Subscribe to Gizbot

ಟಾಟಾ ಕ್ರೋಮಾ ಎಲೆಕ್ಟ್ರಾನಿಕ್ ಮಳಿಗೆ ಆನ್ಲೈನ್

Posted By: Varun
ಟಾಟಾ ಕ್ರೋಮಾ ಎಲೆಕ್ಟ್ರಾನಿಕ್ ಮಳಿಗೆ ಆನ್ಲೈನ್

ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿ ಟಾಟಾ ಕಂಪನಿಯು ತನ್ನ ಎಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟ ಮಳಿಗೆ ಕ್ರೋಮಾ ದ ಮಾರಾಟವನ್ನು ಮತ್ತಷ್ಟು ವಿಸ್ತರಿಸಲು ವೆಬ್ಸೈಟ್ ಒಂದನ್ನು ಬಿಡುಗಡೆ ಮಾಡಿದೆ.

ಮೊಬೈಲುಗಳು, ಟಿವಿ, ಕ್ಯಾಮರಾ, ಕಂಪ್ಯೂಟರ್, ಗೇಮ್ಸ್, ಗೃಹೋಪಯೋಗಿ ಉತ್ಪನ್ನಗಳು ಹಾಗು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ನೀವು ಇನ್ನು ಮೇಲೆ ಈ ಆನ್ಲೈನ್ ಮಳಿಗೆಯ ಮೂಲಕವೇ ಕೊಳ್ಳಬಹುದು, cromaretail.com ಮೂಲಕ.

ಈಗಾಗಲೇ 319 ನಗರಗಳು ಹಾಗು 24 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿರುವ ಕ್ರೋಮಾ, ಇದರೊಂದಿಗೆ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಹಾಗು ಆನ್ಲೈನ್ ಗ್ರಾಹಕರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಆನ್ಲೈನ್ ಮಳಿಗೆ ಸಹಾಯ ಮಾಡಲಿದೆ ಎಂಬುದು ಕಂಪನಿಯ ಅಭಿಪ್ರಾಯ.

ಇದಕ್ಕಾಗಿಯೇಕ್ರೋಮಾ, ಫೆಡೆಕ್ಸ್, ಬ್ಲೂಡಾರ್ಟ್, ಇಂಡಿಯಾ ಪೋಸ್ಟ್ ನಂತಹ ಕೊರಿಯರ್ ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot