ಆಂಡ್ರಾಯ್ಡ್ ಲಾಲಿಪಪ್ 5.0 ನವೀಕರಣ ಮೋಟೋ ಎಕ್ಸ್‌ಗೇ? (2 ಜನರೇಶನ್)

Written By:

ಗೂಗಲ್‌ನ ತನ್ನದೇ ನವೀಕರಣವನ್ನು ಯಾರು ಮುರಿಯಲು ಸಾಧ್ಯ? ಸ್ವಲ್ಪ ಯೋಚಿಸಿ. ಮೋಟೋರೋಲಾ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ತನ್ನ ಮೋಟೋ ಎಕ್ಸ್ (ಸೆಕೆಂಡ್ ಜನರೇಶನ್) ಸ್ಮಾರ್ಟ್‌ಫೋನ್‌ನಲ್ಲಿ ಮಾಡಿದೆ. ನೆಕ್ಸಸ್ 6 ನ ತಯಾರಕರು ಲಾಲಿಪಪ್ ನವೀಕರಣವನ್ನು ತಮ್ಮ ಡಿವೈಸ್‌ಗಳಿಗೆ ತರುವ ಯೋಜನೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಂಪೆನಿಯು ತನ್ನ ನವೀಕರಣವನ್ನು 'ಸೋಕ್ ಟೆಸ್ಟ್' ಬಳಕೆದಾರರಿಗೆ ನೀಡಿದೆ. ಲಾಲಿಪಪ್‌ನ ಎಲ್ಲಾ ವಿಶೇಷತೆಗಳನ್ನು ತನ್ನ ಹೊಸ ಫ್ಲ್ಯಾಗ್‌ಶಿಪ್ ಡಿವೈಸ್‌ಗೆ ತರುವ ಯೋಚನೆ ಇದರದ್ದಾಗಿದೆ.

ಮೋಟೋ ಎಕ್ಸ್ (2 ಜನರೇಶನ್) ಪಡೆಯಲಿದೆಯೇ ಲಾಲಿಪಪ್ ಆವೃತ್ತಿ?

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಭರ್ಜರಿ ದರಕಡಿತ

ತನ್ನ ಮೋಟೋ ಎಕ್ಸ್ (2 ಜನರೇಶನ್) ಮೋಟೋ ಜಿ ಮತ್ತು ಮೋಟೋ ಇ ಗೆ ಮೋಟೋರೋಲಾ ಈಗಾಗಲೇ ಲಾಲಿಪಪ್ ನವೀಕರಣವನ್ನು ಘೋಷಿಸಿದೆ. ಡ್ರೊಯ್ಡ್ ಟರ್ಬೋ, ಮೋಟೋ ಮ್ಯಾಕ್ಸ್ ತಮ್ಮ ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದು, ಹೊಸ ಆವೃತ್ತಿಗೆ ನವೀಕರಣವನ್ನು ಕೂಡಲೇ ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಸೋನಿ ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ಅತ್ಯುತ್ತಮ ಫೋನ್ ಹೇಗೆ?

ಪ್ರಸ್ತುತ, ಹೊಸ ಮೋಟೋ ಎಕ್ಸ್‌ನ 'ಪ್ಯೂರ್' ಎಡಿಶನ್‌ಗೆ ಕಂಪೆನಿಯು ನವೀಕರಣಗಳನ್ನು ಕಳುಹಿಸಿದೆ. ಡಿವೈಸ್‌ನ ಅನ್‌ಲಾಕ್ಡ್ ಆವೃತ್ತಿ ಇದಾಗಿದೆ. ಮೋಟೋರೋಲಾ ಫೀಡ್‌ಬ್ಯಾಕ್ ನೆಟ್‌ವರ್ಕ್‌ಗೆ ಸೈನ್ ಅಪ್ ಆಗಿ ಮತ್ತು "ಸೋಕ್ ಟೆಸ್ಟ್" ಪ್ರಾರಂಭಿಸಿದ ಬಳಕೆದಾರರಿಗೆ ಈ ನವೀಕರಣ ಲಭ್ಯವಿದೆ. ತನ್ನೆಲ್ಲಾ ಬಳಕೆದಾರರಿಗೆ ನವೀಕರಣವನ್ನು ಕಳುಹಿಸುವ ಮುನ್ನ ಕಂಪೆನಿ ಇದನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿದೆ.

English summary
This article tells about Moto X (2nd Gen) will be 1st phone to get Android 5.0 Lollipop.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot