ಪಾಸ್‌ವರ್ಡ್‌ಗಳಲ್ಲಿ ಕಂಡುಬಂದಿದೆ ಕ್ಷಿಪ್ರ ಪ್ರಗತಿ

By Shwetha
|

ನಿಮ್ಮ ದುಬಾರಿ ಗ್ಯಾಜೆಟ್‌ಗಳನ್ನು ರಕ್ಷಣೆಗೆ ಪಾಸ್‌ವರ್ಡ್ ಅತೀ ಮುಖ್ಯವಾದುದಾಗಿದೆ. ಫೋನ್‌ನಲ್ಲಿ ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳಲ್ಲಿ ನೀವು ನಿಮ್ಮ ಹೆಚ್ಚಿನ ವೈಯಕ್ತಿಕ ಫೈಲ್‌ಗಳನ್ನು ದಾಖಲೆಗಳನ್ನು ಜೋಪಾನವಾಗಿರಿಸಿಕೊಂಡಿರುತ್ತೀರಿ. ನಿಮಗೆ ಗೊತ್ತಿಲ್ಲದೆಯೇ ಇದನ್ನು ಕಬಳಿಸುವ ನಯವಂಚಕರು ನಿಮ್ಮ ಸುತ್ತಲೂ ಇರುತ್ತಾರೆ. ಆದರೆ ಇದನ್ನು ಜೋಪಾನ ಮಾಡಲು ಸಾಮಾನ್ಯ ಪಾಸ್‌ವರ್ಡ್ ಪರಿಣಾಮಕಾರಿಯಾಗಿ ಕೆಲಸ ಮಾಡದು.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ಸಿಗ್ನಲ್ ಉತ್ತಮಗೊಳಿಸುವುದು ಹೇಗೆ?

ಆದರೆ ಪಾಸ್‌ವರ್ಡ್‌ನಲ್ಲೂ ಪ್ರಗತಿ ಎಂಬಂತೆ ಹೆಚ್ಚಿನ ಡೆವಲಪರ್‌ಗಳು ತಮ್ಮ ಡಿವೈಸ್‌ಗಳಲ್ಲಿ ಪಾಸ್‌ವರ್ಡ್ ಭದ್ರತೆಯನ್ನು ಅಭಿವೃದ್ಧಿಗೊಳಿಸುತ್ತಿದ್ದು ಇದೊಂದು ರೀತಿಯಲ್ಲಿ ಬಳಕೆದಾರರ ಭದ್ರ ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ದರೆ ಈ ಭದ್ರತಾ ಅಂಶಗಳ ಹಿಂದಿರುವ ಪ್ರಮುಖಾಂಶಗಳನ್ನು ಇಂದಿಲ್ಲಿ ತಿಳಿಸುತ್ತಿದ್ದು ಇದು ನಿಮ್ಮನ್ನು ವಿಸ್ಮಯಗೊಳಿಸುವುದಂತೂ ನಿಜ.

ಫಿಂಗರ್ ಪ್ರಿಂಟ್ಸ್

ಫಿಂಗರ್ ಪ್ರಿಂಟ್ಸ್

ಆಪಲ್ ಪೇ ಈ ತಂತ್ರಜ್ಞಾನದ ಹರಿಕಾರ ಎಂದೆನಿಸಿದ್ದು ಫಿಂಗರ್ ಪ್ರಿಂಟ್ ಗುರುತಿಸುವಿಕೆಯಲ್ಲಿ ಆಪಲ್ ಕಾರ್ಯನಿರ್ವಹಿಸುತ್ತದೆ. ಮಾಸ್ಟರ್ ಕಾರ್ಡ್ ಜೊತೆಗೆ ಬಯೋಮೆಟ್ರಿಕ್ಸ್ ಕಂಪೆನಿ ಜ್ವೈಪ್ ಒಗ್ಗೂಡಿ ವಿಶ್ವದ ಪ್ರಥಮ ಫಿಂಗರ್ ಪ್ರಿಂಟ್ ದೃಢೀಕೃತ ಪೇಮೆಂಟ್ ಕಾರ್ಡ್ ಅನ್ನು ಹೊರತಂದಿದೆ.

ವಾಯ್ಸ್

ವಾಯ್ಸ್

ತಮ್ಮ ಆನ್‌ಲೈನ್ ಖಾತೆಗಳನ್ನು ಪ್ರವೇಶಿಸಲು ಯುಕೆಯ ಎಚ್‌ಎಸ್‌ಬಿಸಿ ಗ್ರಾಹಕರು ಇದನ್ನು ಮೊದಲು ಬಳಸಲು ನಿರ್ದೇಶಿಸಲ್ಪಟ್ಟಿದ್ದರು. ಐಸಿಐಸಿಐ ಬ್ಯಾಂಕ್ ತಮ್ಮ ಸೇವೆಯನ್ನು ಈ ಬಗೆಯಲ್ಲೂ ಇದೀಗ ಆರಂಭಿಸಿದೆ.

ರೆಟೀನಾ

ರೆಟೀನಾ

1980 ರಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಗೊಂಡಿತು. ಕಣ್ಣಿನ ಹಿಂಭಾಗದ ರಕ್ತನಾಳಗಳನ್ನು ಈ ವಿಧಾನ ಆಧರಿಸಿದೆ. ಇದೊಂದು ಅನನ್ಯ ಬಳಕೆದಾರ ಪೇಟೆಂಟ್ ಎಂದೆನಿಸಿದೆ.

ಹಾರ್ಟ್ ಬೀಟ್

ಹಾರ್ಟ್ ಬೀಟ್

ಹಾರ್ಟ್ ಬೀಟ್ ಅಥವಾ ಇಸಿಜಿ ಹೆಚ್ಚು ಕಠಿಣ ಸ್ಕ್ಯಾನ್ ಎಂದೆನಿಸಿದ್ದು ಇದಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಇದು ಜನಪ್ರಿಯತೆಯನ್ನು ಪಡೆದುಕೊಳ್ಳಬಹುದಾಗಿದೆ.

ಫೇಶಿಯಲ್ ಬಯೋಮೆಟ್ರಿಕ್ಸ್

ಫೇಶಿಯಲ್ ಬಯೋಮೆಟ್ರಿಕ್ಸ್

ಮುಖದ ಭಾವನೆಗಳ ಮೂಲಕ ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳುವುದು ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಫಿನ್ನಿಶ್ ಕಂಪೆನಿ ಈ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದ್ದು ಪಾವತಿಗಳಿಗಾಗಿ ಇದು ಫೇಶಿಯಲ್ ಗುರುತಿಸುವಿಕೆಯನ್ನು ಬಳಸಿಕೊಳ್ಳುತ್ತದೆ.

Best Mobiles in India

English summary
Here are five ways in which biometric solutions are making passwords redundant across the globe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X