Subscribe to Gizbot

ಟೀವಿ ಮುಖಾಂತರ ಟಿವಿ ನೋಡುವ ಸ್ಮಾರ್ಟ್ ಟೆಕ್ ಏನಿರಬಹುದು?

Written By:

ಕ್ರೋಮ್‌ಕಾಸ್ಟ್‌ನಂತೆಯೇ ಟೀವಿ ಎಚ್‌ಡಿಎಮ್‌ಐ ಡೋಂಗಲ್ ಆಗಿದ್ದು ಭಾರತೀಯ ಕಂಪೆನಿ ಇದನ್ನು ನಿರ್ಮಿಸಿದೆ. ಕ್ರೋಮ್‌ಕಾಸ್ಟ್‌ನಂತೆಯೇ ಇರುವ ಇದು, ಕಾರ್ಯನಿರ್ವಹಿಸುವ ರೀತಿ ಅತಿ ವಿಭಿನ್ನವಾಗಿದೆ.

ಓದಿರಿ: ಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆ

ಟೀವಿ ಮುಖಾಂತರ ಟಿವಿ ನೋಡುವ ಸ್ಮಾರ್ಟ್ ಟೆಕ್ ಏನಿರಬಹುದು?

ನಿಮ್ಮ ಕೊಠಡಿಯಲ್ಲಿರುವ ಎಲ್‌ಇಡಿ ಟಿವಿಗೆ ಕ್ರೋಮ್‌ಕಾಸ್ಟ್‌ ಪರ್ಯಾಯವಾಗಿ ಟೀವಿ ಬಂದಿದ್ದು, ತಮ್ಮ ಫೋನ್‌ ಮುಖಾಂತರ ಇದರಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ. ಕ್ರೋಮ್‌ಕಾಸ್ಟ್‌ಗಿಂತಲೂ ಇದು ಅತ್ಯುತ್ತಮವಾಗಿದೆ ಎಂದರೆ ಇದು ಹೇಗಿದೆ ಎಂಬುದನ್ನು ನೀವೇ ಅರಿತುಕೊಳ್ಳಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಯಾವುದೇ ವಿಷಯಗಳನ್ನು ಟೀವಿ ಬಳಸಿ ದೊಡ್ಡ ಪರದೆಯ ಟಿವಿ ಸ್ಕ್ರೀನ್‌ನಲ್ಲಿ ವೀಕ್ಷಿಸಬಹುದಾಗಿದೆ.

ಓದಿರಿ: ಹೆಚ್ಚು ಮಾರಾಟವಾಗಿರುವ ಹೋನರ್ ಬೀಯಲ್ಲಿ ಮೆಚ್ಚುವ ಅಂಶವೇನು?

ಟೀವಿ ಮುಖಾಂತರ ಟಿವಿ ನೋಡುವ ಸ್ಮಾರ್ಟ್ ಟೆಕ್ ಏನಿರಬಹುದು?

ಪ್ರತ್ಯೇಕಿಸಬಹುದಾದ ಪವರ್ ಅಡಾಪ್ಟರ್‌ನೊಂದಿಗೆ ಇದು ಬಂದಿದ್ದು DDR 3 RAM ನ 1 ಜಿಬಿಯನ್ನು ಇದು ಪಡೆದುಕೊಂಡಿದೆ. ಡ್ಯುಯಲ್ ಕೋರ್ ARM ಕೋರ್ಟೆಕ್ಸ್ A9 ಪ್ರೊಸೆಸರ್ ಜೊತೆಗೆ ಬಂದಿದ್ದು ಕ್ವಾಡ್ ಕೋರ್ ಜಿಪಿಯುವನ್ನು ಉತ್ತಮ ಗ್ರಾಫಿಕ್ಸ್‌ಗಾಗಿ ಅಳವಡಿಸಲಾಗಿದೆ. ಎಚ್‌ಡಿಎಮ್ಐ ಪೋರ್ಟ್ ಇರುವ ಯಾವುದೇ ಟಿವಿಯೊಂದಿಗೆ ಇದು ಕಾರ್ಯನಿರ್ವಹಿಸಲಿದ್ದು ಆನ್‌ಲೈನ್ ವಿಷಯಗಳನ್ನು ಸ್ಟ್ರೀಮ್ ಮಾಡಲು ಇದರಲ್ಲಿ ವೈಫೈ ಇರುವುದು ಕಡ್ಡಾಯವಾಗಿದೆ.

ಟೀವಿ ಮುಖಾಂತರ ಟಿವಿ ನೋಡುವ ಸ್ಮಾರ್ಟ್ ಟೆಕ್ ಏನಿರಬಹುದು?

ನಿಮ್ಮ ಫೋನ್‌ನಲ್ಲಿ ಟೀವಿ ಅಪ್ಲಿಕೇಶನ್ ಅನ್ನು ಒಮ್ಮೆ ನೀವು ಡೌನ್‌ಲೋಡ್ ಮಾಡಿದ ನಂತರ, ನಿಮ್ಮ ಟಿವಿಯ ಎಚ್‌ಡಿಎಮ್ಐ ಪೋರ್ಟ್‌ಗೆ ಡೋಂಗಲ್ ಪ್ಲಗ್ ಮಾಡಿ ಮತ್ತು ವೈಫೈ ಹಾಟ್‌ಸ್ಟಾಟ್ ಬಳಸಿ ಅದನ್ನು ಪೇರ್ ಮಾಡಿ.

ಓದಿರಿ: ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ಸ್: ಹೊಡೆಯಿರಿ ಜಾಕ್‌ಪಾಟ್

ಚಲನಚಿತ್ರಗಳ ಅತ್ಯುನ್ನತ ಸಂಗ್ರಹವನ್ನೇ ಹೊಂದಿರುವ ಎರಡು ತಿಂಗಳ ಉಚಿತ ಚಂದಾದಾರಿಕೆಯನ್ನು ಟೀವಿ ಬಳಕೆದಾರರು ಹೊಂದಿದ್ದಾರೆ. ಏರ್‌ಟೆಲ್ ಒದಗಿಸುವ ಮೂರು ತಿಂಗಳಿಗಾಗಿ ಉಚಿತ ಡೇಟಾವನ್ನು ಟೀವಿ ಡಿವೈಸ್‌ಗಳು ಪಡೆದುಕೊಳ್ಳಬಹುದಾಗಿದೆ. ಇದರ ಬೆಲೆ ರೂ 2,399 ಆಗಿದ್ದು ಇದು www.teewe.in ಲಭ್ಯವಿದೆ.

English summary
Teewe is a Chromecast like HDMI dongle made by an Indian company. While it is Chromecast like, there are many differences try to point out in this post. To start with, I have a 32 inch LED TV in living room with a Chromecast plugged in to it (TataSky on another port).
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot