Subscribe to Gizbot

ಐಬಾಲ್‌ನಿಂದ ರೂ 8,199 ರ ಆಂಡಿ 5 ಎಮ್ ಎಕ್ಸಾಟಿಕ್ ಸ್ಮಾರ್ಟ್‌ಫೋನ್

Written By:

ಐಬಾಲ್ ರೂ 8,199 ರ ಬೆಲೆಯಲ್ಲಿ ಆಂಡಿ 5 ಎಮ್ ಎಕ್ಸಾಟಿಕ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಐಬಾಲ್ ಇದನ್ನು ಕುರಿತಂತೆ ಫೆಬ್ರವರಿಯಲ್ಲೇ ಆನ್‌ಲೈನ್‌ ಮೂಲಕ ಪ್ರಸಾರ ಮಾಡಿತ್ತು.

[ಓದಿರಿ: ಆಧುನಿಕ ಭವಿಷ್ಯದ ನೋಟ ಈ ಟಾಪ್ ಮ್ಯೂಸಿಯಮ್‌ಗಳಲ್ಲಿ]

ಕಂಪೆನಿಯ ಪ್ರಕಾರ, ಐಬಾಲ್ ಆಂಡಿ 5 ಎಮ್ ಎಕ್ಸಾಟಿಕ್ 2 ಜಿಬಿ RAM ಅನ್ನು ಒಳಗೊಂಡಿದ್ದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಇದಾಗಿದ್ದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿದೆ. ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಕೂಡ ಮಾಡಬಹುದಾಗಿದೆ.

ಐಬಾಲ್‌ನಿಂದ ರೂ 8,199 ರ ಆಂಡಿ 5 ಎಮ್ ಎಕ್ಸಾಟಿಕ್ ಸ್ಮಾರ್ಟ್‌ಫೋನ್

ಫೋನ್ 5 ಇಂಚಿನ ಕ್ಯುಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ಪಿಕ್ಸೆಲ್ ಡೆನ್ಸಿಟಿ 220 ಪಿಪಿಐ ಆಗಿದೆ. ಕ್ವಾಡ್ ಕೋರ್ 1.3GHZ ಆಗಿದ್ದು ಕೋರ್ಟೆಕ್ಸ್ ಎ7 ಪ್ರೊಸೆಸರ್ ಇದರಲ್ಲಿದೆ. 2ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದಲ್ಲಿ 3.2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದು.

ಇನ್ನು ಐಬಾಲ್‌ನಲ್ಲಿರುವ ಸಂಪರ್ಕ ವಿಶೇಷತೆಗಳೆಂದರೆ 3ಜಿ, ವೈಫೈ ಜೊತೆಗೆ ಹಾಟ್‌ಸ್ಪಾಟ್ ವೈಶಿಷ್ಟ್ಯತೆ ಇದರಲ್ಲಿದೆ.

English summary
iBall has launched the Andi 5M Xotic smartphone in India, pricing it at Rs. 8,199. The iBall smartphone was previously listed for purchase in February by an online retailer at Rs. 8,950.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot