ಭಾರತದ ಮೊದಲ ಸ್ಮಾರ್ಟ್ ಸ್ಕೂಟರ್ ಬಿಡುಗಡೆ ಮಾಡಿದ TVS: ವಿಶೇಷತೆ ಕೇಳಿದ್ರೆ ಬುಕ್ ಮಾಡಲೇ ಬೇಕು..!

|

ಭಾರತೀಯ ದ್ವಿಚಕ್ರ ವಾಹನದ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ TVS ಕಂಪನಿಯೂ ಮುಂದಿನ ತಲೆ ಮಾರಿನ ಸ್ಮಾರ್ಟ್‌ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ, TVS NTIRQ ಹೆಸರಿನಲ್ಲಿ 125CC ಸಾಮರ್ಥ್ಯದ ಸ್ಮಾರ್ಟ್‌ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಸ್ಕೂಟರ್‌ಗಳು ಈ ಮಾದರಿಯಲ್ಲಿ ಬಿಡುಗಡೆಯಾದರೂ ಆಚ್ಚರಿಯನ್ನು ಪಡಬೇಕಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಭಾರತದ ಮೊದಲ ಸ್ಮಾರ್ಟ್ ಸ್ಕೂಟರ್ ಬಿಡುಗಡೆ ಮಾಡಿದ TVS

TVS ಕಂಪನಿ ಸ್ಮಾರ್ಟ್‌ X ಕನೆಕ್ಟ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಂಡು NTIRQ 125CC ಸ್ಮಾರ್ಟ್‌ ಸ್ಕೂಟರ್ ಕಾರ್ಯನಿರ್ವಹಿಸಲಿದ್ದು, ಇದು ಫುಲ್ ಡಿಜಿಟಲ್ ಸ್ಪಿಡೋ ಮೀಟರ್ ಹೊಂದಿದೆ. ಬ್ಲೂಟೂತ್ ನೊಂದಿಗೆ ಕನೆಕ್ಟ್ ಆಗಲಿದ್ದು, ಇದು ಸವಾರರಿಗೆ ದಾರಿ ತೋರಿಸುವ ಕಾರ್ಯವನ್ನು ಸೇರಿದಂತೆ ಹಲವು ಕಾರ್ಯಗಳಿಗೆ ಬಳಕೆಯಾಗಲಿದೆ. ಭಾರತೀಯ ರಸ್ತೆಯಲ್ಲಿ ಗಮನ ಸೆಳೆಯಲಿದೆ ಎನ್ನಲಾಗಿದೆ.

NTIRQ 125CC ಸ್ಮಾರ್ಟ್‌ ಸ್ಕೂಟರ್:

NTIRQ 125CC ಸ್ಮಾರ್ಟ್‌ ಸ್ಕೂಟರ್:

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು 125CC ಸ್ಕೂಟರ್ ಗಳನ್ನು ಕಾಣಬಹುದಾಗಿದ್ದು, ಇವುಗಳಿಗಿಂತ ಭಿನ್ನವಾಗಿ TVS NTIRQ 125CC ಸ್ಮಾರ್ಟ್‌ ಸ್ಕೂಟರ್ ಕಾಣಿಸಿಕೊಳ್ಳಲಿದೆ.

LCD ಡಿಸ್‌ಪ್ಲೇ:

LCD ಡಿಸ್‌ಪ್ಲೇ:

NTIRQ 125CC ಸ್ಮಾರ್ಟ್‌ ಸ್ಕೂಟರ್‌ನಲ್ಲಿ LCD ಡಿಸ್‌ಪ್ಲೇಯ ಸ್ಪೀಡೋ ಮೀಟರ್ ಕಾಣಬಹುದಾಗಿದ್ದು, ಇದು ಕಾರುಗಳಲ್ಲಿ ಕಾಣಿಸಿಕೊಳ್ಳುವ ಸ್ಮಾರ್ಟ್ ಸ್ಕ್ರಿನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ ಡಿಸ್‌ಪ್ಲೇ:

ಸ್ಮಾರ್ಟ್‌ ಡಿಸ್‌ಪ್ಲೇ:

ಸ್ಮಾರ್ಟ್‌ X ಕನೆಕ್ಟ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸುವ TVS NTIRQ 125CC ಸ್ಮಾರ್ಟ್‌ ಸ್ಕೂಟರ್‌ನಲ್ಲಿ ಅಳವಡಿಸಿರುವ ಸ್ಪೀಡೋ ಮೀಟರ್ ನಲ್ಲಿ ಸ್ಮಾರ್ಟ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದಿದ್ದು, ಇದರಲ್ಲಿ ನ್ಯಾವಿಗೇಷನ್ ಸೇರಿದಂತೆ ಹಲವು ಆಯ್ಕೆಗಳಿದೆ.

ಬ್ಲೂಟೂತ್ ನೊಂದಿಗೆ ಕನೆಕ್ಟ್:

ಬ್ಲೂಟೂತ್ ನೊಂದಿಗೆ ಕನೆಕ್ಟ್:

ವಾಹನ ಸವಾರರ ಸ್ಮಾರ್ಟ್‌ಫೋನಿನ ಬ್ಲೂ ಟೂತ್ ನೊಂದಿಗೆ NTIRQ 125CC ಸ್ಮಾರ್ಟ್‌ ಸ್ಕೂಟರ್ ಕನೆಕ್ಟ್ ಆಗಲಿದ್ದು, ಕರೆ ಬಂದ ಮತ್ತು ಮೇಸೆಜ್ ಸ್ವೀಕರಿಸಿದ್ದನ್ನು ಸಹ ಸ್ಪೀಡೋ ಮೀಟರ್ ನಲ್ಲಿಯೇ ತೋರಿಸಿಲಿದೆ.

ಸ್ಮಾರ್ಟ್ ಮ್ಯಾಪ್:

ಸ್ಮಾರ್ಟ್ ಮ್ಯಾಪ್:

ಕಾರುಗಳಲ್ಲಿ ಕಂಡುಬರುವ ನ್ಯಾವಿಗೇಷನ್ ಮಾದರಿಯಲ್ಲಿಯೇ TVS NTIRQ 125CC ಸ್ಮಾರ್ಟ್‌ ಸ್ಕೂಟರ್ ನಲ್ಲಿ ಸ್ಮಾರ್ಟ್ ಮ್ಯಾಪ್ ಕಾಣಬಹುದಾಗಿದ್ದು, ಇದು ಮ್ಯಾಪ್ ಮೈ ಇಂಡಿಯಾದ ಸಹಾಯದಿಂದ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್‌ ನೊಂದಿಗೂ ಕಾರ್ಯನಿರ್ವಹಿಸಲಿದೆ.

ಟರ್ನ್ ಬೈ ಟರ್ನ್ ನ್ಯಾವಿಗೇಷನ್:

ಟರ್ನ್ ಬೈ ಟರ್ನ್ ನ್ಯಾವಿಗೇಷನ್:

ಗೂಗಲ್ ಮ್ಯಾಪ್ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸುವ ಮಾದರಿಯಲ್ಲಿ TVS NTIRQ 125CC ಸ್ಮಾರ್ಟ್‌ ಸ್ಕೂಟರ್ ನಲ್ಲಿ ಟರ್ನ್ ಬೈ ಟರ್ನ್ ಮಾಹಿತಿಯನ್ನು ನ್ಯಾವಿಗೇಷನ್ ನೀಡಲಿದ್ದು, ಸರಿಯಾದ ಮಾರ್ಗದರ್ಶನ ಮಾಡಲಿದೆ. ಒಟ್ಟಿನಲ್ಲಿ ದಾರಿ ಹುಡುಕಲು ಉತ್ತಮವಾಗಿದೆ.

ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್:

ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್:

TVS NTIRQ 125CC ಸ್ಮಾರ್ಟ್‌ ಸ್ಕೂಟರ್ ನ ಆಪ್ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ NTIRQ ಆಪ್ ಬಿಡುಗಡೆಯಾಗಿದೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಕರೆಗಳನ್ನು ತೋರಿಸಲಿದೆ:

ಕರೆಗಳನ್ನು ತೋರಿಸಲಿದೆ:

ನಿಮ್ಮ ಸ್ಮಾರ್ಟ್‌ಫೋನ್‌ಗೆ ಕರೆ ಬಂದ ಸಂದರ್ಭದಲ್ಲಿ ಸ್ಕೂಟರ್ ನಲ್ಲಿ ಇರುವ ಡಿಸ್‌ಪ್ಲೇಯಲ್ಲಿ ಕರೆ ಮಾಡುತ್ತಿರುವವರ ಹೆಸರು, ಮೇಸೆಜ್ ನೋಟಿಫೀಕೇಷನ್ ಗಳನ್ನು ತೋರಿಸಲಿದೆ. ಅಲ್ಲದೇ ಹೆಲ್ಮೆಟ್ ಹಾಕದೆ ಹೋದರೆ ಹೆಲ್ಮೆಟ್ ಹಾಕುವಂತೆ ಸೂಚನೆಯನ್ನು ನೀಡಲಿದೆ.

ಬಣ್ಣಗಳು:

ಬಣ್ಣಗಳು:

TVS NTIRQ 125CC ಸ್ಮಾರ್ಟ್‌ ಸ್ಕೂಟರ್ ಹಳದಿ, ಹಸಿರು, ಕೆಂಪು, ಬಿಳಿ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಿದೆ.

ಬೆಲೆ:

ಬೆಲೆ:

TVS NTIRQ 125CC ಸ್ಮಾರ್ಟ್‌ ಸ್ಕೂಟರ್ ಬೆಲೆ ರೂ.58,750 (ದೆಹಲಿ ಎಕ್ಸ್ ಶೋರೂಮ್) ಆಗಲಿದ್ದು, ಕೇವಲ ಎರಡು ಲಕ್ಷ TVS NTIRQ 125CC ಸ್ಮಾರ್ಟ್‌ ಸ್ಕೂಟರ್‌ಗಳು ಮಾತ್ರವೇ ರಸ್ತೆಯಲ್ಲಿ ಕಾಣಿಸಿಕೊಳ್ಳಲಿವೆ.

ಓದಿರಿ: ಲಂಚ ಕೊಡದೆ ಆನ್‌ಲೈನಿನಲ್ಲಿ ಜಾತಿ, ಆದಾಯ ಪ್ರಮಾಣ ಪಡೆಯಿರಿ..! ಹೇಗೆ..? ಇಲ್ಲಿದೇ ಮಾಹಿತಿ.!

Best Mobiles in India

English summary
TVS NTORQ 125 is a scooter with Smart features. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X