Subscribe to Gizbot

ಮೈಕ್ರೋಸಾಫ್ಟ್‌ನಿಂದ ಉಚಿತ ಅಂತರ್ಜಾಲ ಶೀಘ್ರವೇ!!!

Written By:

ಯಾವುದೇ ದರವಿಲ್ಲದೆ ಉಚಿತವಾಗಿ ದೇಶದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆಗೆ ಮೈಕ್ರೋಸಾಫ್ಟ್ ಮುಂದಾಗಿದೆ. ಹಿಂದುಸ್ತಾನ್ ಟೈಮ್ಸ್ ಹೇಳುವಂತೆ, ಎರಡು ಟಿವಿ ಚಾನಲ್‌ಗಳ ನಡುವಿನ ಬಳಸಲಾಗದೇ ಇರುವ ಸ್ಪೆಕ್ಟ್ರಮ್ ಅಥವಾ "ವೈಟ್ ಸ್ಪೇಸ್" ಅನ್ನು ಬಳಸಿ ದೇಶದ ಸಮಗ್ರ ಜನತೆಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸುವ ತೀರ್ಮಾನಕ್ಕೆ ಮುಂದಾಗಿದೆ.

ಇದನ್ನೂ ಓದಿ: ದುಬಾರಿ ಫೋನ್‌ಗಳ ಮೇಲೆ ಭರ್ಜರಿ ದರಕಡಿತ

ವೈಫೈ ಕೇವಲ 100 ಮೀಟರ್‌ಗಳವರೆಗೆ ಮಾತ್ರವೇ ತಲುಪು ಸಾಮರ್ಥ್ಯವನ್ನು ಹೊಂದಿದೆ ಆದರೆ ವೈಟ್ ಸ್ಪೇಸ್‌ನಲ್ಲಿರುವ 200-300 MHZ ಸ್ಪೆಕ್ಟ್ರಮ್ 10 ಕಿಮೀಗಳವರೆಗೆ ತಲುಪಬಹುದಾಗಿದೆ. ಇದು ಸರಕಾರೀ ಆಧಾರಿತ ದೂರದರ್ಶನ ಟಿವಿ ಚಾನಲ್‌ನ ನಿಯಂತ್ರಣದಲ್ಲಿದ್ದು ಎಲ್ಲರೂ ಬಳಸುವಂತಿಲ್ಲ.

ಇನ್ನು ಹಳ್ಳಿಗಳಲ್ಲೂ ದೊರೆಯಲಿದೆ ಉಚಿತ ಅಂತರ್ಜಾಲ

ದೇಶದಲ್ಲಿರುವ ದೂರದ ಪ್ರದೇಶಗಳಿಗೆ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿಸುವ ಸಮಸ್ಯೆಗೆ ಇದು ಪರಿಹಾರವನ್ನೊದಗಿಸಲಿದೆ. ಮೂಲಸೌಕರ್ಯದ ಕೊರತೆಯೇ ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ. ಭಾರತದಲ್ಲಿನ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥರಾದ ಭಾಸ್ಕರ್ ಪ್ರಮಾಣಿಕ್ ಹೇಳುವಂತೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಅಪಾರ ಜನಸಂಖ್ಯೆಗೆ ಅಂತರ್ಜಾಲ ವ್ಯವಸ್ಥೆಯನ್ನು ತಲುಪಿಸುವ ಪ್ರಯತ್ನ ನಮ್ಮದಾಗಿದೆ. ಇದು ಆರ್ಥಿಕ ಮಟ್ಟವನ್ನು ಸುಧಾರಿಸಲಿದ್ದು ಇದು ಇತರ ತಾಂತ್ರಿಕ ಒದಗಿಸುವಿಕೆಗೆ ಸಹಕಾರಿಯಾಗಲಿದೆ ಎಂದು ನುಡಿದಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್ ಅನ್ನು ಭದ್ರವಾಗಿರಿಸುವ 10 ಸೂತ್ರಗಳು

ಎರಡು ಪ್ರಮುಖ ಜಿಲ್ಲೆಗಳಲ್ಲಿ ಮೈಕ್ರೋಸಾಫ್ಟ್ ತನ್ನ ಯೋಜನೆಯನ್ನು ಆರಂಭಿಸುವ ಇರಾದೆಯನ್ನಿಟ್ಟುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಪ್ರಾಜೆಕ್ಟ್ ಅನ್ನು ಆರಂಭಿಸುವ ಸಮಯದಲ್ಲೇ ಈ ಯೋಜನೆಯನ್ನು ಮೈಕ್ರೋಸಾಫ್ಟ್ ಕೈಗೆತ್ತಿಕೊಳ್ಳಲಿದೆ. ಈ ಯೋಜನೆಗೆ ಫೇಸ್‌ಬುಕ್ ಕೂಡ ತನ್ನ ಸಹಾಯ ಹಸ್ತವನ್ನು ಚಾಚಲಿದೆ ಎಂಬುದು ವರದಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

English summary
This article tells about Microsoft plans to provide free Internet across India using ‘white space’ TV spectrum.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot