Just In
- 10 hrs ago
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- 11 hrs ago
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 12 hrs ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- 13 hrs ago
ಹೊಸ ಚಾರ್ಜರ್ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್ ಚಾರ್ಜ್ ಸಾಧ್ಯ!
Don't Miss
- Sports
ಈ ಪ್ರದರ್ಶನದಿಂದ ತೃಪ್ತಿಯಾಗಿದೆ: ಅದ್ಭುತ ಪ್ರದರ್ಶನದ ಬಗ್ಗೆ ಶುಬ್ಮನ್ ಗಿಲ್ ಸಂತಸ
- Movies
BBK9: ನೇಹಾ ಗೌಡ ಜೊತೆ ಬಿಗ್ ಬಾಸ್ ಸೀಸನ್ 9ರ ಸಪ್ಪೆ ಹೊಟೇಲ್ ಗ್ಯಾಂಗ್ ಪ್ರತ್ಯಕ್ಷ..!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಲೆನೊವೊ ಟ್ಯಾಬ್ P12 ಪ್ರೊ ಲಾಂಚ್! ಬೆಲೆ ಎಷ್ಟು?
ಟೆಕ್ ವಲಯದಲ್ಲಿ ಲೆನೊವೊ ಕಂಪೆನಿ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಪ್ರಾಡಕ್ಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಆಂಡ್ರಾಯ್ಡ್ ಟ್ಯಾಬ್ಲೆಟ್ ಲೆನೊವೊ ಟ್ಯಾಬ್ P12 ಪ್ರೊ ಬಿಡುಗಡೆ ಮಾಡಿದೆ. ಇದು "ಫ್ಲ್ಯಾಗ್‌ಶಿಪ್ ಆಂಡ್ರಾಯ್ಡ್ ಟ್ಯಾಬ್ಲೆಟ್" ಫೀಚರ್ಸ್‌ಗಳನ್ನು ನೀಡುತ್ತದೆ. ಇನ್ನು ಈ ಟ್ಯಾಬ್ 10,200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಲೆನೊವೊ ಕಂಪೆನಿ ಭಾರತದಲ್ಲಿ ಹೊಸ ಲೆನೊವೊ ಟ್ಯಾಬ್ P12 ಪ್ರೊ ಲಾಂಚ್ ಮಾಡಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟ್ಯಾಬ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಈ ಟ್ಯಾಬ್‌ನ ಆರಂಭಿಕ ಬೆಲೆ 69,999 ರೂ.ಗಳಿಂದ ಪ್ರಾರಂಭವಾಗಲಿದೆ. ಇನ್ನುಳಿದಂತೆ ಈ ಹೊಸ ಲೆನೊವೊ P12 ಪ್ರೊ ಟ್ಯಾಬ್ ಫೀಚರ್ಸ್ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ವಿಶೇಷ
ಲೆನೊವೊ ಟ್ಯಾಬ್ P12 ಪ್ರೊ 12.6 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 2,560x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಹೊಂದಿದೆ. ಇದು 5.63mm ಥಿಕ್‌ನೆಸ್ ಅನ್ನು ಹೊಂದಿದ್ದು, ಮೆಟ್ ಬಾಡಿಯನ್ನು ಹೊಂದಿದೆ. ಇದಲ್ಲದೆ ಡಿಸ್‌ಪ್ಲೇಯಲ್ಲಿ ಎಲ್ಲಾ ಕಡೆ ಸ್ಲಿಮ್ ಬೆಜೆಲ್‌ಗಳನ್ನು ನೀಡಲಾಗಿದೆ.

ಪ್ರೊಸೆಸರ್
ಲೆನೊವೊ ಟ್ಯಾಬ್ P12 ಪ್ರೊ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ ಹೊಂದಿದೆ. ಇದು 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಹೇಗಿದೆ?
ಈ ಟ್ಯಾಬ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ವೈಡ್ ಕ್ಯಾಮೆರಾ ಮತ್ತು ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಲೆನೊವೊ ಟ್ಯಾಬ್ P12 ಪ್ರೊ 10,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಟ್ಯಾಬ್ ಕಂಪ್ಲೀಟ್ ಚಾರ್ಜ್ ಮಾಡುವುದಕ್ಕೆ ಸರಿಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 15 ಗಂಟೆಗಳ ಆನ್‌ಲೈನ್ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ. ಈ ಹೊಸ ಟ್ಯಾಬ್ಲೆಟ್ ಎರಡು ಮೈಕ್ರೊಫೋನ್‌ಗಳು ಮತ್ತು JBL ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಆಡಿಯೊ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಲೆನೊವೊ ಟ್ಯಾಬ್ P12 ಪ್ರೊ ಭಾರತದಲ್ಲಿ 69,999ರೂ.ಗಳ ಬೆಲೆಯಿಂದ ಪ್ರಾರಂಭವಾಗಲಿದೆ. ಪ್ರಸ್ತುತ ಈ ಟ್ಯಾಬ್ಲೆಟ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಇನ್ನೂ ಲಭ್ಯವಿಲ್ಲ. ಆದರೆ ಲೆನೊವೊ ಕಂಪೆನಿ ಪತ್ರಿಕಾ ಟಿಪ್ಪಣಿಯಲ್ಲಿ, ಲೆನೊವೊ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ಲೆನೊವೊ ಇಂಡಿಯಾ ವೆಬ್‌ಸೈಟ್ ಮತ್ತು ಸ್ಟೋರ್ ಮತ್ತು ಅಮೆಜಾನ್ ಮೂಲಕ ರಿಟೇಲ್ ಸೇಲ್ ಮಾಡುತ್ತದೆ ಎನ್ನಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470