ಭವಿಷ್ಯದ 'ಮೆದುಳು' ಸೃಷ್ಟಿಗೆ ವಿಜ್ಞಾನಿಗಳ ಕಸರತ್ತು!!.ವಿಶ್ವದ ದೃಷ್ಟಿಯೆಲ್ಲಾ ಈ ಕಂಪ್ಯೂಟರ್‌ ಮೇಲೆ!!

|

ಅದು 1996 ನೇ ಇಸವಿಯ ಫೆಬ್ರುವರಿ 10 ನೇ ತಾರೀಖು.! ಅಂದಿನ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್‍ಪ್ರೋವ್ ವಿರುದ್ಧ ಆರು ಪಂದ್ಯಗಳ ಸರಣಿಯಲ್ಲಿ ಐಬಿಎಂನ 'ಡೀಪ್ ಬ್ಲೂ' ಕಂಪ್ಯೂಟರ್ ಸವಾಲು ಹಾಕಿತ್ತು. ಈ ಸವಾಲಿನಲ್ಲಿ ಚೆಸ್ ಚಾಂಪಿಯನ್‍ನನ್ನು ಕೃತಕ ಬುದ್ಧಿಮತ್ತೆಯ ಕಂಪ್ಯೂಟರ್ ಸೋಲಿಸಿತ್ತು.!

ಈ ಒಂದು ಘಟನೆ ಈಗಲೂ ಕಂಪ್ಯೂಟರ್ ಪ್ರಪಂಚದಲ್ಲಿ ಒಂದು ಮೈಲಿಗಲ್ಲಾಗಿ ಉಳಿದಿದೆ. ಅಲ್ಲಿಂದ ಮುಂದೆಯೂ ಈ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಈಗಿನ ಕಂಪ್ಯೂಟರ್‌ಗಳು ವೇಗ ಹಾಗೂ ನೆನಪಿನ ಸಾಮರ್ಥ್ಯ ಹೆಚ್ಚಿಸಿಕೊಂಡಿವೆ. ಆದರೆ, ಈಗಿರುವ ವೇಗ ಮತ್ತು ನೆನಪು ಮಾತ್ರವೇ ಮನುಷ್ಯನ ಬುದ್ಧಿವಂತಿಕೆಗೆ ಸಮನಾದುದಲ್ಲ.!!

ಭವಿಷ್ಯದ 'ಮೆದುಳು' ಸೃಷ್ಟಿಗೆ ವಿಜ್ಞಾನಿಗಳ ಕಸರತ್ತು!!

ಆದರೆ, ವಿಜ್ಞಾನಿಗಳು ಬಿಡಬೇಕಲ್ಲ.! ಮನುಷ್ಯನ ಮೆದುಳಿನಷ್ಟೇ ವೇಗವಾದ ಮತ್ತು ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್ ಅನ್ನು ತಯಾರಿಸಲು ಮುಂದಾಗಿದ್ದಾರೆ.! ಮಾನವನ ಮೆದುಳನ್ನು ಮರುಸೃಷ್ಟಿ ಮಾಡಲು ಕೆಲಸ ಮಾಡುತ್ತಿದ್ದಾರೆ.! ಹಾಗಾದರೆ, ಏನಿದು ಕಂಪ್ಯೂಟರ್ ಮೆದುಳು ಸೃಷ್ಟಿ? ಇದಕ್ಕೆ ವಿಜ್ಞಾನಿಗಳಿಗೆ ಇರುವ ಸವಾಲುಗಳೇನು ಎಂಬುದನ್ನು ತಿಳಿಯಿರಿ.!!

ಮನುಷ್ಯನಷ್ಟೇ ಕ್ಷಿಪ್ರ ಕಂಪ್ಯೂಟರ್!!

ಮನುಷ್ಯನಷ್ಟೇ ಕ್ಷಿಪ್ರ ಕಂಪ್ಯೂಟರ್!!

ಮನುಷ್ಯನಷ್ಟೇ ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಳ್ಳುವ, ಅಡೆ-ತಡೆಗಳನ್ನು ಅನುಭವದ ಆಧಾರದಲ್ಲಿ ದಾಟಿ ಸಾಗಬಹುದಾದ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಅಥವಾ ಅದನ್ನು ಒಳಗೊಂಡ ಕಂಪ್ಯೂಟರ್‌ಗಳು ಈಗಲೂ ಇಲ್ಲ. ಆದರೆ, ಲಕ್ಷಾಂತರ ವರ್ಷಗಳಲ್ಲಿ ಮನುಷ್ಯ ಕಂಡು ತನ್ನದಾಗಿಸಿಕೊಂಡಿರುವ ಅನುಭವವನ್ನು ಕಂಪ್ಯೂಟರ್ ಗ್ರಹಿಕೆಗೆ ತರುವ ಪ್ರಯತ್ನ ಉತ್ತುಂಗದಲ್ಲಿದೆ.!!

'ಮೆದುಳು’ ರೂಪಿಸಲು ಪ್ರಯತ್ನ!!

'ಮೆದುಳು’ ರೂಪಿಸಲು ಪ್ರಯತ್ನ!!

ಮಾನವನ ಮೆದುಳಿಗೆ ಸಮನಾಗಿ ವರ್ತಿಸಬಲ್ಲ ಕಂಪ್ಯೂಟರ್ ರೂಪಿಸಲು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ನಿರಂತರ ಸಂಶೋಧನೆ ನಡೆದಿದೆ. ಸಮರ್ಥ ‘ಕಂಪ್ಯೂಟರ್ ಮೆದುಳು' ಬೆಳೆಸುವುದು, ತಾನಾಗಿಯೇ ಸಂದರ್ಭವನ್ನು ಗ್ರಹಿಸುವ ಕಂಪ್ಯೂಟರ್ ದೃಷ್ಟಿ ಮೂಡಿಸುವುದನ್ನು ಸ್ಟ್ಯಾನ್‍ಫೋರ್ಡ್‌ನ ವಿಜ್ಞಾನಿ ಫೀ-ಫೀ ಲಿ ನೇತೃತ್ವದ ತಂಡ ಮಾಡುತ್ತಿದೆ.!!

ಕಂಪ್ಯೂಟರ್‌ಗೆ ಸೂಕ್ಷ್ಮ ಚಾತುರ್ಯ!!

ಕಂಪ್ಯೂಟರ್‌ಗೆ ಸೂಕ್ಷ್ಮ ಚಾತುರ್ಯ!!

ಸ್ವಯಂ ಚಾಲಿತ ಕಾರುಗಳು ಸಿಗ್ನಲ್ ಹಸಿರು ದೀಪ ಕಾಣುತ್ತಿದ್ದಂತೆ ಮುಂದೆ ಸಾಗುವುದು, ವೇಗ ನಿಯಂತ್ರಿಸುವುದು ಸಾಧ್ಯವಾಗಿದೆ. ಅದೇ ಪುಟ್ಟ ಹಳ್ಳ, ಟಾರು ಕಿತ್ತಿರುವ ರಸ್ತೆ, ರಸ್ತೆ ಉಬ್ಬು, ಕಲ್ಲುಗಳು ಸಿಕ್ಕಾಗ ಹೇಗೆ ಚಾಲನೆ ಮಾಡಬೇಕು? ರಸ್ತೆಯಲ್ಲಿ ತೂರಿಬರುವ ಕಾಗದ, ಪ್ಲಾಸ್ಟಿಕ್ ವಸ್ತುಗಳ ಮೇಲೆ ಚಕ್ರ ಹರಿಸಬಹುದೇ? ಇಂಥ ಸೂಕ್ಷ್ಮಗಳನ್ನು ಕಂಪ್ಯೂಟರ್‌ಗೆ ಕಲಿಸಿಕೊಡಬೇಕಿದೆ!!

ಪ್ರೋಗ್ರಾಮಿಂಗ್ ಬಿಟ್ಟು ಫೋಟೊ ಕಡೆಗೆ!!

ಪ್ರೋಗ್ರಾಮಿಂಗ್ ಬಿಟ್ಟು ಫೋಟೊ ಕಡೆಗೆ!!

ಮೊದಲು ಯಂತ್ರಕ್ಕೆ ನೋಡುವುದನ್ನು ಕಲಿಸಬೇಕು. ಆನಂತರ ಸರಿಯಾಗಿ ಕಾಣಲು ಅದು ನಮಗೆ ಸಹಕಾರಿಯಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.! ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡುವಾಗ ವಸ್ತುವಿನ ಆಕಾರದ ಕುರಿತು ವಿವರಿಸಬಹುದು, ಆ ವಿವರಣೆ ವಾಸ್ತವದಲ್ಲಿ ಬದಲಾದರೆ ಕಂಪ್ಯೂಟರ್ ಅದನ್ನು ಗುರುತಿಸುವುದಿಲ್ಲ. ಹಾಗಾಗಿಯೇ ಫೋಟೊಗಳ ಮೂಲಕ ಜಗತ್ತನ್ನು ಇದೀಗ ಕಂಪ್ಯೂಟರ್ ಮೆದುಳಿಗೆ ಪರಿಚಯಿಸಲಾಗುತ್ತಿದೆ.!!

100 ಕೋಟಿಯಷ್ಟು ಫೋಟೊ ಸಂಗ್ರಹ!!

100 ಕೋಟಿಯಷ್ಟು ಫೋಟೊ ಸಂಗ್ರಹ!!

ಇಮೇಜ್‌ನೆಟ್ ಎಂಬ ವೆಬ್‌ಸೈಟ್ ಮೂಲಕ 100 ಕೋಟಿಯಷ್ಟು ಫೋಟೊಗಳನ್ನು ಸಂಗ್ರಹಿಸಲಾಗಿತ್ತು. ನೂರಾರು ದೇಶದ ಸಾರ್ವಜನಿಕರ ಸಹಕಾರದಿಂದ 1.5 ಕೋಟಿ ಫೋಟೊಗಳನ್ನು 22 ಸಾವಿರ ವರ್ಗಗಳಲ್ಲಿ ವಿಂಗಡಿಸಿ ಇಂಗ್ಲಿಷ್ ವಿವರಣೆಯನ್ನು ನೀಡಿದ್ದ ಈ ದತ್ತಾಂಶವನ್ನು ಯಂತ್ರ ಕಲಿಕೆಗೆ ಅಳವಡಿಸಲಾಗಿದೆ. ಈ ಎಲ್ಲಾ ವಿವರ ಹಾಗೂ ದೃಶ್ಯಗಳನ್ನು ಗ್ರಹಿಸಿರುವ ಕಂಪ್ಯೂಟರ್ ಮುಂದೆ ಯಾವುದೇ ಚಿತ್ರ ಹಿಡಿದರೂ ಕೆಲವು ಸಾಲುಗಳ ವಿವರಣೆಯೊಂದಿಗೆ ಅದನ್ನು ಗುರುತಿಸುವುದನ್ನು ಕಲಿತಿದೆ.!!

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ನರಕೋಶಗಳ ಕಾರ್ಯ ಡಿಜಿಟಲೀಕರಿಸಿದರೆ?

ನರಕೋಶಗಳ ಕಾರ್ಯ ಡಿಜಿಟಲೀಕರಿಸಿದರೆ?

ಇಲಿಯ ಒಂದು ಸೆಕೆಂಡ್‌ನಷ್ಟು ಪ್ರತಿಕ್ರಿಯೆಗೆ ಕಂಪ್ಯೂಟರ್ ತೆಗೆದುಕೊಳ್ಳುವ ಸಮಯ ಎರಡೂವರೆ ಗಂಟೆ. ಮೆದುಳಿನಲ್ಲಿ ನರಕೋಶ ಮತ್ತು ಅವುಗಳ ಸಂಪರ್ಕದಿಂದ ಸೃಷ್ಟಿಯಾಗುವ ಪ್ರತಿಕ್ರಿಯೆಯ ವೇಗ ಹೆಚ್ಚು.! ಹಾಗಾಗಿ, ನರಕೋಶಗಳನ್ನು ಎಲೆಕ್ಟ್ರಾನಿಕ್ ಸರ್ಕಿಟ್ ಬೋರ್ಡ್‌ಗಳಲ್ಲಿ ತರುರುತ್ತಿದ್ದಾರೆ.!! ಇದರ ಫಲವೇ ಇದೀಗ ‘ನ್ಯೂರೋಗ್ರಿಡ್'.!!

Most Read Articles
Best Mobiles in India

English summary
Many laboratories have begun to develop brain-computer interface (BCI) systems that provide communication and control capabilities to people with severe motor disabilities. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more