ವಿವೋ ಕ್ರಿಸ್‌ಮಸ್ ಆಫರ್ : ಹೊಸ ಫೋನ್‌ಗಳು ಅಗ್ಗದಲ್ಲಿ ಲಭ್ಯ!

|

ಸಾಮಾನ್ಯವಾಗಿ ಗ್ಯಾಜೆಟ್ಸ್‌ಗಳನ್ನು ಖರೀದಿಸುವವರು ಹಬ್ಬಗಳು, ವಿಶೇಷ ದಿನಗಳನ್ನು ಎದುರುನೋಡುತ್ತಿರುತ್ತಾರೆ. ಏಕೆಂದರೇ ಈ ದಿನಗಳಲ್ಲಿ ಇ-ಕಾಮರ್ಸ್‌ ಮತ್ತು ಸ್ಟೋರ್‌ಗಳಲ್ಲಿ ಸ್ಪೆಷಲ್ ಡಿಸ್ಕೌಂಟ್ ಸೇಲ್‌ ಮೇಳಗಳು ನಡೆಯುತ್ತವೆ. ಅಂತಹದೊಂದು ಸ್ಪೆಷಲ್ ಸ್ಮಾರ್ಟ್‌ಫೋನ್ ಸೇಲ್ ಅನ್ನು ವಿವೋ ಕಂಪನಿಯು ಇದೀಗ ಆಯೋಜಿಸಿದೆ. ಈ ಮೇಳದಲ್ಲಿ ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಲಭ್ಯವಿದೆ.

ಕ್ರಿಸ್‌ಮಸ್

ಹೌದು, ವಿವೋ ಸಂಸ್ಥೆಯು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ''ವಿವೋ ಕ್ರಿಸ್‌ಮಸ್ ಕಾರ್ನಿವಲ್ ಸೇಲ್‌'' ಅನ್ನು ಆಯೋಜಿಸಿದೆ. ಇನ್ನು ಈ ಸೇಲ್ ಮೇಳದಲ್ಲಿ ಇದೇ ಡಿ.18ರಿಂದ ಇದೇ ಡಿ. 20ರ ವರೆಗೂ ಇರಲಿದೆ. ಇತ್ತೀಚಿಗಿನ ಹೊಸ ವಿವೋ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಇದರೊಂದಿಗೆ ನೋ ಕಾಸ್ಟ್‌ ಇಎಮ್‌ಐ, HDFC ಹಾಗೂ ICICI ಬ್ಯಾಂಕ್‌ಗಳಿಂದ 5% ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಕೊಡುಗೆಯೊಂದಿಗೆ ವಿವೋದಿಂದ ಆಕರ್ಷಕ ರಿಯಾಯಿತಿ ಸಹ ಲಭ್ಯವಾಗಲಿದೆ.

ಕಾರ್ನಿವಲ್‌ ಸೇಲ್‌

ಕ್ರಿಸ್‌ಮಸ್ ಕಾರ್ನಿವಲ್‌ ಸೇಲ್‌ನಲ್ಲಿ ವಿವೋ ವಿ17, ವಿವೋ v17 ಪ್ರೊ, ವಿವೋ ವಿ15 ಪ್ರೊ, ವಿವೋ ಎಸ್‌1 ವಿವೋ ವೈ19 ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದೆ. ಹಾಗೂ ವಿವೋ z1 ಪ್ರೊ, ವಿವೋ z1X ಮತ್ತು ವಿವೋ ಯು20 ಸ್ಮಾರ್ಟ್‌ಫೋನ್‌ಗಳಿಗೆ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ದೊರೆಯಲಿದೆ. ಅದರೊಂದಿಗೆ ಉಚಿತ ಸೆಲ್ಫಿ ಸ್ಟೀಕ್ ಸಹ ಗ್ರಾಹಕರಿಗೆ ಲಭ್ಯವಾಗಲಿದೆ.

ವಿವೋ ಯು10

ಇನ್ನು ಇತ್ತೀಚಿಗಿನ ವಿವೋ ಯು10 32GB ವೇರಿಯಂಟ್ ಸ್ಮಾರ್ಟ್‌ಫೋನ್ 500ರೂ. ಕಡಿತಗೊಂಡಿದ್ದು, 8,490ರೂ.ಗಳಿಗೆ ಸಿಗಲಿದೆ. ಅದೇ ರೀತಿ 64GB ಸ್ಟೋರೇಜ್‌ನ ವಿವೋ ಯು10 ಫೋನ್ 8,990ರೂ.ಗಳಿಗೆ ದೊರೆಯುತ್ತದೆ. ವಿವೋ Z1x ಫೋನ್‌ 4GB/128GB ಸ್ಟೋರೇಜ್ ವೇರಿಯಂಟ್ 14,990ರೂ.ಗಳಿಗೆ ಗ್ರಾಹಕರು ಖರೀದಿಸಬಹುದು. ಇದರ ಮೂಲ ಬೆಲೆಯು 15,990ರೂ.ಗಳು ಆಗಿದೆ.

ವಿವೋ Z1

ಹಾಗೆಯೇ ವಿವೋ Z1 ಪ್ರೊ ಸ್ಮಾರ್ಟ್‌ಫೋನ್ 1000ರೂ.ಗಳ ರಿಯಾಯಿತಿ ಪಡೆದಿದ್ದು, 4GB RAM ವೇರಿಯಂಟ್ ಫೋನ್ 12,990ರೂ.ಗಳಿಗೆ ದೊರೆಯುತ್ತದೆ. ಇನ್ನು ಈ ಫೋನ್ 5000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Most Read Articles
Best Mobiles in India

English summary
Vivo is hosting a smartphone sale called the Christmas Carnival. The sale kicked off on December 18 and will run until December 20. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X