ವಯಸ್ಸು ಹದಿನೈದಾದರೂ ಸಾಧನೆಗೆ ಹ್ಯಾಟ್ಸಾಫ್ ಅನ್ನಲೇಬೇಕು

By Shwetha
|

ಸಮಯ ಸಿಕ್ಕಿದಾಗ ಹೆಚ್ಚುವರಿಯಾಗಿ ಆಡಲು ಹೊರಡುವ ಮಕ್ಕಳಿಗಿಂತ ಆದಿತ್ಯ ಹೆಚ್ಚು ಭಿನ್ನನಾಗಿದ್ದಾನೆ. 15 ರ ಹರೆಯದ ವಿದ್ಯಾರ್ಥಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬದುಕುವ ಛಲವನ್ನು ತೊಟ್ಟಿದ್ದಾನೆ. ಸಮಸ್ಯೆಗಳೊಂದಿಗೆ ಜೀವಿಸುವ ಜೀವನ ಅವನಿಗೆ ಬೇಕಾಗಿಲ್ಲ ಎಂಬುದು ಆದಿತ್ಯ ಮಾತಾಗಿದೆ. ಸಂಶೋಧಕ, ವೃತ್ತಿಪರ, ನಾಣ್ಯ ಸಂಗ್ರಹಕಾರ, ಸಾಫ್ಟ್‌ವೇರ್ ಡೆವಲಪರ್, ಟೀಚರ್, ಹಕ್ಕಿಪ್ರಿಯ, ಗೇಮರ್ ಹೀಗೆ ಸಾಕಷ್ಟು ಸಾಧನೆಗಳನ್ನು ಆದಿತ್ಯ ಮಾಡಿದ್ದು ನಿತ್ಯವೂ ಏನಾದರೂ ಹೊಸತನ್ನ ಕಂಡುಕೊಳ್ಳುವ ತೀಕ್ಷ್ಣ ಬುದ್ಧಿಮತ್ತೆಯನ್ನು ಪಡೆದಿದ್ದಾನೆ.

ನಾಲ್ಕನೇ ತರಗತಿಯಲ್ಲಿದ್ದಾಗಲೇ ಕಂಪ್ಯೂಟರ್ ಅಪ್ಲಿಕೇಶನ್‌ಗಳ ಅಧ್ಯಯನವನ್ನು ಆದಿತ್ಯ ಕೈಗೊಂಡಿದ್ದ. ಇದೀಗ ಆತ 35 ಕಂಪ್ಯೂಟರ್ ಅಪ್ಲಿಕೇಶನ್‌ಗಳು ಮತ್ತು ಆರು ಭಾಷೆಗಳಲ್ಲಿ ಪರಿಣತನಾಗಿದ್ದಾನೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆದಿತ್ಯನ ಅದ್ವಿತೀಯ ಸಾಧನೆಗಳನ್ನು ಕುರಿತು ಮಾಹಿತಿಗಳನ್ನು ನಾವು ನೀಡಲಿದ್ದೇವೆ.

#1

#1

ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುವ ರೀತಿಯಲ್ಲಿ ಆದಿತ್ಯ ತನ್ನ ಹೆಚ್ಚುನ ಸಮಯಗಳನ್ನು ಅನ್ವೇಷಣೆಯಲ್ಲಿ ಕಳೆಯುತ್ತಾನೆ. ತನ್ನ ಶಾಲಾ ಕೆಲಸಗಳನ್ನು ಸಂಪೂರ್ಣಗೊಳಿಸಿ ಆಡಲು ಹೋಗದೇ ಆ ಸಮಯದಲ್ಲಿ ಲ್ಯಾಬ್‌ನಲ್ಲಿ ಏನಾದರೂ ಹೊಸತನ್ನು ಕಂಡುಹಿಡಿಯುವ ಹವ್ಯಾಸ ಆದಿತ್ಯನದ್ದಾಗಿದೆ.

#2

#2

ಇನ್ನು ಹೆಚ್ಚಿನ ರಾಸಾಯನಿಕ ಸಂಶೋಧನೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಗಾಯಗಳುಂಟಾಗಿ ಆತ ಆಸ್ಪತ್ರೆ ಸೇರಿದ್ದೂ ಇದೆ. ಆದರೆ ಇದ್ಯಾವುದೂ ಆದಿತ್ಯನ ಕಲಿಕೆಗೆ ತೊಡಕನ್ನು ಉಂಟುಮಾಡಿಲ್ಲ.

#3

#3

ವಿಜ್ಞಾನಕ್ಕೆ ತ್ಯಾಗ ಅಗತ್ಯ ಎಂಬುದಾಗಿ ಆಸ್ಪತ್ರೆಯಲ್ಲಿರುವ ಆದಿತ್ಯ ಹೇಳುತ್ತಿದ್ದ ಇದರಿಂದ ಆತನ ತಂದೆ ತಾಯಿ ಆತನಿಗೆ ರಾಸಾಯನಿಕ ಅನ್ವೇಷಣೆಗಳನ್ನು ನಡೆಸಲೇ ಬಿಡುತ್ತಿರಲಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ.

#4

#4

ಹೆಚ್ಚಿನ ಡಿವೈಸ್‌ಗಳನ್ನು ಚಾಲನೆ ಮಾಡುವ ಸಂದರ್ಭದಲ್ಲಿ ಆದಿತ್ಯನಿಗೆ ಹೆಚ್ಚಿನ ಇಲೆಕ್ಟ್ರಿಸಿಟಿ ಪ್ಲಗ್ ಪಾಯಿಂಟ್ಸ್‌ಗಳ ಅಗತ್ಯವಿತ್ತು. ಇದು ಆತನ ಸಂಶೋಧನೆಗಳನ್ನು ನಿರ್ವಹಿಸಲು ತೊಡಕನ್ನುಂಟು ಮಾಡುತ್ತಿತ್ತು. ಆದ್ದರಿಂದ ಆದಿತ್ಯ ಅಡ್ಜೆಸ್ಟ್ ಮಾಡಬಹುದಾದ ಎಲೆಕ್ಟ್ರಿಸಿಟಿ ಎಕ್ಸ್‌ಟೆನ್ಶನ್ ಬೋರ್ಡ್ ಅನ್ನು ಅಭಿವೃದ್ಧಿ ಪಡಿಸಿದ್ದ. ಯಾವುದೇ ರೀತಿಯ ಇಲೆಕ್ಟ್ರಿಕ್ ಪ್ಲಗ್ಸ್ ಅನ್ನು ಸ್ಥಳ ಇರುವಲ್ಲಿ ಹಾಕಬಹುದಾಗಿತ್ತು.

#5

#5

3 ಮೀಟರ್‌ಗಳಷ್ಟು ಅಂತರದಲ್ಲಿ ಡಿವೈಸ್ ಪರಿಣಾಮಕಾರಿಯಾಗಿತ್ತು. ಅಂತೆಯೇ ಈತನ ಅನ್ವೇಷಣೆ ಮಾರಾಟಕ್ಕೆ ಸಿದ್ಧವಾಗಿದೆ ಕೂಡ.

#6

#6

ಪ್ಲಾಸ್ಟಿಕ್ ಬದಲಿಗೆ ತಟ್ಟೆ ಮತ್ತು ಕಪ್‌ಗಳನ್ನು ಆದಿತ್ಯ ಬಾಳೆ ಎಲೆಯಲ್ಲಿ ತಯಾರು ಮಾಡಿದ್ದಾನೆ. ಯಾವುದೇ ರಾಸಾಯನಿಕಗಳನ್ನು ಬಳಸದೆಯೇ ಬಾಳೆ ಎಲೆಗಳನ್ನು ಇದು ಸಾಕಷ್ಟು ವರ್ಷ ಕಾಪಾಡುತ್ತದೆ. ಅಂತೆಯೇ ಬಾಳಿಕೆಯನ್ನು ಇದು ಹೆಚ್ಚಿಸುತ್ತದೆ. ಹೆಚ್ಚಿನ ತಾಪಮಾನದಲ್ಲೂ ಬಾಳೆ ಎಲೆಗಳನ್ನು ಸಂರಕ್ಷಿಸಿ ಸಾಮಾನ್ಯ ಬಾಳೆ ಎಲೆಗಳಿಗಿಂತ ಹೆಚ್ಚಿನ ಭಾರವನ್ನು ಇವುಗಳು ಹೊಂದಿವೆ. ಈ ಕಪ್ ಮತ್ತು ತಟ್ಟೆಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಆದಿತ್ಯ ತಯಾರಿಸಿದ್ದು ಇವುಗಳನ್ನು ಬಿಸಾಡುವುದರಿಂದ ಪರಿಸರಕ್ಕೂ ಯಾವುದೇ ಹಾನಿಯುಂಟಾಗುವುದಿಲ್ಲ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಸಂಶೋಧನೆಯನ್ನು ಕೈಗೊಳ್ಳಲು ಆದಿತ್ಯನಿಗೆ ಪ್ರೋತ್ಸಾಹವನ್ನು ನೀಡಿದ್ದು ಅದಕ್ಕಾಗಿ ಸಾಕಷ್ಟು ಪುರಸ್ಕಾರಗಳನ್ನು ಈತ ಪಡೆದುಕೊಂಡಿದ್ದಾನೆ.

#7

#7

ಅತಿ ಕಿರಿಯ ವಯಸ್ಸಿನಲ್ಲಿಯೇ ಈತ ಸಾಧಿಸಿದ ಸಾಧನೆಗಳನ್ನು ಮನ್ನಿಸಿ 2 ವಿಶ್ವ ದಾಖಲೆ ಪುರಸ್ಕಾರಗಳು, 2 ರಾಷ್ಟ್ರೀಯ ಪುರಸ್ಕಾರಗಳು, 7 ಟೈಟಲ್ ಅವಾರ್ಡ್‌ಗಳು, 5 ರಾಜ್ಯ ಪ್ರಶಸ್ತಿಗಳು ಅಂತೆಯೇ ಸಾಕಷ್ಟು ಜಿಲ್ಲಾ ಪ್ರಶಸ್ತಿಗಳನ್ನು ಆದಿತ್ಯ ಪಡೆದುಕೊಂಡಿದ್ದಾನೆ. ನ್ಯಾಶನಲ್ ಫೌಂಡೇಶನ್ ಇಂಡಿಯಾ ನಿರ್ವಹಿಸಿದ ಇಗ್ನೇಟ್ ಅವಾರ್ಡ್ಸ್ ಕೂಡ ಆದಿತ್ಯನಿಗೆ ಸಂದಿದೆ.

#8

#8

ಈತ ಏರೋಸ್ಪೇಸ್ ಇಂಜಿನಿಯರ್ ಆಗುವ ಕನಸನ್ನು ಕಂಡಿದ್ದು ಇಸ್ರೊಗೆ ಸೇರ್ಪಡೆಗೊಳ್ಳುವ ಹಂಬಲವನ್ನು ಹೊಂದಿದ್ದಾನೆ. ನಿಜಕ್ಕೂ ಈತ ಭಾರತದ ಹೆಮ್ಮೆಯ ಪುತ್ರ ಎಂದೆನಿಸಿದ್ದು ದೇಶದ ಖ್ಯಾತಿಯನ್ನು ವಿಶ್ವವ್ಯಾಪಿಗೊಳಿಸುವುದು ಖಂಡಿತ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?</a><br /><a href=ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!
ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?" title="ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?
ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!
ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?" loading="lazy" width="100" height="56" />ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?
ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!
ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!
ಆಂಡ್ರಾಯ್ಡ್‌ ಫೋನ್‌ನಲ್ಲಿ RAM ಹೆಚ್ಚಿಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
M.Tenith Adithyaa, a 15 year-old student who already has 17 inventions under his name that have bagged him many awards and two Guinness World Record attempts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X