ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

|

ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ದೇಶದ ನಾಗರಿಕರ ಆರೋಗ್ಯ ಭದ್ರತೆಗಾಗಿ ಡಿಜಿಟಲ್‌ ಹೆಲ್ತ್‌ ಐಡಿ ಅನ್ನು ಪರಿಚಯಿಸಿದೆ. ಪ್ರತಿಯೊಬ್ಬರಿಗೂ ಡಿಜಿಟಲ್‌ ಹೆಲ್ತ ಐಡಿ ನೀಡುವ ಉದ್ದೇಶದಿಂದ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಆರೋಗ್ಯ ಕಾರ್ಡ್ ಐಡಿ ನೀಡುವ ಗುರಿಯನ್ನು ಹೊಂದಿದೆ. ಇದರ ಮೂಲಕ ದೇಶವಾಸಿಗಳ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಈ ಡಿಜಿಟಲ್‌ ಹೆಲ್ತ್‌ ಕಾರ್ಡ್‌ ಪಡೆಯಬೇಕಾದರೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌

ಹೌದು, ಪ್ರಧಾನಿ ನರೇದ್ರ ಮೋದಿ ಎರಡು ದಿನಗಳ ಹಿಂದೆಯಷ್ಟೇ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಲಾಂಚ್‌ ಮಾಡಿದ್ದಾರೆ. ಈ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ ಬಳಕೆದಾರರ ಆರೋಗ್ಯ ದಾಖಲೆಗಳನ್ನು ಹೊಂದಿರುತ್ತದೆ. ಈ ಹೆಲ್ತ್‌ ಐಡಿ ಕಾರ್ಡ್ ಎಲ್ಲಾ ಭಾರತೀಯ ನಾಗರಿಕರಿಗೆ ಲಭ್ಯವಿರಲಿದೆ. ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಅಡಿಯಲ್ಲಿ ಲಭ್ಯವಾಗುವ ಎಲ್ಲಾ ಪ್ರಯೋಜನಗಳು ಈ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ. ಹಾಗಾದ್ರೆ ಡಿಜಿಟಲ್‌ ಹೆಲ್ತ್‌ ಐಡಿ ಕಾರ್ಡ್‌ ಅನ್ನು ಪಡೆಯುವುದಕ್ಕೆ ನೀವು ಏನು ಮಾಡಬೇಕು? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್ ಹೆಲ್ತ್‌ ಐಡಿ

ಡಿಜಿಟಲ್ ಹೆಲ್ತ್‌ ಐಡಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಪ್ರತಿ ಪರೀಕ್ಷೆ, ಪ್ರತಿ ರೋಗ, ವೈದ್ಯರ ಭೇಟಿ, ರೋಗನಿರ್ಣಯ ಮತ್ತು ತೆಗೆದುಕೊಂಡ ಔಷಧಿಗಳ ವಿವರಗಳು ಒಳಗೊಂಡಿರುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಅವರ ಹೆಲ್ತ್‌ ಹಿಸ್ಟರಿಯನ್ನು ತಿಳಿದುಕೊಳ್ಳಲು ಇದು ವೈದ್ಯರಿಗೆ ಸಹಾಯ ಮಾಡಲಿದೆ. ಇನ್ನು ಈ ಹೆಲ್ತ್‌ ಕಾರ್ಡ್‌ನಲ್ಲಿರುವ ಮಾಹಿತಿ ಡಿಜಿಟಲ್‌ ಆಗಿ ಸೆಕ್ಯುರ್‌ ಆಗಿರಲಿದೆ. ಇದು ಆಸ್ಪತ್ರೆ ಮತ್ತು ರೋಗಿಗಳ ನಡುವಿನ ಡಿಜಿಟಲ್ ಆರೋಗ್ಯ ಪರಿಹಾರಕ್ಕೆ ಸಹಾಯಕವಾಗಲಿದೆ. ಇನ್ನು ಆನ್‌ಲೈನ್‌ನಲ್ಲಿ ಡಿಜಿಟಲ್‌ ಹೆಲ್ತ್‌ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆನ್‌ಲೈನ್‌ನಲ್ಲಿ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ:1 ಮೊದಲಿಗೆ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ನ ಅಧಿಕೃತ ವೆಬ್‌ಸೈಟ್ https://ndhm.gov.in ಅನ್ನು ತೆರೆಯಿರಿ.
ಹಂತ:2 ನಂತರ ಆರೋಗ್ಯ ID ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:3 ಇದೀಗ ಆರೋಗ್ಯ ID ಕ್ರಿಯೆಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:4 ಇದರಲ್ಲಿ ನಿಮಗೆ ಹೆಲ್ತ್‌ ಐಡಿ ಕ್ರಿಯೆಟ್‌ ಮಾಡಲು ಮೂರು ಆಯ್ಕೆಗಳು ಲಬ್ಯವಾಗಲಿದೆ
ಹಂತ:5 ನಿಮ್ಮ ಡಿಜಿಟಲ್ ಹೆಲ್ತ್ ಐಡಿ ರಚಿಸಲು ನೀವು ಆಧಾರ್ ಕಾರ್ಡ್ ಬಳಸಲು ಬಯಸಿದರೆ ಮೊದಲ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:6 ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಸಲ್ಲಿಸಿ ಮತ್ತು ಪ್ರಕ್ರಿಯೆಯನ್ನು ಮುಗಿಸಲು ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.
ಹಂತ:7 ಬಳಿಕ ನಿಮ್ಮ ಹುಟ್ಟಿದ ದಿನಾಂಕ, ಲಿಂಗ, ಹೆಸರು, ತಂದೆಯ ಹೆಸರು ಸೇರಿದಂತೆ ಇರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು
ಹಂತ:8 ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಕೊಡಬೇಕು
ಹಂತ:9 ಪ್ರತಿ ವ್ಯಕ್ತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ರಾ.ಡಿಜಿಟಲ್ ಆರೋಗ್ಯ ಯೋಜನೆಗೆ ಲಿಂಕ್ ಮಾಡಬೇಕು.

ಈ ಮೂಲಕ ನಿಮ್ಮ ಹೆಲ್ತ ಐಡಿ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಡಿಜಿಟಲ್‌

ಇನ್ನು ಪ್ರತಿಯೊಬ್ಬರ ಡಿಜಿಟಲ್‌ ಹೆಲ್ತ್ ಐಡಿ ವ್ಯಕ್ತಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಇದರಲ್ಲಿರುವ ಎಲ್ಲಾ ಆರೋಗ್ಯ ದಾಖಲೆಗಳನ್ನು ಮೊಬೈಲ್ ಆಪ್, ಹೆಲ್ತ್‌ಕೇರ್ ಪ್ರೊಫೆಷನಲ್ಸ್ ರಿಜಿಸ್ಟ್ರಿ (ಎಚ್‌ಪಿಆರ್) ಮತ್ತು ಹೆಲ್ತ್‌ಕೇರ್ ಫೆಸಿಲಿಟಿ ರಿಜಿಸ್ಟ್ರಿ (ಎಚ್‌ಎಫ್‌ಆರ್) ಸಹಾಯದಿಂದ ನೋಡಬಹುದಾಗಿದೆ. ಇದರಲ್ಲಿ NDHM ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನು ಆರೋಗ್ಯ ID ಯನ್ನು ಹೊಂದಿರುತ್ತಾರೆ, ಅದು ಅವರ ಆರೋಗ್ಯ ಖಾತೆಯಂತೆಯೂ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಬಹುದು ಮತ್ತು ಮೊಬೈಲ್ ಅಪ್ಲಿಕೇಶನ್ನ ಸಹಾಯದಿಂದ ಹೆಲ್ತ್‌ ಹಿಸ್ಟರಿಯನ್ನು ನೋಡಬಹುದು.

Best Mobiles in India

English summary
Health ID will use a person’s mobile number or Aadhaar card number and all the health records will be viewable with the help of a mobile app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X