2017 ರಲ್ಲಿ ಬಿಡುಗಡೆಯಾಗುವ ಅಂದಾಜಿರುವ ಆಸಸ್ ಸ್ಮಾರ್ಟ್‍ಫೋನ್ಸ್

ಆಸಸ್, ತೈವಾನಿಸ್ ನ ಸ್ಮಾರ್ಟ್‍ಫೋನ್ ಬಹಳಷ್ಟು ಜನರನ್ನು ಮೆಚ್ಚಿಸಿತು. ಕಂಪನಿ ಸಾಲಿನಲ್ಲಿ ಫೋನ್ ಗಳನ್ನು ಬಿಡುಗಡೆಮಾಡಿತು. ಎಪ್ರಿಲ್ 2016 ರಲ್ಲಿ ಜೆನ್‍ಫೋನ್ 3 ಸೀರಿಜ್ ನ ಜೆಡ್3ಎನ್‍ವೊಲ್ಯುಷನ್ ಅನ್ನು ಬಿಡುಗಡೆಮಾಡಿತು. ಕಂಪನಿ ಪ್ರತಿ ಎಪ್ರಿಲ್ ನಲ್ಲಿ ತಮ್ಮ ಉತ್ಪನ್ನವನ್ನು ಅಪ್‍ಡೇಟ್ ಮಾಡುತ್ತದೆ ಮತ್ತು ಬರುವ 2017 ರ ಎಪ್ರಿಲ್ ಕೂಡ ಅದಕ್ಕಾಗಿ ಹೊರತಾಗಿಲ್ಲಾ.

2017 ರಲ್ಲಿ ಬಿಡುಗಡೆಯಾಗುವ ಅಂದಾಜಿರುವ ಆಸಸ್ ಸ್ಮಾರ್ಟ್‍ಫೋನ್ಸ್

ಸಿಇಎಸ್ 2017 ಸಧ್ಯದಲ್ಲೇ ಬರಲಿದೆ ಮತ್ತು ನಾವು ಕೆಲ ಹೊಸ ಉತ್ಪನ್ನಗಳನ್ನು ದೊಡ್ಡ ಕಾರ್ಯಕ್ರಮದಲ್ಲಿ ಅಪೇಕ್ಷಿಸಬಹುದಾಗಿದೆ. ಜೊತೆಗೆ ಕೆಲ ಕೇಳಿ ಬಂದ ಸುದ್ದಿಯ ಪ್ರಕಾರ ಕಂಪನಿ ಜೆನ್‍ಫೋನ್ 4 ಸೀರಿಜ್ ಅನ್ನು ಕೂಡ ಹೊರ ತರುವ ಯೋಜನೆಯಲ್ಲಿದೆ ಬರುವ ಸಿಇಎಸ್ 2017 ರಲ್ಲಿ.

ಓದಿರಿ: ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

2017 ರಲ್ಲಿ ಕೆಲ ಫೋನ್‍ಗಳು ಬಿಡುಗಡೆಯಾಗಬಹುದೆಂದು ಅಪೇಕ್ಷಿಸಲಾಗಿದ್ದು ಅದರಲ್ಲಿ ಆಸಸ್ ಜೆನ್‍ಫೋನ್ 3 ಜೂಮ್, ಆಸಸ್ ಜೆನ್‍ಫೋನ್ 3 ಮ್ಯಾಕ್ಸ್ ನ ಅಪಡೇಟ್ ಆದ ಇನ್ನೊಂದು ವಿಧ ಇತ್ಯಾದಿ ಕೂಡ ಒಂದಾಗಿದೆ. ಇಲ್ಲಿವೆ ಅಂತಹ 2017 ರಲ್ಲಿ ಅಪೇಕ್ಷಿಸಲ್ಪಡುತ್ತಿರುವ ಸ್ಮಾರ್ಟ್‍ಫೋನ್‍ಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಸಸ್ ಜೆನ್‍ಫೋನ್ 3 ಜೂಮ್

ಆಸಸ್ ಜೆನ್‍ಫೋನ್ 3 ಜೂಮ್

ಕಳೆದ ವರ್ಷ, ಜನವರಿ 22,2016 ರಂದು ಆಸಸ್ ಬಿಡುಗಡೆ ಮಾಡಿತು ಜೆನ್‍ಫೋನ್ ಜೂಮ್ ಸ್ಮಾರ್ಟ್‍ಫೋನ್ ಅನ್ನು ಅಪರೂಪದ 3ಎಕ್ಸ್ ಒಪ್ಟಿಕಲ್ ಜೂಮ್ ಸಾಮಥ್ರ್ಯದೊಂದಿಗೆ. ಆದರೆ ಜನರನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಆಸಸ್ ಈಗ ಅದರ ಮುಂದಿನ ಪೀಳಿಗೆಯನ್ನು ಹೊರ ತರುವ ಯೋಚನೆಯಲ್ಲಿದೆ ಅದರ ಹೆಸರು ಜೆನ್‍ಫೋನ್ 3 ಜೂಮ್. ಸುಮಾರು ಒಂದು ತಿಂಗಳ ಹಿಂದೆ ಈ ಫೋನ್ ಚೈನೀಸ್ ಸರ್ಟಿಫಿಕೇಷನ್ ಸೈಟ್ ಟೆನಾ ಅನ್ನುವಲ್ಲಿ ಕಂಡಿತು.

ಟೆನಾ ತಿಳಿಸಿತು ಈ ಫೋನ್ ಜೆಡ್01ಎಚ್‍ಡಿಎ ಬಿಲ್ಡ್ ನಂಬರ್ ನೊಂದಿಗೆ ಬರಲಿದ್ದು ಡುಯಲ್ ಕ್ಯಾಮೆರಾ ರೇರ್ ನಲ್ಲಿ 16ಎಮ್‍ಪಿ ಕ್ಯಾಮೆರಾ ಸಾಮಾನ್ಯ ಕ್ಯಾಮೆರಾ ದಂತೆಯೂ ಮತ್ತು ಇನ್ನೊಂದು 13ಎಮ್‍ಪಿ ಯದು 3 ಎಕ್ಸ್ ಒಪ್ಟಿಕಲ್ ಜೂಮ್ ಸಾಮಥ್ರ್ಯ ಹೊಂದಿರುತ್ತದೆ. ಇದರಲ್ಲಿ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 625 ಎಸ್‍ಒಸಿ ಮತ್ತು 4ಜಿಬಿ ರಾಮ್ ಅನ್ನು ನಿರೀಕ್ಷಿಸಲಾಗುತ್ತಿದೆ. ಈ ಫೋನ್ ಸಿಇಎಸ್ 2017 ರಲ್ಲಿ ಕಾಣಸಿಗಲಿದೆ.

ಆಸಸ್ ಜೆನ್‍ಫೋನ್ 4 ಸೀರಿಜ್

ಆಸಸ್ ಜೆನ್‍ಫೋನ್ 4 ಸೀರಿಜ್

ಆಸಸ್ ಜೆನ್‍ಫೋನ್ 4 ಸೀರಿಜ್ ಫೋನ್ ಅನ್ನು ಪ್ರತಿ ಏಪ್ರಿಲ್ ರಂದು ಬಿಡುಗಡೆ ಮಾಡುತ್ತಾರೆ, ಈ ವರ್ಷವೂ ಇದೇ ಸಂಪ್ರದಾಯ ಮುಂದುವರಿಯಲಿದೆ. ಈ ಸೀರಿಜ್‍ನ ಅಡಿಯಲ್ಲಿ ಸ್ಮಾರ್ಟ್‍ಫೋನ್‍ಗಳ ಗೊಂಚಲೇ ಹೊರ ಬರಲಿದೆ. ಅವುಗಳೆಂದರೆ, ಜೆನ್‍ಫೋನ್ 4 ಅಲ್ಟ್ರಾ, ಜೆನ್‍ಫೋನ್ 4 ಡಿಲಕ್ಸ್, ಜೆನ್‍ಫೋನ್ 4 ಲೇಸರ್, ಜೆನ್‍ಫೋನ್ 4 ಮ್ಯಾಕ್ಸ್ ಇತ್ಯಾದಿ.

ಗಾಳಿಮಾತಿನ ಪ್ರಕಾರ ಜೆನ್‍ಫೋನ್ 3 ಅಂತೆಯೇ ಜೆನ್‍ಫೋನ್ 4 ಕೂಡ ಅದೇ ರೀತಿಯ ಗಾಜು ಮತ್ತು ಮೆಟಲ್ ಡಿಜೈನ್ ಹೊಂದಿರುತ್ತದೆ. ಕೋಲ್ಕಂ ಸ್ನಾಪ್‍ಡ್ರಾಗನ್ 627 ಚಿಪ್‍ಸೆಟ್ ಹೊಂದುವ ನೀರೀಕ್ಷೆ ಇದೆ. ಇನ್ನೊಂದು ಕಡೆ ಜೆನ್‍ಫೋನ್ 4 ಡಿಲಕ್ಸ್ ಸ್ನಾಪ್‍ಡ್ರಾಗನ್ 835 ಎಸ್‍ಓಸಿ ಜೊತೆಗೆ 8ಜಿಬಿ ರಾಮ್ ನೀಡಲಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಫೋನಿನ ಮಾಹಿತಿ ದೊರೆತಿಲ್ಲಾ. ಆದರೆ ಅವುಗಳು ಏಪ್ರಿಲ್ 2017 ರಂದು ಬಿಡುಗಡೆ ಆಗುವ ನಿರೀಕ್ಷೆ ಇದೆ.

ಜೆನ್‍ಫೋನ್ 3 ಮ್ಯಾಕ್ಸ್ ನ ಅಪ್ ಗ್ರೇಡೆಡ್ ವಿಧ

ಜೆನ್‍ಫೋನ್ 3 ಮ್ಯಾಕ್ಸ್ ನ ಅಪ್ ಗ್ರೇಡೆಡ್ ವಿಧ

ಜೆನ್‍ಫೋನ್ 3 ಮ್ಯಾಕ್ಸ್ 3 ಬ್ಯಾಟರಿ ಕ್ಷೇತ್ರದಲ್ಲಿ ಕಂಪನಿಯಿಂದಾದ ಸುಧಾರಣೆ ಆಗಿದೆ. ಕಂಪನಿಯೂ ಸಾಮಾನ್ಯ ಮ್ಯಾಕ್ಸ್ ಫೋನಿನ ಅಪಡೇಟನ್ನು ಮಾರ್ಚ್ ನಲ್ಲಿ ಬಿಡುಗಡೆ ಮಾಡಲಿದೆ. ರೂಢಿಯನ್ನು ಗಣನೆಗೆ ತೆಗೆದುಕೊಂಡರೆ ಜೆನ್‍ಫೋನ್ 3 ಮ್ಯಾಕ್ಸ್ ಅಪ್‍ಗ್ರೇಡ್ ಅನ್ನು ಸ್ನಾಪ್‍ಡ್ರಾಗನ್ 435 ಚಿಪ್‍ಸೆಟ್ ನೊಂದಿಗೆ ಮಾರ್ಚ್ 2017 ರಲ್ಲಿ ಬಿಡುಗಡೆ ಆಗಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As 2016 is now gone, the focus will be now shifted towards the smartphones to be released in 2017. Here are the upcoming Asus phones rumored to launch in 2017
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot