Subscribe to Gizbot

ಆಪಲ್‌ ಐಫೋನ್ 6ಎಸ್, 6ಎಸ್ ಪ್ಲಸ್‌'ಗಳ ಬೆಲೆಯಲ್ಲಿ 22,000 ರೂ ಕಡಿತ!

Written By:

ಆಪಲ್‌ ಐಫೋನ್ 6ಎಸ್ (128GB), ಐಫೋನ್ 6ಎಸ್ ಪ್ಲಸ್‌ (128GB) ಮತ್ತು ಐಫೋನ್ ಎಸ್‌ಇ(64GB) ಖರೀದಿ ಬೆಲೆಯಲ್ಲಿ 22,000 ರೂಪಾಯಿಗಳು ಕಡಿತಗೊಂಡಿವೆ.

ಆಪಲ್‌ ಐಫೋನ್ 6ಎಸ್ (128GB) ಪ್ರಸ್ತುತದಲ್ಲಿ 60,000 ರೂಗೆ ಲಭ್ಯವಿದ್ದು, ಈ ಹಿಂದೆ ಖರೀದಿ ಬೆಲೆ 82,000 ರೂ ಇತ್ತು. ಐಫೋನ್ 6ಎಸ್ ಪ್ಲಸ್ ಅನ್ನು ಪ್ರಾರಂಭದಲ್ಲಿ 90,000 ರೂಗೆ ಬಿಡುಗಡೆ ಮಾಡಲಾಗಿತ್ತು, ಈಗ ಖರೀದಿ ಬೆಲೆ 70,000 ರೂ ಇದೆ. ಐಫೋನ್ ಎಸ್ಇ 64GB ವರ್ಸನ್ ಪ್ರಸ್ತುತ ಖರೀದಿ ಬೆಲೆ 44,000 ಇದ್ದು, ಇದರ ಹಿಂದಿನ ಬೆಲೆ ರೂ.49,000.

ಆಪಲ್‌ ಐಫೋನ್(iphone) ಖರೀದಿಸುವ ಆಸಕ್ತಿ ಇದ್ದವರೂ ಕೂಡಲೇ ಹೋಗಿ ಖರೀದಿಸಿ. ಯಾಕಂದ್ರೆ ಮೇಲೆ ತಿಳಿಸಿದ ಐಫೋನ್ ಡಿವೈಸ್‌ಗಳ ಬೆಲೆಯಲ್ಲಿ ಪತ್ರಿಯೊಂದಕ್ಕೂ 22,000 ರೂ ಕಡಿತಗೊಂಡಿದೆ. ಐಫೋನ್‌ಗಳ ಫೀಚರ್‌ ಮತ್ತು ಬೆಲೆಯನ್ನು ತಿಳಿಯಲು ಕೆಳಗಿನ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ಗಳ ಬೆಲೆ ಕಡಿತಗೊಳಿಸಲು ಕಾರಣ

ಐಫೋನ್‌ಗಳ ಬೆಲೆ ಕಡಿತಗೊಳಿಸಲು ಕಾರಣ

ಅಂದಹಾಗೆ ಆಪಲ್‌ ತನ್ನ ಐಫೋನ್‌ಗಳ ಬೆಲೆ ಕಡಿತಗೊಳಿಸಲು ಕಾರಣ ಸಾಮಾನ್ಯವಾಗಿ ಆಪಲ್‌ ತಾನು ಹೊಸ ಡಿವೈಸ್‌ ಅನ್ನು ಲಾಂಚ್‌ ಮಾಡುವ ಮುನ್ನ ಈ ಪ್ರಕ್ರಿಯೆಗಳನ್ನು ನಡೆಸುತ್ತದೆ. ಈ ವಿಷಯದಲ್ಲಿ ಆಪಲ್‌ ಐಫೋನ್ 7 ಸೀರೀಸ್‌ನ ಡಿವೈಸ್‌ಗಳನ್ನು ಬಿಡುಗಡೆ ಮಾಡಿದ ನಂತರದ ಒಂದು ವಾರವು ರಿಯಾಯಿತಿ ನೀಡುತ್ತದೆ.

 ಭಾರತದಲ್ಲಿ ಐಫೋನ್ 7

ಭಾರತದಲ್ಲಿ ಐಫೋನ್ 7

ಭಾರತಕ್ಕೆ ಐಫೋನ್ 7 ಆಕ್ಟೋಬರ್ 7 ರಂದು ಬರಲಿದ್ದು, ಪ್ರಾರಂಭಿಕ ಖರೀದಿ ಬೆಲೆ 60,000 ರೂ 32GB ಮಾಡೆಲ್‌ ಡಿವೈಸ್‌ಗೆ ಇರಲಿದೆ. ಉನ್ನತ ಮಾಡೆಲ್‌ಗಳಿಗೆ 10,000 ರೂ ಹೆಚ್ಚಿನ ದರ ಇರುತ್ತದೆ. ಆದರೆ ಇದುವರೆಗೆ ಉನ್ನತ ಐಫೋನ್ 7 ಮಾಡೆಲ್‌ಗಳ ಖರೀದಿದರವನ್ನು ಖಚಿತಪಡಿಸಿಲ್ಲ.

ಐಫೋನ್ 7 ಮತ್ತು ಐಫೋನ್ 7 ಪ್ಲಸ್

ಐಫೋನ್ 7 ಮತ್ತು ಐಫೋನ್ 7 ಪ್ಲಸ್

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ 32GB, 128GB ಮತ್ತು 256GB ಯೊಂದಿಗೆ ಬರಲಿದ್ದು, ಈ ಬಾರಿ ಆಪಲ್‌ 16 ಮತ್ತು 64GB ಮಾಡೆಲ್‌ಗಳ ಡಿವೈಸ್‌ಗಳನ್ನು ಹೊರತಂದಿಲ್ಲ. ಎರಡು ಹಿಂಭಾಗ ಕ್ಯಾಮೆರಾಗಳ ವ್ಯವಸ್ಥೆ ಹೊಂದಿರುವ ಐಫೋನ್ 7 ಪ್ಲಸ್ ಈಗಾಗಲೇ ಮಾರಾಟವಾಗಿದೆ ಎಂದು ಆಪಲ್‌ ಹೇಳಿದೆ.

ಐಫೋನ್ 6ಎಸ್‌

ಐಫೋನ್ 6ಎಸ್‌

ಐಫೋನ್ 6ಎಸ್, ಐಫೋನ್ 7 ರೀತಿಯಲ್ಲಿಯೇ 12MP ಹಿಂಭಾಗ ಕ್ಯಾಮೆರಾ ಹೊಂದಿದೆ. ಐಫೋನ್ 7 ಸನ್ಣ ಅಪರ್ಚರ್‌(ದ್ಯುತಿರಂಧ್ರ) ಹೊಂದಿದ್ದು, ಕಡಿಮೆ ಬೆಳಕಿನ ಫೋಟೋಗ್ರಫಿಗೆ ಅವಕಾಶ ನೀಡುತ್ತದೆ. ಐಫೋನ್ 6ಎಸ್ ಮತ್ತು ಐಫೋನ್ 7 ವಿನ್ಯಾಸದಲ್ಲಿ ಒಂದೇ ರೀತಿಯಲ್ಲಿವೆ. ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಎ9 ಚಿಪ್‌ಸೆಟ್ ಚಾಲಿತವಾಗಿವೆ. ವಿಶೇಷ ಅಂದ್ರೆ ಆಪಲ್‌ ಐಫೋನ್ 6ಎಸ್ ಅನ್ನು 32GB ಮತ್ತು 128GB ವೈಶಿಷ್ಟದಲ್ಲಿ ನವೀಕರಸಲಿದೆ.

22.000 ಬೆಲೆ ಕಡಿತಗೊಂಡ ಐಫೋನ್ 6ಎಸ್ ಫೀಚರ್

22.000 ಬೆಲೆ ಕಡಿತಗೊಂಡ ಐಫೋನ್ 6ಎಸ್ ಫೀಚರ್

4.7 ಇಂಚಿನ (1334*750p) ಡಿಸ್‌ಪ್ಲೇ, 12MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. ಐಓಎಸ್ 9.3.3 ಚಾಲಿತವಾಗಿದ್ದು, 188 ಗ್ರಾಂ ತೂಕವಿದೆ. ಐಫೋನ್ 6ಎಸ್ ಪ್ಲಸ್ 5.5 ಇಂಚಿನ (1920×1080 p) ಡಿಸ್‌ಪ್ಲೇ, 12MP ಹಿಂಭಾಗ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾ ಹೊಂದಿದೆ.

ಐಫೋನ್ ಎಸ್‌ಇ

ಐಫೋನ್ ಎಸ್‌ಇ

ಐಫೋನ್ ಎಸ್‌ಇ 4 ಇಂಚಿನ 1134*640p ಡಿಸ್‌ಪ್ಲೇ ಹೊಂದಿದ್ದು, ಎ9 ಚಿಪ್‌ಸೆಟ್‌ ಚಾಲಿತವಾಗಿದೆ. ಐಫೋನ್ ಎಸ್‌ಇ 16GB ಅಥವಾ 64GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯವಿದೆ. 12MP ಹಿಂಭಾಗ ಕ್ಯಾಮೆರಾ ಮತ್ತು 1.2MP ಫ್ರಂಟ್‌ ಕ್ಯಾಮೆರಾ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple iPhone 6s, 6s Plus prices slashed by Rs 22,000. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot