ಕೈಗೆಟುವ ಬೆಲೆಯಲ್ಲಿ 'ಇನ್‌ಫಿನಿಕ್ಸ್‌ S4' 4GB RAM ಸ್ಮಾರ್ಟ್‌ಫೋನ್ ಲಾಂಚ್!

|

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ಗಳ ಪ್ರವೇಶ ಏರಿಕೆಗತಿಯಲ್ಲಿಯೇ ಸಾಗಿದ್ದು, ಅವುಗಳಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯ ಲಾಂಚ್‌ ಆಗುತ್ತವೆ. ಆ ಫೈಕಿ ಇನ್‌ಫಿನಿಕ್ಸ್‌ ಕಂಪನಿಯ ಸ್ಮಾರ್ಟ್‌ಫೋನ್‌ ಸೇರಿದ್ದು, ಕಳೆದ ಮೇ ತಿಂಗಳಲ್ಲಿ ಕಂಪನಿಯು 'ಇನ್‌ಫಿನಿಕ್ಸ್‌ S4' ಶ್ರೇಣಿಯ 3GB RAM + 32GB ವೇರಿಯಂಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಆದ್ರೀಗ ಮತ್ತೆ ಹೊಸ ವೇರಿಯಂಟ್‌ ಲಾಂಚ್ ಮಾಡಿದೆ.

ಕೈಗೆಟುವ ಬೆಲೆಯಲ್ಲಿ 'ಇನ್‌ಫಿನಿಕ್ಸ್‌ S4' 4GB RAM ಸ್ಮಾರ್ಟ್‌ಫೋನ್ ಲಾಂಚ್!

ಹೌದು, ಇನ್‌ಫಿನಿಕ್ಸ್‌ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಈಗ ಹೊಸದಾಗಿ 4GB RAM + 64GB ವೇರಿಯಂಟ್‌ನ ಇನ್‌ಫಿನಿಕ್ಸ್‌ S4 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. 10,999ರೂ. ಬಜೆಟ್‌ ಪ್ರೈಸ್‌ಟ್ಯಾಗ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 4,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಒಳಗೊಂಡಿದೆ.

ಕೈಗೆಟುವ ಬೆಲೆಯಲ್ಲಿ 'ಇನ್‌ಫಿನಿಕ್ಸ್‌ S4' 4GB RAM ಸ್ಮಾರ್ಟ್‌ಫೋನ್ ಲಾಂಚ್!

ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಸೆಲ್ಫಿಗಾಗಿ 32ಎಂಪಿ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿನ ಜನಪ್ರಿಯ ಫೇಸ್ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಫೀಚರ್ಸ್‌ಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗದರೇ ಇನ್‌ಫಿನಿಕ್ಸ್‌ S4 ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಇನ್ನಿತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಇನ್‌ಫಿನಿಕ್ಸ್‌ S4 ಸ್ಮಾರ್ಟ್‌ಫೋನ್‌ 720x1520 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಅನುಪಾತವು 19.5:9ರಷ್ಟಾಗಿದೆ. ಸ್ಕ್ರೀನ್‌ ಮತ್ತು ಬಾಹ್ಯ ಬಾಡಿ ನಡುವಿನ ಅನುಪಾತವು ಶೇ.89%ರಷ್ಟಾಗಿದೆ. ಹಾಗೆಯೇ ಡಿಸ್‌ಪ್ಲೇಯ ಸುತ್ತಲೂ 2.5D ಗ್ಲಾಸ್‌ನ ಪ್ರೊಟೆಕ್ಷನ್ ಸಹ ಪಡೆದುಕೊಂಡಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ಮೀಡಿಯಾ ಟೆಕ್ ಹಿಲಿಯೊ P22 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಇನ್‌ಫಿನಿಕ್ಸ್‌ S4 ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲ ಪಡೆದುಕೊಂಡಿದೆ. ಈ ಮೊದಲು 3GB RAM + 32GB ವೇರಿಯಮಟ್ ಲಭ್ಯವಿತ್ತು, ಆದರೆ ಈಗ 4GB RAM + 64GB ವೇರಿಯಂಟ್‌ನ ಫೋನ್‌ ಇದೀಗ ಲಾಂಚ್ ಮಾಡಿದೆ. 256GBವರೆಗೂ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶವಿದೆ.

ಓದಿರಿ : ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!ಓದಿರಿ : ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಈ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳಿದ್ದು, ಅವುಗಳು ಕ್ರಮವಾಗಿ f/1.8 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ f/2.2 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್ 2ಎಂಪಿ ಮತ್ತು ಕೊನೆಯದು 2ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ಸೆಲ್ಫಿಗಾಗಿ f/2.0 ಅಪರ್ಚರ್ನೊಂದಿಗೆ 32ಎಂಪಿ ಸೆನ್ಸಾರ್‌ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯ

ಬ್ಯಾಟರಿ ಮತ್ತು ಇತರೆ ಸೌಲಭ್ಯ

ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಒಳಗೊಂಡಿದ್ದು, ಅದರೊಂದಿಗೆ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಮೈಕ್ರೋ ಯುಎಸ್‌ಬಿ ಪೋರ್ಟ್‌, ಫೇಸ್‌ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಪ್ರೊಕ್ಸಿಮಿಟಿ ಸೆನ್ಸಾರ್, ಲೈಟ್‌ ಸೆನ್ಸಾರ್, ವೈಫೈ, 35.mm ಆಡಿಯೊ ಜಾಕ್, ಬ್ಲೂಟೂತ್ v5, ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಓದಿರಿ : ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ! ಓದಿರಿ : ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನಲ್ಲಿ 3 ತಿಂಗಳು 'ನೆಟ್‌ಫ್ಲೆಕ್ಸ್' ಉಚಿತ!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತೀಯ ಮಾರುಕಟ್ಟೆಗೆ ಹೊಸದಾಗಿ 'ಇನ್‌ಫಿನಿಕ್ಸ್‌ S4' 4GB RAM + 64GB ವೇರಿಯಂಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದ್ದು, ಬೆಲೆಯು 10,999ರೂ.ಗಳಾಗಿದೆ. ನೆಬೂಲಾ ಬ್ಲೂ, ಟ್ವಿಲ್ಟ್ ಪರ್ಪಲ್ ಮತ್ತು ಸ್ಪೆಸ್‌ ಗ್ರೇ ಬಣ್ಣಗಳ ಆಯ್ಕೆಗಳನ್ನು ಹೊಂದಿದ್ದು, ಶೀಘ್ರದಲ್ಲೇ (ಅಗಷ್ಟ 8ರಂದು ಸಾಧ್ಯತೆ) ಫ್ಲಿಪ್‌ಕಾರ್ಟ್‌ನಲ್ಲಿ ಆರಂಭವಾಗುವ ಬಿಗ್ ಫ್ರಿಡಂ ಸೇಲ್ ಮೇಳದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಓದಿರಿ : ಟಿಸಿಎಲ್‌ನಿಂದ 4K AI ಆಂಡ್ರಾಯ್ಡ್ ಟಿವಿಗಳು ಲಾಂಚ್!.ಆರಂಭಿಕ ಬೆಲೆ 27,990ರೂ!ಓದಿರಿ : ಟಿಸಿಎಲ್‌ನಿಂದ 4K AI ಆಂಡ್ರಾಯ್ಡ್ ಟಿವಿಗಳು ಲಾಂಚ್!.ಆರಂಭಿಕ ಬೆಲೆ 27,990ರೂ!

Best Mobiles in India

English summary
The new 4GB RAM + 64GB storage model has now been introduced in the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X