ಗೂಗಲ್ ಶಾಪಿಂಗ್ ಹಬ್ಬ:ಕಡಿಮೆ ದರದಲ್ಲಿ ವಸ್ತು ಖರೀದಿಸಿ
ಆನ್‌ಲೈನ್‌ಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಗುಡ್ ನ್ಯೂಸ್. ಗೂಗಲ್ ಇಂಡಿಯಾ ಮೆಗಾ ಆನ್‌ಲೈನ್ ಶಾಪಿಂಗ್ ಹಬ್ಬ ಆರಂಭಿಸಿದ್ದು ಗ್ರಾಹಕರು ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.
ಇಂದಿನಿಂದ 13ರವರೆಗೆ ಈ ಆನ್‌ಲೈನ್ ಶಾಪಿಂಗ್ ಹಬ್ಬ ನಡೆಯಲಿದ್ದು ದೇಶದ 200ಕ್ಕೂ ಅಧಿಕ ಇ ಕಾಮರ್ಸ್ ವೆಬ್‌ಸೈಟ್‌ಗಳು,ಆನ್‌ಲೈನ್ ಟ್ರಾವೆಲ್ ತಾಣಗಳು,ಟೆಲಿಕಾಂ ಕಂಪೆನಿಗಳಲ್ಲಿ ಗ್ರಾಹಕರು ವ್ಯವಹಾರ ಮಾಡಬಹುದು.
ಕಳೆದ ವರ್ಷದಿಂದ ಗೂಗಲ್ ಈ ರೀತಿಯ ಆನ್‌ಲೈನ್ ಶಾಪಿಂಗ್ ಹಬ್ಬವನ್ನು ವರ್ಷಕ್ಕೊಮ್ಮೆ ಆಯೋಜಿಸುತ್ತಿದ್ದು,ಕಳೆದ ವರ್ಷದ ಹಬ್ಬಕ್ಕೆ ಗ್ರಾಹಕರು ಮತ್ತು ಆನ್‌ಲೈನ್ ಶಾಪಿಂಗ್ ತಾಣಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಪ್ರತಿದಿನ ನಡೆಯುವ ವ್ಯವಹಾರಕ್ಕಿಂತ ಶೇ.350 ಹೆಚ್ಚಿನ ಪ್ರಮಾಣದ ವ್ಯವಹಾರ ಈ ಹಬ್ಬದ ಸಂದರ್ಭದಲ್ಲಿ ನಡೆದಿತ್ತು.

ಇನ್ನೂ ಎರಡು ದಿನ ಈ ಆನ್‌ಲೈನ್ ಶಾಪಿಂಗ್ ಹಬ್ಬ ನಡೆಯಲಿದ್ದರೂ ಸದ್ಯಕ್ಕೆ ವೆಬ್‌ಸೈಟ್ ತಾಂತ್ರಿಕ ಸಮಸ್ಯೆಯಿಂದಾಗಿ ಓಪನ್ ಅಗುತ್ತಿಲ್ಲ.ಅದಷ್ಟು ಶೀಘ್ರವಾಗಿ ವೆಬ್‌ಸೈಟ್‌ನಲ್ಲಿರುವ ಸಮಸ್ಯೆಯನ್ನು ಪರಿಹರಿಸುವುದಾಗಿ ಗೂಗಲ್ ಇಂಡಿಯಾ ಹೇಳಿದೆ.
ಇದನ್ನೂ ಓದಿ: ಇನ್‌ಫೋಗ್ರಾಫಿಕ್‌ನಲ್ಲಿ ಗೂಗಲ್ ಬೆಳವಣಿಗೆ


Click it and Unblock the Notifications








