ಸ್ಮಾರ್ಟ್‌ಫೋನ್‌ನಲ್ಲಿ ಇರಬೇಕಾದ ಆಪ್ ಇದು: ಚಿಕ್ಕದಾರರು ಬಳಕೆ ದೊಡ್ಡದು..!

|

ಸ್ಮಾರ್ಟ್‌ಫೋನ್ ಬಂದ ಮೇಲೆ ನಮ್ಮ ದಿನ ನಿತ್ಯದ ಎಲ್ಲಾ ಕೆಲಸ ಕಾರ್ಯಗಳಿಗೆ ಸ್ಮಾರ್ಟ್‌ಫೋನ್‌ಗಳೇ ಹೆಚ್ಚು ಬಳಕೆಯಾಗುತ್ತಿದೆ. ಇದರಿಂದಾಗಿ ಬೇರೆ ಎಲ್ಲಾ ಗ್ಯಾಜೆಟ್ ಗಳು ಮೂಲೆ ಸೇರುವ ದಿನಗಳು ಹತ್ತಿರ ಬರುತ್ತಿದೆ. ಕಾರಣ ಸ್ಮಾರ್ಟ್‌ಫೋನ್ ವೊಂದೆ ಅನೇಕ ಕಾರ್ಯಗಳನ್ನು ಮಾಡಲು ಶಕ್ತವಾಗಿರುವುದು ಇದಕ್ಕೆ ಕಾರಣವಾಗುತ್ತಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಇರಬೇಕಾದ ಆಪ್ ಇದು: ಚಿಕ್ಕದಾರರು ಬಳಕೆ ದೊಡ್ಡದು..!

ಕ್ಯಾಮೆರಾ ಬದಲಿಗೆ ಫೋಟೊ ತೆಗೆಯಲು, ಕಂಪ್ಯೂಟರ್ ಇಂಟರ್ನೆಟ್ ಬಳಕೆಗೆ, ಇಮೇಲ್ ಕಳುಹಿಸಲು, ವಿಡಿಯೋ ಕಾಲ್ ಮಾಡಲು, ಲ್ಯಾಂಡ್ ಲೈನ್ ಬದಲು ಫೋನ್ ಮಾಡಲು, ಪೊಲೀಸ್ ಹಿಡಿದರೆ ಓರ್ಜಿನಲ್ ಡಾಕ್ಯೂಮೆಂಟ್ ತೋರಿಸುವ ಬದಲು, ವಸ್ತುಗಳನ್ನು ಸ್ಕಾನ್ ಮಾಡಲು ಎಲ್ಲವನ್ನು ಮೊಬೈಲ್‌ ಬಳಕೆಯೇ ಹೆಚ್ಚಾಗುತ್ತಿದೆ.

ನಿತ್ಯದ ಕಾರ್ಯಗಳು:

ನಿತ್ಯದ ಕಾರ್ಯಗಳು:

ಇದಲ್ಲದೇ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಮೊಬೈಲ್ ಅನ್ನೇ ಅವಲಂಬಿಸುವವರ ಸಂಖ್ಯೆಯೂ ಅಧಿಕವಾಗದೆ. ಅಲಾರಾಂಗಾಗಿ, ಕ್ಯಾಲೆಂಟರ್ ಗಾಗಿ, ಹವಮಾನವನ್ನು ನೋಡಲು, ಜೋತಿಷ್ಯಕ್ಕಾಗಿಯೂ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ.

ಇದಕ್ಕಾಗಿಯೇ ಪೇಪರ್ ಬದಲು:

ಇದಕ್ಕಾಗಿಯೇ ಪೇಪರ್ ಬದಲು:

ಈ ಹಿನ್ನಲೆಯಲ್ಲಿ ನಿಮ್ಮ ನೋಟ್ ಬುಕ್ ಜಾಗವನ್ನು ಮೊಬೈಲ್‌ಗಳು ಅವರಿಸುತ್ತಿವೆ. ಈ ಹಿನ್ನಲೆಯಲ್ಲಿ ನಿತ್ಯ ಮಾಡಬೇಕಾದ ಕಾರ್ಯಗಳನ್ನು ಬರೆದಿಟ್ಟುಕೊಳ್ಳಲು ನೋಟ್ ಬರೆದಿಟ್ಟುಕೊಳ್ಳುವ ಆಪ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಕಲರ್ ನೋಟ್ ಪ್ಯಾಡ್:

ಕಲರ್ ನೋಟ್ ಪ್ಯಾಡ್:

ಪ್ಲೇಸ್ಟೋರಿನಲ್ಲಿ ಕಲರ್ ನೋಟ್ ಪ್ಯಾಡ್ ಎಂಬ ಆಪ್ ಲಭ್ಯವಿದ್ದು, ಸಾಮಾನಿನ ಪಟ್ಟಿ, ಫೋನ್ ಸಂಖ್ಯೆ, ಪುಸ್ತಕದ ಹೆಸರು, ಮಾಡಬೇಕಾದ ಕೆಲಸಗಳ ಬಗ್ಗೆ ಬರೆದುಕೊಳ್ಳಲು ಅದು ಉಪಯೋಗವಾಗಲಿದೆ. ಅಲ್ಲದೇ ನಿಮ್ಮ ಪಾಸ್ ವರ್ಡ್ ಗಳನ್ನು ಬರದಿಟ್ಟುಕೊಂಡು ಅದನ್ನು ಪ್ರೋಟೆಕ್ಟ್ ಮಾಡಬಹುದಾಗಿದೆ.

ಬೇರೆ ಬೇರೆ ಬಣ್ಣಗಳು:

ಬೇರೆ ಬೇರೆ ಬಣ್ಣಗಳು:

ಈ ನೋಟ್ ಪ್ಯಾಡ್ ಆಪ್ ನಲ್ಲಿ ವಿವಿಧ ಬಣ್ಣದ ಪ್ಯಾಡ್ ಗಳನ್ನು ಕಾಣಬಹುದಾಗಿದೆ. ವಿವಿಧ ಕಾರ್ಯಗಳಿಗೆ ಬೇರೆ ಬೇರೆ ಬಣ್ಣ-ಬಣ್ಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನೀವು ಪೇಪರ್ ಪ್ಯಾಡ್ ಗಳನ್ನು ಬಳಕೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬಹುದಾಗಿದೆ. ಕ್ಯಾಲೆಂಡರ್ ನಲ್ಲಿ ರಿಮೆಂಡರ್ ಮಾದರಿಯಲ್ಲ ಬಳಕೆ ಮಾಡಿಕೊಳ್ಳಬಹುದು.

ಬಳಕೆಯೂ ಸುಲಭವಾಗಿದೆ:

ಬಳಕೆಯೂ ಸುಲಭವಾಗಿದೆ:

ಕಲರ್ ನೋಟ್ ಪ್ಯಾಡ್ ಬಳಕೆಯೂ ಸುಲಭವಾಗಿದ್ದು, ಇಂಟರ್ನೆಟ್ ಇಲ್ಲದೆಯೂ ಇದು ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಜಾಗವನ್ನು ಬೇಡುವುದಿಲ್ಲ ಎನ್ನಲಾಗಿದೆ. ಅಲ್ಲದೇ ಇದನ್ನು SD ಕಾರ್ಡ್ ನಲ್ಲಿಯೂ ಸೇವ್ ಮಾಡಿಕೊಳ್ಳಬಹುದಾಗಿದೆ.

ವಾಲ್ ಪೇಪರ್ ಬದಲಿಗೆ:

ವಾಲ್ ಪೇಪರ್ ಬದಲಿಗೆ:

ಅಲ್ಲದೇ ಈ ನೋಟ್ ಗಳನ್ನು ನೀವು ವಾಲ್ ಪೇಪರ್ ಬದಲಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಪೇಪರ್ ನೋಟ್ ಗಳನ್ನು ಅಲ್ಲಿ ಇಲ್ಲ ಅಂಟಿಸುವ ಬದಲಿಗೆ ಇದನ್ನು ಬಳೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ SMS, ಟ್ವಿಟರ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ವಾಟ್ಸ್‌ಆಪ್ ಪೇಮೆಂಟ್ ಮಾಡುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ..!

Best Mobiles in India

English summary
ColorNote Notepad Notes app. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X