ಚಿಪ್​ ಆಧಾರ ರಹಿತ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳಿಗೆ ಇಂದೇ ಕೊನೆ!!

|

ಆರ್‌ಬಿಐ ಆದೇಶದ ಪ್ರಕಾರ ಡಿ.31ರ ಅನಂತರ ಹಳೆಯ ಎಟಿಎಂ ಕಾರ್ಡ್‌ ಉಪಯೋಗಿಸಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ ಎಂಬುದು ನಿಮಗೀಗಾಗಲೇ ತಿಳಿದಿರಬಹುದು. ಈ ಬಗ್ಗೆ ನೀವಿನ್ನು ತಿಳಿದಿಲ್ಲ ಎಂದಾದರೆ ಇಂದೇ ಕೊನೆಗೊಳ್ಳುತ್ತಿರುವ ನಿಮ್ಮ ಹಳೆಯ ಡೆಬಿಟ್\ಕ್ರೆಡಿಟ್ ಕಾರ್ಡ್ ಬಗೆಗಿನ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ, ಕೆಲವು ಎಟಿಎಂ ಕಾರ್ಡ್​ಗಳು ಸ್ವಯಂಕೃತವಾಗಿ ತಿಂಗಳಾಂತ್ಯಕ್ಕೆ ನಿಷ್ಕ್ರಿಯ ಆಗಲಿವೆ.

ಬ್ಯಾಂಕ್‌ಗಳು ಈಗಾಗಲೇ ಗ್ರಾಹಕರ ಮೊಬೈಲ್‌ಗೆ ಸಂದೇಶ ಕಳುಹಿಸಲು ಆರಂಭಿಸಿದ್ದು, ಆದಷ್ಟು ಬೇಗ ಬ್ಯಾಂಕ್‌ಗೆ ತೆರಳಿ ಹಳೆಯ ಎಟಿಎಂ ಕಾರ್ಡ್‌ ಬದಲಾಗಿ ಇಎಂವಿ ಚಿಪ್‌ ಇರುವ ಹೊಸ ಎಟಿಎಂ ಪಡೆದುಕೊಳ್ಳಬೇಕು. ಕೆಲವು ಬಳಕೆದಾರರಿಗೆ ಈಗಾಗಲೇ ಎಟಿಎಂ ಬಳಸುವ ವೇಳೆ ಸಮಸ್ಯೆಗಳು ಎದುರಾಗಿವೆ ಎಂದು ತಿಳಿದುಬಂದಿದೆ. ಈ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಈಗಾಗಲೇ ಕೆಲ ಗ್ರಾಹಕರ ಕಾರ್ಡ್ ಕೆಲಸ ಮಾಡದಿರಬಹುದು ಎಂದಿದ್ದಾರೆ.

ಚಿಪ್​ ಆಧಾರ ರಹಿತ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳಿಗೆ ಇಂದೇ ಕೊನೆ!!

ಡೆಬಿಟ್ ಕಾರ್ಡ್‌ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹೀಗೆ ಹಲವು ಸಂದರ್ಭಗಳಲ್ಲಿ ನಮಗೆ ನೆರವಾಗುವ ಈ ಕಾರ್ಡ್‌ ಒಂದು ದಿನ ಸ್ಥಗಿತವಾದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಡೆಬಿಟ್ ಕಾರ್ಡ್ ಸ್ಥಗಿತವಾಗುವ ಮುನ್ನ ಏನು ಮಾಡಬೇಕು? 'ಇಎಂವಿ ಚಿಪ್‌' ಇರುವ ಎಟಿಎಂ ಕಾರ್ಡ್ ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಯಾವ ಕಾರ್ಡ್ ಬ್ಲಾಕ್ ಆಗಲಿವೆ.?

ಯಾವ ಕಾರ್ಡ್ ಬ್ಲಾಕ್ ಆಗಲಿವೆ.?

ನಿಮ್ಮ ಡೆಬಿಟ್ ಕಾರ್ಡ್ ಅನ್ನು ಒಮ್ಮೆ ಗಮನಿಸಿ, ಹಿಂಬದಿಯಲ್ಲಿ ಕಪ್ಪು ಬಣ್ಣದ ಉದ್ದ ಪಟ್ಟಿ ಇದ್ದು, ಮುಂಬದಿಯಲ್ಲಿ ಯಾವುದೇ ಚಿಪ್‌ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್‌ ಎಂದು ಅರ್ಥ. ಇನ್ಮುಂದೆ ಈ ಕಾರ್ಡ್‌ಗಳು ಕೆಲಸ ಮಾಡುವುದಿಲ್ಲ. ಆರ್‌ಬಿಐ ಆದೇಶಗಳ ‍ಪ್ರಕಾರ, ಈ ಮ್ಯಾಗ್ನೆಟಿಕ್ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.

 ಬದಲಾಯಿಸಿಕೊಳ್ಳುವುದು ಹೇಗೆ?

ಬದಲಾಯಿಸಿಕೊಳ್ಳುವುದು ಹೇಗೆ?

ಎಲ್ಲ ಬ್ಯಾಂಕ್‌ಗಳೂ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗಳಾಗಿ ಬದಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಾರ್ಡ್ ಬದಲಿಸಿಕೊಳ್ಳುವಂತೆ ಗ್ರಾಹಕರ ಮೊಬೈಲ್‌ಫೋನ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ನೀವು ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳಿ.

ಯಾವುದೇ ಶುಲ್ಕವಿಲ್ಲ.

ಯಾವುದೇ ಶುಲ್ಕವಿಲ್ಲ.

ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಲು ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ನಿಮ್ಮ ಬ್ಯಾಂಕ್‌ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳುವುದು ಮಾತ್ರ. ಈ ಬಗ್ಗೆ ಇತರರಿಗೆ ಯಾವುದೇ ಮಾಹಿತಿಯನ್ನು ನೀಡುವ ಅಗತ್ಯತೆ ಸಹ ಇಲ್ಲಿಲ್ಲ.

ಏನಿದು ಯುರೊಪೇ ಮಾಸ್ಟರ್ ವೀಸಾ?

ಏನಿದು ಯುರೊಪೇ ಮಾಸ್ಟರ್ ವೀಸಾ?

ಖಾತೆದಾರ ನಮೂದಿಸುವ ಪಿನ್, ವಹಿವಾಟಿಗೆ ಎರಡು ಹಂತದ ರಕ್ಷಣೆ ಒದಗಿಸುವ ನೂತನ ತಂತ್ರಜ್ಞಾನದ ಚಿಪ್ ಕಾರ್ಡ್ಗಳನ್ನು ಯುರೊಪೇ ಮತ್ತು ಮಾಸ್ಟರ್‌ ವೀಸಾ ಸಂಸ್ಥೆಗಳು ಜೊತೆಗೂಡಿ ತಂದಿದ್ದಾವೆ. ಈ ಕಾರ್ಡ್‌ನ ಮುಂಬದಿಯಲ್ಲಿರುವ ಚಿಪ್‌ನಲ್ಲಿ ಖಾತೆದಾರನ ಬ್ಯಾಂಕ್ ವಿವರ ಎನ್‌ಕ್ರಿಪ್ಟ್ ರೂಪದಲ್ಲಿ ಅಡಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಇಎಂವಿ ಕಾರ್ಡ್‌ನ ವಿಶೇಷಗಳೇನು?

ಈ ಕಾರ್ಡ್‌ ಅನ್ನು ಸ್ವೈಪ್ ಮಾಡಿದ ಪ್ರತಿ ಬಾರಿ, ಆ ವಹಿವಾಟಿಗೆ ಮಾತ್ರ ಸೀಮಿತವಾಗುವಂತೆ ಒಂದು ಪ್ರತ್ಯೇಕ ಕೋಡ್‌ ರಚನೆಯಾಗುತ್ತದೆ. ಈ ಕೋಡ್ ಮತ್ತೊಂದು ವಹಿವಾಟಿಗೆ ಉಪಯೋಗವಾಗುವುದಿಲ್ಲ. ಹೀಗಾಗಿ ಖಾತೆಯಲ್ಲಿನ ಹಣ ಸೋರಿಕೆಯಾಗುವುದಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಲು ಸಹ ಸಾಧ್ಯವಾಗುತ್ತದೆ.

ಗ್ರಾಹಕರಿಗೆ ಎಚ್ಚರ ಅಗತ್ಯ.

ಗ್ರಾಹಕರಿಗೆ ಎಚ್ಚರ ಅಗತ್ಯ.

ಯಾವುದೇ ಬ್ಯಾಂಕ್‌ನವರು ಸಹ ಮೊಬೈಲ್ ಮೂಲಕ ಅಥವಾ ಇಮೇಲ್ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಫೋನ್ ಮೂಲಕವಾಗಲೀ, ಇ-ಮೇಲ್ ಮೂಲಕವಾಗಲೀ ಖಾತೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನೇರವಾಗಿ ಬ್ಯಾಂಕ್‌ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳಿ.

Best Mobiles in India

Read more about:
English summary
The RBI has mandated banks to replace older magnetic stripe-only debit and credit cards with the new EMV chip-based ones. Have you replaced your old ATM card?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X