Subscribe to Gizbot

ಅಕ್ಟೋಬರ್‌ನಲ್ಲಿ ಬರಲಿದೆ ನಿರೀಕ್ಷಿತ ಐವಾಚ್

Written By:

ಆಪಲ್ ಬಹು ನಿರೀಕ್ಷಿತ ಸ್ಮಾರ್ಟ್‌ವಾಚ್ ಆದ "ಐ ವಾಚ್" ಅನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದ್ದು, ಅತ್ಯಾಕರ್ಷಕ ವಿನ್ಯಾಸದಲ್ಲಿ ಇದು ಮಾರುಕಟ್ಟೆಗೆ ಅಡಿ ಇಡಲಿದೆ.

ವರದಿಯ ಪ್ರಕಾರ ಆಪಲ್ ಐ ವಾಚ್‌ನ ದರವನ್ನು ಇನ್ನೂ ನಿಗದಿ ಪಡಿಸದೇ ಇದ್ದು ಅಂದಾಜು ಪ್ರಾರಂಭ ಹಂತಕ್ಕೆ 3-5 ಮಿಲಿಯನ್ ದರವನ್ನು ನಿಗದಿಪಡಿಸಿದೆ. ಇದು ಕಂಪ್ಯೂಟರ್‌ಗಿಂತ ಎರಡು ಪಟ್ಟು ಕಾರ್ಯಗಳನ್ನು ಮಾಡಲಿದ್ದು, ಡಿವೈಸ್ ಅಥವಾ ದೂರದರ್ಶನವನ್ನು ಮ್ಯಾಪಿಂಗ್ ಮಾಡುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಆಪಲ್ ಐ ವಾಚ್ ನೋಡಲು ಐಷಾರಾಮಿ ವ್ರಸ್ಟ್‌ವಾಚ್‌ನಂತಿದ್ದು ಶಕ್ತಿಯುತ ಸೆನ್ಸಾರ್‌ಗಳನ್ನು ಈ ವಾಚ್ ಹೊಂದಿದೆ.

ಆಪಲ್ ಐವಾಚ್‌ನಿಂದ ಮಾರುಕಟ್ಟೆಗೆ ಬಿಗ್ ಹಿಟ್

ಐಫೋನ್ ಹಾಗೂ ಐಪ್ಯಾಡ್‌ನಲ್ಲಿರುವ ನಿಮ್ಮ ಪರಿಚಿತ ಅಂಶಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಮಣಿಗಂಟಿನಲ್ಲೇ ಅವುಗಳ ಕಾರ್ಯವನ್ನು ನಿರ್ವಹಿಸಬಹುದಾಗಿದೆ. ಇತ್ತೀಚೆಗೆ ತಾನೇ ಆಪಲ್ ಐಒಎಸ್ 8 ಅನ್ನು ಘೋಷಿಸಿದ್ದು ಇದರೊಂದಿಗೆ ಹೊಸ ಹೆಲ್ತ್ ಆಪ್ ಅನ್ನು ಬಳಕೆದಾರರ ಕೈಗೆ ಸಿಗುವಂತೆ ಮಾಡಿದೆ. ಐ ವಾಚ್ ಅನ್ನು ಧರಿಸಿಕೊಂಡವರ ನಾಡಿಮಿಡಿತವನ್ನು ಆಧರಿಸಿ ಕೆಲವೊಂದು ಮಾಹಿತಿಯನ್ನು ಬಳಕೆದಾರರಿಗೆ ಇದು ನೀಡಲಿದೆ.

ಆಪಲ್‌ನ ಐವಾಚ್ ಹೇಗೆ ಕಾಣಬಹುದೆಂಬ ನಿರೀಕ್ಷೆ ಇನ್ನೂ ಜನರಲ್ಲಿದ್ದು ಕೆಲವರ ಪ್ರಕಾರ ಇದು ಹಳೆಯ ಐಪ್ಯಾಡ್ ನ್ಯಾನೋನಂತಿರಬಹುದು, ಕರ್ವ್ಡ್ ಐಫೋನ್ ಅಥವಾ ಮೋಟೋ 360 ಗೆ ಸಮಾನವಾಗಿರಬಹುದು. ಇನ್ನೂ ಕೆಲವರು ಇದು ಬ್ರೇಸ್‌ಲೆಟ್ ಮಾದರಿಯಲ್ಲಿದ್ದು ಸ್ಯಾಮ್‌ಸಂಗ್ ಗೇರ್ ಫಿಟ್‌ಗೆ ಸಮಾನವಾಗಿರಬಹುದೆಂಬ ಊಹೆಯಲ್ಲಿದ್ದಾರೆ.

ಇಷ್ಟಲ್ಲದೇ ಗೂಗಲ್ ಕೂಡ ತನ್ನ ಕೆಲವೊಂದು ಪ್ರಕಟಣೆಗಳನ್ನು ಬಿಡುಗಡೆಗಳನ್ನು ಜೂನ್ 25 ಕ್ಕೆ ನಡೆಯುವ ಐ/ಒ ಡೆವಲಪರ್ಸ್ ಕಾನ್ಫರೆನ್ಸ್‌ನಲ್ಲಿ ಮಾಡಲಿದೆ. ತನ್ನ ಬಹುನಿರೀಕ್ಷಿತ "ಆಂಡ್ರಾಯ್ಡ್ ವೇರ್" ಬಗ್ಗೆ ಗೂಗಲ್ ಇಲ್ಲಿ ಹೆಚ್ಚಿನ ವಿವರಗಳನ್ನು ನೀಡಲಿದೆ. ಸ್ಮಾರ್ಟ್‌ವಾಚ್‌ಗಳಂತೆ ಧರಿಸುವ ಸಾಧನಗಳಿಗಾಗಿ ಕಂಪೆನಿಯ ಹೊಸ ಆಪರೇಟಿಂಗ್ ಸಿಸ್ಟಮ್ ಇದಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot