನು ನಿಮಗೆ ಸುಲಭವಾಗಿ ಕೊಂಡೊಯ್ಯಬಹುದು. ನೀವು ಹೋದಲ್ಲೆಲ್ಲಾ ನಿಮ್ಮ ಲ್ಯಾಪ್‌ಟಾಪ್‌ ಅನ್ನು ಕೊಂಡೊಯ್ಯುವವರು ನೀವಾಗಿದ್ದರೆ ಪ್ಲಾಸ್ಟಿಕ್ ಬದಲಾಗಿ ಮೆಟಾಲಿಕ್ ಬಾಡಿಯನ್ನು ಹೊಂದಿರುವ ಲ್ಯಾಪ್‌ಟಾಪ್‌ ಅನ್ನು ಖರೀದಿಸುವುದು ಉತ್ತಮವಾಗಿರುತ್ತದೆ.

#3

#3

ಆಪ್ಟಿಕಲ್ ಡ್ರೈವ್ಸ್ ತುಂಬಾ ವಿರಳವಾಗಿರುವುದರಿಂದ 15.6 ಇಂಚಿನ ಲ್ಯಾಪ್‌ಟಾಪ್ ಅನ್ನೇ ನೀವು ಖರೀದಿಸಬೇಕಾಗುತ್ತದೆ. ಇದು ಸಣ್ಣದಿದ್ದಷ್ಟೂ ಉತ್ತಮ ವೇಗವನ್ನು ನೀಡುತ್ತದೆ.

#4

#4

ಇತರ ಸಾಫ್ಟ್‌ವೇರ್‌ನೊಂದಿಗೆ ಯಾವುದೇ ಮಾಹಿತಿಯಿಲ್ಲದೆ ಓಎಸ್ ಅನ್ನು ಇನ್‌ಸ್ಟಾಲ್ ಮಾಡುವುದು ತುಂಬಾ ಕಷ್ಟಕರವಾದ ಆಪರೇಟಿಂಗ್ ವ್ಯವಸ್ಥೆಯನ್ನು ನಿಮಗೆ ನೀಡುತ್ತದೆ ಹಾಗೂ ನಿಮಗೆ ಇದು ಕಷ್ಟವನ್ನು ತಂದೊಡ್ಡಬಹುದು. ನಿಮಗೆ ಹೆಚ್ಚು ಪರಿಚಿತವಾಗಿರುವ ಆಪರೇಟಿಂಗ್ ವ್ಯವಸ್ಥೆಯುಳ್ಳ ಲ್ಯಾಪ್‌ಟಾಪ್ ಖರೀದಿಯನ್ನು ನೀವು ಮಾಡಬೇಕು.

#5

#5

ನೀವು ಕಚೇರಿ ಅಥವಾ ನಿವಾಸದಲ್ಲಿ ಅವಿರತವಾಗಿ ಲ್ಯಾಪ್‌ಟಾಪ್ ಅನ್ನು ಬಳಸುತ್ತೀರಿ ಎಂದಾದಲ್ಲಿ ದೊಡ್ಡ ಪರದೆಯ (ಸ್ಕ್ರೀನ್) ಲ್ಯಾಪ್‌ಟಾಪ್ ಖರೀದಿಯನ್ನು ಮಾಡಿ. ಇದು ನಿಮ್ಮ ಉತ್ಪನ್ನ ಮಟ್ಟವನ್ನು ಮಾತ್ರ ಸುಧಾರಿಸುವುದಲ್ಲದೆ ನಿಮ್ಮ ಕಣ್ಣುಗಳಿಗೂ ಇದು ಒಳ್ಳೆಯದಾಗಿರುತ್ತದೆ.

#6

#6

ಉತ್ತಮ ಲ್ಯಾಪ್‌ಟಾಪ್‌ನಲ್ಲಿ ನೀವು ಹೊಂದಿರಬೇಕಾದ್ದು ಮಲ್ಟಿ-ಕೋರ್ ಸಿಪಿಯು ಅಂದರೆ ಇಂಟೆಲ್ ಹಾಗೂ AMD ಸಿಪಿಯು ಆಗಿದೆ. ಮಲ್ಟಿ ಕೋರ್ ಇರುವುದರಿಂದ ನಿಮ್ಮ ಡಿವೈಸ್ ವೇಗವಾಗಿರುತ್ತದೆ. 3-4 ಯುಎಸ್‌ಬಿ ಸ್ಲಾಟ್‌ಗಳು ಅದರಲ್ಲಿದೆಯೇ ಎಂಬುದನ್ನು ಕೂಡ ಗಮನಿಸಿ.

#7

#7

ಮರು - ಪ್ರಮಾಣೀಕರಿಸಿದ ಅಥವಾ ಮರುನವೀಕರಿಸಿದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬೇಡಿ. ಇತರ ಆನ್‌ಲೈನ್ ಶಾಪ್‌ಗಳು ಅಥವಾ ಮಾರುಕಟ್ಟೆಯಿಂದ ಲ್ಯಾಪ್‌ಟಾಪ್‌ ಖರೀದಿಸುವಾಗ ಜಾಗರೂಕರಾಗಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X