Subscribe to Gizbot

ಅಂತು ಇಂತು ಬಂತು ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

Written By:

ಸೋಲಾರ್‌ ಪವರ್‌ ವಿಮಾನ, ಸೋಲಾರ್‌ ಲ್ಯಾಂಪ್‌, ಸೋಲಾರ್ ಕಾರು, ಸೋಲಾರ್‌ ಪವರ್‌ ಉಳ್ಳ ಸೈಕಲ್‌ ಎಲ್ಲಾನು ಅಭಿವೃದ್ದಿಗೊಳಿಸಿ ಆಯಿತು. ಹಾಗಾದ್ರೆ ಸೋಲಾರ್‌ ಪವರ್‌ ಬಳಸಿ ಇನ್ಯಾವ ವಾಹನ ಓಡಿಸಬಹುದು ಎಂದು ಪ್ರಶ್ನೆ ಹಾಕಿ ಕೊಳ್ಳುವ ಮೊದಲೇ ಆಫ್ಘಾನಿಸ್ತಾನದ ಎಂಜಿನಿಯರ್‌ ಒಬ್ಬರು ಸೋಲಾರ್‌ ಪವರ್‌ ಬೈಕ್‌ ಅನ್ನು ಅಭಿವೃದ್ದಿ ಪಡಿಸಿದ್ದಾರೆ. ಅಂತು ಇಂತು ಕಾರಿಗೆ ಡೀಸೆಲ್‌ ಹಾಕಿಸೋ ಹಾಗಿಲ್ಲ. ಸೈಕಲ್‌ನ ಪೆಡಲ್‌ನಿಂದ ತುಣಿಯೋ ಹಾಗಿಲ್ಲ. ಈಗ ಬೈಕ್‌ಗೆ ಪೆಟ್ರೋಲ್‌ನು ಹಾಕಿಸೋ ಹಾಗಿಲ್ಲ.

ಹೌದು, ಹಾಗೆ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿವಹಿಸುತ್ತಾ ಹೋದರೆ ಇನ್ನು ಏನೇನ್‌ ಕಂಡುಹಿಡಿತಾರೋ ನಮ್ಮ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಗೊತ್ತಿಲ್ಲಾ. ಆದ್ರೆ ಈಗ ಸೋಲಾರ್‌ ಪವರ್‌ ಬೈಕ್‌ ಬಗೆಗಿನ ವಿಶೇಷತೆ, ಅದು ಹೇಗೆ ಓಡುತ್ತೆ, ಎಂಬಿತ್ಯಾದಿ ವಿಷಯಗಳನ್ನು ಲೇಖನದಲ್ಲಿ ಮೊದಲು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದುಃಖದಲ್ಲಿ ಆಫ್ಘಾನ್‌

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಕಳೆದ ನಲವತ್ತು ವರ್ಷಗಳಿಂದಲು ಸಹ ಆಫ್ಘಾನ್‌ ದೇಶ ಗಲಭೆಗಳ ಮಡುವಿನಲ್ಲಿ, ಪ್ರವಾಹದ ಭೀತಿಯಲ್ಲಿ, ಭ್ರಷ್ಟಾಚಾರದ ಸುಳಿಯಲ್ಲಿ, ಅವ್ಯವಸ್ಥೆಯ ತಾಣದಲ್ಲಿ ಸಿಲುಕಿ ನಲುಗುತ್ತಿದೆ. ದೇಶದಲ್ಲಿ ಹೀಗಿದ್ರೆ ಯಾರ್‌ ತಾನೆ ಅಲ್ಲಿ ವಾಸಿಸಲು ಇಷ್ಟ ಪಡುತ್ತಾರೆ ಹೇಳಿ. ಆಮೇಲೆ ಟೆಕ್ನಾಲಜಿ ಅಭಿವೃದ್ದಿ ಬಗ್ಗೆ ಮಾತ್ರ ಪ್ರಶ್ನೆ ಕೇಳೋ ಹಾಗಿಲ್ಲ. ಯಾಕಂದ್ರೆ, ಅಭಿವೃದ್ದಿ ಇಲ್ಲ. ಈಗ ಅಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ದಿಗೊಂಡಿದೆ.

ಮುಸ್ತಾಫ ಮೊಹಮ್ಮದಿ

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಎಲ್ಲಾ ಮಾಲಿನ್ಯವನ್ನು ಹೋಗಲಾಡಿಸುವ ಯೋಚನೆಯೊಂದಿಗೆ ಈಗ ಆಫ್ಘಾನ್‌ನ ಯುವ ಇಂಜಿನಿಯರ್ ಮುಸ್ತಾಫ ಮೊಹಮ್ಮದಿ ಸ್ಥಳೀಯ ಪ್ರದೇಶದಲ್ಲಿ ಮೊದಲ ಸೋಲಾರ್‌ ಬೈಕ್‌ ಅನ್ನು ಅಭಿವೃದ್ದಿಪಡಿಸಿದ್ದಾರೆ.

45 ದಿನಗಳಲ್ಲಿ ರೆಡಿಯಾದ ಸೋಲಾರ್ ಬೈಕ್‌

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ವಿಶೇಷ ಹಾಗೂ ಕುತೂಹಲಕಾರಿಯಾದ ವಿಷಯ ಅಂದ್ರೆ ಯುವ ಎಂಜಿನಿಯರ್‌ ಮುಸ್ತಾಫ ಮೊಹಮ್ಮದಿ'ಯವರು ಸೋಲಾರ್ ಬೈಕ್‌ ಅನ್ನು ಕೇವಲ 45 ದಿನಗಳಲ್ಲಿ ನಿರ್ಮಿಸಿದ್ದಾರೆ.

 ಪರಿಸರಕ್ಕೆ ಯಾವುದೇ ಮಾಲಿನ್ಯವಿಲ್ಲ

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಮುಸ್ತಾಫ ಮೊಹಮ್ಮದಿ ಅಭಿವೃದ್ದಿ ಪಡಿಸಿರುವ ಸೋಲಾರ್ ಪವರ್‌ನ ಮೋಟಾರ್ ಬೈಕ್‌ ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯ ಉಂಟುಮಾಡುವುದಿಲ್ಲ. ಅಲ್ಲದೇ ಮೋಡ ಕವಿದ ವಾತಾವರಣಕ್ಕೆ ಪೆಡಲ್‌ ವ್ಯವಸ್ಥೆ ಇದ್ದು ಬ್ಯಾಟರಿಯನ್ನು ಚಾರ್ಚ್‌ ಮಾಡಿಕೊಳ್ಳಬಹುದಾಗಿದೆ.

ದೇಶದ ಜೀವನ ಮಟ್ಟ ಸುಧಾರಣೆ

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಮುಸ್ತಾಫ ಮೊಹಮ್ಮದಿ'ರವರು ಸೋಲಾರ್‌ ಬೈಕ್‌ ಆಫ್ಘಾನ್‌ ದೇಶದ ಜೀವನ ಮಟ್ಟ ಸುಧಾರಣೆಗೆ ಭರವಸೆ ನೀಡುತ್ತದೆ ಎಂದು ಚಿಂತಿಸಿದ್ದಾರೆ. ಅಲ್ಲದೇ ದೇಶ ಭಕ್ತಭಾವನೆ ಅಧಿಕವಾಗಿದ್ದು, ಅವರಿಗೆ ಉತ್ತಮ ಅವಕಾಶ ಸಿಕ್ಕರೆ ದೇಶಕ್ಕಾಗಿ ಟೆಕ್ನಾಲಜಿ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸುವಲ್ಲಿ ದುಡಿಯಲು ಉತ್ಸುಕರಾಗಿದ್ದಾರೆ. ಟೆಕ್ನಾಲಜಿ ಅಭಿವೃದ್ದಿಯಿಂದ ಯುದ್ಧದ ವಾತಾವರಣ ಮಾಯವಾಗುವ ಸಾಧ್ಯತೆಯು ಇದೆ ಎನ್ನಲಾಗಿದೆ.

ಮೋಟಾರ್‌ಸೈಕಲ್‌ ಬದಲು ಸೋಲಾರ್‌ ಬೈಕ್‌

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಮುಸ್ತಾಫ ಮೊಹಮ್ಮದಿ'ಯವರು ಮೋಟಾರ್ ಸೈಕಲ್‌ ಬಳಸುವ ಕುಟುಂಬಗಳಿಗೆ ಅದು ರಸ್ತೆಯಲ್ಲಿ ಸುರಕ್ಷತೆ ರಹಿತವಾಗಿದ್ದು, ಸೋಲಾರ್ ಬೈಕ್‌ ನೀಡಲು ಬಯಸಿದ್ದಾರೆ. ಕಾರಣ ಇದು ಚಾಲಕನನ್ನು ಸಂಪೂರ್ಣವಾಗಿ ಮರೆಮಾಚಿಕೊಳ್ಳುತ್ತದೆ ಮತ್ತು ಧೂಳಿನಿಂದ ರಕ್ಷಿಸುತ್ತದೆ.

ಸೋಲಾರ್ ಬೈಕ್ ವಿಶೇಷತೆಗಳು

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

* ಕೇವಲ 45 ದಿನಗಳಲ್ಲಿ ಅಭಿವೃದ್ದಿ
* ಯೋಜನೆ ಸಂಪೂರ್ಣಗೊಳಿಸಲು ಖರ್ಚಾದ ವೆಚ್ಚ 1548 USD (ರೂ.103329)

ಸೋಲಾರ್ ಬೈಕ್ ವಿಶೇಷತೆಗಳು

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

* ಸೋಲಾರ್‌ ಬೈಕ್‌ ಅಭಿವೃದ್ದಿಗೊಳಿಸಲು ರಕ್ಷಿತ ಮೋಟರ್‌ಸೈಕಲ್‌ ಮತ್ತು ಕಾರಿನ ಭಾಗಗಳನ್ನು ಉಪಯೋಗಿಸಲಾಗಿದೆ.
* ಸೋಲಾರ್ ಪ್ಯಾನೆಲ್‌ ಬೈಕ್‌ ಮೇಲಿದ್ದು, 60 ವೋಲ್ಟ್‌ ಬ್ಯಾಟರಿ ಹಾಗೂ 3 ಚಕ್ರಗಳನ್ನು ಹೊಂದಿದೆ.

 ಸೋಲಾರ್‌ ಬೈಕ್‌ ವೇಗ

ಸೋಲಾರ್‌ ಬೈಕ್: ಚಾಲನೆಗೆ ಪೆಟ್ರೋಲ್‌ ಬೇಕಿಲ್ಲ

ಸೋಲಾರ್‌ ಬೈಕ್‌ ಗರಿಷ್ಟ 40 ಕಿಲೋಮೀಟರ್‌ ವೇಗ ಹೊಂದಿದೆ. ಆದರೆ ಆಫ್ಘಾನ್‌ ಸರ್ಕಾರ ಇನ್ನು ಸಹ ಈ ಹೊಸ ಸೋಲಾರ್‌ ಬೈಕ್‌ಗೆ ಸಹಾಯ ಹಸ್ತ ನೀಡಿಲ್ಲ. ಅಲ್ಲದೇ ಸ್ಥಳೀಯ ಸರ್ಕಾರವು ಸಹ ಸೋಲಾರ್‌ ಬೈಕ್‌ಗೆ ಲೈಸನ್ಸ್ ಮತ್ತು ಪೇಪರ್‌ ನೀಡಿಲ್ಲ. ಬ್ಯಾಡ್‌ಲಕ್‌ ಅಂದ್ರೆ ಮುಸ್ತಾಫ'ರವರು ದಿನನಿತ್ಯ ಕೋರ್ಟಿಗೆ ಹಾಜರಾಗುತ್ತಿದ್ದು, RIP ಟೆಕ್ನಾಲಜಿ ಐಡಿ ಇದು ಡ್ರೋನ್‌ ಆಗಿದೆ ಮತ್ತು ಒಂದು ರೀತಿಯಲ್ಲಿ ಅಪಾಯಕಾರಿ ಎಂದು ಹೇಳಿದೆಯಂತೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಭಾರತದ ಸೋಲಾರ್ ವಿಮಾನ ನಿಲ್ದಾಣ ವಿಶ್ವದಲ್ಲೇ ಪ್ರಥಮ

10 ಲಕ್ಷ ಅಶ್ಲೀಲ ವೀಡಿಯೋ/ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೈಡ್‌

ಶಾಲೆ ಬಿಟ್ಟು ವಿದ್ಯುತ್‌ ರಹಿತ ಮಣ್ಣಿನ ಫ್ರಿಜ್ ತಯಾರಿಸಿದ ಭಾರತೀಯ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Self Taught Afghan Engineer Makes A Solar Powered Bike. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot