Subscribe to Gizbot

ಅಮೆಜಾನ್ ಪ್ರೈಮ್ ನಲ್ಲಿ ಹುವಾವೆ P20 ಪ್ರೋ ಮತ್ತು P20 ಲೈಟ್ ಸ್ಮಾರ್ಟ್ ಫೋನ್...!

Posted By: Lekhaka

ಚೀನಾ ಮೂಲದ ಟೆಕ್ ದೈತ್ಯ ಹುವಾವೆ ಟಾಪ್ ಎಂಡ್ ಆವೃತ್ತಿ P20 ಪ್ರೋ ಮತ್ತು P20 ಲೈಟ್ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳಿನಲ್ಲಿಯೇ ಲಾಂಚ್ ಆಗಿತ್ತು. ಈ ಸ್ಮಾರ್ಟ್ ಫೋನ್ ಗಳು ಶೀಘ್ರವೇ ಬಳಕೆದಾರರಿಗೆ ದೊರೆಯಲಿದೆ ಎನ್ನವ ಕಾರಣಕ್ಕೆ ಅಮೆಜಾನ್ ನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಅಮೆಜಾನ್ ಪ್ರೈಮ್ ಗ್ರಾಹಕರು ಸುಲಭವಾಗಿ P20 ಪ್ರೋ ಮತ್ತು P20 ಲೈಟ್ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ.

ಅಮೆಜಾನ್ ಪ್ರೈಮ್ ನಲ್ಲಿ ಹುವಾವೆ P20 ಪ್ರೋ ಮತ್ತು P20 ಲೈಟ್ ಸ್ಮಾರ್ಟ್ ಫೋನ್...!

ಅಮೆಜಾನ್ ಪ್ರೈಮ್ ಗ್ರಾಹಕರು ಈ ಸ್ಮಾರ್ಟ್ ಫೋನ್ ಗಳನ್ನು ಇತರಿಗಿಂತ ಬೇಗನೆ ಖರೀದಿಸಬಹುದಾಗಿದ್ದು, ಹುವಾವೆ P20 ಪ್ರೋ ಸ್ಮಾರ್ಟ್ ಫೋನ್ ಅನ್ನು ರೂ.64,999ಕ್ಕೆ ಹಾಗೂ P20 ಲೈಟ್ ಸ್ಮಾರ್ಟ್ ಫೋನ್ ಅನ್ನು ರೂ.19,999ಕ್ಕೆ ಖರೀದಿಸಬಹುದಾಗಿದ್ದು, ಅಲ್ಲದೇ ಮೇ 7ರ ವರೆಗೆ ಹೆಚ್ಚುವರಿ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಕ್ಷೇತ್ರದ ಅಭ್ಯರ್ಥಿ ಯಾರು? ಮತದಾನ ಮಾಡುವುದು ಎಲ್ಲಿ-ಹೇಗೆ? ಎಲ್ಲದಕ್ಕೂ ಉತ್ತರ ಈ ಆಪ್..!

ಲಾಂಚ್ ಅಂಗವಾಗಿ ಆಕ್ಸಿಸ್ ಬ್ಯಾಂಕ್ ಕಾರ್ಡುದಾರರಿಗೆ ರೂ.5000 ಹೆಚ್ಚುವರಿ ಲಾಭಗಳು ದೊರೆಯಲಿದೆ. P20 ಪ್ರೋ ಖರೀದಿಸುವವರಿಗೆ ರೂ.5000 ಹಾಗೂ P20 ಲೈಟ್ ಸ್ಮಾರ್ಟ್ ಫೋನ್ ಖರೀದಿ ಮೇಲೆ ರೂ.1500 ಕಡಿತವನ್ನು ಘೋಷಣೆ ಮಾಡಲಾಗಿದೆ.

Karnataka Election 2018: Chunavana app will find your booth in click - GIZBOT KANNADA

ಇದಲ್ಲದೇ ವೋಡಾಫೋನ್ ಖರೀದಿದಾರರಿಗೆ 100GB ಡೇಟಾ ದೊರೆಯಲಿದ್ದು, ಈ ಎರಡು ಸ್ಮಾರ್ಟ್ ಫೋನ್ ಖರೀದಿಯ ಮೇಲೆಯೂ ಈ ಆಫರ್ ದೊರೆಯಲಿದೆ.

ಹುವಾವೆ P20 ಪ್ರೋ:

ಈ ಸ್ಮಾರ್ಟ್ ಫೋನಿನಲ್ಲಿ 6.1 ಇಂಚಿನ ಡಿಸ್ ಪ್ಲೆಯನ್ನು ಕಾಣಬಹುದಾಗಿದ್ದು, ಅಮೊಲೈಡ್ ಡಿಸ್ ಪ್ಲೆಯಾಗಿದ್ದು, ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ. 40MP + 20 MP + 8 MP ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ.

ಹುವಾವೆ P20 ಲೈಟ್:

ಸ್ಮಾರ್ಟ್ ಫೋನಿನಲ್ಲಿ 5.84 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದ್ದು, 19:9 ಅನುಪಾತದ ಡಿಸ್ ಪ್ಲೇಯಾಗಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೋಡಬಹುದಾಗಿದೆ.

English summary
Amazon Prime members get early access for Huawei P20 Pro and P20 Lite. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot