ಮ್ಯೂಸಿಕ್ ಪ್ಲೇ ಮಾಡದ ಇಯರ್‌ಪೋನ್ ಬೆಲೆ ಬರೋಬ್ಬರಿ 17 ಸಾವಿರ ರೂಪಾಯಿ!!!

By GizBot Bureau
|

ಈಗ ನಾವು ನಿಮ್ಮನ್ನು ಈ ಲೇಖನದಲ್ಲಿ ಕೇಳುವ ಪ್ರಶ್ನೆ ನಿಮಗೆ ಆಶ್ಚರ್ಯ ಅನ್ನಿಸಬಹುದು... ಅಥವಾ ಇವರಿಗೇನು ಹುಚ್ಚೇ ಎಂದು ಕೂಡ ಒಮ್ಮೆ ನೀವು ಬೈದು ಕೊಳ್ಳುವ ಸಾಧ್ಯತೆಯೂ ಇದೆ. ನಿಮ್ಮ ಫೇವರೆಟ್ ಹಾಡನ್ನು ಪ್ಲೇ ಮಾಡಲು ಅಸಾಧ್ಯವಾಗುವ ಒಂದು ಇಯರ್ ಫೋನ್ ಗೆ ನೀವು ಎಷ್ಟು ಹಣವನ್ನು ಪಾವತಿಸಲು ಸಿದ್ಧರಿದ್ದೀರಿ? ಎಸ್,, ಏನೂ ಕೇಳಿಸುವುದಿಲ್ಲ.

ವಾಟ್ಸ್ಆಪ್ ಸೆಟ್ಟಿಂಗ್ಸ್‌ನಲ್ಲಿರುವ ಈ ಅದ್ಬುತ ಫೀಚರ್ಸ್‌ಗಳನ್ನು ನಾವು ಒಮ್ಮೆಯೂ ಬಳಸಿಲ್ಲ!!ವಾಟ್ಸ್ಆಪ್ ಸೆಟ್ಟಿಂಗ್ಸ್‌ನಲ್ಲಿರುವ ಈ ಅದ್ಬುತ ಫೀಚರ್ಸ್‌ಗಳನ್ನು ನಾವು ಒಮ್ಮೆಯೂ ಬಳಸಿಲ್ಲ!!

ಆದರೂ ಇದು ಇಯರ್ ಫೋನ್. ಇಂತಹ ಇಯರ್ ಫೋನ್ ಒಂದಕ್ಕೆ ನೀವು ಹಣ ಕೊಟ್ಟು ಖರೀದಿಸಲು ಸಿದ್ಧರಿದ್ದೀರಿ? ಖಂಡಿತ ನೀವು ದೊಡ್ಡ ಸೊನ್ನೆ ಎಂದೇ ಉತ್ತರಿಸುತ್ತೀರಿ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಇಲ್ಲಿ ಕೇಳಿ...ಬಾಷ್ ಸಂಸ್ಥೆ ಒಂದು ಜೊತೆ ಇಂತಹ ಇಯರ್ ಫೋನ್ ನ್ನು ತಯಾರಿಸಿದೆ ಮತ್ತು ಇದರ ಬೆಲೆ ಬರೋಬ್ಬರಿ 250 ಡಾಲರ್ ಗಳು ಅಂದರೆ ಸರಿಸುಮಾರು 17,000 ರುಪಾಯಿಗಳು.

ಮ್ಯೂಸಿಕ್ ಪ್ಲೇ ಮಾಡದ ಇಯರ್‌ಪೋನ್ ಬೆಲೆ ಬರೋಬ್ಬರಿ 17 ಸಾವಿರ ರೂಪಾಯಿ!!!

ಈ ಕಂಪೆನಿಗೇನು ತಲೆ ಕೆಟ್ಟಿದಿಯೇ ಅದನ್ಯಾರು ಖರೀದಿಸುತ್ತಾರೆ ಎಂದು ನೀವು ಕೇಳಬಹುದು.. ಆದರೆ ಇದು ವಯರ್ ಲೆಸ್ ಇಯರ್ ಬಡ್ಸ್ ಅಂತೆ.. ಇದು ಮ್ಯೂಸಿಕ್ ಪ್ಲೇ ಮಾಡುವುದಿಲ್ಲ. ಬದಲಾಗಿ ಉತ್ತಮ ರೀತಿಯಲ್ಲಿ ನಿದ್ದೆ ಮಾಡಲು ಇದು ನಿಮ್ಮ ನೆರವಿಗೆ ಬರುತ್ತದೆ. ಆಡಿಯೋ ಸಾಧನಗಳ ತಯಾರಕಾ ಕಂಪೆನಿಯಾಗಿರುವ ಬಾಷ್, ಅಸಾಧಾರಣವಾದ ಆಡಿಯೋ ಗುಣಮಟ್ಟವನ್ನು ನೀಡುವ ಉತ್ಪನ್ನಗಳ ತಯಾರಿಕೆಹೆ ಹೆಸರುವಾಸಿಯಾಗಿದೆ.

ಇಂತಹ ಕಂಪೆನಿ ಈಗ “ ಶಬ್ದ ಮರೆಮಾಚುವಿಕೆ” ಎಂಬ ವಯರ್ ಲೆಸ್ ಇಯರ್ ಬಡ್ಸ್ ಗಳನ್ನು ತಯಾರಿಸಿದೆ. ಅದನ್ನು “ಸ್ಲೀಪ್ ಬಡ್ಸ್” ಎಂದು ಕರೆಯಲಾಗಿದೆ. ಸ್ಲೀಪ್ ಬಡ್ಸ್ ಗಳು ಹೊರಗಿನ ಶಬ್ದವನ್ನು ನಿಮಗೆ ಕೇಳಿಸದಂತೆ ಮಾಡುವ ಸಾಧನ. ಉದಾಹರಣೆಗೆ ಟ್ರಾಫಿಕ್ ಶಬ್ಜ, ಪಕ್ಕದ ಮನೆಯವರ ಗಟ್ಟಿಯಾದ ಸ್ವರ, ಮತ್ತು ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವ ಸಂದರ್ಬ ಬಂದರೆ ಇದು ನಿಮ್ಮ ನೆರವಿಗೆ ಬರುತ್ತದೆಯಂತೆ.

ಈ ಸ್ಪೀಪ್ ಬಡ್ಸ್ ಗಳು 10 ಹಿತವಾದ ಶಬ್ದಗಳನ್ನು ಪ್ರೀ-ಲೋಡ್ ಮಾಡಿಕೊಂಡಿರುತ್ತದೆ. ಕೆಲವು ವಿಶ್ರಾಂತಿಗಾಗಿ ಮತ್ತೂ ಕೆಲವು ಹೊರಗಿನ ಶಬ್ದಗಳನ್ನು ಮರೆಮಾಚುವ ಸಲುವಾಗಿ ತಯಾರಾದವುಗಳಾಗಿವೆ. ಇವೆಲ್ಲವೂ ನಿಮ್ಮ ಹಿತವಾದ ನಿದ್ದೆಗೆ ನೆರವು ನೀಡುತ್ತವೆಯಂತೆ. ಈ ಹಿತವಾದ ಶಬ್ದಗಳು ಪ್ರಕೃತಿಯ ಶಬ್ದಗಳನ್ನು ಒಳಗೊಂಡಿವೆ ಅಂದರೆ ಜಲಪಾತದ ನೀರು ಬೀಳುವ ಶಬ್ದ, ಅಲೆಗಳು ಝುಳು ಝುಳು ನಿನಾದ, ಮಳೆ ಹನಿಗಳ ತುಂತುರು ಹೀಗೆ ಇತ್ಯಾದಿ ಪ್ರಾಕೃತಿಕ ಶಬ್ದಗಳನ್ನೇ ಒಳಗೊಂಡಿರುತ್ತವೆಯಂತೆ.

ಈ ಎಲ್ಲಾ ಶಬ್ದಗಳನ್ನು ರಾತ್ರಿಯ ವೇಳೆಗೆ ಪ್ಲೇ ಮಾಡಿಕೊಳ್ಳುವಂತೆ ಸೆಟ್ ಮಾಡಲಾಗುವುದು., ನೀವು ಇದರಲ್ಲಿ ಟೈಮರ್ ಕೂಡ ಅಳವಡಿಸಿಕೊಂಡಿರಬಹುದು. ಒಂದು ವೇಳೆ ರಾತ್ರಿ ಪೂರ್ತಿ ಈ ಶಬ್ದ ಬೇಡ ಎಂದು ಅನ್ನಿಸಿದರೆ ನೀವು ಅದನ್ನು ಎಷ್ಟು ಹೊತ್ತುಗಳ ಕಾಲ ಪ್ಲೇ ಆಗಬೇಕು ಎಂಬುದನ್ನು ನಿರ್ಧರಿಸಿ ಇಡಬಹುದು. ಹೊಂದಿಸಿರುವ ಸಮಯ ಮುಗಿದ ಕೂಡಲೇ ಶಬ್ದ ಬರುವುದು ನಿಲ್ಲುತ್ತದೆ.

ಇದರಲ್ಲಿರುವ ಬಾಷ್ ಸ್ಲೀಪ್ ಆಪ್ ಮೂಲಕ ಆಲರಾಂ ಕೂಡ ಸೆಟ್ ಮಾಡಿ ಇಡಲು ಸಾಧ್ಯವಿದೆ. ಈ ಸ್ಲೀಪ್ ಬಡ್ ಗಳು ನಿಮ್ಮ ಕಿವಿಯೊಳಗೆ ಇರುವುದರಿಂದಾಗಿ ಅಲಾರಾಂ ಕೇವಲ ನಿಮ್ಮೊಬ್ಬರಿಗೆ ಮಾತ್ರ ಕೇಳಿಸುತ್ತದೆ. ನಿಮ್ಮ ಅಲರಾಂನಿಂದ ಮನೆಯವರೆಲ್ಲರಿಗೂ ಎಚ್ಚರವಾಗುವುದಿಲ್ಲ.

ಮ್ಯೂಸಿಕ್ ಪ್ಲೇ ಮಾಡದ ಇಯರ್‌ಪೋನ್ ಬೆಲೆ ಬರೋಬ್ಬರಿ 17 ಸಾವಿರ ರೂಪಾಯಿ!!!

ಈ ಸ್ಪೀಪ್ ಬಡ್ ಗಳು ಕಿವಿಯಿಂದ ತೆಗೆದ ಕೂಡಲೇ ಅಟೋಮ್ಯಾಟಿಕಲಿ ಆಫ್ ಆಗುತ್ತದೆಯಂತೆ. ಯಾವುದೇ ಬಳಕೆದಾರನ ಕಂಟ್ರೋಲ್ ನ ಅಗತ್ಯ ಕೂಡ ಇದಕ್ಕೆ ಇರುವುದಿಲ್ಲ. ಕೇವಲ ಆಪ್ ಮೂಲಕವೇ ಎಲ್ಲವೂ ನಿಯಂತ್ರಿಸಲ್ಪಡುತ್ತದೆ. ಇದು ಶಬ್ದದ ಆಯ್ಕೆ, ವಾಲ್ಯೂಮ್ ಕಂಟ್ರೋಲ್, ಅಲಾರಾಂ ಸೆಟ್ಟಿಂಗ್, ಅಪ್ ಡೇಟ್ ಗಳನ್ನು ಮ್ಯಾನೇಜ್ ಮಾಡುವುದು ಎಲ್ಲವನ್ನೂ ಒಳಗೊಂಡಿರುತ್ತದೆ. ಇದು ಬ್ಲೂ ಟೂತ್ ಕನೆಕ್ಟಿವಿಟಿ ಮುಖಾಂತರ ಕೆಲಸ ನಿರ್ವಹಿಸುತ್ತದೆ. ಮತ್ತು ಸುಲಭದಲ್ಲಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಲು ಅನುಕೂಲಕರವಾಗಿದೆ. ಆಂಡ್ರಾಯ್ಡ್ ಮತ್ತು IOS ಎರಡರಲ್ಲೂ ಕೂಡ ಕೆಲಸ ನಿರ್ವಹಿಸುತ್ತದೆ.

ಇತರೆ ವಯರ್ ಲೆಸ್ ಇಯರ್ ಬಡ್ ಗಳಂತೆ, ಇವೂ ಕೂಡ ಚಾರ್ಜ್ ಮಾಡಬೇಕಾಗುತ್ತದೆ.8 ಗಂಟೆ ಚಾರ್ಜ್ ಮಾಡಿದರೆ, 16 ಗಂಟೆಗಳ ಕಾಲ ಕೆಲಸ ಮಾಡುವಷ್ಟು ಬ್ಯಾಟರಿ ಕೆಪಾಸಿಟಿ ಹೊಂದಿದೆ. 3 ತಾಸು ಚಾರ್ಜ್ ಮಾಡುವಷ್ಟು ಕೆಪಾಸಿಟಿಯನ್ನು ಚಾರ್ಜಿಂಗ್ ಕೇಸ್ ಹೊಂದಿರುತ್ತದೆ.

ಜುಲೈ ಮಧ್ಯದ ವಾರದಿಂದ ಇದು ಅಮೇರಿಕಾದ್ಯಂತ ಮಾರಾಟಕ್ಕೆ ಲಭ್ಯವಾಗಲಿದ್ದು ಬೆಲೆ 250 ಡಾಲರ್ ಗಳಾಗಿವೆ. ನೀವು ಕೂಡ ಅಂತಹ ದೊಡ್ಡ ಮಟ್ಟದ ನಿದ್ದೆಯ ಸಮಸ್ಯೆ ಎದುರಿಸುತ್ತಿದ್ದು ಇಷ್ಟು ಮೊತ್ತ ಪಾವತಿಸಲು ತಯಾರಿದ್ದರೆ, ಖಂಡಿತ ನಿಮಗೆ ನಿದ್ದೆ ತರಿಸುವ ಜವಾಬ್ದಾರಿಯನ್ನು ಈ ಡಿವೈಸ್ ಗಳು ಹೊತ್ತುಕೊಳ್ಳಲಿವೆ. ಯೋಚನೆ ಮಾಡಿ ನೋಡಿ..!

Best Mobiles in India

English summary
these wireless earphones cost Rs 17,000 and don’t play music. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X