ಟಿಕ್‌ಟಾಕ್‌ಗೆ ಪೈಪೋಟಿ ನೀಡಲು ZEE ನಿಂದ ಹೊಸ ಆಪ್!

|

ಟಿಕ್‌ಟಾಕ್‌ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಸೋಷಿಯಲ್‌ ಮೀಡಿಯಾ ಆಪ್ಲಿಕೇಶನ್‌. ಸದ್ಯ ಮೂವತ್ತು ಸೆಕೆಂಡ್‌ಗಳ ವಿಡಿಯೋ ಸ್ಟ್ರೀಮಿಂಗ್‌ ಅವಕಾಶ ನೀಡುವ ಮೂಲಕ ಜನರ ನಡುವೆ ಮೋಡಿ ಮಾಡುತ್ತಿರುವ ಟಿಕ್‌ಟಾಕ್‌ ಆಪ್‌ಗೆ ಟಕ್ಕರ್‌ ಕೊಡೋದಕ್ಕೆ ಮತ್ತೊಂದು ಹೊಸ ಆಪ್‌ ಎಂಟ್ರಿ ಆಗಲಿದೆ. ಎಂಟರ್‌ಟೈನ್‌ಮೆಂಟ್‌ ಕ್ಷೇತ್ರದಲ್ಲಿ ಈಗಾಗ್ಲೆ ಯಶಸ್ವಿಯಾಗಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನ ಸೃಷ್ಟಿಸಿಕೊಂಡಿರುವ ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ ಹೊಸ ಆಪ್‌ ಒಂದನ್ನ ಪರಿಚಯಿಸಲು ಮುಂದಾಗಿದೆ.

ZEE

ಹೌದು, ZEE ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ ಹೊಸ ವಿಡಿಯೋ ಸ್ಟ್ರೀಮಿಂಗ್‌ ಆಪ್‌ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದು ಈಗಾಗ್ಲೆ ಜನಪ್ರಿಯತೆ ಪಡೆದುಕೊಂಡಿರುವ ವೀಡಿಯೊ ಸ್ಟ್ರೀಮಿಂಗ್ ಸೇವೆಯಾದ ZEE5 ಮೂಲಕ ಟಿಕ್‌ಟಾಕ್‌ ಆಪ್‌ಗೆ ಟಕ್ಕರ್‌ ಕೊಡಲಿದೆ ಎನ್ನಲಾಗ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಹೊಸ ಮಾದರಿಯ ಸೇವೆಗಳನ್ನ ಪರಿಚಯಿಸಿರುವ ZEE5 ಹೈಪರ್ ಲೋಕಲ್‌ ಸ್ಟೋರಿಸ್‌ಗಳನ್ನ ಹಂಚಿಕೊಳ್ಳುವ ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸಲು ಪ್ಲ್ಯಾನ್‌ ಮಾಡಿದೆ. ಈ ಮೂಲಕ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗೆ ಪೈಪೋಟಿ ನೀಡಲಿದೆ ಎನ್ನಲಾಗ್ತಿದೆ.

ZEE5 ವಿಶೇಷತೆ

ZEE5 ವಿಶೇಷತೆ

ಸದ್ಯ ZEE ಎಂಟರ್‌ಟೈನ್‌ಮೆಂಟ್‌ ಪರಿಚಯಿಸಲು ಉದ್ದೇಶಿಸಿರುವ ZEE5 ವಿಡಿಯೋ ಆಪ್‌ ಟಿಕ್‌ಟಾಕ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಈ ಆಪ್‌ನಲ್ಲಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರೂ ಕೂಡ 90 ಸೆಕೆಂಡ್‌ಗಳ ವಿಡಿಯೋವನ್ನು ಪೋಸ್ಟ್‌ ಮಾಡಬಹುದಾಗಿದೆ. ಈಗಾಗ್ಲೆ ZEE ಹೈಪರ್‌ಶಾಟ್‌ಗಳನ್ನ ಪರಿಚಯಿಸಿರೊದ್ರಿಂದ ZEE5 ಸಹ ಸೂಪರ್ ಆಪ್‌ ಮಾದರಿಯಲ್ಲಿ ಬರಲಿದೆ ಎನ್ನಲಾಗ್ತಿದೆ. ಟಿಕ್‌ಟಾಕ್‌ನಲ್ಲಿ ಕೇವಲ ಮೂವತ್ತು ಸೆಕೆಂಡ್‌ಗಳ ವಿಡಿಯೋಗೆ ಅವಕಾಶವಿದೆ. ಇದನ್ನ ಇನ್ನಷ್ಟು ವಿಸ್ತರಿಸಿ ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯುವ ಪ್ರಯತ್ನಕ್ಕೆ ZEE5 ಮುಂದಾಗಿದೆ.

ZEE5 ವಿನ್ಯಾಸ

ZEE5 ವಿನ್ಯಾಸ

ಇನ್ನು ನಾವು ಮನರಂಜನೆಯ ಸೂಪರ್ ಅಪ್ಲಿಕೇಶನ್ ಆಗಲು ಬಯಸುತ್ತಿದ್ದು, ಡಿಜಿಟಲ್ ವೀಡಿಯೊಗಳಿಗಾಗಿ ಒಂದು ಉತ್ತಮ ಆಪ್‌ ಅನ್ನು ಪರಿಚಯಿಸಲಿದ್ದೇವೆ ಅನ್ನೊ ಮಾತನ್ನ ZEE5 ಇಂಡಿಯಾದ ಸಿಇಒ ತರುಣ್ ಕಟಿಯಲ್ ಹೇಳಿದ್ದಾರೆ. ಬಳಕೆದಾರರು ದೀರ್ಘ ಸಮಯದ ವಿಡಿಯೋಗಳನ್ನ ಪೊಸ್ಟ್‌ ಮಾಡಲು ಅವಕಾಶ ನೀಡುವುದರಿಂದ ಹೇಳಬೇಕಾದ ವಿಚಾರವನ್ನ, ವ್ಯಕ್ತಪಡಿಸಬೇಕಾದ ವಿಷಯವನ್ನ ಇನ್ನಷ್ಟು ಸರಳವಾಗಿ ಹೇಳಲು ಅವಕಾಶ ನೀಡುವ ವಿನ್ಯಾಸದಲ್ಲಿ ಈ ಆಪ್‌ ರೂಪ ತಾಳಲಿದೆ.

ಟಿಕ್‌ಟಾಕ್‌ಗೆ ಪೈಪೋಟಿ

ಟಿಕ್‌ಟಾಕ್‌ಗೆ ಪೈಪೋಟಿ

ಈಗಾಗ್ಲೆ ZEE5 ಡೈರೆಕ್ಟ್-ಟು-ಡಿಜಿಟಲ್ ಚಿತ್ರಗಳಲ್ಲಿನ ಹೂಡಿಕೆಯ ಭಾಗವಾಗಿ ವರ್ಷಕ್ಕೆ ಕನಿಷ್ಠ 15 ರಿಂದ 20 ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿದೆ. ಏಷ್ಯಾನೆಟ್, ಸುವರ್ಣ, ಟಿವಿ 9 ಮತ್ತು ರಿಪಬ್ಲಿಕ್‌ನಂತಹ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ಚಾನೆಲ್‌ಗಳ ಲೈವ್ ಫೀಡ್‌ಗಳನ್ನು ನೀಡುವ ಪ್ರಯತ್ನಗಳಿಗೆ ಮುಂದಾಗಿದೆ. ಇದರ ಮುಂದುವರೆದ ಭಾಗವಾಗಿ ಹೈಪರ್‌ಶಾಟ್‌ಗಳಿಗೂ ಅವಕಾಶ ನೀಡುವುದುರಿಂದ ಟಿಕ್‌ಟಾಕ್‌ ಮೇಲಿನ ಮೋಹವನ್ನ ZEE5 ತನ್ನ ಕಡೆಗೆ ಸೆಳೆಯಲು ಸಾಧ್ಯವಾಗಲಿದೆ ಅನ್ನೊದು ZEE ನ ಉದ್ದೇಶವಾಗಿದೆ.

ZEEನ ಯೋಜನೆಯೇನು?

ZEEನ ಯೋಜನೆಯೇನು?

ಸದ್ಯ ಕಂಪೆನಿ ಹೇಳಿಕೊಂಡಿರುವ ಪ್ರಕಾರ ಟಿವಿ ಶೋ ಪ್ರಿಯರು, ಥ್ರಿಲ್ಲರ್‌ ಸ್ಟೋರಿ ಅಭಿಮಾನಿಗಳು, ಹೀಗೆ ನಾನಾ ಮಾದರಿಯ ಪ್ರೇಕ್ಷಕ ವರ್ಗ ನಮ್ಮ ನಡುವೆಯೆ ಇದ್ದಾರೆ. ಇವರುಗಳ ಆಧ್ಯತೆಗೆ ಅನುಗುಣವಾಗಿ ಎಲ್ಆ ಮಾದರಿಯ ವಿಡಿಯೋಗಳನ್ನ ಒಂದೆಡೆ ಸಿಗುವಂತೆ ಮಾಡಿದರೆ ಖಂಡಿತ ಜನ ಸ್ವೀಕಾರ ಮಾಡುತ್ತಾರೆ ಅನ್ನೊದು ZEE5 ಹೊಸತನದ ಐಡಿಯಾ ಆಗಿದೆ. ಈಗಾಗ್ಲೆ
ZEE5 ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದೆ. ಈ ಮೂಲಕ ಬಳಕೆದಾರರಿಗೆ ಹತ್ತಿರವಾಗಿದ್ದು, ಟಿಕ್‌ಟಾಕ್‌ಗೆ ಸೆಡ್ಡು ಹೊಡೆಯಬಹುದೆಂಬ ಪರಿಕಲ್ಪನೆಯನ್ನ ZEE5 ಹೊಂದಿದೆ.

Best Mobiles in India

English summary
After launching over 100 original shows over the past two years, ZEE5 is planning to enter the hyperlocal content segment. It will compete with TikTok and Instagram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X