'ಹುವಾವೇ P30 Lite' ಸ್ಮಾರ್ಟ್‌ಪೋನ್‌ನ ಹೊಸ ಆವೃತ್ತಿ ಬಿಡುಗಡೆ!

|

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಹುವಾವೇ ತನ್ನ ಹುವಾವೇ P30 lite ನ್ಯೂ ಎಡಿಷನ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಕಳೆದ ವರ್ಷವೇ ಪಿ30 ಲೈಟ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಯಶಸ್ವಿಯಾಗಿದ್ದ ಹುವಾವೇ ಕಂಪೆನಿ, ಬಳಕೆದಾರರಿಗೆ ಇನ್ನಷ್ಟು ಉತ್ತಮ ಫೀಚರ್ಸ್‌ ಕಲ್ಪಿಸುವ ಸಲುವಾಗಿ ಈ ಸ್ಮಾರ್ಟ್‌ಫೋನ್‌ನ ನ್ಯೂ ಎಡಿಷನ್‌ ಬಿಡುಗಡೆ ಮಾಡಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ.

ಹೌದು

ಹೌದು, ಹುವಾವೇ ಕಂಪೆನಿ ಕಳೆದ ವರ್ಷ ಬಿಡುಗಡೆ ಮಾಡಿದ್ದ ಹುವಾವೇ ಪಿ30ಲೈಟ್‌ ಸ್ಮಾರ್ಟ್‌ಫೋನ್‌ನ ನ್ಯೂ ಎಡಿಷನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಇದೀಗ ಪೋಟೋ, ಪ್ರೊಸೆಸಿಂಗ್‌, ಮತ್ತು ಶೇಖರಣಾ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸಿದೆ. ಹುವಾವೇ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹುವಾವೇ ಪಿ 30 ಲೈಟ್ ಹೊಸ ಆವೃತ್ತಿ ಉತ್ತಮ ಆಯ್ಕೆಯಾಗಿದೆ ಎಂದು ಹುವಾವೇ ಮ್ಯಾನೇಜಿಂಗ್ ಡೈರೆಕ್ಟರ್‌ ಅನ್ಸನ್ ಜಾಂಗ್ ಹೇಳಿದ್ದಾರೆ.

ಇನ್ನು

ಇನ್ನು ಕಳೆದ ವರ್ಷ ಬಿಡುಗಡೆಯಾಗಿದ್ದ ಹುವಾವೇ P30 lite ಸ್ಮಾರ್ಟ್‌ಫೋನ್‌ ಹಾಗೂ P30 lite ನ್ಯೂ ಎಡಿಷನ್‌ ಸ್ಮಾರ್ಟ್‌ಪೋನ್‌ ಒಂದೇ ತೆರನಾದ ವಿನ್ಯಾಸವನ್ನು ಹೊಂದಿದೆ. ಎಂದಿನಂತೆ ಈ ಸ್ಮಾರ್ಟ್‌ಫೋನ್‌ 6.15-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಎಲ್‌ಸಿಡಿ ಸ್ಕ್ರೀನ್ 2312 x 1080 ಪಿಕ್ಸೆಲ್ ರೆಸೆಲ್ಯೂಷನ್ ಮತ್ತು ಟಿಯರ್‌ಡ್ರಾಪ್ ನೋಚ್ ವಿನ್ಯಾಸದಲ್ಲಿದೆ. ಡಿಸ್‌ಪ್ಲೇ ಟು ಬಾಡಿ ನಡುವಿನ ಅನುಪಾತ ಶೇಕಡಾ 90 ರಷ್ಟಿದೆ.

ಪಿ30 ಲೈಟ್‌

ಅಲ್ಲದೆ ಪಿ30 ಲೈಟ್‌ ನ್ಯೂ ಎಡಿಷನ್‌ ಸ್ಮಾರ್ಟ್‌ಫೋನ್‌ ಕೂಡ ಆಕ್ಟಾ ಕೋರ್ ಕಿರಿನ್ 710 ಪ್ರೊಸೆಸರ್, ಹೊಂದಿದ್ದು, ಆಂಡ್ರಾಯ್ಡ್ v9.0 ಒಎಸ್‌ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಹೊಸ ಎಡಿಷನ್‌ ಸ್ಮಾರ್ಟ್‌ಫೋನ್‌ನಲ್ಲಿ ಪ್ರಮುಖ ಬದಲಾವಣೆ ಎಂದರೆ ಅದರ RAM ಮತ್ತು storage ಸಾಮರ್ಥ್ಯದ ಆಯ್ಕೆಗಳಲ್ಲಿ ಮಾತ್ರ. ಹುವಾವೇ ಪಿ 30 ಲೈಟ್ ಸ್ಮಾರ್ಟ್‌ಫೋನ್‌ ಈಗ 6GB RAM ಮತ್ತು 256GB ಶೇಖರಣಾ ಆಯ್ಕೆಯೊಂದಿಗೆ ಲಭ್ಯವಿದೆ.

ಹುವಾವೇ

ಸದ್ಯ ಹುವಾವೇ ಕಂಪನಿಯು ಈ ಹಿಂದೆ ಪಿ30ಲೈಟ್‌ ಸ್ಮಾರ್ಟ್‌ಫೋನ್‌ನ ಟ್ರಿಪಲ್‌ ಕ್ಯಾಮೆರಾದಲ್ಲಿದ್ದ ಮುಖ್ಯ ಕ್ಯಾಮೆರಾವನ್ನ 24 ಮೆಗಾಪಿಕ್ಸೆಲ್ ನಿಂದ 48 ಮೆಗಾಪಿಕ್ಸೆಲ್ ಸೆನ್ಸಾರ್‌ಗೆ ಬದಲಾಯಿಸಿದೆ. ಇನ್ನು ಎರಡನೇ ಕ್ಯಾಮೆರಾ ಹಾಗೂ ಮೂರನೇ ಕ್ಯಾಮೆರಾ ಹಿಂದಿನಂತೆಯೆ ಇರಲಿದ್ದು ಕ್ರಮವಾಗಿ 8ಮೆಗಾಪಿಕ್ಸೆಲ್‌ ಮತ್ತು 2ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡಿವೆ. ಸೆಲ್ಪಿ ಕ್ಯಾಮೆರಾ ವಿಭಾಗದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂದಿನಂತೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ

ಇನ್ನು ಬ್ಯಾಟರಿಗೆ ಸಂಬಂಧಿಸಿದಂತೆ ಹುವಾವೇ P30 ಲೈಟ್ ಸ್ಮಾರ್ಟ್‌ಫೋನ್ನ ನ್ಯೂ ಎಡಿಷನ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಎಂದಿನಂತೆ 3340 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಇನ್ನುಳಿದಂತೆ ನ್ಯಾನೋ ಸಿಮ್ 2 ಸೆಟಪ್, ಕ್ವಿಕ್‌ ಚಾರ್ಜೀಂಗ್ ತಂತ್ರಜ್ಞಾನ, ಕ್ಯಾಪಾಸಿಟಿವ್ ಟಚ್‌ಸ್ಕ್ರೀನ್ ಮತ್ತು ಫೇಸ್‌ ಅನ್‌ಲಾಕ್‌ನಂತಹ ವಿಶೇಷ ಫೀಚರ್ಸ್ ಹೊತ್ತು ಬಂದಿದೆ. ಸದ್ಯ ಹುವಾವೇ ಪಿ 30 ಲೈಟ್ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ £ 299 (ಅಂದಾಜು 27,550 ರೂ.) ಬೆಲೆಯನ್ನ ಹೊಂದಿದ್ದು. ಇದೇ ಜನವರಿ 15 ರಿಂದ ಯುಕೆ(UK) ನಲ್ಲಿ ಲಭ್ಯವಿರುತ್ತದೆ.

Most Read Articles
Best Mobiles in India

English summary
Last week, Huawei launched a New Edition of the P30 Lite in the UK. The company says that Huawei P30 Lite New Edition is an updated version of the original phone. This Huawei phone ships with Android

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X