ವಿಶ್ವಯೋಗ ದಿನಾಚರಣೆ ಪ್ರಯುಕ್ತ 'ಎಂ-ಯೋಗ' ಅಪ್ಲಿಕೇಶನ್‌ ಲಾಂಚ್‌ ಮಾಡಿದ ಮೋದಿ

|

ವಿಶ್ವಕ್ಕೆ ಭಾರತದ ನೀಡದ ಕೊಡುಗೆಗಳಲ್ಲಿ ಯೋಗ ಕೂಡ ಒಂದು. ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದಾಗಿದೆ. ಇಂತಹ ಯೋಗಕಲೆಯನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ವಿಶ್ವಸಂಸ್ಥೆ ಜೂನ್‌ 21 ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿದೆ. ವಿಶ್ವ ಯೋಗ ದಿನವಾದ ಇಂದು ಭಾರತದ ಪ್ರಧಾನಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಯೋಗ ಕುರಿತಾದ ಎಂ- ಯೋಗ ಎಂಬ ಅಪ್ಲಿಕೇಶನ್‌ ಅನ್ನು ಲಾಂಚ್‌ ಮಾಡಿದ್ದಾರೆ.

ಎಂ-ಯೋಗ

ಹೌದು, ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎಂ-ಯೋಗ ಎಂಬ ಎನ್ನುವ ಅಪ್ಲಿಕೇಶನ್‌ ಬಿಡುಗಡೆ ಮಾಡಿದ್ದಾರೆ. ಇದು ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಇನ್ನು ಈ ಅಪ್ಲಿಕೇಶನ್‌ ವಿಶ್ವದ ವಿವಿಧ ಭಾಷೆಗಳನ್ನು ಬೆಂಬಲಿಸಲಿದ್ದು, ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದ ಮೇಲೆ ಯೋಗ ತರಬೇತಿಯ ಹಲವು ವೀಡಿಯೋಗಳು ಇದರಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಎಂ-ಯೋಗ ಅಪ್ಲಿಕೆಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕರೋನ ವೈರಸ್

ಇಡೀ ವಿಶ್ವವನ್ನೇ ಕರೋನವೈರಸ್ ಸಾಂಕ್ರಾಮಿಕ ರೋಗ ಕಾಡುತ್ತಿದೆ. ಇದೇ ಸಮಯದಲ್ಲಿ ವಿಶ್ವ ಯೋಗ ದಿನಾಚರಣೆ ಕೂಡ ಬಂದಿದೆ. ಇಂತಹ ಸನ್ನಿವೇಶದಲ್ಲಿ ಯೋಗವು "ಭರವಸೆಯ ಕಿರಣ" ವಾಗಿ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ಯೋಗ ನಮಗೆಲ್ಲಾ ಆಂತರಿಕ ಶಕ್ತಿಯ ಮೂಲವಾಗಿದೆ ಎಂದು ಪ್ರತಿಪಾದಿಸಿದರು. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ಎಂ-ಯೋಗ ಅಪ್ಲಿಕೇಶನ್‌ ಪರಿಚಯಿಸಿದೆ. ಇದು ಭಾರತದ ಯೋಗ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಯೋಗ

ಇನ್ನು ಮೋದಿ ಲಾಂಚ್‌ ಮಾಡಿರುವ ಎಂ-ಯೋಗ ಅಪ್ಲಿಕೇಶನ್ ಪ್ರಪಂಚದಾದ್ಯಂತದ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ನೀಡುವ ವೀಡಿಯೊಗಳನ್ನು ಒಳಗೊಂಡಿರಲಿದೆ. ಇದು ನಮ್ಮ 'ಒಂದು ವಿಶ್ವ, ಒಂದು ಆರೋಗ್ಯ' ಧ್ಯೇಯವಾಕ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಎಂ-ಯೋಗ ಅಪ್ಲಿಕೇಶನ್‌ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ದಿ ಪಡಿಸಿರುವ ಅಪ್ಲಿಕೇಶನ್‌ ಆಗಿದೆ. ಇದರಲ್ಲಿ ಯೋಗ ಕುರಿತಾದ ವೀಡಿಯೋಗಳನ್ನು ನೀಡಲಾಗಿದೆ.

Best Mobiles in India

English summary
The M-Yoga app will have many videos of yoga training based on Common Yoga Protocol available in different languages ​​of the world.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X