5G ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಿದ್ಧತೆ!..6 ಲಕ್ಷ ಕೋಟಿ ಆದಾಯ ನಿರೀಕ್ಷೆ!

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷ 8,600 ಮೆಗಾಹೆರ್ಟ್ಜ್ ಟೆಲಿಕಾಂ ಸ್ಪೆಕ್ಟ್ರಮ್‌ಗಳನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ದೂರಸಂಪರ್ಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ 5ಜಿ ಸೇವೆಯು ಜನತೆಯ ಕೈಗೆಟಕುವಂತೆ ಮಾಡಲು ಸರಕಾರ 6 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಮ್‌ಗಳನ್ನು ಹರಾಜಿಗಿಡಲು ಸಿದ್ಧತೆ ನಡೆಸಿದೆ.

ಹೌದು, ದೇಶದ ಬೊಕ್ಕಸಕ್ಕೆ ಆದಾಯದ ಮಹತ್ವದ ಮೂಲವಾಗಿರುವ 8,600 ಮೆಗಾಹರ್ಟ್ಸ್ನಷ್ಟು ಮೊಬೈಲ್‌ ತರಂಗಾಂತರಗಳನ್ನು ಟೆಲಿಕಾಂ ಇಲಾಖೆಯ ಡಿಜಿಟಲ್‌ ಸಂಪರ್ಕ ಆಯೋಗವು ಹರಾಜಿಗೆ ಇಡಲಿದ್ದು, ಈ ವರ್ಷಾಂತ್ಯದೊಳಗೆ ಏರ್ಪಡುವ ನಿರೀಕ್ಷೆ ಇದೆ. ಈ ಸಂದರ್ಭ ನೂತನ 5ಜಿಗೆ ಬೇಕಾದ ಸ್ಪೆಕ್ಟ್ರಮ್ಗಳ ಹರಾಜು ಕೂಡ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

5G ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಿದ್ಧತೆ!..6 ಲಕ್ಷ ಕೋಟಿ ಆದಾಯ ನಿರೀಕ್ಷೆ!

ದೇಶದಲ್ಲಿ ಎಲ್ಲರಿಗೂ ಬ್ರಾಡ್‌ ಬ್ಯಾಂಡ್‌ ಸೇವೆಯನ್ನು ಒದಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಇದಕ್ಕೆ ಪೂರಕವಾಗಿ 5ಜಿ ಸೇವೆಯನ್ನು ಸಮಗ್ರವಾಗಿ ಒದಗಿಸಬೇಕಾಗಿದೆ. ಸ್ಮಾರ್ಟ್‌ ಕಾರು, ಸ್ಮಾರ್ಟ್‌ ಸಿಟಿ ಮಾತ್ರವಲ್ಲದೆ ಗ್ರಾಮೀಣ ಆರೋಗ್ಯ, ಶಿಕ್ಷಣದಲ್ಲಿಯೂ ಸಹ ವ್ಯಾಪಕವಾಗಿ 5ಜಿ ತಂತ್ರಜ್ಞಾನವು ಸಿಗುವಂತಾಗಬೇಕು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಸ್ಪೆಕ್ಟ್ರಮ್ ಮೀಸಲು ದರದ ಅನ್ವಯ ಮಾರಾಟವಾದರೆ, ಸರಕಾರಕ್ಕೆ ಕನಿಷ್ಠವೆಂದರೂ 5.8 ಲಕ್ಷ ಕೋಟಿ ರೂ. ಆದಾಯ ದೊರೆಯಲಿದೆ. ಹೀಗಿದ್ದರೂ ಸರಕಾರದ ಗುರಿ ಕೇವಲ ಆದಾಯ ಹೆಚ್ಚಿಸಿಕೊಳ್ಳುವುದಲ್ಲ. ಬದಲಿಗೆ ದೇಶ ವ್ಯಾಪಿ ಟೆಲಿಕಾಂ ಮತ್ತು ಇಂಟರ್‌ನೆಟ್‌ ಸೌಕರ್ಯ ಹೆಚ್ಚಿಸುವುದಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ ಸುಂದರರಾಜನ್ ಅವರು ಹೇಳಿದ್ದಾರೆ.

5G ಸ್ಪೆಕ್ಟ್ರಮ್ ಹರಾಜಿಗೆ ಕೇಂದ್ರ ಸಿದ್ಧತೆ!..6 ಲಕ್ಷ ಕೋಟಿ ಆದಾಯ ನಿರೀಕ್ಷೆ!

ನೂತನ ಸುತ್ತಿನ ಸ್ಪೆಕ್ಟ್ರಮ್ ಹರಾಜಿಗೆ ದೂರಸಂಪರ್ಕ ನಿಯಂತ್ರಕ ಟ್ರಾಯ್‌ ಈಗಾಗಲೇ ಮೀಸಲು ದರವನ್ನು ಶಿಫಾರಸು ಮಾಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 5ಜಿ ಸೇವೆ ವಿಸ್ತರಣೆಗೂ ಸರಕಾರ ಪರಿಶೀಲಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್‌ ಸೌಲಭ್ಯವನ್ನು ವಿಸ್ತರಿಸುವ ನ ನಿಟ್ಟಿನಲ್ಲೂ ಇದು ಸಹಕಾರಿಯಾಗಲಿದೆ.

ಓದಿರಿ: ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

Best Mobiles in India

English summary
The Narendra Modi-led government plans to sell 8,600 megahertz of telecom airwaves this year across multiple frequency bands . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X