ಇಲ್ಲಿವೆ ಟಾಪ್ ಐದು ಇ-ಬುಕ್‌ ಆಪ್‌ಗಳು: ವಿಶೇಷತೆ ಏನು?

|

ದೇಶ ಸುತ್ತು ಇಲ್ಲ ಕೋಶ ಓದು ಎಂಬ ಹಿರಿಯರ ನಾಣ್ಣುಡಿ ಇಂದಿಗೂ ಅನ್ವಯ. ಜಗತ್ತಿನ ಜ್ಞಾನವನ್ನು ತಿಳಿಯಬೇಕೆಂದರೆ ಒಂದು ಜಗತ್ತನ್ನೇ ಸುತ್ತಬೇಕು ಇಲ್ಲವಾದರೆ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಆದರೆ ಈ ದಿನಗಳಲ್ಲಿ ಎರಡೂ ಸಹ ಸ್ಮಾರ್ಟ್‌ ಆಗಿದೆ. ಅದರಲ್ಲೂ ಕೆಲವರು ತಾವು ಜಗತ್ತನ್ನು ಸುತ್ತುವುದರ ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಅವುಗಳ ಬಗ್ಗೆ ಮಾಹಿತಿ ನೀಡಿ ಎಲ್ಲರಿಗೂ ಜಗತ್ತು ಹೇಗಿದೆ ಎಂಬುದನ್ನು ಪರಿಚಯಿಸುತ್ತಿದ್ದಾರೆ. ಇದರೊಂದಿಗೆ ಪುಸ್ತಕ ಸಹ ಸ್ಮಾ್ಟ್‌ ಆಗಿದೆ. ಅದರೂ ಇನ್ನೂ ಸಹ ಪುಸ್ತಕ ಖರೀದಿ ಮಾಡಿ ಓದುವ ಜನ ಇದ್ದಾರೆ.

ಇ-ಬುಕ್‌

ಹೌದು, ಈಗೇನಿದ್ದರೂ ಇ-ಬುಕ್‌ಗಳ ಕಾಲ. ನಿಮ್ಮ ಬಳಿ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು ಅದನ್ನೇ ಒಂದು ಪುಸ್ತಕದ ಭಂಡಾರವನ್ನಾಗಿಸಿಕೊಳ್ಳಬಹುದು. ಅಷ್ಟರಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ಆದರೆ ಅದಕ್ಕೆ ಕೆಲವೊಂದಷ್ಟು ಆಪ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪುಸ್ತಗಳನ್ನು ನಿಮ್ಮದೇ ಮೊಬೈಲ್‌ನಲ್ಲಿ ಓದಲು ಸಾಧ್ಯ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಆಪ್‌ಗಳು ಇವೆ. ಆದರೆ ಪ್ರಮುಖವಾದ ಅದರಲ್ಲೂ ನಿಮಗೆ ಸುಲಭದಲ್ಲಿ ಲಭ್ಯವಾಗುವ ಹಾಗೂ ಹಲವಾರ ಫೀಚರ್ಸ್‌ ಇರುವ ಕೆಲವು ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ನಮ್ಮದು.

ಅಮೆಜಾನ್ ಕಿಂಡಲ್ (Amazon Kindle)

ಅಮೆಜಾನ್ ಕಿಂಡಲ್ (Amazon Kindle)

ಕಿಂಡಲ್‌ ಆಪ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಆಪ್‌ ಆಗಿದೆ. ಇದನ್ನು ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್‌‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ಇಚ್ಚೆಯ ಪುಸ್ತಕಗಳನ್ನು ಓದಬಹುದಾಗಿದೆ. ಇದರಲ್ಲಿ ಪುಸ್ತಕ ಓದುವುದಕ್ಕಷ್ಟೇ ಅಲ್ಲದೆ ಕೆಲವು ಫೀಚರ್ಸ್‌ಗಳನ್ನು ನೀಡಲಾಗಿದೆ. ಲಾಸ್ಟ್‌ ರೀಡ್‌ ಪೇಜ್‌ನ್ನು ಸುಲಭವಾಗಿ ಪತ್ತೆ ಮಾಡುವ ಆಯ್ಕೆ, ಹೈಲೈಟ್ಸ್‌ , ಬುಕ್‌ಮಾರ್ಕ್‌ ಜೊತೆಗೆ ಕೆಲವೊಂದಷ್ಟು ನಮ್ಮದೇ ಟಿಪ್ಪಣಿ ಮಾಡಿಕೊಳ್ಳುವ ಅವಕಾಶವನ್ನ ಇದರಲ್ಲಿ ಕಲ್ಪಿಸಲಾಗಿದೆ. ಹಾಗೆಯೇ ನಿಘಂಟಿನ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ವಿಕಿಪೀಡಿಯಾ ಹಾಗೂ ಗೂಗಲ್‌ ಸರ್ಚ್‌ ಆಯ್ಕೆ ನೀಡಿದ್ದು, ಏನಾದರೂ ಪದಗಳಲ್ಲಿ ಗೊಂದಲ ಉಂಟಾದರೆ ನೀವು ಸುಲಭವಾಗಿ ಈ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವ್ಯಾಟ್ಪ್ಯಾಡ್ (Wattpad)

ವ್ಯಾಟ್ಪ್ಯಾಡ್ (Wattpad)

ತಂತ್ರಜ್ಞಾನ ಬಗ್ಗೆ ಹೆಚ್ಚು ಅರಿವಿರುವವರಿಗೆ ಈ ಆಪ್‌ ತುಂಬಾನೆ ಸಹಕಾರಿ. ಇದರಲ್ಲಿ ಪುಸ್ತಕದಲ್ಲಿನ ಅಕ್ಷರಗಳ ಶೈಲಿಯನ್ನು ಬದಲಾಯಿಸುವ ಆಯ್ಕೆ ನೀಡಲಾಗಿದೆ. ಜೊತೆಗೆ ಬಣ್ಣಗಳನ್ನು ಕಸ್ಟಮೈಸ್‌ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಅವಶ್ಯಕತೆ ಇದ್ದರೆ ಅಕ್ಷರದ ಸೈಜ್‌ನ್ನು ಸಹ ಬದಲು ಮಾಡಿಕೊಳ್ಳಬಹುದು. ಇತ್ತೀಚಿನ ಪುಸ್ತಕಗಳನ್ನು ನೀವು ಓದಲು ಇಚ್ಚೆಪಟ್ಟರೆ ಖಂಡಿತಾ ಈ ಆಪ್‌ ನಿಮಗೆ ಅನುಕೂಲ. ಹಾಗೆ ನಿಮ್ಮದೇ ಲೇಖನವನ್ನೂ ಇಲ್ಲಿ ಪ್ರಕಟಿಸಬಹುದಾಗಿದೆ.

ಗುಡ್ ರೀಡ್ಸ್ (GoodReads)

ಗುಡ್ ರೀಡ್ಸ್ (GoodReads)

ಈ ಗುಡ್ ರೀಡ್ಸ್ ಆಪ್‌ ಕೆಲವು ದೊಡ್ಡ ಪುಸ್ತಗಳನ್ನು ಒಳಗೊಂಡಿರುವುದರ ಜೊತೆಗೆ ಪಠ್ಯ ಫಾರ್ಮಾಟಿಂಗ್‌ ಆಯ್ಕೆಗಳನ್ನು ಹೊಂದಿದೆ. ಹಾಗೆ ಬಳಕೆದಾರರಿಗೆ ಬುಕ್‌ಗಳನ್ನು ಸ್ಕ್ಯಾನ್‌ ಮಾಡುವ ಹಾಗೂ ಅದನ್ನು ವಿಮರ್ಶಿಸುವ ಅವಕಾಶ ನೀಡಲಾಗಿದೆ. ಇದರಲ್ಲಿ ಹಲವಾರು ಪುಸ್ತಕಗಳ ಭಂಡಾರ ಇದ್ದು, ನೀವು ನಿಮಗಿಷ್ಟವಾದ ಪುಸ್ತಗಳನ್ನು ಅಯ್ಕೆ ಮಾಡಿಕೊಂಡು ಒಂದು ಇ-ಗ್ರಂಥಾಲಯವನ್ನೇ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಇದರಲ್ಲಿ ರೀಡಿಂಗ್‌ ಚಾಲೆಂಜ್‌ ಆಯ್ಕೆ ನೀಡಲಾಗಿದ್ದು, ನಿಮ್ಮ ಓದುವ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಕಿಂಡಲ್ ಪೇಪರ್ ವೈಟ್ (Kindle Paperwhite)

ಕಿಂಡಲ್ ಪೇಪರ್ ವೈಟ್ (Kindle Paperwhite)

ಈ ಆಪ್‌ ಉಳಿದ ಆಪ್‌ಗಳಿಗಿಂತ ಭಿನ್ನವಾಗಿದೆ. ಈ ಆಪ್‌ 8GB ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಈ ಹಿಂದೆ ಇದ್ದ ಆವೃತ್ತಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಆರು ಇಂಚಿನ ಡಿಸ್‌ಪ್ಲೇಯಲ್ಲಿ ಪುಸ್ತಕದ ಪುಟ ತೆರೆದುಕೊಳ್ಳುತ್ತದೆ. ಇದು 300ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಬೆರಗುಗೊಳಿಸುವ ಹೆಚ್‌ಡಿ ನೋಟವನ್ನು ಈ ಆಪ್‌ ಒದಗಿಸಲಿದೆ. ಎಷ್ಟೇ ಸೂರ್ಯನ ಬೆಳಕಿದ್ದರೂ ಪುಸ್ತಕವನ್ನು ಸರಾಗವಾಗಿ ಓದಬಹುದಾಗಿದೆ. ಕಣ್ಣಿಗೆ ಯಾವುದೇ ತೊಂದರೆ ಆಗದಂತೆ ಈ ಫೀಚರ್ಸ್‌ನ್ನು ನೀಡಲಾಗಿದೆ.

ನೂಕ್‌ (NOOK)

ನೂಕ್‌ (NOOK)

ಯಾವುದೇ ಹಣ ಪಾವತಿಸದೆ ಉಚಿತವಾಗಿ ಪುಸ್ತಕ ಓದಬೇಕು ಎಂದುಕೊಂಡಿದ್ದರೆ ಈ ಆಪ್‌ ನಿಮಗೆ ಉಪಯೋಗ ಆಗಲಿದೆ. ಉಚಿತ ಪುಸ್ತಗಳ ಜೊತೆ ಇದು ಅತ್ಯುತ್ತಮ ಪುಸ್ತಕಗಳ ಭಂಡಾರವನ್ನು ಒಳಗೊಂಡಿದೆ. ಇದನ್ನು ಬಳಕೆ ಮಾಡಲು ಸಹ ಯಾವುದೇ ಹೆಚ್ಚು ಶ್ರಮವಹಿಸುವ ಅವಶ್ಯಕತೆ ಇರುವುದಿಲ್ಲ. ಇದರಲ್ಲಿ ಪಿಡಿಎಫ್‌ ಹಾಗೂ ಇ ಪಬ್‌(epub) ಫೈಲ್‌ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನಿಯತಕಾಲಿಕೆ, ಕಾದಂಬರಿ, ಪತ್ರಿಕೆಗಳು ಹಾಗೂ ಕಾಮಿಕ್ಸ್‌ಗಳನ್ನು ಓದಬಹುದಾಗಿದೆ.

Best Mobiles in India

English summary
These apps will be very useful for those who read books online. Here are five apps descriptions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X