ಹೊಸ ಐಫೋನ್ ಲಾಂಚ್‌ನೊಂದಿಗೆ ಐಫೋನ್ 5s ದರ ನಿಗದಿ

Written By:

ಆಪಲ್ ಕಂಪೆನಿಯು 16 ಜಿಬಿ ಮತ್ತು 32 ಜಿಬಿ ಐಫೋನ್‌ಗಳ 5s ಆವೃತ್ತಿಯ ಬೆಲೆಯನ್ನು ಭಾರತದಲ್ಲಿ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಲಾಂಚಿಂಗ್ ಸಮಯದಲ್ಲಿ ಮುಂದಿನ ತಿಂಗಳು ತಿಳಿಸಲಿದೆ.

ಐಫೋನ್ 5s ನ 16 ಜಿಬಿ ಆವೃತ್ತಿಯು ರೂ 44,500 ಗಳಲ್ಲಿ ದೊರೆಯುತ್ತಿದ್ದು 32 ಜಿಬಿ ಯ ಗರಿಷ್ಟ ದರವನ್ನು 49,500 ರೂಪಾಯಿಗಳು ಎಂದು ನಿಗದಿಪಡಿಸಲಾಗಿದೆ. 16 ಜಿಬಿ ಆವೃತ್ತಿಯು ಆನ್‌ಲೈನ್‌ನಲ್ಲಿ 35,000 ರೂಪಾಯಿಗಳು ಮತ್ತು 40,000 ರೂಪಾಯಿಗಳ ಮಧ್ಯಮ ದರದಲ್ಲಿ ದೊರೆಲಿದೆ. ಕಳೆದ ನವೆಂಬರ್‌ನಲ್ಲಿ ಐಫೋನ್ 5s ಲಾಂಚ್ ಆದ ನಂತರದಿಂದ ಇದು ಪ್ರಥಮ ಅಧಿಕೃತ ದರ ಮಾಹಿತಿಯಾಗಿದೆ. ಇದಕ್ಕೂ ಮುನ್ನ 16 ಜಿಬಿ ಯ ಬೆಲೆಯನ್ನು ಕುರಿತು ಸಾಕಷ್ಟು ಸುದ್ದಿಗಳು ವರದಿಯಾಗಿದ್ದವು, ಈ ಸುದ್ದಿಯನ್ನು ಮೊದಲು ವರದಿ ಮಾಡಿರುವುದು ಬಿಜಿಆರ್ ಆಗಿದೆ.

ಐಫೋನ್ 5s ನ ಮೇಲೆ ಭಾರೀ ದರಕಡಿತ

ರೂ 62,500 ರ ಡಿವೈಸ್ ಅನ್ನು ಲಾಂಚ್ ಮಾಡಿದ ನಂತರ 16 ಜಿಬಿ ಯ ಡಿವೈಸ್ ಮೇಲೆ ರೂ 9,000 ಮತ್ತು 32 ಜಿಬಿಯ ಡಿವೈಸ್‌ಗಳಲ್ಲಿ 13,000 ರೂಪಾಯಿಗಳಷ್ಟು ದರ ಕಡಿತವನ್ನು ನಿರೀಕ್ಷಿಸಬಹುದಾಗಿದೆ. ಇನ್ನೊಂದು ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ 16 ಜಿಬಿ, 64 ಜಿಬಿ ಮತ್ತು 128 ಜಿಬಿಯ ಆಂತರಿಕ ಸಂಗ್ರಹಣೆಯುಳ್ಳ ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ದೊರೆಯುತ್ತಿರುವುದು. ಆದ್ದರಿಂದ ನೀವು 32 ಜಿಬಿಯ ಫೋನ್ ಅನ್ನು ಖರೀದಿಸಬೇಕೆಂಬ ವಿಶೇಷ ಆಸಕ್ತಿಯನ್ನು ಉಳ್ಳವರಾಗಿದ್ದಲ್ಲಿ ಇದು ಕೊನೆಯ ಅವಕಾಶವಾಗಿದೆ.

ಇನ್ನೊಂದು ಆಸಕ್ತಿಕರ ಸುದ್ದಿಯೆಂದರೆ 64 ಜಿಬಿ ಯ ಡಿವೈಸ್ ಬೆಲೆಯನ್ನು ಕಂಪೆನಿ ಇನ್ನೂ ತಿಳಿಸಿಲ್ಲದಿರುವುದಾಗಿದೆ. ತನ್ನ ಲಾಂಚ್ ಬೆಲೆಗಿಂತಲೂ ದರ ಕಡಿತ ದರದಲ್ಲಿ ಐಫೋನ್ 5c ಯ 8 ಜಿಬಿ ದೊರೆತಿದ್ದು ಇದೀಗ ಲಾಂಚ್ ಆಗಿರುವ ಐಫೋನ್‌ಗಳೆರಡರ ದರದಲ್ಲೂ ಅಷ್ಟೊಂದು ಅಮೂಲಾಗ್ರ ಬದಲಾವಣೆ ಆಗುವುದಿಲ್ಲ ಎಂದಾಗಿದೆ. ತನ್ನ ರೀಟೈಲ್ ಪಾಲುದಾರರಿಗಾಗಿ ತನ್ನ ಐಫೋನ್ ಬೆಲೆಯನ್ನು ಕೊಂಚ ಕಡಿಮೆ ಮಾಡಿರುವ ಆಪಲ್ ಕಂಪೆನಿ, ಗ್ರಾಹಕರ ಲಾಭವನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಲಭ್ಯವಾಗುವಂತೆ ದರದಲ್ಲಿ ಮಾರ್ಪಾಡುಗಳನ್ನು ಉಂಟು ಮಾಡಬಹುದು.

English summary
This article tells about iPhone 5s Price in India Slashed Ahead of iPhone 6 and iPhone 6 Plus Launch.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot