ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣವಾಗಿದೆ. ಆಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನೀಡುವ ವಿಶೇಷ ಆಫರ್‌ಗಳಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಾ ಬಂದಿದೆ. ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯುವ ಡಿಸ್ಕೌಂಟ್‌ಗಳಿಗಾಗಿ ಗ್ರಾಹಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಮೆಜಾನ್‌ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಇನ್ನು ಅಮೆಜಾನ್‌ ಭಾರತದಲ್ಲಿ ಹೆಚ್ಚಿನ ಜನರಿಗೆ ತಲುಪುವುದಕ್ಕಾಗಿ ಭಾರತದ ಸ್ಥಳೀಯ ಭಾಷೆಗಳಲ್ಲಿ ಕೂಡ ವ್ಯವಹರಿಸಲು ಅವಕಾಶ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಭಾಷೆಯ ಮೂಲಕವೇ ಶಾಪಿಂಗ್‌ ಮಾಡಲು ಅವಕಾಶವಿದೆ. ಅಮೆಜಾನ್‌ ಭಾರತದ ವಿವಿಧ ಭಾಷೆಗಳಲ್ಲಿ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಅಮೆಜಾನ್‌ ತನ್ನ ಬಳಕೆದಾರರಿಗೆ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಭಾಷೆಯನ್ನು ಇಂಗ್ಲಿಷ್‌ನಿಂದ ತಮ್ಮ ಸ್ಥಳೀಯ ಭಾಷೆಗಳಿಗೆ ಬದಲಾಯಿಸಲು ಅನುಮತಿಸುತ್ತದೆ. ಹಾಗಾದ್ರೆ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ನಿಮ್ಮ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ನಲ್ಲಿ

ಅಮೆಜಾನ್‌ನಲ್ಲಿ ನಿಮ್ಮ ಸ್ಥಳೀಯ ಭಾಷೆಯನ್ನು ಬಳಸುವುದು ಸುಲಭವಿದೆ. ಅಮೆಜಾನ್‌ ನಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ವ್ಯವಹರಿಸುವುದು ನಿಮಗೆ ತಿಳಿಯದಿದ್ದಲ್ಲಿ ನೀವು ನಿಮ್ಮ ಭಾಷಗೆ ಬದಲಾಯಿಸಕೊಳ್ಳಬಹುದು. ಇದರಿಂದ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡುವುದು ತುಂಬಾ ಸುಲಭವಾಗಲಿದೆ. ನೀವು ನಿಮ್ಮ ಆದ್ಯತೆಯ ಭಾಷೆಯನ್ನು ಅಮೆಜಾನ್‌ನಲ್ಲಿ ಬದಲಾಯಿಸಲು ಬಯಸಿದರೆ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಅಮೆಜಾನ್ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಅಮೆಜಾನ್‌ ವೆಬ್‌ಸೈಟ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ
ಹಂತ:2 ಇದರಲ್ಲಿ ನೀವು ಲ್ಯಾಂಗ್ವೇಜ್‌ ಪೇಜ್‌ ತೆರೆಯಿರಿ
ಹಂತ:3 ನಂತರ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
ಹಂತ:4 ಭಾಷೆ ಆಯ್ಕೆ ಮಾಡಿದ ನಂತರ, "ಸೇವ್‌" ಬಟನ್‌ ಒತ್ತಿರಿ

ಒಮ್ಮೆ ನೀವು ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸಿದರೆ, ನಿಮ್ಮ ಸ್ವಂತ ಖಾತೆಗೆ ನೀವು ಲಾಗ್ ಇನ್ ಮಾಡಿದಾಗ ನಿಮ್ಮ ಬ್ರೌಸಿಂಗ್ ಮತ್ತು ಶಾಪಿಂಗ್ ಅನುಭವಕ್ಕಾಗಿ ಇದು ಡೀಫಾಲ್ಟ್ ಭಾಷೆಯಾಗುತ್ತದೆ. ಅಂದರೆ ನೀವು ವೆಬ್‌ಸೈಟ್‌ನಲ್ಲಿ ಭಾಷೆಯನ್ನು ಬದಲಾಯಿಸಿದರೆ ನಿಮ್ಮ ಮೊಬೈಲ್‌ನಲ್ಲಿರುವ ಅಮೆಜಾನ್‌ ಅಪ್ಲಿಕೇಶನ್‌ನಲ್ಲಿ ಭಾಷೆ ಬದಲಾಗುವುದಿಲ್ಲ.

ಅಮೆಜಾನ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಅಮೆಜಾನ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ನಿಮ್ಮ ಮೊಬೈಲ್ ಫೋನ್‌ನಲ್ಲಿ ಅಮೆಜಾನ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಇದರಲ್ಲಿ ಮೂರು-ಸಾಲಿನ ಮೆನುವಿನಲ್ಲಿ ಟ್ಯಾಪ್ ಮಾಡಿ.
ಹಂತ:3 ನಂತರ ಸೆಟ್ಟಿಂಗ್ಸ್‌>ದೇಶ ಮತ್ತು ಭಾಷೆ ಆಯ್ಕೆಮಾಡಿ
ಹಂತ:4 ಇದರಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಬಹುದು.

ಒಂದು ವೇಳೆ ನಿಮ್ಮ ಪ್ರಾಶಸ್ತ್ಯದ ಭಾಷೆ ನಿಮಗೆ ಕಾಣಿಸದಿದ್ದಲ್ಲಿ, ಅದು ನಿಮ್ಮ ಪ್ರದೇಶದಲ್ಲಿ ಲಭ್ಯವಿಲ್ಲ ಎಂದು ತಿಳಿಯಬೇಕು. ಇನ್ನು ನೀವು ಅಪ್ಲಿಕೇಶನ್‌ನಲ್ಲಿ ನಿಮ್ಮ ಭಾಷೆಯಾಗಿ ಇಂಗ್ಲಿಷ್‌ಗೆ ಹಿಂತಿರುಗಲು ಅಥವಾ ಹೊಸದಕ್ಕೆ ಬದಲಾಯಿಸಲು ಬಯಸಿದರೆ, ನೀವು ಇದೇ ಹಂತಗಳನ್ನು ಅನುಸರಿಸಿ ಮತ್ತು ಹೊಸ ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ.

ಅಮೆಜಾನ್‌

ಇನ್ನು ಅಮೆಜಾನ್‌ ತನ್ನ ಬಳಕೆದಾರರಿಗೆ ಅಮೆಜಾನ್ ಪೇ ಲೇಟರ್‌ ಅನ್ನು ಕೂಡ ನೀಡುತ್ತಾ ಬಂದಿದೆ. ಇದು ಬಳಕೆದಾರರಿಗೆ ಸಾಕಷ್ಟು ಅನುಕೂಲಕರವಾಗಿದೆ. ಅಮೆಜಾನ್‌ ಪೇ ಲೇಟರ್‌ ಬಳಸುವುದಕ್ಕೆ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ಅವರು ಮೂಲ ಕೆವೈಸಿ ಪೂರ್ಣಗೊಳಿಸಬೇಕಾಗಿದೆ. ಅಮೆಜಾನ್ ಪೇ ಲೇಟರ್ ಅನ್ನು ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ("ಅಮೆಜಾನ್") ತನ್ನ ಮೂರನೇ ವ್ಯಕ್ತಿಯ ಸಾಲ ಪಾಲುದಾರರಲ್ಲಿ ಒಬ್ಬರಾದ ಕ್ಯಾಪಿಟಲ್ ಫ್ಲೋಟ್ ಅಥವಾ ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ನಿಮಗೆ ನೀಡುತ್ತದೆ.

ಅಮೆಜಾನ್ ಪೇ ಲೇಟರ್‌ನಲ್ಲಿ ನೋಂದಾಯಿಸುವುದು ಮತ್ತು ಬಳಸುವುದು ಹೇಗೆ?

ಅಮೆಜಾನ್ ಪೇ ಲೇಟರ್‌ನಲ್ಲಿ ನೋಂದಾಯಿಸುವುದು ಮತ್ತು ಬಳಸುವುದು ಹೇಗೆ?

ಹಂತ: 1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಮೆಜಾನ್ ಅಪ್ಲಿಕೇಶನ್ ತೆರೆಯಿರಿ.ನಿಮ್ಮ ಅಮೆಜಾನ್ ಖಾತೆಗೆ ನೀವು ಲಾಗ್ ಇನ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಹಂತ: 2 ಮೇಲಿನ ಎಡ ಮೂಲೆಯಲ್ಲಿರುವ ಮೂರು ಅಡ್ಡ ಬಾರ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಅಮೆಜಾನ್ ಪೇ ಕ್ಲಿಕ್ ಮಾಡಿ.

ಹಂತ: 3 ಅಮೆಜಾನ್ ಪೇ ಪುಟದಲ್ಲಿ ನೀವು ‘ಅಮೆಜಾನ್ ಪೇ ಲೇಟರ್‌ ಪ್ರಾರಂಭಿಸಿ' ಎಂದು ಹೇಳುವ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ.

ಹಂತ: 4 ಅಮೆಜಾನ್ ಪೇ ಲೇಟರ್‌ ಪೇಜ್‌ನಲ್ಲಿ ‘60 ಸೆಕೆಂಡುಗಳಲ್ಲಿ ಸೈನ್ ಅಪ್' ಟ್ಯಾಪ್ ಮಾಡಿ.

ಹಂತ: 5 ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ‘Agree & Continue' ಕ್ಲಿಕ್ ಮಾಡಿ.

ಹಂತ: 6 ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ‘Agree & Continue' ಟ್ಯಾಪ್ ಮಾಡಿ ಮತ್ತು ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ.

ಹಂತ: 7 ನಂತರ ನಿಮ್ಮ ಅಮೆಜಾನ್ ಪೇ ಅನ್ನು ನೀವು ಸೆಟ್‌ಮಾಡಿ, ‘Agree & Continue' ಟ್ಯಾಪ್ ಮಾಡಿ.

ಹಂತ: 8 ನೀವು ಈಗಿನಿಂದಲೇ ಸ್ವಯಂ ಮರುಪಾವತಿಯನ್ನು ಹೊಂದಿಸಬಹುದು ಅಥವಾ ಅದನ್ನು ಬಿಟ್ಟುಬಿಡಬಹುದು.

ಹಂತ: 9 ನಂತರ ಅಮೆಜಾನ್ ಪೇ ಬಳಸಿ ಐಟಂ ಖರೀದಿಸಲು, ನಿಮ್ಮ ಕಾರ್ಟ್‌ಗೆ ಐಟಂ ಸೇರಿಸಿ.

ಹಂತ: 10 ಚೆಕ್‌ ಔಟ್‌ನಲ್ಲಿ ಪಾವತಿ ವಿಧಾನದಲ್ಲಿ ಅಮೆಜಾನ್ ಪೇ ಲೇಟರ್ ಆಯ್ಕೆಯನ್ನು ಬಳಸಿ ಮತ್ತು ಮುಂದುವರಿಸಿ ಟ್ಯಾಪ್ ಮಾಡಿ.

Best Mobiles in India

English summary
Here's How to change the language on the Amazon website

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X