ವರ್ಷಕ್ಕೆ 6 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಇನ್ಫೋಸಿಸ್ ಅಸ್ತು!!

Written By:

ಇನ್ಫೋಸಿಸ್ ಸಂಸ್ಥೆ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಭಾರಿ ಬದಲಾವಣೆಗಾಳಾದರೂ ಸಂಸ್ಥೆಯಲ್ಲಿನ ನೇಮಕಾತಿ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.!! ಹೌದು, ಇದಕ್ಕೆ ಪೂರಕ ಎಂಬಂತೆ ವರ್ಷಕ್ಕೆ 6 ಸಾವಿರ ಎಂಜಿನಿಯರ್‌ಗಳನ್ನು ಇನ್ಫೋಸಿಸ್ ನೇಮಕ ಮಾಡಿಕೊಳ್ಳಲಿದೆ ಎಂದು ಸಂಸ್ಥೆಯ ಹಂಗಾಮಿ ಸಿಇಒ ಮತ್ತು ಎಂಡಿ ಯು.ಬಿ.ಪ್ರವೀಣ್ ರಾವ್‌ ಹೇಳಿದ್ದಾರೆ.!!

ಸಂಸ್ಥೆಯ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿರುವ ಯು.ಬಿ.ಪ್ರವೀಣ್ ರಾವ್‌ ಅವರು, ನಾವು ನೇಮಕ ಪ್ರಕ್ರಿಯೆಯನ್ನು ಮುಂದುವರಿಸಲಿದ್ದೇವೆ. ನೇಮಕ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಮಾರುಕಟ್ಟೆ ಮತ್ತು ಬೆಳವಣಿಗೆಯನ್ನು ಆಧರಿಸಿ ಈ ವರ್ಷ ಹೆಚ್ಚುವರಿಯಾಗಿ 6,000 ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.!!

ವರ್ಷಕ್ಕೆ 6 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಇನ್ಫೋಸಿಸ್ ಅಸ್ತು!!

ಮಾಜಿ ಸಿಇಒ ಸ್ಥಾನದಿಂದ ವಿಶಾಲ್‌ ನಿರ್ಗಮನದ ನಂತರ ಸಂಸ್ಥೆಯಲ್ಲಿ ಉದ್ಯಮ ನೇಮಕಾತಿ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣಕಾರರು ಅಭಿಪ್ರಾಯಪಟ್ಟಿದ್ದರು. ಆದರೆ, ಇನ್ಫೋಸಿಸ್ ಮುಂದಿನ ಎರಡು ವರ್ಷಗಳಲ್ಲಿ ಪ್ರತಿವರ್ಷವೂ 6 ಸಾವಿರ ಎಂಜಿನಿಯರ್‌ಗಳನ್ನು ಇನ್ಫೋಸಿಸ್ ನೇಮಕ ಮಾಡಿಕೊಳ್ಳಲಿದೆ..!!

ವರ್ಷಕ್ಕೆ 6 ಸಾವಿರ ಎಂಜಿನಿಯರ್‌ಗಳ ನೇಮಕಕ್ಕೆ ಇನ್ಫೋಸಿಸ್ ಅಸ್ತು!!

ಇನ್ನು ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಎಂಜಿನಿಯರ್‌ಗಳು ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹೊರಬರುತ್ತಿದ್ದು, ಅವರಲ್ಲಿ ಶೇ.20-30 ಮಂದಿ ಮಾತ್ರ ಸೂಕ್ತ ಪ್ರತಿಭೆಯನ್ನು ಹೊಂದಿದ್ದಾರೆ. ಎಂದು ಯು.ಬಿ.ಪ್ರವೀಣ್ ರಾವ್‌ ಅಭಿಪ್ರಾಯಪಟ್ಟಿದ್ದು, ವಿಧ್ಯಾರ್ಥಿಗಳು ಕೌಶಲ್ಯತೆ ಹೆಚ್ಚಿಸಿಕೊಂಡರೆ ಮಾತ್ರ ಉದ್ಯೋಗ ಪಡೆಯಬಹುದು ಎಂದು ಅವರು ಹೇಳಿದರು.

ಓದಿರಿ: ಭಾರತದ ಅತ್ಯಂತ ಕಡಿಮೆ ಬೆಲೆಯ 4G ಪೋನ್ಗೆ ಗ್ರಾಹಕರು ಫಿದಾ!!

English summary
Unfazed by the recent upheavals at the board .to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot