Subscribe to Gizbot

ಭಾರತೀಯ ವಿಜ್ಞಾನಿ ನಿರ್ಮಿಸಿದ ನೀರಿನ ಹನಿಯ ಕಂಪ್ಯೂಟರ್

Written By:

ನೀರಿನ ಹನಿಗಳಿಂದ ಕಂಪ್ಯೂಟರ್ ಕಾರ್ಯನಿರ್ವಹಿಸುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಆದರೆ ಇದು ನಿಮಗೆ ಸದ್ಯದಲ್ಲಿಯೇ ಕಣ್ಣಿಗೆ ಕಾಣಲಿದೆ. ಭಾರತೀಯ ಮೂಲದ ಬಯೋ ಇಂಜಿನಿಯರಿಂಗ್ ವಿಜ್ಞಾನಿ, ಮನು ಪ್ರಕಾಶ್ ಇಂತಹ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿದ್ದು ಇದು ಚಲಿಸುವ ನೀರಿನ ಹನಿಗಳಿಂದ ಕಂಪ್ಯೂಟರ್ ಅನ್ನು ಕಾರ್ಯನಿರ್ವಹಿಸುವಂತೆ ಮಾಡಲಿದೆ.

ಇಂದಿನ ಲೇಖನದಲ್ಲಿ ಈ ಹೊಸ ಅನ್ವೇಷಣೆಯ ಕುರಿತ ಮಾಹಿತಿಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಮ್ಮ ಇಬ್ಬರು ವಿದ್ಯಾರ್ಥಿ

ಸಂಶೋಧನೆ

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ತಮ್ಮ ಇಬ್ಬರು ವಿದ್ಯಾರ್ಥಿಗಳೊಂದಿಗೆ ಪ್ರಕಾಶ್ ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ.

ಅಯಸ್ಕಾಂತೀಯ ಕ್ಷೇತ್ರ

ಸಣ್ಣ ನೀರಿನ ಹನಿ

ಅಯಸ್ಕಾಂತೀಯ ಕ್ಷೇತ್ರದಲ್ಲಿ ಸಣ್ಣ ನೀರಿನ ಹನಿಗಳನ್ನು ಟ್ರ್ಯಾಪ್ ಮಾಡಿ ಇರಿಸಲಾಗುತ್ತದೆ. ನಿರ್ದಿಷ್ಟ ದಿಕ್ಕಿನತ್ತ ನೀರಿನ ಹನಿಗಳು ಸಂಚರಿಸಿದಂತೆ ಅಯಸ್ಕಾಂತೀಯ ಕ್ಷೇತ್ರ ತಿರುಗುತ್ತದೆ.

ಮುಖ್ಯಭಾಗ

ಕಂಪ್ಯೂಟರ್ ಕ್ಲಾಕ್‌ನ ಮುಖ್ಯ ಬೇಸ್

ಕಂಪ್ಯೂಟರ್ ಕ್ಲಾಕ್‌ನ ಮುಖ್ಯ ಬೇಸ್ ಇದಾಗಿದ್ದು, ಯಾವುದೇ ಕಂಪ್ಯೂಟರ್‌ನ ಮುಖ್ಯಭಾಗವಾಗಿದೆ.

ಪರಿವರ್ತಿಸು

ತ್ವರಿತ ಅಪ್ಲಿಕೇಶನ್

ಈ ಅನ್ವೇಷಣೆಯ ತ್ವರಿತ ಅಪ್ಲಿಕೇಶನ್ ಕಂಪ್ಯೂಟರ್ ಅನ್ನು ರಸಾಯನ ಮತ್ತು ಭೌತ ಲ್ಯಾಬೋರೇಟರಿಯನ್ನಾಗಿ ಪರಿವರ್ತಿಸುತ್ತದೆ ಎಂಬುದಾಗಿದೆ.

ಕೆಮಿಕಲ್‌ ಸಾಗಿಸು

ಟೆಸ್ಟ್ ಟ್ಯೂಬ್‌

ನೀರಿನ ಹನಿಗಳು ಟೆಸ್ಟ್ ಟ್ಯೂಬ್‌ನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಕೆಮಿಕಲ್‌ಗಳನ್ನು ಸಾಗಿಸುತ್ತವೆ.

ವೇಗ ಕಾರ್ಯನಿರ್ವಹಿಸು

ಸ್ಮಾರ್ಟ್‌ಫೋನ್‌

ಕಂಪ್ಯೂಟರ್ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳಿಗೂ ಈ ತಂತ್ರಜ್ಞಾನ ವೇಗವಾಗಿ ಕಾರ್ಯನಿರ್ವಹಿಸುವ ಕುಶಲತೆಯನ್ನು ನೀಡುತ್ತದೆ

ನೀರಿನ ಹನಿಗಳ ಮೂಲಕ ನಿಯಂತ್ರಿಸಬಹುದಾಗಿದೆ

ನವೀನ ಮಾದರಿಯ ಕಂಪ್ಯೂಟರ್

ಸ್ಟ್ಯಾನ್‌ಫೋರ್ಡ್‌ನಲ್ಲಿ ಅಸಿಸ್ಟೆಂಟ್ ಬಯೋಇಂಜಿನಿಯರಿಂಗ್ ಪ್ರೊಫೆಸರ್ ಆಗಿರುವ ಮನು ಪ್ರಕಾಶ್, ತಮ್ಮ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ ಈ ನವೀನ ಮಾದರಿಯ ಕಂಪ್ಯೂಟರ್ ಅನ್ನು ತಯಾರಿಸಿದ್ದು ನೀರಿನ ಹನಿಗಳ ಮೂಲಕ ಈ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದಾಗಿದೆ.

ಸಿಂಕ್ರೋನಸ್ ಕಂಪ್ಯೂಟರ್

ಹಲವಾರು ವರ್ಷ

ಈ ಕಂಪ್ಯೂಟರ್ ಅನ್ನು ತಯಾರಿಸಲು ಹಲವಾರು ವರ್ಷಗಳನ್ನು ಇವರು ತೆಗೆದುಕೊಂಡಿದ್ದು, ಸಿಂಕ್ರೋನಸ್ ಕಂಪ್ಯೂಟರ್ ಎಂಬುದಾಗಿ ಇದನ್ನು ಕರೆಯಲಾಗಿದೆ.

ಕಂಪ್ಯೂಟರ್‌ನ ತಯಾರಿ

ಗಡಿಯಾರ ನಿರ್ವಹಿಸುವ ವಿಧಾನ

ಪ್ರಕಾಶ್ ವಿದ್ಯಾರ್ಥಿಯಾಗಿದ್ದಾಗಲೇ ಈ ಉಪಾಯ ಅವರ ತಲೆಯಲ್ಲಿ ಹೊಳೆದಿದ್ದು ಗಡಿಯಾರ ನಿರ್ವಹಿಸುವ ವಿಧಾನವನ್ನೇ ಕಂಪ್ಯೂಟರ್‌ನ ತಯಾರಿಯಲ್ಲೂ ಬಳಸಿದ್ದಾರೆ.

ಸಮಸ್ಯೆ ನಿವಾರಿಸುವ ಸಾಮರ್ಥ್ಯ

ಉಳಿದ ಕಂಪ್ಯೂಟರ್‌ಗಳಿಗಿಂತಲೂ ಭಿನ್ನ

ಈ ಕಂಪ್ಯೂಟರ್ ಉಳಿದ ಕಂಪ್ಯೂಟರ್‌ಗಳಿಗಿಂತಲೂ ಭಿನ್ನವಾಗಿದ್ದು ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಬೆಂಗಳೂರು ಟೀಚರ್‌ನ ಯೂಟ್ಯೂಬ್ ಶಾಲೆಯಲ್ಲಿ 68000 ವಿದ್ಯಾರ್ಥಿಗಳು!!
ಟ್ರುಕಾಲರ್‌ನಿಂದ ನಿಮ್ಮ ಸಂಖ್ಯೆಯನ್ನು ಅಳಿಸುವುದು ಹೇಗೆ?
ಜುಕರ್‌ಬರ್ಗ್ ಡ್ರೆಸ್‌ಕೋಡ್‌ನಲ್ಲಿ ಅಡಗಿದೆ ನಿಗೂಢತೆ
ಫೋನ್ ಕಳುವಾಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಸಲಹೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Manu Prakash has developed a computer that works by moving water droplets.Prakash, along with his two students, at Stanford University, devised a system in which tiny water droplets are trapped in a magnetic field.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot