ಐಫೋನ್‌ಗಾಗಿ 2018ರ ಟಾಪ್ 8 ಬೆಸ್ಟ್ ಪಾಸ್‌ವರ್ಡ್ ಮ್ಯಾನೇಜರ್ ಆಪ್‌ಗಳು!

|

ಹೆಚ್ಚಾಗುತ್ತಿರುವ ಅಭದ್ರತೆಯ ಕಾರಣದಿಂದಾಗಿ ಅಸಾಮಾನ್ಯವಾಗಿರುವ ಮತ್ತು ಯಾರೂ ತಿಳಿದುಕೊಳ್ಳಲು ಸಾಧ್ಯವಿರದ ಪಾಸ್ ವರ್ಡ್ ಗಳ ಆಯ್ಕೆ ಬಹಳ ಮುಖ್ಯ. ಆದರೆ ಆ ಪಾಸ್ ವರ್ಡ್ ಗಳನ್ನು ಮ್ಯಾನೇಜ್ ಮಾಡುವುದು ಬಹಳ ಕಷ್ಟದ ವಿಚಾರ. ಹಾಗಾಗಿ ನಾವಿಲ್ಲ 2018 ರಲ್ಲಿ ಐಫೋನ್ ಗಾಗಿ ಯಾವುದು ಬೆಸ್ಟ್ ಪಾಸ್ ವರ್ಡ್ ಮ್ಯಾನೇಜರ್ ಆಪ್ ಗಳು ಎಂಬುದರ ಪಟ್ಟಿಯನ್ನು ತಯಾರಿಸಿದ್ದೇವೆ.

ಐಫೋನ್‌ಗಾಗಿ 2018ರ ಟಾಪ್ 8 ಬೆಸ್ಟ್ ಪಾಸ್‌ವರ್ಡ್ ಮ್ಯಾನೇಜರ್ ಆಪ್‌ಗಳು!

ಈಗಿನ ಜಮಾನದಲ್ಲಿ ಒಂದಲ್ಲ ಒಂದು ದಿನ ವೈರಸ್ ಗಳು, ಮಾಲ್ವೇರ್ ಗಳು, ಟ್ರಾಝನ್ ಗಳು,ಕೀಲಾಗರ್ಸ್ ಮತ್ತು ಇತರೆ ಆನ್ ಲೈನ್ ಬೆದರಿಕೆಗಳನ್ನು ಎದುರಿಸುತ್ತಲೇ ಇರುತ್ತೇವೆ. ನಿಮ್ಮ ಸೆಕ್ಯುರಿಟಿ ಟೂಲ್ ಎಷ್ಟು ಶಕ್ತಿಶಾಲಿಯಾಗಿದ್ದರೂ ಕೂಡ ಹ್ಯಾಕರ್ ಗಳು ಅದನ್ನು ಪ್ರವೇಶಿಸುವುದಕ್ಕೆ ಪ್ರಯತ್ನಿಸುತ್ತಾರೆ.

ಯಾರೂ ಕೂಡ ಅಂತರ್ಜಾಲದಲ್ಲಿ ಸುರಕ್ಷಿತವಲ್ಲ. ಇದನ್ನು ಪರಿಗಣಿಸಿರುವ ಡೆವಲಪರ್ ಗಳು ಹೆಚ್ಚೆಚ್ಚು ಸೆಕ್ಯೂರ್ ಆಗಿರುವ ಟೂಲ್ ಗಳನ್ನು ತಯಾರಿಸುತ್ತಿದ್ದಾರೆ.ನಾವು ಐಓಎಸ್ ಆಪ್ ಸ್ಟೋರ್ ನ್ನು ತೆಗೆದುಕೊಂಡಾಗ ಅಲ್ಲಿ ಸಾಕಷ್ಟು ಸೆಕ್ಯುರಿಟಿ ಟೂಲ್ ಗಳಿವೆ.ಆದರೆ ಕೆಲವೊಮ್ಮೆ ಸರಿಯಾದ ಸೆಕ್ಯುರಿಟಿ ಸಲ್ಯೂಷನ್ ಕೂಡ ಸ್ಮಾರ್ಟ್ ಫೋನ್ ಗಳ ರಕ್ಷಣೆಗೆ ಸಾಕಾಗುವುದಿಲ್ಲ.

ಭದ್ರತಾ ತಜ್ಞರು ಕೂಡ ಕೇವಲ ಸರಿಯಾದ ಸೆಕ್ಯುರಿಟಿ ಸಲ್ಯೂಷನ್ ಗಳು ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ನ್ನು ಸೇಫ್ ಆಗಿ ಇಟ್ಟುಕೊಳ್ಳುವುದಕ್ಕೆ ಸಾಕಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ನಾವು ಇನ್ನು ಕೆಲವು ತಂತ್ರಗಾರಿಕೆಯನ್ನು ಬಳಸಿಕೊಳ್ಳಬೇಕಾಗುತ್ತದೆ ಉದಾಹರಣೆಗೆ ಪಾಸ್ ವರ್ಡ್ ಗಳನ್ನು ಆಗಾಗ ಬದಲಿಸುತ್ತಿರುವುದು,ಆಪ್ ಪರ್ಮಿಷನ್ ಗಳನ್ನು ಮ್ಯಾನೇಜ್ ಮಾಡುವುದು ಮತ್ತು ಅಪರಿಚಿತ ಡೌನ್ ಲೋಡ್ ಗಳನ್ನು ತಡೆಯುವುದು ಇತ್ಯಾದಿ.

ಸೆಕ್ಯುರಿಟಿ ಸಮಸ್ಯೆಯ ದೃಷ್ಟಿಯಿಂದ ನಾವು ಯಾರೂ ಊಹಿಸಲಾಗದ ಕಠಿಣ ಪಾಸ್ ವರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.ಈ ಸಂದರ್ಬದಲ್ಲಿ ಪಾಸ್ ವರ್ಡ್ ಗಳನ್ನು ಮ್ಯಾನೇಜ್ ಮಾಡುವುದು ಒಂದು ಚಾಲೆಂಜಿಂಗ್ ವಿಚಾರವಾಗಿದೆ. ಅದಕ್ಕಾಗಿಯೇ ಹಲವಾರು ಮಲ್ಟಿಪಲ್ ಪಾಸ್ ವರ್ಡ್ ಗಳನ್ನು ಮ್ಯಾನೇಜ್ ಮಾಡುವುದಕ್ಕಾಗಿ ನಿರ್ಮಿಸಲಾಗಿದೆ. ಈ ಲೇಖನ ಕೂಡ ನಿಮಗೆ ಅದನ್ನೇ ಪ್ರಸ್ತುತಪಡಿಸುತ್ತಿದೆ.

ಲಾಸ್ಟ್ ಪಾಸ್

ಲಾಸ್ಟ್ ಪಾಸ್

ಆಂಡ್ರಾಯ್ಡ್ ಮತ್ತು ವಿಂಡೋಸ್ ನಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಆಪ್ ಇದು.ಇದು ಐಫೋನ್ ಗೂ ಕೂಡ ಲಭ್ಯವಿದೆ. ಐಫೋನ್ ನಲ್ಲಿ ಬಳಸಬಹುದಾಗಿರುವ ಬೆಸ್ಟ ಪಾಸ್ ವರ್ಡ್ ಮ್ಯಾನೇಜರ್ ಆಪ್ ಇದಾಗಿದೆ. ಲಾಸ್ಟ್ ಪಾಸ್ ನಲ್ಲಿ ಅನಿಯಮಿತವಾಗಿ ಪಾಸ್ ವರ್ಡ್ ಗಳನ್ನು, ಮೆಂಬರ್ ಶಿಪ್, ಐಡಿಗಳು ಹಾಗೂ ಇತರೆ ಪಾಸ್ ವರ್ಡ್ ಕೀಗಳನ್ನು ಸ್ಟೋರ್ ಮಾಡಬಹುದು. ಇದು ಅನ್ಕ್ರ್ಯಾಕೇಬಲ್ ಮತ್ತು ಯೂನಿಕ್ ಪಾಸ್ ವರ್ಡ್ ಗಳನ್ನು ಜನರೇಟ್ ಮಾಡುವುದಕ್ಕೂ ಕೂಡ ಇದನ್ನು ಬಳಸಬಹುದು.

ಡ್ಯಾಷ್ ಲೇನ್ ಪಾಸ್ ವರ್ಡ್ ಮ್ಯಾನೇಜರ್

ಡ್ಯಾಷ್ ಲೇನ್ ಪಾಸ್ ವರ್ಡ್ ಮ್ಯಾನೇಜರ್

ಒಂದು ವೇಳೆ ನೀವು ಉಚಿತವಾಗಿರುವ ಪಾಸ್ ವರ್ಡ್ ಮ್ಯಾನೇಜರ್ ಆಪ್ ನ್ನು ನಿಮ್ಮ ಐಫೋನ್ ಗೆ ಹುಡುಕುತ್ತಿದ್ದಲ್ಲಿ ಡ್ಯಾಶ್ ಲೇನ್ ಪಾಸ್ ವರ್ಡ್ ಮ್ಯಾನೇಜರ್ ಅತ್ಯುತ್ತಮ ಆಯ್ಕೆಯಾಗಿದೆ. ಟಾಪ್ ಗ್ರೇಡ್ ಎನ್ಕ್ರಿಪ್ಶನ್ ಮೂಲಕ ನಿಮ್ಮ ಪಾಸ್ ವರ್ಡ್ ನ್ನು ಇದು ಪ್ರೊಟೆಕ್ಟ್ ಮಾಡುತ್ತದೆ. ಇದು ಪಾಸ್ ವರ್ಡ್ ಗಳನ್ನು ಸ್ಟೋರ್ ಮಾಡುತ್ತದೆ ಮತ್ತು ಅಗತ್ಯವಿರುವ ಸೈಟ್ ನಲ್ಲಿ ಆಟೋ ಫಿಲ್ ಮಾಡುವುದಕ್ಕೆ ನೆರವಾಗುತ್ತದೆ.

1ಪಾಸ್ ವರ್ಡ್

1ಪಾಸ್ ವರ್ಡ್

1ಪಾಸ್ ವರ್ಡ್ ಮತ್ತೊಂದು ಬೆಸ್ಟ್ ಪಾಸ್ ವರ್ಡ್ ಮ್ಯಾನೇಜರ್ ಆಪ್ ಆಗಿದೆ.ಅನಿಯಮಿತ ಪಾಸ್ ವರ್ಡ್ ಗಳನ್ನು ಸ್ಟೋರ್ ಮಾಡಲು ಅವಕಾಶ, ಡೆಬಿಟ್/ಕ್ರೆಡಿಟ್ ಕಾರ್ಡ್ ಗಳ ಪಿನ್, ಅಡ್ರೆಸ್ ಇತ್ಯಾದಿಗಳನ್ನು ಸ್ಟೋರ್ ಮಾಡಬಹುದು.ಇದರ ಇಂಟರ್ಫೇಸ್ ಕೂಡ ಅತ್ಯದ್ಭುತವಾಗಿದ್ದು ಸ್ವಚ್ಛವಾಗಿದೆ.

ಎಂಸೆಕ್ಯೂರ್ – ಪಾಸ್ ವರ್ಡ್ ಮ್ಯಾನೇಜರ್

ಎಂಸೆಕ್ಯೂರ್ – ಪಾಸ್ ವರ್ಡ್ ಮ್ಯಾನೇಜರ್

ಸಾಕಷ್ಟು ಕಸ್ಟಮೈಜೇಷನ್ ಆಯ್ಕೆಯನ್ನು ನೀಡುವ ಬೆಸ್ಟ್ ಪಾಸ್ ವರ್ಡ್ ಮ್ಯಾನೇಜರ್ ಆಪ್ ನ್ನು ನೀವು ಹುಡುಕಾಡುತ್ತಿದ್ದಲ್ಲಿ ಎಂಸೆಕ್ಯೂರ್ ಪಾಸ್ ವರ್ಡ್ ಮ್ಯನೇಜರ್ ಆಪ್ ಒಂದು ಗ್ರೇಟ್ ಆಯ್ಕೆಯಾಗಲಿದೆ. ಇಂಟರ್ಫೇಸ್ ನೋಡುವುದಕ್ಕೆ ಚೆಂದವಾಗಿದೆ ಮತ್ತು ಅನಿಯಮಿತ ಪಾಸ್ ವರ್ಡ್ ಗಳು, ಡೆಬಿಟ್/ಕ್ರೆಡಿಟ್ ಕಾರ್ಡ್ಸ್ ಪಿನ್ ಇತ್ಯಾದಿಗಳನ್ನು ಸ್ಟೋರ್ ಮಾಡಲು ಅವಕಾಶ ನೀಡುತ್ತದೆ. ಇದು ಪಾಸ್ ವರ್ಡ್ ಜನರೇಷನ್ ಟೂಲ್ ಕೂಡ ಆಗಿದೆ. ಒಂದೇ ಟ್ಯಾಪ್ ನಲ್ಲಿ ಕಠಿಣ ಪಾಸ್ ವರ್ಡ್ ನ್ನು ಇದು ಜನರೇಟ್ ಮಾಡಿ ಕೊಡುತ್ತದೆ.

ಎನ್ಪಾಸ್ ಪಾಸ್ ವರ್ಡ್ ಮ್ಯಾನೇಜರ್

ಎನ್ಪಾಸ್ ಪಾಸ್ ವರ್ಡ್ ಮ್ಯಾನೇಜರ್

ಹಲವು ಯ್ಯೂನಿಕ್ ಫೀಚರ್ ನ್ನು ಎನ್ಪಾಸ್ ಪಾಸ್ ವರ್ಡ್ ಮ್ಯಾನೇಜರ್ ಆಪ್ ನೀಡುತ್ತದೆ. ಇತರೆ ಆಪ್ ಗಳಂತೆ ಇದರಲ್ಲೂ ಕೂಡ ಅನಿಯಮಿತ ಪಾಸ್ ವರ್ಡ್ ಗಳನ್ನು ಸ್ಟೋರ್ ಮಾಡಬಹುದು. ಪಾಸ್ ವರ್ಡ್ ಗಳನ್ನು ಹೊರತು ಪಡಿಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಪಿನ್, ಲೈಸನ್ಸ್ ಗಳು, ಸೆಕ್ಯೂರ್ ನೋಟ್ ಗಳು, ಇತರೆ ಕೀ ಫೈಲ್ ಗಳನ್ನು ಸೇವ್ ಮಾಡುವುದಕ್ಕೆ ಅವಕಾಶವಿರುತ್ತದೆ.ಐಓಎಸ್ ಗೆ ಹೇಳಿ ಮಾಡಿಸಿದ ಪಾಸ್ ವರ್ಡ್ ಮ್ಯಾನೇಜರ್ ಆಪ್ ಇದಾಗಿದೆ.

ಕೀಪರ್ ಪಾಸ್ ವರ್ಡ್ ಮ್ಯಾನೇಜರ್

ಕೀಪರ್ ಪಾಸ್ ವರ್ಡ್ ಮ್ಯಾನೇಜರ್

ಉಚಿತ ಪಾಸ್ ವರ್ಡ್ ಮ್ಯಾನೇಜರ್ ಆಪ್ ನಿಮಗೆ ಬೇಕಾಗಿದ್ದಲ್ಲಿ ಇದನ್ನು ಆಯ್ಕೆ ಮಾಡಬಹುದು. ಪಾಸ್ ವರ್ಡ್ ಗಳ ಜೊತೆಗೆ ಫೈಲ್ಸ್ ಗಳು, ಫೋಲ್ಡರ್ ಗಳು, ವೀಡಿಯೋಗಳು, ಫೋಟೋಗಳು ಇತ್ಯಾದಿಗಳನ್ನು ಕೂಡ ಇಲ್ಲಿ ಸೇವ್ ಮಾಡಬಹುದು. ಎಲ್ಲಾ ರೀತಿಯ ಸೆನ್ಸಿಟೀವ್ ಫೈಲ್ ಗಳನ್ನು ಇಲ್ಲಿ ಸೇವ್ ಮಾಡಬಹುದು.

ಪಾಸ್ ವರ್ಡ್ ಮ್ಯಾನೇಜರ್ ಸೆಕ್ಯೂರ್ ಆಪ್

ಪಾಸ್ ವರ್ಡ್ ಮ್ಯಾನೇಜರ್ ಸೆಕ್ಯೂರ್ ಆಪ್

ಪಾಸ್ ವರ್ಡ್ ಮ್ಯಾನೇಜರ್ ಸೆಕ್ಯೂರ್ ಆಪ್ ಒಂದು ಲೈಟ್ ವೈಟ್ ಆಪ್ ಆಗಿದೆ. ಸೆನ್ಸಿಟೀವ್ ಫೈಲ್ ಗಳನ್ನು ಸುಲಭದ ವಿಧಾನದಲ್ಲಿ ಸೇವ್ ಮಾಡಲು ಇದು ಅವಕಾಶ ನೀಡುತ್ತದೆ. ಪಾಸ್ ವರ್ಡ್ ಗಳು, ಫೋಟೋಗಳು, ವೀಡಿಯೋಗಳು ಇತ್ಯಾದಿಗಳನ್ನು ಇಲ್ಲಿ ಸೇವ್ ಮಾಡಬಹುದು.ಬೇರೆಬೇರೆ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಪಾಸ್ ವರ್ಡ್ ಗಳನ್ನು ಆಟೋ ಫಿಲ್ ಮಾಡುವುದಕ್ಕೂ ಕೂಡ ಇದು ನೆರವು ನೀಡುತ್ತದೆ.

ಸೇಫ್ ಇನ್ ಕ್ಲೌಡ್

ಸೇಫ್ ಇನ್ ಕ್ಲೌಡ್

ಸದ್ಯ ನೀವು ಬಳಕೆ ಮಾಡಬಹುದಾದ ಮತ್ತೊಂದು ಬೆಸ್ಟ್ ಪಾಸ್ ವರ್ಡ್ ಮ್ಯಾನೇಜರ್ ಇದಾಗಿದೆ. ಇದರ ಪ್ರಮುಖ ಅಂಶವೇನೆಂದರೆ ಬಹಳ ಸುಲಭದಲ್ಲಿ ಬಳಕೆ ಮಾಡಬಹುದಾಗಿದೆ. ಒಂದು ಪಾಸ್ ವರ್ಡ್ ಮ್ಯಾನೇಜರ್ ಇರಬೇಕಾಗಿರುವ ಎಲ್ಲಾ ಫೀಚರ್ ಗಳೂ ಕೂಡ ಇದರಲ್ಲಿ ಇದೆ. ಇದರ ಡೆಸ್ಕ್ ಟಾಪ್ ಕ್ಲೈಂಟ್ ಕೂಡ ಮ್ಯಾಕ್ ಮತ್ತು ವಿಂಡೋಸ್ ಗೆ ಲಭ್ಯವಿದೆ. ಅಂದರೆ ಇತರೆ ಆಪರೇಟಿಂಗ್ ಸಿಸ್ಟಮ್ ನಲ್ಲೂ ಕೂಡ ಇದರ ಆಕ್ಸಿಸ್ ಇರುತ್ತದೆ.

ಇದು ಸದ್ಯದ ಐಓಎಸ್ ಬಳಕೆದಾರರಿಗೆ ಲಭ್ಯವಿರುವ 8 ಅಧ್ಬುತ ಪಾಸ್ ವರ್ಡ್ ಮ್ಯಾನೇಜರ್ ಆಪ್ ಗಳು. ನಿಮಗೆ ತಿಳಿದಿರುವಂತೆ ಇನ್ನೂ ಯಾವುದಾದರೂ ಆಪ್ ಗಳ್ಲಿದ್ದಲ್ಲಿ ನಮಗೆ ಕಮೆಂಟ್ ಮಾಡಿ ತಿಳಿಸಿ.

Most Read Articles
Best Mobiles in India

Read more about:
English summary
Top 8 Best Password Manager Apps For iPhone 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X