Subscribe to Gizbot

ಬೆಂಗಳೂರಿನ ಸ್ಟಾರ್ಟ್‌ಆಪ್ ಕಂಪನಿಗೆ ಗಾಳ ಹಾಕಿದ ಗೂಗಲ್

Written By:

ಟೆಕ್ ಲೋಕದಲ್ಲಿ ದೈತ್ಯ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಸ್ಟಾರ್ಟ್ ಆಪ್ ಕಂಪನಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಇದುವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದೆ ಮಾದರಿಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸ್ಟಾರ್ಟ್ಆಪ್ ರಾಜಧಾನಿ ಎಂದು ಹೆಸರು ಮಾಡಿರುವ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳ್ಳಿ ಲಾಬ್ಸ್ ಕಂಪನಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಬೆಂಗಳೂರಿನ ಸ್ಟಾರ್ಟ್‌ಆಪ್ ಕಂಪನಿಗೆ ಗಾಳ ಹಾಕಿದ ಗೂಗಲ್

ಓದಿರಿ: ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!

ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಗೂಗಲ್ ಉಪಾಧ್ಯಕ್ಷ, ಹಳ್ಳಿ ಲಾಬ್ಸ್ ಟೀಮ್ ಮತ್ತು ಸ್ಥಾಪಕ ಪಂಕಜ್ ಅವರಿಗೆ ಸ್ವಾಗತವನ್ನು ಕೋರಿದ್ದು, ಗೂಗಲ್ ಜೊತೆಗೆ ಸೇರಿಕೊಂಡು ಇನ್ನಷ್ಟು ಹೊಸ ಆವಿಷ್ಕಾರಗಳನ್ನು ಮಾಡುವ ಎಂದು ಟ್ವೀಟ್ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಳ್ಳಿ ಲಾಬ್ಸ್

ಹಳ್ಳಿ ಲಾಬ್ಸ್

ಪಂಕಜ್ ಗುಪ್ತಾ ಸ್ಥಾಪನೆ ಮಾಡಿದಂತಹ ಹಳ್ಳಿ ಲಾಬ್ಸ್, ಬಿಲ್ಡಿಂಗ್ ಡೀಪ್ ಲರ್ನಿಂಗ್ ಮತ್ತು ಮಿಷಿನ್ ಲರ್ನಿಂಗ್ ಸಿಸ್ಟಮ್ (ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆ) ವಿಷಯದ ಕುರಿತು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಂಡಿತ್ತು ಎನ್ನಲಾಗಿದೆ.

ಕೃತಕ ಬುದ್ದಿಮತ್ತೆ:

ಕೃತಕ ಬುದ್ದಿಮತ್ತೆ:

ಹಳ್ಳಿ ಲಾಬ್ಸ್ ಕಂಪನಿಯೂ ಇತ್ತೀಚೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕಾಣುತ್ತಿರುವ ಕೃತಕ ಬುದ್ದಿಮತ್ತೆಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿತ್ತು, ಮತ್ತು ಈ ವಿಷಯದಲ್ಲಿ ಹೆಚ್ಚಿನ ಪರಿಣಿತಿಯನ್ನು ಸಾಧಿಸಲು ಮುಂದಾಗಿತ್ತು ಹೀಗಾಗಿಯೇ ಗೂಗಲ್ ಕಣ್ಣಿಗೆ ಬಿದ್ದಿದೆ ಎನ್ನಲಾಗಿದೆ.

ಸ್ಟಾರ್ಟ್ ಆಪ್ ಕಂಪನಿಗಳಿಗೆ ದಾರಿದೀಪ:

ಸ್ಟಾರ್ಟ್ ಆಪ್ ಕಂಪನಿಗಳಿಗೆ ದಾರಿದೀಪ:

ಗೂಗಲ್ ಜೊತೆಗೆ ಕೈ ಜೋಡಿಸಿರುವ ಹಳ್ಳಿ ಲಾಬ್ಸ್ ಕಂಪನಿಯೂ ಮುಂದಿನ ದಿನಗಳಿಗೆ ಹೆಚ್ಚಿನ ಆವಿಷ್ಕಾರ ಮಾಡಲಿದೆ. ಅಲ್ಲದೇ ಹಲವರು ಸ್ಟಾರ್ಟ್ ಆಪ್ ಕಂಪನಿಗಳಿಗೆ ದಾರಿದೀಪವಾಗಲಿದೆ.

ಗೂಗಲ್ ಗೆ ಲಾಭ:

ಗೂಗಲ್ ಗೆ ಲಾಭ:

ಯಾಂತ್ರಿಕ ಸಮಸ್ಯೆಗಳಿಗೆ ಉತ್ತರ ನೀಡುವಂತ ಟೆಕ್ನಾಲಜಿಯನ್ನು ಆವಿಷ್ಕರಿಸು ಕಾರ್ಯದಲ್ಲಿ ಹಳ್ಳಿ ಲಾಬ್ಸ್ ಕಾರ್ಯಪ್ರವೃತ್ತವಾಗಿತ್ತು. ಈ ಕಾರ್ಯವನ್ನು ನೋಡಿದ ಗೂಗಲ್, ಭವಿಷ್ಯದಲ್ಲಿ ಈ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳುವ ಸಲುವಾಗಿ ಹಳ್ಳಿ ಲಾಬ್ಸ್ ಅನ್ನು ತನ್ನ ತೆಕ್ಕೆಗೆ ತೆಗದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Google has acquired Bengaluru-based start-up Halli Labs. Halli, which means 'village' in Kannada to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot