ಇಂಟರ್ನೆಟ್‌ ಇಲ್ಲದೇ ಚಾಟ್‌ ಮಾಡಿ :ಫೈಯರ್‌ಚಾಟ್‌

By Suneel
|

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಸಂಬಂಧಿಸಿದಂತೆ ಹೊಸ ಹೊಸ ಅಪ್ಲಿಕೇಶನ್‌ ಅಭಿವೃದ್ದಿಗಳ್ಳುತ್ತಲೇ ಇವೆ. ಪ್ರಸ್ತುತದಲ್ಲಿ ನಮಗೆ ವಾಟ್ಸಾಪ್‌ ಮೇಸೇಜಿಂಗ್ ಆಪ್ಲಿಕೇಶನ್‌ ಅದ್ಭುತವೆನ್ನುವ ನಾವು ಅದನ್ನು ಇಂಟರ್ನೆಟ್‌ ಕನೆಕ್ಷನ್‌ ಇಲ್ಲದೇ ಬಳಸಲು ಸಾಧ್ಯವೇ ಇಲ್ಲ. ಆದರೆ ಈಗ ಸಾಫ್ಟ್‌ವೇರ್‌ ತಜ್ಞರು ಚೆನ್ನೈನ ಭಾರಿ ಮಳೆಯ ಪ್ರವಾಹದ ಹಿನ್ನೆಲೆಯನ್ನು ಮುಂದಿಟ್ಟು ಕೊಂಡು ಇಂಟರ್ನೆಟ್‌ ಮತ್ತು ನೆಟ್‌ವರ್ಕ್‌ ಸಹಾಯವಿಲ್ಲದೆಯೇ, ಮೊಬೈಲ್‌ನಿಂದ ಮೊಬೈಲ್‌ಗೆ ಸಂದೇಶ ರವಾನಿಸುವ ಆಫ್ಲಿಕೇಶನ್‌ ಒಂದನ್ನು ಅಭಿವೃದ್ದಿಪಡಿಸಿದ್ದಾರೆ.

ಓದಿರಿ:ಆನ್‌ಲೈನ್‌ನಿಂದ ಆಫ್‌ಲೈನ್‌ ಮೋಡ್‌ಗೆ ಬಂದ ಫ್ಲಿಪ್‌ಕಾರ್ಟ್‌

ಟೆಕ್‌ ಕ್ಷೇತ್ರದಲ್ಲಿಯೇ ಹೊಸ ಅಚ್ಚರಿಯ ಆಫ್‌ 'ಫೈಯರ್‌ಚಾಟ್‌', ಇದರಿಂದ ಇಂಟರ್ನೆಟ್‌ ಸಹಾಯವಿಲ್ಲದೆ ಮತ್ತು ನೆಟ್‌ವರ್ಕ್‌ ಸಹಾಯವಿಲ್ಲದೆಯೇ ಇನ್ನೊಬ್ಬರೊಂದಿಗೆ ಚಾಟ್‌ ಮಾಡಬಹುದಾಗಿದೆ. ಇದರ ವಿಶೇಷತೆ ಮತ್ತು ಬಳಕೆ ಬಗ್ಗೆ ಮಾಹಿತಿಗಾಗಿ ಗಿಜ್‌ಬಾಟ್‌ನ ಇಂದಿನ ಲೇಖನ ಓದಿ.

 ಫೈಯರ್‌ಚಾಟ್‌

ಫೈಯರ್‌ಚಾಟ್‌

ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ , ಮೊಬೈಲ್‌ ಫೋನ್‌ ನೆಟ್‌ವರ್ಕ್‌ಗಳ ಟವರ್‌ಗೆ ವಿದ್ಯುತ್‌ ಕಡಿತಗೊಳಿಸಲಾಗಿದೆ. ಅಲ್ಲದೇ ಜೆನೆರೇಟರ್‌ನಿಂದ ಚಾಲ್ತಿ ಮಾಡಲಾಗಿದ್ದ ಟವರ್‌ಗಳು ಸಹ ಈಗ ಇಂಧನ ಖಾಲಿಯಾಗಿ ಅವುಗಳು ನಿಂತುಹೋಗಿವೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಮತ್ತು ನೆಟ್‌ವರ್ಕ್‌ ಇಲ್ಲದೇ ಚಾಟ್‌ ಮಾಡಲು ಫೈಯರ್‌ಚಾಟ್‌ ಎಂಬ ಆಪ್ಲಿಕೇಶನ್‌ ಒಂದನ್ನು ಅಭಿವೃದ್ದಿಗೊಳಿಸಲಾಗಿದೆ.

 ಫೈಯರ್‌ಚಾಟ್‌ ಅಪ್ಲಿಕೇಶನ್‌

ಫೈಯರ್‌ಚಾಟ್‌ ಅಪ್ಲಿಕೇಶನ್‌

ಫೈಯರ್‌ಚಾಟ್‌ ಆಪ್‌ ಇಂಟರ್ನೆಟ್‌ ಅಗತ್ಯವಿಲ್ಲದೇ ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್‌ಗೆ ಸಂದೇಶಕಳುಹಿಸಲು ಬಳಸಬಹುದಾದ ಆಪ್‌ ಆಗಿದೆ.

 ಫೈಯರ್‌ಚಾಟ್‌ ಕಾರ್ಯನಿರ್ವಹಣೆ ಹೇಗೆ?

ಫೈಯರ್‌ಚಾಟ್‌ ಕಾರ್ಯನಿರ್ವಹಣೆ ಹೇಗೆ?

ಈ ಆಪ್‌ ಮೊಬೈಲ್‌ಗಳ ರೇಡಿಯೋ ಜಾಲಗಳ ಸಾಮರ್ಥ್ಯ ಬಳಸಿಕೊಂಡು ಸಂದೇಶ ರವಾನೆಗೆ ಅವಕಾಶ ಮಾಡಿಕೊಡುತ್ತದೆ.

 ಫೈಯರ್‌ಚಾಟ್ ವ್ಯಾಪ್ತಿ

ಫೈಯರ್‌ಚಾಟ್ ವ್ಯಾಪ್ತಿ

ಫೈಯರ್‌ಚಾಟ್‌ ಆಪ್‌ನ ಸಹಾಯದಿಂದ 70 ಮೀಟರ್‌ ದೂರದವರೆಗೆ ಸಂದೇಶ ರವಾನೆ ಮಾಡಬಹುದಾಗಿದ್ದು, ಇದಕ್ಕೂ ಮೀರಿ ಬ್ಲೂಟೂತ್‌ ಸಹಾಯದಿಂದ ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್‌ಗೆ ಲಿಂಕ್‌ ಕ್ರಿಯೇಟ್‌ ಮಾಡಿ ಸಂದೇಶ ರವಾನಿಸಬಹುದು ಎನ್ನಲಾಗಿದೆ.

ಸಂದೇಶ ರವಾನೆ

ಸಂದೇಶ ರವಾನೆ

ಆಪ್‌ ಅಭಿವೃದ್ದಿ ಕಂಪನಿಯು, 'ನೆಟ್‌ವರ್ಕ್‌ ಇಲ್ಲದೆ ಸಂದೇಶ ರವಾನೆ ಮಾಡಲು ಈ ಆಪ್‌ನಿಂದ ಸಾಧ್ಯವಿದೆ. ಫೈಯರ್‌ಚಾಟ್‌ ಆಪ್‌ ಮೊಬೈಲ್‌ಗಳ ಜಾಲವನ್ನು ಬಳಸಿಕೊಂಡು ನೀವು ತಲುಪಿಸಬೇಕಾದ ಸ್ವೀಕೃತದಾರರಿಗೆ ಸಂದೇಶ ತಲುಪಿಸುತ್ತದೆ ಎಂದು ಹೇಳಿದೆ'.

ಐಒಎಸ್‌ ಮತ್ತು ಆಂಡ್ರಾಯ್ಡ್‌ಗಳಿಗೆ ಆಪ್‌ ಲಭ್ಯ

ಐಒಎಸ್‌ ಮತ್ತು ಆಂಡ್ರಾಯ್ಡ್‌ಗಳಿಗೆ ಆಪ್‌ ಲಭ್ಯ

ಹೆಚ್ಚು ಜನ ಬಳಸಿದಷ್ಟು ಹೆಚ್ಚು ಪರಿಣಾಮಕಾರಿಯಾಗಲಿದೆ ಎನ್ನಲಾಗಿದೆ.
ಆಫ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇತರೆ

ಇತರೆ

ಫೈಯರ್‌ಚಾಟ್‌ ಅಪ್ಲಿಕೇಶನ್‌ ಅನ್ನು ಐಫೋನ್‌ , ಐಪ್ಯಾಡ್‌, ಐಫೋಡ್‌ ಟಚ್ ಗಳಿಗೈ ವಿನ್ಯಾಗೊಳಿಸಲಾಗಿದೆ. ಆಪ್‌ನಲ್ಲಿ ಯಾವುದೇ ರೀತಿಯ ಜಾಹಿರಾತು ನೀಡುವುದಿಲ್ಲ ಮತ್ತು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Due to heavy rains in Chennai, mobile phone towers in Chennai are going down due to the extended periods of power cuts. Most of them are down as the generators they’ve been running on are probably out of fuel by now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X