ಇನ್ಮುಂದೆ ಐಫೋನ್ ಬಳಕೆದಾರರಿಗೂ ಲಭ್ಯ ಟ್ರಾಯ್‌ 'DND' ಆಪ್!!

|

ಟ್ರಾಯ್ ಮತ್ತು ಆಪಲ್ ಸಂಸ್ಥೆಯ ಶೀತಲ ಸಮರದಲ್ಲಿ ಆಪಲ್ ಕಂಪೆನಿ ತಲೆಬಾಗಿದೆ. ಭಾರತದಲ್ಲಿ ಇದೀಗ ಐಫೋನ್ ಬಳಕೆದಾರರು ಕೂಡ 'ಡು ನಾಟ್ ಡಿಸ್ಟರ್ಬ್' ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಆಪ್ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ಟ್ರಾಯ್ ತಿಳಿಸಿದೆ. ಇದೇ ವಾರಾಂತ್ಯದಲ್ಲಿ 'ಡು ನಾಟ್ ಡಿಸ್ಟರ್ಬ್-DND' ಐಒಎಸ್ ಆಪ್ ಸ್ಟೋರ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಟ್ರಾಯ್‌ನ 'ಡು ನಾಟ್ ಡಿಸ್ಟರ್ಬ್-DND' ಆಪ್‌ಗೆ ಅನುಮತಿ ನೀಡಲು ನಿರಾಕರಿಸಿದ್ದ ಆಪಲ್‌ಗೆ ಸೆಡ್ಡು ಹೊಡೆದಿರುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್), ಅಂತೂ ಭಾರತದಲ್ಲಿ ಐಫೋನ್ ಬಳಕೆದಾರರಿಗೆ ತನ್ನ ಸೇವೆಯನ್ನು ತರುವಲ್ಲಿ ಯಶಸ್ಸನ್ನು ಪಡೆದಿದೆ. ಈ ಮೂಲಕ 'ಡು ನಾಟ್ ಡಿಸ್ಟರ್ಬ್-DND' ಆಪ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯವಾದಂತಾಗಿದೆ.

ಇನ್ಮುಂದೆ ಐಫೋನ್ ಬಳಕೆದಾರರಿಗೂ ಲಭ್ಯ ಟ್ರಾಯ್‌ 'DND' ಆಪ್!!

ಟೆಲಿಮಾರ್ಕೆಟಿಂಗ್ ಕರೆಗಳು ವರದಿ ಮಾಡಲು ಹಾಗೂ ನೋಂದಾಯಿಸದೆ ಇರುವ ಕರೆ ಮತ್ತು ಎಸ್‌ಎಮ್‌ಎಸ್‌ಗಳನ್ನು ನಿಷೇಧಿಸುವ ಸಲುವಾಗಿ ಇರುವ ಈ ಆಪ್ ಈಗಾಗಲೇ ಟ್ರಾಯ್‌ನ ಯಶಸ್ವಿ ಆಪ್ ಹಾಗಿದ್ದು, ಹಾಗಾದರೆ, ಟ್ರಾಯ್‌ ಸಿದ್ಧಪಡಿಸಿರುವ 'ಡು ನಾಟ್ ಡಿಸ್ಟರ್ಬ್‌ (ಡಿಎನ್‌ಡಿ) ಆಪ್‌ನಿಂದ ಮೊಬೈಲ್ ಬಳಕೆದಾರರಿಗೆ ಏನೆಲ್ಲಾ ಲಾಭ ಎಂದು ಮುಂದೆ ಓದಿ ತಿಳಿಯಿರಿ.

ಏನಿದು 'ಡು ನಾಟ್ ಡಿಸ್ಟರ್ಬ್-DND' ಆಪ್

ಏನಿದು 'ಡು ನಾಟ್ ಡಿಸ್ಟರ್ಬ್-DND' ಆಪ್

ಮೊಬೈಲ್‌ಗೆ ಬರುವ ಕಿರಿಕಿರಿ ಕರೆ, ಎಸ್ಸೆಮ್ಮೆಸ್ ಅನ್ನು ಕೊನೆಗೊಳಿಸುವ ಆಪ್ ಇದಾಗಿದೆ.ಟ್ರಾಯ್‌ನ ಈ 'ಡಿಎನ್‌ಡಿ' ಆಪ್‌ ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಆಪ್ ತನ್ನ ರಿಜಿಸ್ಟ್ರಾರ್‌ನಲ್ಲಿ ದಾಖಲಿಸಿಕೊಳ್ಳುತ್ತದೆ. ಹಾಗಾಗಿ, ಟೆಲಿಕಾಂ ಕಂಪೆನಿಗಳ ಮೋಸದ ಕರೆಗಳು ಮತ್ತು ಎಸ್ಸೆಮ್ಮೆಸ್‌ಗಳು ಸೇರಿದಂತೆ ಎಲ್ಲಾ ಜಾಹಿರಾತುಗಳು ನಿಮ್ಮನ್ನು ತಲುಪುವುದಿಲ್ಲ.

ಆಪ್‌ ಕಾರ್ಯನಿರ್ವಹಣೆ ಹೇಗೆ?

ಆಪ್‌ ಕಾರ್ಯನಿರ್ವಹಣೆ ಹೇಗೆ?

ಭಾರತದ ಟೆಲಿಕಾಂ ಕಂಪೆನಿಗಳನ್ನು ನಿಯಂತ್ರಿಸುತ್ತಿರುವ ಸರ್ಕಾರದ ಸಂಸ್ಥೆ ಟ್ರಾಯ್ ಆಗಿರುವುದರಿಂದ ಈ ಡಿಎನ್‌ಡಿ ಆಪ್‌ನಲ್ಲಿ ಎಲ್ಲಾ ಬಳಕೆದಾರರಿಗೂ ಸ್ವಂತ ಹಕ್ಕಿದೆ. ಒಮ್ಮೆ ಈ ಆಪ್‌ನಲ್ಲಿ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದರೆ ಜಾಹಿರಾತು ಕಳುಹಿಸಬಹುದಾದ ಸಂಖ್ಯೆಗಳ ಪಟ್ಟಿಗೆ ನಿಮ್ಮ ಮೊಬೈಲ್‌ ಸಂಖ್ಯೆ ಸೇರ್ಪಡೆಯಾಗುವುದಿಲ್ಲ.

ನಿಮ್ಮ ಆಯ್ಕೆಯ ಜಾಹಿರಾತು

ನಿಮ್ಮ ಆಯ್ಕೆಯ ಜಾಹಿರಾತು

ಡಿಎನ್‌ಡಿ ಆಪ್‌ ಮೂಲಕ ಯಾವ ಬಗೆಯ ವಾಣಿಜ್ಯ ಜಾಹೀರಾತು, ಸಂಪರ್ಕವನ್ನು ನೀವು ಬಯಸುವುದಿಲ್ಲ ಎಂದು ಆಯ್ಕೆ ಮಾಡಬಹುದು. ಇದರಿಂದ ಟೆಲಿಕಾಂ ಕಂಪೆನಿಗಳು ನಿಮಗೆ ಕಳುಹಿಸುವ ಮೆಸೇಜ್‌ಗಳು ನಿಲ್ಲಲಿವೆ.ನಿಮ್ಮ ಆದ್ಯತೆಗಳನ್ನು ನಿಮಗೆ ಬೇಕಾದಾಗ ಇದನ್ನು ಬದಲಿಸುವ ಅವಕಾಶ ಕೂಡ ಇದೆ.

ದೂರು ದಾಖಲಿಸಬಹುದು.

ದೂರು ದಾಖಲಿಸಬಹುದು.

ಗ್ರಾಹಕರ ಕ್ಷೇಮಕ್ಕಾಗಿ ಬಂದಿರುವ ಈ ಆಪ್‌ ಮೂಲಕ ರಿಜಿಸ್ಟರ್ ಆಗಿದ್ದರೂ ಸಹ ನಿಮಗೆ ಕಿರಿ ಕಿರಿ ಕರೆ ಅಥವಾ ಎಸ್‌ಎಮ್‌ಎಸ್‌ಗಳು ಬಂದರೆ ಆ ಬಗ್ಗೆ ದೂರು ದಾಖಲಿಸಬಹುದು.ನೀವು ದೂರು ದಾಖಲಿಸಿದ ನಂತರ, ದೂರಿಗೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಹ ಟ್ರಾಯ್‌ನಿಂದ ಮಾಹಿತಿ ಸಿಗುತ್ತದೆ.

ಈಗ ಎಲ್ಲಾ ಬಳಕೆದಾರರಿಗೂ ಲಭ್ಯ.

ಈಗ ಎಲ್ಲಾ ಬಳಕೆದಾರರಿಗೂ ಲಭ್ಯ.

ಟ್ರಾಯ್ ಬಿಡುಗಡೆ ಮಾಡಿರುವ ಈ ಡಿಎನ್‌ಡಿ ಆಪ್‌ ಎಲ್ಲಾ ಆಂಡ್ರಾಯ್, ಆಪಲ್ ಮತ್ತು ವಿಂಡೋಸ್ ಬಳಕೆದಾರರಿಗೂ ಲಭ್ಯವಿದ್ದು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ಗೆ ಭೇಟಿ ನೀಡಿ ' ಡಿಎನ್‌ಡಿ ಸರ್ವಿಸ್' ಎಂದು ಸರ್ಚ್ ಮಾಡಿದರೆ ಈ ಆಪ್ ಸಿಗಲಿದೆ. ಇನ್ನು ಆಪಲ್ ಬಳಕೆದಾರರು ಆಪಲ್‌ನ ಆಪ್‌ ಸ್ಟೋರ್‌ ಮೂಲಕ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Best Mobiles in India

English summary
TRAI DND app now available on iPhones : Here's how to block spam messages and telemarketing calls. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X