Subscribe to Gizbot

ಅಮೇಝಾನ್ ಹೊಸ ಟ್ಯಾಬ್ ಲೆಟ್ ಪಿಸಿ ಸ್ವಾಗತಿಸಿ

Posted By: Super

ಅಮೇಝಾನ್ ಹೊಸ ಟ್ಯಾಬ್ ಲೆಟ್ ಪಿಸಿ ಸ್ವಾಗತಿಸಿ
ಮೊಬೈಲ್ ಜೊತೆಯಲ್ಲೇ ಈಗ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಭಾಗಿಯಾಗಿದೆ ಟ್ಯಾಬ್ ಲೆಟ್ ಪಿಸಿ. ಹೊಸ ಹೊಸ ಕಂಪೆನಿಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ವೇಳೆಯಲ್ಲಿ ಬೃಹತ್ ಆನ್ ಲೈನ್ ಕಂಪೆನಿ ಅಮೇಝಾನ್ ಕೂಡ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಸದ್ಯಕ್ಕೆ ದೊರೆತಿರುವ ಮಾಹಿತಿಯಂತೆ ಕ್ವಾಂಟಮ್ ಕಂಪೆನಿಯೊಂದಿಗೆ ಕೈಜೋಡಿಸಿ ಟ್ಯಾಬ್ ಲೆಟ್ ಬಿಡುಗಡೆಮಾಡುತ್ತಿರುವ ಅಮೇಝಾನ್, ತಿಂಗಳಿಗೆ 1 ಮಿಲಿಯನ್ ಮಾರಾಟದ ಗುರಿ ನಿರ್ಧರಿಸಿಕೊಂಡು ಕಾರ್ಯರೂಪಕ್ಕೆ ಇಳಿದಿದೆ. 7 ಇಂಚ್ ಅಳತೆಯ ಈ ಹೊಸ ಪಿಸಿ ಆಂಡ್ರಾಯ್ಡ್ OS ಮೂಲಕ ಕಾರ್ಯ ನಿರ್ವಹಿಸಲಿರುವ ಇದು ಬೇರೆ ಯಾವ ವಿಶೇಷ ರೀತಿಯ ಫೀಚರ್ಸ್ ಹೊಂದಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಕ್ಯಾಮೆರಾ ಸೇರಿಸದಿರುವುದು ಹಾಗೂ ದೊಡ್ಡ ಹಾರ್ಡ್ ಡಿಸ್ಕ್ ಲಭ್ಯತೆ ಇದಕ್ಕೆ ಕಡಿಮೆ ಬೆಲೆ ನಿಗದಿಪಡಿಸುವುದಕ್ಕೆ ಕಾರಣ ಎನ್ನಬಹುದು. ಆನ್ ಲೈನ್ ರೀಟೇಲ್ ಟ್ರೇಡಿಂಗ್ ಮೂಲಕ ವ್ಯಾಪಾರ ಮಾಡಲಿರುವ ಅಮೇಝಾನ್ ಸಂಸ್ಥೆ ಮಾರಾಟಕ್ಕೆ ಯಾವ ಸೂಕ್ತ ತಂತ್ರ ಅನುಸರಿಸುತ್ತದೆ ಎಂಬುದರ ಮೇಲೆ ಅದರ ಯಶಸ್ಸು ನಿರ್ಧಾರವಾಗಲಿದೆ.

ಜಗತ್ತಿನ ಅತಿ ದೊಡ್ಡ ಆನ್ ಲೈನ್ ಕಂಪೆನಿ ಭಾರತದಲ್ಲಿ ಈ 7 ಇಂಚ್ ಟ್ಯಾಬ್ ಲೆಟ್ ಪಿಸಿ ಮಾರಾಟ ಪ್ರಾರಂಭಿಸಲು ಕ್ಷಣಗಣನೆಯಲ್ಲಿ ತೊಡಗಿರುವ ಅಮೇಝಾನ್ ಗೆ ಗುಡ್ ಲಕ್ ಎನ್ನೋಣವೇ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot