ಸಾಮಾನ್ಯ ಟಿವಿಯಲ್ಲೂ ನೀವು ನೆಟ್‌ಫ್ಲಿಕ್ಸ್ ಅನ್ನು ವೀಕ್ಷಿಸಲು ಹೀಗೆ ಮಾಡಿ?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಟಿವಿಗಳಲ್ಲಿ ಜನರು ತಮ್ಮ ಮನೆ ಮನರಂಜನಾ ಆಯ್ಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಪ್ಡೇಟ್‌ ಮಾಡಿದ್ದಾರೆ. ಈಗಿನ ಸ್ಮಾರ್ಟ್‌ಟಿವಿಗಳಲ್ಲಿ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುವುದರ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿವೆ. ಹಾಗಾಂತ ಸಾಮಾನ್ಯ ಟಿವಿ ಬಳಸುವವರು ಯೋಚಿಸುವ ಅವಶ್ಯಕತೆ ಇಲ್ಲ. ಸ್ಮಾರ್ಟ್ ಅಲ್ಲದ ಟಿವಿಯಲ್ಲಿ ಕೂಡ ನೀವು ನೆಟ್‌ಫ್ಲಿಕ್ಸ್‌ ಅನ್ನು ವೀಕ್ಷಿಸುವುದಕ್ಕೆ ಅವಕಾಶ ಇದೆ.

ಪ್ಲಾಟ್‌ಫಾರ್ಮ್‌

ಹೌದು, ಒಟಿಟಿ ಪ್ಲಾಟ್‌ಫಾರ್ಮ್‌ ಅಪ್ಲಿಕೇಶನ್‌ಗಳನ್ನು ನೀವು ಸ್ಮಾರ್ಟ್‌ಟಿವಿಗಳಲ್ಲಿ ವೀಕ್ಷಿಸುವುದಕ್ಕೆ ಅವಕಾಶವಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಮಾರ್ಟ್‌ಟಿವಿಗಳಲ್ಲೂ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ನಲ್ಲಿ ತಮಗೆ ಬೇಕಾದ ಶೋ ಗಳನ್ನು ವೀಕ್ಷಿಸುತ್ತಾರೆ. ನೀವು ಕೆಲವು ಕ್ರಮಗಳನ್ನು ಅನುಸರಿಸಿದರೆ ಸಾಮಾನ್ಯ ಟಿವಿಗಳಲ್ಲಿ ಕೂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೋಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ಸಾಮಾನ್ಯ ಟಿವಿಯಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ವೀಕ್ಷಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್

ನಿಮ್ಮ ಬಳಿ ಸ್ಮಾರ್ಟ್ ಟಿವಿ ಇಲ್ಲದಿದ್ದರೂ ಪರವಾಗಿಲ್ಲ, ನಿಮ್ಮ ಟಿವಿಯಲ್ಲಿ ನಿವು ನೆಟ್‌ಫ್ಲಿಕ್ಸ್‌ ಅನ್ನು ಬಳಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಸಾಮಾನ್ಯ ಟಿವಿಗೆ ನೀವು ಸ್ಕ್ರೀನ್‌ ಅನ್ನು ಕಾಸ್ಟ್‌ ಮಾಡಬಹುದು. ಅಲ್ಲದೆ ಹೆಚ್‌ಡಿ ಗುಣಮಟ್ಟದ ವಿಷಯವನ್ನು ಒಳಗೊಂಡಂತೆ ನಿಮಗೆ ಬೇಕಾದುದನ್ನು ವೀಕ್ಷಿಸಬಹುದು. ನಿಮ್ಮ ಮೊಬೈಲ್ ಡಿವೈಸ್‌ನಿಂದ ನೀವು ವೇಗವಾಗಿ ಫಾರ್ವರ್ಡ್ ಮಾಡಬಹುದು, ರಿವೈಂಡ್ ಮಾಡಬಹುದು, ವಿರಾಮಗೊಳಿಸಬಹುದು ಅಥವಾ ಆಡಿಯೋ ಟ್ಟಿಂಗ್‌ಗಳನ್ನು ಬದಲಾಯಿಸಬಹುದು.

ನಿಮ್ಮ ಸ್ಮಾರ್ಟ್ ಅಲ್ಲದ ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಅನ್ನು ವೀಕ್ಷಿಸುವುದು ಹೇಗೆ ?

ನಿಮ್ಮ ಸ್ಮಾರ್ಟ್ ಅಲ್ಲದ ಟಿವಿಯಲ್ಲಿ ನೆಟ್‌ಫ್ಲಿಕ್ಸ್ ಅನ್ನು ವೀಕ್ಷಿಸುವುದು ಹೇಗೆ ?


ಹಂತ:1 ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಸೈನ್ ಇನ್ ಮಾಡಿ.
ಹಂತ:2 ನೀವು ಸೈನ್ ಇನ್ ಮಾಡಿದ ನಂತರ, ನಿಮ್ಮ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ 'ಕಾಸ್ಟ್‌' ಐಕಾನ್ ಆಯ್ಕೆಮಾಡಿ.
ಹಂತ:3 ನೀವು 'ಕಾಸ್ಟ್‌' ಮಾಡಲು ಬಯಸುವ ಡಿವೈಸ್‌ ಅನ್ನು ಆಯ್ಕೆಮಾಡಿ.
ಹಂತ:4 ನೀವು ಇಷ್ಟಪಡುವ ಚಲನಚಿತ್ರ ಅಥವಾ ಸರಣಿಯನ್ನು ಹುಡುಕಿ. "ಪ್ಲೇ" ಒತ್ತಿರಿ.

ನೆಟ್‌ಫ್ಲಿಕ್ಸ್‌

ಈ ಮೂಲಕ ನೀವು ಸಾಮಾನ್ಯ ಟಿವಿಯಲ್ಲಿ ನೆಟ್‌ಫ್ಲಿಕ್ಸ್‌ ಅನ್ನು ವೀಕ್ಷಿಸಬಹುದಾಗಿದೆ. ಆದರೆ ಸ್ಕ್ರೀನ್ ಬಿತ್ತರಿಸುವಿಕೆಯನ್ನು ಬೆಂಬಲಿಸುವ ಟಿವಿ ನಿಮಗೆ ಅಗತ್ಯವಿರುತ್ತದೆ. ಇದಕ್ಕಾಗಿ ಟಿವಿಯಲ್ಲಿ ಇಂಟರ್ನೆಟ್ ಪ್ರವೇಶ ಅಥವಾ ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಅಥವಾ ಯೋಜನೆ ಅಗತ್ಯವಿಲ್ಲ. ಸೋನಿ ಪ್ಲೇಸ್ಟೇಷನ್ 4, ಸೋನಿ ಪ್ಲೇಸ್ಟೇಷನ್ 5, ಎಕ್ಸ್ ಬಾಕ್ಸ್ ಒನ್ ನಂತಹ ಗೇಮಿಂಗ್ ಕನ್ಸೋಲ್ಗಳಿಂದ ನೀವು ನೆಟ್ಫ್ಲಿಕ್ಸ್ ಅನ್ನು ಪ್ರವೇಶಿಸಬಹುದು. ಅಲ್ಲದೆ ಅಮೆಜಾನ್ ಫೈರ್ ಸ್ಟಿಕ್, ಗೂಗಲ್ ಕ್ರೋಮ್‌ಕಾಸ್ಟ್, ಅಥವಾ ಏರ್‌ಟೆಲ್ ಎಕ್ಟ್ರೀಮ್ ಸ್ಟಿಕ್, ಮತ್ತು ಜಿಯೋ ಫೈಬರ್, ಏರ್‌ಟೆಲ್, ಎಸಿಟಿ ಫೈಬರ್ನೆಟ್, ಮತ್ತು ಹ್ಯಾಥ್‌ವೇ ಸೇರಿದಂತೆ ಸೆಟ್-ಟಾಪ್ ಬಾಕ್ಸ್‌ಗಳ ಮೂಲಕ ಕೂಡ ನೆಟ್‌ಫ್ಲಿಕ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

Best Mobiles in India

English summary
As common as smart TVs are these days, some people still don't possess one. However, that does not mean you cannot watch Netflix.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X