ವಾಟ್ಸಪ್‌ ಸೇರಿರುವ ಈ ಕುತೂಹಲಕಾರಿ ಫೀಚರ್ಸ್ ಬಳಕೆ ಮಾಡಿದ್ದಿರಾ?

|

ವಿಶ್ವ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಮನ ಗೆದ್ದಿರುವ ಅತೀ ಜನಪ್ರಿಯ ಆಪ್‌ ಅಂದ್ರೆ ಅದು ವಾಟ್ಸಪ್‌ ಎನ್ನಬಹುದು. ವಾಟ್ಸಪ್ ಇನ್‌ಸ್ಟಂಟ್ ಮೆಸೆಂಜರ್ ಆಪ್ ತನ್ನ ಬಳಕೆದಾರರಿಗಾಗಿ ಹಲವು ಅಗತ್ಯ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. 2019ರಲ್ಲಿಯಂತೂ ವಾಟ್ಸಪ್ ಮತ್ತಷ್ಟು ಮಹತ್ತರ ಚಾಟ್ ಸುರಕ್ಷತಾ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿ ಅಚ್ಚರಿ ತಂದಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ 2019ರಲ್ಲಿ ಹಲವು ಹೊಸ ಫೀಚರ್ಸ್‌ಗಳು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ವಾಟ್ಸಪ್ ಸೇರಿರುವ ಆ ಹೊಸ ಫೀಚರ್ಸ್‌ಗಳಲ್ಲಿ ಬಹುತೇಕ ಫೀಚರ್ಸ್‌ಗಳು ಬಳಕೆದಾರರ ಖಾಸಗಿತನಕ್ಕೆ ಸುರಕ್ಷತೆ ಒದಗಿಸುವಲ್ಲಿ ಸಹಕಾರಿಯಾಗಿವೆ. ಇನ್ನು ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಒದಗಿಸಲಿವೆ. ಆದರೆ ಇನ್ನು ಅದೆಷ್ಟೋ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಇಲ್ಲ. ಹಾಗಾದರೇ 2019ರಲ್ಲಿ ವಾಟ್ಸಪ್ ಸೇರಿರುವ ಪ್ರಮುಖ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಡಿಯೊ ಪಿಕ್ಕರ್-(Audio picker feature)

ವಾಟ್ಸಪ್‌ನಲ್ಲಿ ಸೇರಿದ ಹೊಸ ಫೀಚರ್ಸ್‌ಗಳಲ್ಲಿ ಆಡೊಯೊ ಪಿಕ್ಕರ್ ಸಹ ಒಂದು. ಈ ಫೀಚರ್‌ನಲ್ಲಿ ಬಳಕೆದಾರರು ಒಂದೇ ಬಾರಿಗೆ ಸುಮಾರು 30 ಆಡಿಯೊ ಫೈಲ್‌ಗಳನ್ನು ಸೆಂಡ್ ಮಾಡಬಹುದಾಗಿದೆ. ಹಾಗೆಯೇ ಆಡಿಯೊ ಮತ್ತು ಇಮೇಜ್ ಪ್ರೀವ್ಯೂವ್ ಅವಕಾಶವನ್ನು ಸಹ ಈ ಫೀಚರ್‌ ಪಡೆದಿದೆ. ಇನ್ನು ವಾಟ್ಸಪ್ ಈ ಫೀಚರ್ ಅನ್ನು ಹೊಸ UI ನಲ್ಲಿ ಪರಿಚಯಿಸಿದ್ದು, ಅಪ್‌ಡೇಟ್ ವರ್ಷನ್‌ನಲ್ಲಿ ಸಿಗಲಿದೆ.

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ವಾಟ್ಸ್‌ಆಪ್ ಟೆಕ್ಸ್ಟ್‌ ಫಾರ್ಮ್ಯಾಟಿಂಗ್‌ನ್ನು ಬಹಿರಂಗವಾಗಿ ಅನುಮತಿಸುವುದಿಲ್ಲ. ಆದಾಗ್ಯೂ, ಬೋಲ್ಡ್‌ ಟೆಕ್ಸ್ಟ್‌, ಇಟಾಲಿಕ್ ಮತ್ತು ಸ್ಟ್ರೈಕ್‌ಥ್ರೂ ತರ ವಿಶೇಷ ಅಕ್ಷರಗಳನ್ನು ಬಳಸಲು ಇದು ಅನುಮತಿಸುತ್ತದೆ. ಈ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಬಳಸಲು, ನೀವು ಪಠ್ಯವನ್ನು ಈ ರೀತಿಯಲ್ಲಿ ಟೈಪ್ ಮಾಡಬೇಕಾಗುತ್ತದೆ: * ಬೋಲ್ಡ್‌ * , _ಇಟಾಲಿಕ್ಸ್_ , ~ ಸ್ಟ್ರೈಕ್‌ಥ್ರೂ ~. ನೀವು ಫಾರ್ಮ್ಯಾಟ್ ಮಾಡಲು ಬಯಸುವ ಪಠ್ಯದ ಪ್ರಾರಂಭ ಮತ್ತು ಅಂತ್ಯದಲ್ಲಿ ವಿಶೇಷ ಅಕ್ಷರಗಳನ್ನು ಟೈಪ್‌ ಮಾಡಬೇಕು.

ಡೇಟಾ ಮತ್ತು ಸಂಗ್ರಹಣೆ ಬಳಕೆ

ಡೇಟಾ ಮತ್ತು ಸಂಗ್ರಹಣೆ ಬಳಕೆ

ನಿಮ್ಮ ಡೇಟಾ ಬಳಕೆಯ ಬಗ್ಗೆ ನಿಗಾ ಇಡಲು ವಾಟ್ಸ್‌ಆಪ್ ನಿಮಗೆ ಅವಕಾಶ ನೀಡುತ್ತದೆ. ಈ ಬಳಕೆಯು ನೆಟ್‌ವರ್ಕ್ ಬಳಕೆ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ನ ಶೇಖರಣಾ ಬಳಕೆಯನ್ನೂ ಒಳಗೊಂಡಿದೆ. ನೀವು ಯಾವ ವ್ಯಕ್ತಿಯೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದೀರಿ ಅಥವಾ ಯಾರೊಂದಿಗೆ ನೀವು ಹೆಚ್ಚಿನ ಮೀಡಿಯಾ ಹಂಚಿಕೊಳ್ಳುತ್ತೀರಿ ಎಂಬುದನ್ನು ಪತ್ತೆಹಚ್ಚಲು ಇದನ್ನು ಬಳಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಸಂಗ್ರಹ ಸ್ಥಳವನ್ನು ನಿರ್ವಹಿಸಲು ಸಹ ಇದು ಸಹಾಯ ಮಾಡುತ್ತದೆ.

ಕಸ್ಟಮ್ ನೊಟಿಫಿಕೇಷನ್‌

ಕಸ್ಟಮ್ ನೊಟಿಫಿಕೇಷನ್‌

ಅಪ್ಲಿಕೇಶನ್‌ನ ಸೆಟ್ಟಿಂಗ್ಸ್‌ ಪುಟದಿಂದ ವಾಟ್ಸ್‌ಆಪ್ ಅಧಿಸೂಚನೆಗಳನ್ನು ನಿರ್ವಹಿಸುವುದು ಸುಲಭ. ಗುಂಪು ಮತ್ತು ವೈಯಕ್ತಿಕ ಅಧಿಸೂಚನೆಗಳಿಗಾಗಿ ವಿಭಿನ್ನ ಅಧಿಸೂಚನೆ ಟೋನ್‌ಗಳನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದಾಗ್ಯೂ, ನೀವು ಪ್ರತಿ ಚಾಟ್‌ಗೆ ಕಸ್ಟಮ್ ಟೋನ್‌ಗಳನ್ನು ಸಹ ಹೊಂದಿಸಬಹುದು.

ಪಿನ್ ಚಾಟ್‌ಗಳು

ಪಿನ್ ಚಾಟ್‌ಗಳು

ವಾಟ್ಸ್‌ಆಪ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ನಮ್ಮ ಕಾಂಟ್ಯಾಕ್ಟ್ ಲಿಸ್ಟ್‌ಗಳಿಂದ ಮತ್ತು ಇತರೆ ಹೊಸಬರಿಂದ ಅನೇಕ ಸಂದೇಶಗಳನ್ನು ಪಡೆಯುತ್ತೇವೆ. ಆದ್ರೆ ಅವುಗಳಲ್ಲಿ ನಾವು ವಾಟ್ ಮಾಡುವ ಲಿಸ್ಟ್‌ಲಿನಲ್ಲಿ ಕೆಲವರಿಗೆ ಮಾತ್ರ ಅಗ್ರಸ್ಥಾನ ನೀಡಿಲು ಬಯಸುತ್ತೆವೆ. ಅಂತಹವರ ಚಾಟ್‌ ಅನ್ನು ಪಿನ್ ಮಾಡುವ ಅವಕಾಶ ಸಹ ವಾಟ್ಸಪ್‌ನಲ್ಲಿ ಲಭ್ಯ ಇದೆ. ಪಿನ್ ಮಾಡುವುದರಿಂದ ನೇರವಾಗಿ ಅವರೊಂದಿಗೆ ಚಾಟ್ ಮಾಡಬಹುದಾಗಿದೆ.

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಸ್ಕ್ರೀನ್‌ಲಾಕ್‌ ಫೀಚರ್‌ ಬಳಕೆದಾರರ ಖಾತೆಗೆ ಪ್ರೈವೆಸಿ ಒದಗಿಸಲಿದ್ದು, ಬಳಕೆದಾರರು ಸ್ಕ್ರೀನ್‌ಲಾಕ್‌ ಫೀಚರ್‌ ಅನ್ನು ಸಕ್ರಿಯ ಮಾಡಿಕೊಳ್ಳಬೇಕು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಅನುಸರಿಸಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಸ್ಕ್ರಾಲ್‌ ಡೌನ್‌ ಮಾಡಿ > ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದು. ಇದರಲ್ಲಿ ಸ್ಕ್ರೀನ್‌ಲಾಕ್ ಆಗಲು ಮೂರು ಆಯ್ಕೆಗಳು ಕಾಣಿಸುತ್ತವೆ.(ತಕ್ಷಣ, ಒಂದು ನಿಮಿಷ, ನಿಮಿಷ).

ಸ್ಟೇಟಸ್‌ ಶೇರ್

ಸ್ಟೇಟಸ್‌ ಶೇರ್

ವಾಟ್ಸಪ್‌ ಪರಿಚಯಿಸಿದ್ದ 24 ಗಂಟೆಯ ಅವಧಿಯ ಸ್ಟೇಟಸ್‌ ಇಡುವ ಆಯ್ಕೆಯು ಸಖತ ಜನಪ್ರಿಯವಾಗಿದ್ದು, ಹಾಗೆಯೇ ಸ್ಟೇಟಸ್‌ ಅನ್ನು ಶೇರ್‌ ಮಾಡುವ ಹೊಸ ಆಯ್ಕೆಯನ್ನು ಸೇರಿಕೊಂಡಿದೆ. ಹೀಗಾಗಿ ಈಗ ಬಳಕೆದಾರರು ವಾಟ್ಸಪ್‌ಗೆ ಇಡುವ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಫೇಸ್‌ಬುಕ್‌ ಸಂಸ್ಥೆಯ ಇತರೆ ಯಾವುದೇ ಆಪ್ಸ್‌ಗಳಿಗೆ ನೇರವಾಗಿ ಶೇರ್‌ ಮಾಡುವ ಅವಕಾಶವನ್ನು ಈ ಫೀಚರ್‌ ಮಾಡಿಕೊಡಲಿದೆ.

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಬಳಕೆದಾರರು ವಾಟ್ಸಪ್‌ ಗ್ರೂಪ್‌ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಗ್ರೂಪ್ಸ್‌.

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌

ವಾಟ್ಸಪ್‌ನಲ್ಲಿ ಹೊಸ 'ಹೈಡ್‌ ಮ್ಯೂಟೆಡ್‌ ಸ್ಟೇಟಸ್‌' ಆಯ್ಕೆಯು ಆಂಡ್ರಾಯ್ಡ್‌ ಬೇಟಾ ವರ್ಷನ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೀಚರ್ ಆಯ್ದ ಕಾಂಟ್ಯಾಕ್ಟ್ ನಂಬರ್‌ಗೆ ವಾಟ್ಸಪ್‌ ಸ್ಟೇಟಸ್‌ ಕಾಣದಂತೆ ಮಾಡಲು ನೆರವಾಗಲಿದೆ. ಹೊಸದಾಗಿ ಹೈಡ್‌ ಬಟನ ಸೇರಲಿದ್ದು, ಅದನ್ನು ಒತ್ತಿದಾಗ ಮ್ಯೂಟ್‌ ಮಾಡಿದ ಸ್ಟೇಟಸ್‌ಗಳೆಲ್ಲವು ಅಳಸಿ ಹೋಗುತ್ತವೆ. ಹಾಗೆಯೇ ಶೋ ಬಟನ್ ಆಯ್ಕೆಯು ಮತ್ತೆ ಎಲ್ಲವು ಕಾಣಿಸಿಕೊಳ್ಳಲಿವೆ.

ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್

ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್

ವದಂತಿ ಸುದ್ದಿಗಳನ್ನು ತಡೆಯಲು ವಾಟ್ಸಪ್‌ ಈ ಫೀಚರ್ ಅನ್ನು ಪರಿಚಯಿಸಿದ್ದು, ಹೆಚ್ಚು ಬಾರಿ ಫಾರ್ವರ್ಡ್‌ ಆಗುವ ಮೆಸೆಜ್‌ ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್ ಲೆಬಲ್ ಬೀಳುತ್ತದೆ. ಈ ರೀತಿ ಲೆಬಲ್ ಇದ್ದರೇ ಅದು ಅಧಿಕ ಬಾರಿ ಫಾರ್ವರ್ಡ್‌ ಆಗಿರುವ ಮೆಸೆಜ್‌ ಎಂದು ಬಳಕೆದಾರರು ತಿಳಿಯಬೇಕು. ಒಂದು ಮೆಸೆಜ್‌ ಅನ್ನು ಒಂದೇ ಬಾರಿ ಕೇವಲ ಐದು ಚಾಟ್ಸ್‌ಗಳಿಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿದೆ.

ಗ್ರೂಪ್‌ ಕಾಲಿಂಗ್‌

ಗ್ರೂಪ್‌ ಕಾಲಿಂಗ್‌

ವಾಟ್ಸಪ್‌ ವಿಡಿಯೊ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಪರಿಚಯಿಸಿದೆ. ಹಾಗೆಯೇ ವಾಟ್ಸಪ್‌ ಗ್ರೂಪ್ ಚಾಟ್‌ನಲ್ಲಿ ಗ್ರೂಪ್‌ ಕಾಲಿಂಗ್ ಫೀಚರ್‌ ಅನ್ನು ನೀಡಿದ್ದು, ಗ್ರೂಪ್‌ ಸದಸ್ಯರೊಂದಿಗೆ ಕರೆ ಕನೆಕ್ಟ್ ಮಾಡಬಹುದಾಗಿದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಕರೆಯ ಬಟನ್ ಒತ್ತಿ, ನಂತರ ಸದಸ್ಯರನ್ನು ಆಡ್‌ ಮಾಡುವ ಮೂಲಕ ಗ್ರೂಪ್‌ ಕಾಲಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಪ್ರತ್ಯೇಕ ರಿಪ್ಲೇ ಆಯ್ಕೆ

ಪ್ರತ್ಯೇಕ ರಿಪ್ಲೇ ಆಯ್ಕೆ

ವಾಟ್ಸಪ್‌ನಲ್ಲಿ ಗ್ರೂಪ್‌ಗಳ ಚಾಟಿಂಗ್‌ಗೆ ಅವಕಾಶ ಇದ್ದು, ಗ್ರೂಪ್‌ಗಳಲ್ಲಿರುವ ಸದಸ್ಯರುಗಳಿಗೆ ಪ್ರತ್ಯೇಕವಾಗಿ ಮೆಸೆಜ್ ಮಾಡುವ ಸೌಲಭ್ಯವನ್ನು ವಾಟ್ಸಪ್‌ ಪರಿಚಯಿಸಿದೆ. ಅದಕ್ಕಾಗಿ ರಿಪ್ಲೇ ಪ್ರೈವೆಟ್ಲಿ ಆಯ್ಕೆಯನ್ನು ನೀಡಿದೆ. ಗ್ರೂಪ್‌ ಚಾಟ್‌ ಸೆಟ್ಟಿಂಗ್‌ನಲ್ಲಿ ಈ ಆಯ್ಕೆ ಲಭ್ಯವಾಗಲಿದೆ. ಕಳೆದ ವರ್ಷ ಅಂತ್ಯದ ಮೇಳೆ ಈ ಫೀಚರ್ಸ್‌ ಆಂಡ್ರಾಯ್ಡ್‌ ವರ್ಷನ್ ಸೇರಿದೆ.

ಡಾರ್ಕ್‌ ಮೋಡ್‌

ಡಾರ್ಕ್‌ ಮೋಡ್‌

ವಾಟ್ಸಪ್‌ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 'ಡಾರ್ಕ್‌ ಮೋಡ್‌' ಫೀಚರ್ ಆಯ್ಕೆ ವಾಟ್ಸಪ್‌ ಬೀಟಾ ಆವೃತ್ತಿಯನ್ನು ಸೇರಿಕೊಂಡಿದೆ. ರಾತ್ರಿ ಸಮಯದಲ್ಲಿ ಫೋನ್‌ ಡಿಸ್‌ಪ್ಲೇಯ ಬೆಳಕಿನ ಪ್ರಖರತೆಯನ್ನು ತಗ್ಗಿಸಲು ಈ ಫೀಚರ್ ಹೆಚ್ಚು ಪರಿಣಾಮಕಾರಿ ಎನ್ನುವುದು ನಿಮಗೆಲ್ಲಾ ತಿಳಿದೆ ಇದೆ. ಬಹುತೇಕ ಆಪ್‌ಗಳಲ್ಲಿ ಈಗಾಗಲೇ ಈ ಫೀಚರ್‌ ಚಾಲ್ತಿಯಲ್ಲಿದ್ದು, ವಾಟ್ಸಪ್‌ ಸಹ ಸ್ವಲ್ಪ ಬದಲಾವಣೆಗಳೊಂದಿಗೆ ಡಾರ್ಕ್‌ ಮೋಡ್‌ ಆಯ್ಕೆ ಬೀಟಾ ವರ್ಷನ್‌ನಲ್ಲಿ ನೀಡಿದೆ.

ಪಿಕ್ಚರ್-ಇನ್-ಪಿಕ್ಚರ್ ಫೀಚರ್

ಪಿಕ್ಚರ್-ಇನ್-ಪಿಕ್ಚರ್ ಫೀಚರ್

ಪ್ರಸ್ತುತ ಈ ಫೀಚರ್ ಆಂಡ್ರಾಯ್ಡ್ ಆವೃತ್ತಿ 2.19.177 ವಾಟ್ಸಾಪ್ ಬೀಟಾದಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಸಂಸ್ಥೆಯು ಆಂಡ್ರಾಯ್ಡ್‌ಗಾಗಿ ಪಿಕ್ಚರ್-ಇನ್-ಪಿಕ್ಚರ್ (ಪಿಐಪಿ) ಮೋಡ್‌ನ ನವೀಕರಿಸಿದ ಆವೃತ್ತಿಯು ಚಾಟ್‌ಗಳನ್ನು ಬದಲಾಯಿಸಿದ ನಂತರವೂ ಹಿನ್ನೆಲೆಯಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಸ್ಟ್ರೀಮ್‌ ಮಾಡಬಹುದಾದ ವೀಡಿಯೊಗಳೊಂದಿಗೆ ಹೋಸ್ಟ್ ಮಾಡುತ್ತದೆ.

ವಾಯಿಸ್‌ ಮೆಸೆಜ್ ಆಟೋ ಪ್ಲೇ

ವಾಯಿಸ್‌ ಮೆಸೆಜ್ ಆಟೋ ಪ್ಲೇ

ಬಳಕೆದಾರರು ಮೆಸೆಜ್‌ ಮಾಡುತ್ತಿರುವಾಗ ಬರುವ ವಾಯಿಸ್‌ ಮೆಸೆಜ್‌ಗಳನ್ನು ಕೇಳಲು ಪ್ಲೇ ಬಟನ್ ಪ್ರೆಸ್‌ ಮಾಡುವ ಅವಶ್ಯಕತೆ ಇರುವುದಿಲ್ಲ, ಬಂದಿರುವ ವಾಯಿಸ್‌ ಮೆಸ್‌ಜಗಳು ಆಟೋಮ್ಯಾಟಿಕ್ ಆಗಿ ಪ್ಲೇ ಆಗುತ್ತದೆ ನೀವು ಕೇಳಿ ರಿಪ್ಲೇ ಮಾಡಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ವಾಯಿಸ್‌ ಮೆಸೆಜ್‌ಗಳು ಬಂದರೇ, ಪ್ರತಿಯೊಂದಕ್ಕೂ ಪ್ಲೇ ಬಟನ್ ಒತ್ತುವ ಅಗತ್ಯ ಇರುವುದಿಲ್ಲ, ಬದಲಾಗಿ ಅವುಗಳು ಕಾಲನುಕ್ರಮದಲ್ಲಿ ಆಟೋಮ್ಯಾಟಿಕ್‌ ಆಗಿ ಪ್ಲೇ ಆಗುತ್ತವೆ. ಸದ್ಯ ವಾಟ್ಸಪ್‌ ಬೀಟಾ ಆವೃತ್ತಿಯಲ್ಲಿ ಲಭ್ಯವಾಗಿದೆ.

ಬ್ಲಾಕ್‌ ಸೌಲಭ್ಯ

ಬ್ಲಾಕ್‌ ಸೌಲಭ್ಯ

ಕಾಂಟ್ಯಾಕ್ಟ್‌ನಲ್ಲಿ ಇಲ್ಲದ ಅಥವಾ ಅಪರಿಚಿತರ ಮೆಸೆಜ್‌ಗಳ ಕಿರಿಕಿರಿ ತಪ್ಪಿಸಲು ವಾಟ್ಸಪ್‌ನಲ್ಲಿ ಬ್ಲಾಕ್‌ ಫೀಚರ್‌ ನೀಡಿಲಾಗಿದೆ. ಅಂತಹ ಕಾಂಟ್ಯಾಕ್ಟ್‌ಗಳನ್ನು ಬಳಕೆದಾರರು ಬ್ಲಾಕ್‌ ಮಾಡಬಹುದಾಗಿದೆ. ಬ್ಲಾಕ್‌ ಮಾಡಿದ ಕಾಂಟ್ಯಾಕ್ಟ್‌ಗಳಿಗೆ ನಿಮ್ಮ ಪ್ರೋಫೈಲ್‌ ಫೋಟೊ, ಸ್ಟೇಟಸ್ ಕಾಣಿಸುವುದಿಲ್ಲ ಮತ್ತು ಅವರು ನಿಮಗೆ ಮೆಸೆಜ್ ಕಳುಹಿಸಲು ಆಗದು.

ವಾಟ್ಸಪ್ ಬ್ಲೂ ಟಿಕ್ ಮಾರ್ಕ್ ಆಫ್‌ ಮಾಡಿ

ವಾಟ್ಸಪ್ ಬ್ಲೂ ಟಿಕ್ ಮಾರ್ಕ್ ಆಫ್‌ ಮಾಡಿ

ವಾಟ್ಸಪ್‌ನಲ್ಲಿ ಮೆಸೆಜ್ ಕಳುಹಿಸಿದ ಮೇಲೆ ಎರಡು ಪಾಸ್ ಮಾರ್ಕ್ ಕಾಣಿಸುತ್ತವೆ. ಅವುಗಳು ಬಿಳಿ ಬಣ್ಣದಲ್ಲಿದ್ದರೇ ಮೆಸೆಜ್ ಅವರಿಗೆ ತಲುಪಿದೆ ಎಂದರ್ಥ. ಅದೇ ಅವುಗಳು ಬ್ಲೂ ಬಣ್ಣಗಳಾದರೇ ಅವರು ಆ ಮೆಸೆಜ್ ನೋಡಿದ್ದಾರೆ ಎಂದರ್ಥ. ಆದರೆ ಈ ಬ್ಲೂ ಟಿಕ್ ಮಾರ್ಕ್ ಬೇಕಿದ್ದರೇ ಆಪ್ ಮಾಡಿಕೊಳ್ಳಬಹುದಾದ ಆಯ್ಕೆ ವಾಟ್ಸಪ್‌ನಲ್ಲಿ ಲಭ್ಯ ಇದೆ. ಆಫ್‌ ಮಾಡಿದರೇ ಬಳಕೆದಾರ ಮೆಸೆಜ್ ನೋಡಿದರೂ ಕಳುಹಿಸಿದವರಿಗೆ ಬ್ಲೂ ಬಣ್ಣದಲ್ಲಿ ಕಾಣಿಸುವುದಿಲ್ಲ.

ವಾಟ್ಸಪ್ ಕಾಂಟ್ಯಾಕ್ಟ್‌ ರಾಂಕ್‌(Ranking)

ವಾಟ್ಸಪ್ ಕಾಂಟ್ಯಾಕ್ಟ್‌ ರಾಂಕ್‌(Ranking)

ವಾಟ್ಸಪ್ ಮೆಸೆಜಿಂಗ್ ಆಪ್‌ನಲ್ಲಿ ಬಳಕೆದಾರರು ಪ್ರತಿನಿತ್ಯ ಅನೇಕರೊಂದಿಗೆ ಚಾಟ್‌ ಮಾಡುತ್ತಿರುತ್ತಾರೆ, ಆದರೆ ಇನ್ಮುಂದೆ ಹೆಚ್ಚಾಗಿ ಚಾಟ್‌ ಮಾಡುವ ಕಾಂಟ್ಯಾಕ್ಟ್‌ಗಳಿಗೆ ವಾಟ್ಸಪ್‌ ಆಟೋಮ್ಯಾಟಿಕ್ ಆಗಿ ರಾಂಕಿಂಗ್ ಮಾಡುತ್ತದೆ. ರಾಂಕಿಂಗ್ ಆಗುವ ವಾಟ್ಸಪ್‌ ಕಾಂಟ್ಯಾಕ್ಟ್‌ಗಳು ಯಾವಾಗಲೂ ಚಾಟ್‌ ಲಿಸ್ಟ್‌ನಲ್ಲಿ ಮೊದಲಿನಲ್ಲೇ ಕಾಣಿಸಿಕೊಳ್ಳುತ್ತವೆ. ಈ ಫೀಚರ್‌ ಹೆಚ್ಚು ಉಪಯುಕ್ತ ಎನಿಸುವುದಂತು ಸುಳ್ಳಲ್ಲ ಬಿಡಿ.

ಆಟೋಮ್ಯಾಟಿಕ್ ರಿಪ್ಲೇ

ಆಟೋಮ್ಯಾಟಿಕ್ ರಿಪ್ಲೇ

ವಾಟ್ಸಪ್‌ನಲ್ಲಿ ಸೇರಿಕೊಳ್ಳಲಿರುವ ಮತ್ತೊಂದು ಮಹತ್ತರ ಫೀಚರ್‌ ಇದಾಗಿದ್ದು, ಇದರಲ್ಲಿ ಆಟೋಮ್ಯಾಟಿಕ್ ಆಗಿ ರಿಪ್ಲೇ ಕಳುಹಿಸುವ ಸೌಲಭ್ಯವು ಸೇರಲಿದೆ. ರಿಪ್ಲೇ ಮಾಡಲಾಗದೇ ಇದ್ದಾಗ ಈ ಆಯ್ಕೆಯನ್ನು ಬಳಸಬಹುದಾಗಿದೆ. ಅದಕ್ಕಾಗಿ ಆನ್‌ ಮೋಡ್‌ ಮಾಡಿಡಬೇಕು ಆಗ ಬರುವ ಮಸೆಜ್‌ಗಳಿಗೆ ಆಟೋಮ್ಯಾಟಿಕ್ ಆಗಿ ರೆಪ್ಲೇ ಹೋಗುತ್ತದೆ. ಈ ಆಯ್ಕೆ ಆನ್‌ ಇದ್ದರೇ ಮಾತ್ರ ಬಳಕೆದಾರರು ಈ ಫೀಚರ್‌ ಸೌಲಭ್ಯ ಪಡೆಯಬಹುದು.

ಬ್ಲಾಕಿಂಗ್ ಸ್ಕ್ರೀನ್‌ಶಾಟ್‌

ಬ್ಲಾಕಿಂಗ್ ಸ್ಕ್ರೀನ್‌ಶಾಟ್‌

ವಾಟ್ಸಪ್‌ನಲ್ಲಿ, ಮಸೆಜ್‌ ಮಾಡುವಾಗ ಇತರರ ಜೊತೆ ಚಾಟ್‌ ಮಾಡಿದ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಲು ಬರದಂತೆ ತಡೆಯುವ ಫೀಚರ್ಸ್‌ಒಂದು ಸೇರಲಿದೆ. ಈ ಆಯ್ಕೆಯಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವ ಅವಕಾಶಕ್ಕೆ ಕೋಕ್‌ ಬೀಳಲಿದೆ. ಇತರರ ಚಾಟ್‌ಗಳನ್ನು ಸ್ಕ್ರೀನ್‌ಶಾಟ್‌ ತೆಗೆದು, ಅದನ್ನು ದುರುಪಯೋಗ ಬಯಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸ್ಕ್ರೀನ್‌ಶಾಟ್‌ ಆಯ್ಕೆ ಬ್ಲಾಕ್‌ ಆಗಲಿದೆ.

ಬರ್ತ್‌ಡೇ ನೋಟಿಫಿಕೇಶನ್

ಬರ್ತ್‌ಡೇ ನೋಟಿಫಿಕೇಶನ್

ಫೇಸ್‌ಬುಕ್‌ನಲ್ಲಿ ಪ್ರತಿದಿನ ಬರ್ತ್‌ಡೇ ನೋಟಿಫಿಕೇಶನ್‌ಗಳು ಬರುತ್ತವೆ. ಇದೇ ರೀತಿ ವಾಟ್ಸಪ್‌ನಲ್ಲಿಯೂ ಬರ್ತ್‌ಡೇ ನೋಟಿಫಿಕೇಶನ್ ಫೀಚರ್‌ ಸೇರಲಿದೆ. ವಾಟ್ಸಪ್‌ ಲಿಸ್ಟ್‌ನಲ್ಲಿರುವ ಯಾರಾದರೂ ಸ್ನೇಹಿತರ ಬರ್ತ್‌ಡೇ ಇದ್ದರೇ ಆ ಕುರಿತು ನೋಟಿಫೀಕೇಶನ್ ಲಭ್ಯವಾಗಲಿದೆ. ಆದರೆ ವಾಟ್ಸಪ್‌ ಬಳಕೆದಾರರ ಸುರಕ್ಷತೆಯ ದೃಷ್ಠಿಯಿಂದ ಈ ಫೀಚರ್‌ಗೆ ಹಿನ್ನಡೆ ಎನಿಸಲಿದೆ ಎನ್ನಲಾಗಿದೆ.

ಆಟೋ ಡಿಲೀಟ್

ಆಟೋ ಡಿಲೀಟ್

ವಾಟ್ಸಪ್‌ನಲ್ಲಿ ಮೆಸೆಜ್‌ಗಳು ಹಳೆಯದಾದಂತೆ ತನ್ನಿಂದ ತಾನೆ ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗುವ ಸೌಲಭ್ಯದ ಫೀಚರ್ ಅನ್ನು ವಾಟ್ಸಪ್‌ ಅಳವಡಿಸಿಕೊಳ್ಳಲಿದೆ. ಈ ಫೀಚರ್‌ನ ಪ್ರಯೋಜನವೆಂದರೇ ಚಾಟ್‌ ಮಾಡಿದ ಮೆಸೆಜ್‌ಗಳು ಒಂದು ನಿಗದಿತ ಅವಧಿಯವರೆಗೂ ಇರುತ್ತವೆ ಆಮೇಲೆ ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತವೆ.

ಆಂಡ್ರಾಯ್ಡ್‌ ಮೋಡ್‌

ಆಂಡ್ರಾಯ್ಡ್‌ ಮೋಡ್‌

ವಾಟ್ಸಪ್‌ನಲ್ಲಿ ಲಾಸ್ಟ್‌ ಸೀನ್‌ ಮಾಹಿತಿಯನ್ನು ಮರೆಮಾಡುವ ಆಯ್ಕೆಯನ್ನು ಮತ್ತು ಮೆಸೆಜ್‌ಗಳನ್ನು ನೋಡಿದ ನಂತರ ಎರಡು ಪಾಸ್‌ ಮಾರ್ಕ್‌ಗಳು ಬ್ಲೂ ಬಣ್ಣಕ್ಕೆ ತಿರುಗಿಕೊಳ್ಳುವ ಆಯ್ಕೆಗಳನ್ನು ಈಗಾಗಲೇ ನೀಡಿದೆ. ಆದರೆ ಈಗ ವಾಟ್ಸಪ್‌ನಲ್ಲಿ ಆನ್‌ಲೈನ್‌ ಇರುವುದು ಇತರರಿಗೆ ಕಾಣಿಸುವುದಿಲ್ಲ ಮತ್ತು ಮೆಸೆಜ್‌ಗಳನ್ನು ಓದಿರರೂ ಅವರಿಗೆ ಆನ್‌ಲೈನ್‌ನಲ್ಲಿ ಇರುವ ಮಾಹಿತಿ ಹೋಗುವುದಿಲ್ಲ.

ಸ್ಪ್ಲಾಶ್ ಪರದೆ

ಸ್ಪ್ಲಾಶ್ ಪರದೆ

ನೀವು ಅಪ್ಲಿಕೇಶನ್‌ನ್ನು ಮೊದಲ ಬಾರಿಗೆ ಪ್ರಾರಂಭಿಸಿದಾಗ ವಾಟ್ಸ್‌ಆಪ್‌ ಲೋಗೋ ಕಾಣಿಸಿಕೊಳ್ಳುತ್ತದೆ. ಇದು ಇತ್ತೀಚಿನ ಅಪ್‌ಡೇಟ್‌ನಲ್ಲಿ ಸ್ಪ್ಲಾಶ್ ಸ್ಕ್ರೀನ್ ವೈಶಿಷ್ಟ್ಯ ಸೇರಿಸಿದ ನಂತರ ಕಾಣುತ್ತಿದೆ. ಡಾರ್ಕ್ ಮೋಡ್‌ನಲ್ಲಿ ವಾಟ್ಸ್‌ಆಪ್‌ ಲೋಗೋ ವಿಭಿನ್ನವಾಗಿ ಕಾಣಿಸುತ್ತದೆ. ಸ್ಪ್ಲಾಶ್‌ ಸ್ಕ್ರೀನ್ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ.

ಪ್ರೊಫೈಲ್ ಗೆ ಕ್ಯೂಆರ್ ಕೋಡ್

ಪ್ರೊಫೈಲ್ ಗೆ ಕ್ಯೂಆರ್ ಕೋಡ್

ಈ ಫೀಚರ್ ಬಳಕೆದಾರರಿಗೆ ಲಭ್ಯವಾದ ಮೇಲೆ ಯಾರಿಗಾದರೂ ಪ್ರೊಫೈಲ್ ನೇವಿಗೇಟ್ ಮಾಡಬೇಕಿದ್ದರೆ ಕೇವಲ ಕ್ಯೂಆರ್ ಕೋಡ್ ತೋರಿಸಿದರೂ ಸಾಕು ಮತ್ತು ವಾಟ್ಸ್ ಆಪ್ ಅಕೌಂಟಿಗೆ ಸಂಬಂಧಿಸಿದ ಮೊಬೈಲ್ ನಂಬರ್ ಸಾಕು. ಇದು ತಮ್ಮ ಸ್ನೇಹಿತರಿಗೆ ಕಾಂಟ್ಯಾಕ್ಟ್ ಡೀಟೇಲ್ ಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಒಂದು ವೇಳೆ ತಮ್ಮ ಕ್ಯೂಆರ್ ಕೋಡ್ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ಹಂಚಿಕೆಯಾಗಿ ಬೇಡದ ಮನವಿಗಳು ಬರುತ್ತಿದ್ದರೆ ಅದನ್ನು ಕೂಡಲೇ ಅಥವಾ ಯಾವುದೇ ಸಂದರ್ಬದಲ್ಲಿ ರಿವೋಕ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಪ್ರೊಫೈಲ್‌ ಪಿಕ್ಚರ್ ಸೇವ್

ಪ್ರೊಫೈಲ್‌ ಪಿಕ್ಚರ್ ಸೇವ್

ಯಾವುದೇ ವಾಟ್ಸ್‌ಆಪ್‌ ಪ್ರೊಫೈಲ್‌ ಪಿಕ್ಚರ್ ಅನ್ನು ಕಾಪಿ ಮಾಡುವ ಅಥವಾ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳುವ ಮತ್ತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಆಯ್ಕೆ ಸದ್ಯಕ್ಕಿದೆ. ಆದರೆ, ಇತ್ತೀಚಿನ ಆಂಡ್ರಾಯ್ಡ್ ಬೇಟಾ ಅಪ್‌ಡೇಟ್‌ನಲ್ಲಿ ಈ ಆಯ್ಕೆಯನ್ನು ಕೈಬಿಡಲಾಗಿದೆ. ಆದರೆ, ಗ್ರೂಪ್‌ನಲ್ಲಿ ಮಾತ್ರ ಈ ಆಯ್ಕೆ ಲಭ್ಯವಿರಲಿದೆ.

ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!

ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!

ಸುಮಾರು 1.5 ಮಿಲಿಯನ್‌ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್‌', ಈಗಾಗಲೇ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರ ಹಾಟ್‌ ಫೇವರೇಟ್‌ ಆಗಿದೆ. ಅದೆ ರೀತಿ ಸಂಸ್ಥೆಯು ಸಹ ತನ್ನ ಬಳಕೆದಾರರ ಪ್ರೈವೆಸಿ ಸುರಕ್ಷತೆಗಾಗಿ ಸತತ ಹೊಸ ಫೀಚರ್ಸ್‌ಗಳನ್ನು ಅಪ್‌ಡೇಟ್‌ ವರ್ಷನ್‌ನಲ್ಲಿ ಅಳವಡಿಸಿಕೊಳ್ಳುತ್ತಲೆ ಸಾಗಿದೆ. ಹಾಗೆಯೇ ವಾಟ್ಸಪ್‌ನಲ್ಲಿ ಬಳಕೆದಾರರಿಗೆ ಅಚ್ಚರಿ ಮೂಡಿಸುವ ಕೆಲವು ಫೀಚರ್ಸ್‌ಗಳು ಇವೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಆಪ್‌ನಲ್ಲಿ ಹಲವು ಬಳಕೆದಾರರ ಸ್ನೇಹಿ ಫೀಚರ್ಸ್‌ಗಳಿದ್ದು, ಅವುಗಳ ನಡುವೆ ಇನ್ನಷ್ಟು ಉಪಯುಕ್ತ ಫೀಚರ್ಸ್‌ಗಳು ಸಹ ಇವೆ. ಆದ್ರೆ ಆ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ಹೆಚ್ಚಾಗಿ ತಿಳಿದಿಲ್ಲ. ಬದಲಾಗಿ ಅವು ವಾಟ್ಸಪ್‌ ಟ್ರಿಕ್ಸ್ ಎಂದು ಗುರುತಿಸಿಕೊಂಡಿದ್ದು, ಬಳಕೆದಾರರು ಫಾಂಟ್‌ ಬದಲಿಸಬಹುದು, ಮೆಸೆಜ್ ಅನ್‌ರಿಡ್‌ ಮಾಡಬಹುದು, ವಾಟ್ಸಪ್ ತೆರೆಯದೆ ಮೆಸೆಜ್ ರೀಡ್‌ ಮಾಡಬಹುದಾದ ಆಯ್ಕೆಗಳಿವೆ. ಹಾಗಾದರೇ ವಾಟ್ಸಪ್‌ ಆಪ್‌ನಲ್ಲಿರುವ ಆ ಟಿಕ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಮಾರ್ಕ್‌ ಚಾಟ್‌ ಅನ್‌ರೀಡ್ ಆಯ್ಕೆ

ಮಾರ್ಕ್‌ ಚಾಟ್‌ ಅನ್‌ರೀಡ್ ಆಯ್ಕೆ

ವಾಟ್ಸಪ್‌ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದ್ದು, ಹೀಗಾಗಿ ವಾಟ್ಸಪ್‌ಗೆ ಹೆಚ್ಚಿನ ಮೆಸೆಜ್‌ಗಳು ಸಾಮಾನ್ಯ. ಕೆಲವೊಮ್ಮೆ ನೀವು ಮೆಸೆಜ್‌ ನೋಡಿರುತ್ತಿರಿ ಆದರೆ, ಗಡಿಬಿಡಿಯಲ್ಲಿ ಮೆಸೆಜ್‌ಗೆ ಪ್ರಿತಿಕ್ರಿಯಿಸುವುದನ್ನು ಮರೆತಿರುತ್ತಿರಿ. ಇಂಥ ಸಮಯದಲ್ಲಿ ಮಾರ್ಕ್‌ ಚಾಟ್‌ ಅನ್‌ರೀಡ್ ಆಯ್ಕೆ ಉಪಯುಕ್ತ ಎನಿಸಲಿದ್ದು, ಈ ಆಯ್ಕೆಯಲ್ಲಿ ನೀವು ಮೆಸೆಜ್ ನೋಡಿದರೂ ಸೆಂಡ್‌ ಮಾಡಿದವರಿಗೆ ನೀವಿನ್ನೂ ಮೆಸೆಜ್ ನೋಡಿಲ್ಲ ಎಂದು ಸೂಚಿಸುತ್ತದೆ. ಈ ಆಯ್ಕೆ ಸೆಟ್‌ ಮಾಡಲು ಆಂಡ್ರಾಯ್ಡ್‌ ಬಳಕೆದಾರರು ಹೀಗೆ ಮಾಡಿ - ಬೇಕಾದ ಕಾಂಟ್ಯಾಕ್ಟ್‌ ಅನ್ನು ಒತ್ತಿ ಹಿಡಿಯಿರಿ, ಆನಂತರ ಮೆನು ಲಿಸ್ಟ್‌ನಲ್ಲಿ ಅನ್‌ರೀಡ್‌ ಐಕಾನ್ ಸೆಲೆಕ್ಟ್ ಮಾಡಿ.

ಟೈಪ್‌ ಮಾಡದೇ ಮೆಸೆಜ್ ಸೆಂಡ್ ಮಾಡಿ

ಟೈಪ್‌ ಮಾಡದೇ ಮೆಸೆಜ್ ಸೆಂಡ್ ಮಾಡಿ

ವಾಟ್ಸಪ್‌ನಲ್ಲಿ ಟೈಪ್ ಮಾಡದೇ ಮೆಸೆಜ್ ಸೆಂಡ್ ಮಾಡಬಹುದಾಗಿದ್ದು, ಆದ್ರೆ ಅದಕ್ಕಾಗಿ ಕಂಪೆನಿ ಯಾವುದೇ ಫೀಚರ್ ನೀಡಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ 'ಸಿರಿ' ಮತ್ತು 'ಗೂಗಲ್ ಅಸಿಸ್ಟಂಟ್' ವಾಯಿಸ್‌ ಅಸಿಸ್ಟಂಟ್‌ಗಳನ್ನು ಬಳಸುವ ಮೂಲಕ ವರ್ಬಲ ಕಮಾಂಡ್ ನೀಡಬಹುದು. ಹೀಗಾಗಿ ವಾಯಿಸ್‌ ಅಸಿಸ್ಟಂಟ್ ಸೇವೆ ಬಳಸಿದರೇ ಮೆಸೆಜ್ ಟೈಪ್ ಮಾಡುವ ಅಗತ್ಯ ಇರುವುದಿಲ್ಲ.

ಚಾಟ್‌ ಫಾಂಟ್‌ ಬದಲಿಸಬಹುದು

ಚಾಟ್‌ ಫಾಂಟ್‌ ಬದಲಿಸಬಹುದು

ವಾಟ್ಸಪ್‌ನಲ್ಲಿ ಕಳುಹಿಸುವ ಮತ್ತು ಸ್ವೀಕರಿಸುವ ಮೆಸೆಜ್‌ಗಳ ಫಾಂಟ್‌ಗಳು ನಾರ್ಮಲ್ ಆಗಿರುತ್ತವೆ. ಆದ್ರೆ ಮೆಸೆಜ್ ಟೈಪ್ ಮಾಡುವಾಗ ನೀವು ಫಾಂಟ್ ಅನ್ನು ಇಟಲಿಕ್ ಮತ್ತು ದಪ್ಪ ಅಕ್ಷರಗಳ ರೂಪಕ್ಕೆ ಬದಲಿಸುವ ಅವಕಾಶವಿದೆ. ಮೆಸೆಜ್ ಟೈಪ್ ಮಾಡುವಾಗ ಮೊದಲಿಗೆ ಮತ್ತು ಕೊನೆಗೆ asterisk ಸ್ಟಾರ್ ಚಿಹ್ನೆ ಬಳಸಿ ಅಕ್ಷರಗಳು ದಕ್ಷವಾಗಿ ಕಾಣಿಸುತ್ತವೆ. ಹಾಗೆಯೇ underscore ಚಿಹ್ನೆ ಬಳಸಿದರೇ ಅಕ್ಷರಗಳಿ ಇಟಾಲಿಯನ್ ಫಾಂಟ್‌ ರೂಪದಲ್ಲಿ ಕಾಣಿಸುತ್ತವೆ.

ಮೆಮೊರಿ ಸ್ಟೋರೇಜ್ ಫುಲ್‌ ಮಾಹಿತಿ

ಮೆಮೊರಿ ಸ್ಟೋರೇಜ್ ಫುಲ್‌ ಮಾಹಿತಿ

ಮೀಡಿಯಾ ಫೈಲ್‌ ಸೆಂಡ್ ಮಾಡಲು ವಾಟ್ಸಪ್ ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಒದಗಿಸಿದ್ದು, ಎಷ್ಟೋ ಬಾರಿ ಬಹುಬೇಗನೆ ಸ್ಟೋರೇಜ್ ಫುಲ್ ಆಗುತ್ತದೆ. ಆದ್ರೆ ಯಾವ ವಾಟ್ಸಪ್ ಕಾಂಟ್ಯಾಕ್ಟ್‌ನ ಸ್ಟೋರೇಜ್ ಫುಲ್‌ ಆಗುವಲ್ಲಿ ಹೆಚ್ಚಿನ ಪಾಲು ಹೊಂದಿದೆ ಎಂದು ತಿಳಿಯಬಹುದಾಗಿದೆ. ಅದಕ್ಕಾಗಿ ವಾಟ್ಸಪ್ ಸೆಟ್ಟಿಂಗ್ ತೆರೆದು, ಡಾಟಾ ಮತ್ತು ಸ್ಟೋರೇಜ್ ಆಯ್ಕೆ ಸೆಲೆಕ್ಟ್ ಮಾಡಿರಿ. ಆಗ ಸ್ಟೋರೇಜ್ ಬಳಕೆ ಮತ್ತು ಕಾಂಟ್ಯಾಕ್ಟ್, ಆನಂತರದಲ್ಲಿ ಸ್ಟೋರೇಜ್ ಬಳಕೆಯ ಮಾಹಿತಿ ಕಾಣುವಿರಿ.

ಬ್ರಾಡ್‌ಕಾಸ್ಟ್‌ ಮೆಸೆಜ್ ಆಯ್ಕೆ

ಬ್ರಾಡ್‌ಕಾಸ್ಟ್‌ ಮೆಸೆಜ್ ಆಯ್ಕೆ

ವಾಟ್ಸಪ್‌ನಲ್ಲಿ ಗ್ರೂಪ್‌ ಕ್ರಿಯೆಟ್‌ ಮಾಡದೇ ಒಂದು ಮೆಸೆಜ್ ಅನ್ನು ಒಂದೇ ವೇಳೆಗೆ ಹಲವರಿಗೆ ಸೆಂಡ್ ಮಾಡಬಹುದಾಗ ಅವಕಾಶ ವಾಟ್ಸಪ್‌ನಲ್ಲಿದೆ. ಅದಕ್ಕಾಗಿ ಬ್ರಾಡ್‌ಕಾಸ್ಟ್‌ ಆಯ್ಕೆ ನೀಡಲಾಗಿದ್ದು, ಈ ಆಯ್ಕೆ ಮೂಲಕ ಬಳಕೆದಾರರು ಒಂದು ಮೆಸೆಜ್ ಅನ್ನು ಹಲವರಿಗೆ ಸೆಂಡ್ ಮಾಡಬಹುದಾಗಿದೆ. ಆಂಡ್ರಾಯ್ಡ್ ಬಳಕೆದಾರರು ವಾಟ್ಸಪ್ ಬಲ ಭಾಗದ ಮೆನು ಆಯ್ಕೆಯಲ್ಲಿ ಈ ಫೀಚರ್ ಕಾಣಬಹುದು.

ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು.!

ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು.!

ನಾವು ದಿನನಿತ್ಯ ಬಳಸುತ್ತಿರುವ ಮೆಸೆಂಜಿಗ್ ಆಪ್ ಫೇಸ್‌ಬುಕ್, ಒಡೆತನಕ್ಕೆ ಸೇರಿದ ವಾಟ್ಸ್ಆಪ್ ಅನ್ನು ಇಂದು ಪ್ರಪಂಚದಲ್ಲಿ ಸರಿ ಸುಮಾರು ಒಂದು ಬಿಲಿಯನ್ ಮಂದಿ ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ. ಈ ಆಪ್‌ನಲ್ಲಿ ಹತ್ತು ಹಲವು ವಿಶೇಷತೆಗಳಿದ್ದು, ನಾವು ಒಮ್ಮೆಯೂ ಬಳಸದ ವಿಷೇಶತೆಗಳ ಕುರಿತ ಮಾಹಿತಿ ಇಲ್ಲಿದೆ.

ವಾಟ್ಸ್ಆಪ್ ಸ್ಟೇಟಸ್ ಹೈಡ್ ಮಾಡುವುದೇಗೆ..? ಇನ್ನು ಹಲವು ವಾಟ್ಸ್ಆಪ್ ಸೀಕ್ರೆಟ್‌ಗಳು

ಇಂದಿನ ದಿನದಲ್ಲಿ ಕೇವಲ ಯುವಕ ಯುವತಿಯರು ಅಲ್ಲದೇ ಹಿರಿಯರು ಸಹ ವಾಟ್ಸ್ಆಪ್ ಬಳಕೆಗೆ ಮುಂದಾಗಿದ್ದಾರೆ. ಕೇವಲ ಮನೋರಂಜನೆ ಮಾತ್ರವಲ್ಲದೇ ಮಾಹಿತಿ ವಿನಿಮಯಕ್ಕೆ, ವಾಯ್ಸ್ ಮೇಲ್ ಕಳುಹಿಸುವುದಕ್ಕೆ, ಪೋನಿನಲ್ಲಿ ಮಾತನಾಡುವುದು ಸೇರಿದಂತೆ ದಾಖಲೆಗೆಳ ಮತ್ತು ಪೋಟೋಗಳ ವಿನಿಮಯದ ಮಾಧ್ಯಮವಾಗಿಯೂ ಬಳಕೆಯಾಗುತ್ತಿದೆ. ಹಿನ್ನಲೆಯಲ್ಲಿ ವಾಟ್ಸ್ಆಪ್ ವಿಷೇಶತೆಗಳು ಈ ಕೆಳಕಡಂತೆ ಇದೆ.

ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್:

ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್:

ನೀವು ವಾಟ್ಸ್ಆಪ್ ಮೂಲಕ ವಾಯ್ಸ್ ಕಾಲ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ ಅದರೊಂದಿಗೆ ಇನ್ನೊಬ್ಬ ಸ್ನೇಹಿತರೊಂದಿಗೂ ಮೇಸೆಜ್ ಮೂಲಕ ಚಾಟ್ ನಡೆಸಬಹುದಾಗಿದೆ. ನೀವು ಪೋನಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಕೆಳಗೆ ನೀಡಿರುವ ಮೇಸೆಜ್ ಸಿಂಬಲ್ ಅನ್ನು ಒತ್ತುವ ಮೂಲಕ ನೀವು ಚಾಟ್ ವಿಂಡೋವನ್ನು ಪ್ರವೇಶಿಸಬಹುದಾಗಿದೆ.

ವಾಯ್ಸ್ ಟೈಪಿಂಗ್:

ವಾಯ್ಸ್ ಟೈಪಿಂಗ್:

ನೀವು ವಾಟ್ಸ್ಆಪ್ ಚಾಟಿಂಗ್ ನಡೆಸುವ ಸಂದರ್ಭಗಳಲ್ಲಿ ಮೇಸೆಜ್ ಟೈಪ್ ಮಾಡಲು ಸಮಯವಿಲ್ಲದ ಸಂದರ್ಭದಲ್ಲಿ ಮೈಕ್ ಅನ್ನು ಒತ್ತಿ ಹಿಡಿದು ವಾಯ್ಸ್ ಮೇಸೆಜ್ ಹೇಳಿದರೆ ಅದು ಹಾಗೇಯೆ ಮೇಸೆಜ್ ಮಾದರಿಯಲ್ಲಿ ಟೈಪ್ ಆಗಲಿದೆ. ಆದರೆ ಇದು ಸಣ್ನ ಪುಟ್ಟ ವಾಕ್ಯಗಳಿಗೆ ಮಾತ್ರ ಸೀಮಿತವಾಗಿದೆ. ' how are you' 'I am fine' ಈ ರೀತಿಯ ವಾಕ್ಯ ರಚನೆಗೆ ಸಹಾಯಕಾರಿಯಾಗಿದೆ.

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು:

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು:

ನೀವು ಜಾಸ್ತಿ ಯಾರೊಂದಿಗೆ ಚಾಟಿಂಗ್ ನಡೆಸುವಿರೋ ಅಂತಹ ವ್ಯಕ್ತಿಯ ನಂಬರ್‌ ಅನ್ನು ನಿಮ್ಮ ಮೊಬೈಲ್‌ನ ಹೋಮ್ ಸ್ಕ್ರಿನ್‌ ನಲ್ಲಿ ಶಾರ್ಟ್‌ಕಟ್ ಆಗಿ ಇಟ್ಟುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ವಾಟ್ಸ್ಆಪ್ ನಲ್ಲಿ ಕಾಂಟೆಕ್ ಮೇಲೆ ಲಾಂಗ್ ಪ್ರೈಸ್ ಮಾಡಿ ಸಂದರ್ಭದಲ್ಲಿ ಕಾಣುವ ಮೂರು ಚುಕ್ಕಿಗಳಲ್ಲಿ ಇರುವ ಆಯ್ಕೆಗಳಲ್ಲಿ 'ಆಡ್ ಶಾರ್ಟ್‌ಕಟ್' ಆಯ್ಕೆ ಮಾಡಿಕೊಂಡರೆ ನಿಮ್ಮ ಹೋಮ್ ಸ್ಕ್ರಿನ್‌ನಲ್ಲಿ ನೀವು ಬಯಸಿದ ನಂಬರ್ ಬಂದು ಕೂರಲಿದೆ.

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು;

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು;

ಇಷ್ಟುದಿನ ವಾಟ್ಸ್‌ಆಪ್ ನಿಂದ ಡೊಡ್ಡ ಪ್ರಮಾಣದ ಡಾಕ್ಯುಮೆಂಟ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸದ್ಯ ನೀಡಿರುವ ಹೊಸ ಆಪ್‌ಡೇಟ್‌ನಲ್ಲಿ ಗೂಗಲ್ ಡ್ರೈವ್ , ಡ್ರಾಪ್‌ ಬಾಕ್ಸ್, ಮೂಲಕ ಕ್ಲೌಡ್‌ನಲ್ಲಿಯೇ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದಾಗಿದೆ.

ಲಾಸ್ಟ್ ಸಿನ್, ಸ್ಟೇಟಸ್ ಹೈಡ್ ಮಾಡುವುದೇಗೆ..?

ಲಾಸ್ಟ್ ಸಿನ್, ಸ್ಟೇಟಸ್ ಹೈಡ್ ಮಾಡುವುದೇಗೆ..?

ಇನ್ನು ಹಲವು ಮಂದಿ ವಾಟ್ಸ್ಆಪ್‌ ಬಳಕೆದಾರರಿಗೆ ತಮ್ಮ ಲಾಸ್ಟ್‌ ಸಿನ್ ಮತ್ತು ಸ್ಟೇಟಸ್ ಹೈಡ್ ಮಾಡುವುದು ಹೇಗೆ ಎಂಬುದೇ ತಿಳಿದಿಲ್ಲ. ಸ್ಟೇಟಸ್ ಹಾಕಲು ಮನಸಿಲ್ಲದವರು ಕಡೆ ಪಕ್ಷ ಒಂದು ಚುಕ್ಕೆಯನ್ನು ಇಡುತ್ತಾರೆ. ಆದರೆ ನಿಮ್ಮ ಸ್ಟೇಟಸ್ ಹೈಡ್ ಮಾಡಬಹುದಾಗಿದೆ. ವಾಟ್ಸ್ಆಪ್ ಸೆಟ್ಟಿಂಗ್ಸ್‌ನಲ್ಲಿ ಪ್ರೈವಸಿ ಆಯ್ಕೆಯಲ್ಲಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೋಬಡಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು ನಿಮ್ಮ ಸ್ಟೇಟಸ್ ಹೈಡ್ ಆಗಲಿದೆ. ಲಾಸ್‌ ಸಿನ್ ಸಹ ಇದೆ.

Most Read Articles
Best Mobiles in India

English summary
The Facebook-owned WhatsApp added a lot of features 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X