ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್‌ ಟವರ್‌ ಹಾಕಿಸುವ ಮುನ್ನ ಎಚ್ಚರ?

|

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಟವರ್‌ ಇನ್‌ಸ್ಟಾಲೇಶನ್‌ ನೆಪದಲ್ಲಿ ಮೋಸ ಮಾಡುವ ಸನ್ನಿವೇಶಗಳು ಹೆಚ್ಚಾಗಿವೆ. ನಿಮ್ಮ ಮನೆಯ ಮೇಲೆ ನೆಟ್‌ವರ್ಕ್‌ ಟವರ್‌ ಇನ್‌ಸ್ಟಾಲ್‌ ಮಾಡುತ್ತೇವೆ ಇದಕ್ಕೆ ಇಂತಿಷ್ಟು ಹಣವನ್ನು ಠೇವಣಿ ಇಡಬೇಕಾಗುತ್ತದೆ ಎಂದು ಜನರಿಂದ ಹಣ ಪಡೆದು ಮೋಸ ಮಾಡುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಇದೇ ಕಾರಣಕ್ಕೆ ಇದೀಗ DIPA (ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್) ಮತ್ತು COAI (ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ) ಸಂಸ್ಥೆಗಳು ಸಾರ್ವಜನಿಕರಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿವೆ.

ಮೊಬೈಲ್‌

ಹೌದು, ಭಾರತದಲ್ಲಿ ಮೊಬೈಲ್‌ ಟವರ್‌ ಅಳವಡಿಸುವ ನೆಪದಲ್ಲಿ ಮೋಸ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ಇಲ್ಲದ ಕಾರಣ ಹೆಚ್ಚಿನ ಜನರು ಮೋಸ ಹೋಗುತ್ತಿದ್ದಾರೆ ಎನ್ನಲಾಗಿದೆ. ಆದರಿಂದ ಸಾರ್ವಜನಿಕರಿಗೆ ಇದರ ಬಗ್ಗೆ ಮಾಹಿತಿ ನೀಡುವುದಕ್ಕೆ DIPA ಮತ್ತು COAI ಸಂಸ್ಥೆಗಳು ಮುಂದಾಗಿವೆ. ಅದರಂತೆ ಸಾರ್ವಜನಿಕರಿಗೆ ಮೊಬೈಲ್‌ ಟವರ್‌ ಮೋಸದ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ನೀಡಿವೆ.

ಮೊಬೈಲ್‌

ನಿಮ್ಮ ಮನೆಯ ಮಹಡಿಯ ಮೇಲೆ ಮೊಬೈಲ್‌ ಟವರ್‌ ಇದ್ದರೆ ನಿಮಗೆ ಆದಾಯ ಬರಲಿದೆ. ಇದಕ್ಕಾಗಿ ನೀವು ಇಂತಿಷ್ಟು ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಇದರಿಂದ ಮೊಬೈಲ್‌ ಟವರ್‌ ಅನ್ನು ನಿಮ್ಮ ಆಸ್ತಿ ಅಥವಾ ಮನೆಯ ಮೇಲೆ ಇನ್‌ಸ್ಟಾಲೇಶನ್‌ ಮಾಡಬಹುದು. ನಿಮ್ಮ ಆಸ್ತಿ ಅಥವಾ ನಿವೇಶನವನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತೇವೆ ಇದಕ್ಕಾಗಿ ನಿಮಗೆ ಇಂತಿಷ್ಟು ಹಣ ಬರಲಿದೆ ಎನ್ನುವ ಆಮಿಷಗಳನ್ನು ಒಡ್ಡುತಾರೆ. ಇದರ ಬಗ್ಗೆ ಜನರು ಎಚ್ಚರಿಕೆ ವಹಿಸುವುದು ಒಳಿತು. ಹಾಗಾದ್ರೆ ನಕಲಿ ಮೊಬೈಲ್‌ ಟವರ್‌ ಇನ್‌ಸ್ಟಾಲೇಶನ್‌ ಬಗ್ಗೆ ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಬೈಲ್‌

ಇತ್ತೀಚಿನ ದಿನಗಳಲ್ಲಿ ಮನೆಯ ಮಹಡಿಯ ಮೇಲೆ ಮೊಬೈಲ್‌ ಟವರ್‌ಗಳನ್ನು ಆಳವಡಿಸಿರುವುದುನ್ನು ನೀವು ಕಾಣಬಹುದು. ಇದರಿಂದ ಮೊಬೈಲ್‌ ಟವರ್‌ ಇನ್‌ಸ್ಟಾಲೇಶನ್‌ ಮಾಡುವುದಕ್ಕೆ ಅವಕಾಶ ಕೊಟ್ಟ ಮಾಲಿಕರಿಗೆ ಇಂತಿಷ್ಟು ಆದಾಯವನ್ನು ನೀಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ವಂಚಕರು ನಿಮ್ಮ ಆಸ್ತಿ ಅಥವಾ ಮನೆ ಮೇಲೆ ಟವರ್‌ ಅಳವಡಿಸುತ್ತೇವೆ ನಿಮಗೆ ತಿಂಗಳಿಗೆ ಇಂತಿಷ್ಟು ಹಣ ಬರಲಿದೆ ಎನ್ನುವ ಆಮಿಷ ಒಡುತ್ತಾರೆ. ಇದಕ್ಕಾಗಿ ನೀವು ಹಣ ಠೇವಣಿ ಇಡಬೇಕು ಎಂದು ಹೇಳಿ ಹಣ ತೆಗೆದುಕೊಂಡು ನಕಲಿ ಟವರ್‌ ಅನ್ನು ಇನ್‌ಸ್ಟಾಲೇಶನ್‌ ಮಾಡಿ ಹೋಗುತ್ತಾರೆ. ಇದರಿಂದ ನಿಮಗೆ ಯಾವುದೇ ರೀತಿಯ ಆದಾಯವಾಗಲಿ ಉಪಯೋಗವಾಗಲಿ ದೊರೆಯುವುದಿಲ್ಲ.

ತಂತ್ರಜ್ಞಾನ

ಇನ್ನು ವಂಚಕರು ಜನರನ್ನು ಯಾಮಾರಿಸುವುದಕ್ಕಾಗಿಯೇ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಪಡೆದಿರುವ ನಕಲಿ "ಆಕ್ಷೇಪಣೆ ಪ್ರಮಾಣಪತ್ರಗಳನ್ನು" ತೋರಿಸುತ್ತಾರೆ. ಇದನ್ನು ಸತ್ಯವೆಂದು ನಂಬುವ ಜನರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ. ಪ್ರಸ್ತುತ ಇಂಡಸ್ ಟವರ್ಸ್, ಅಮೇರಿಕನ್ ಟವರ್ ಕಾರ್ಪೊರೇಷನ್, ಸಮ್ಮಿಟ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್, ಅಸೆಂಡ್ ಟೆಲಿಕಾಂ, ಟವರ್ ವಿಷನ್ ನಂತಹ ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರಿಂದ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಆದರಿಂದ ನಕಲಿ ಮೊಬೈಲ್‌ ಟವರ್‌ ಇನ್‌ಸ್ಟಾಲೇಶನ್‌ ತಡೆಗಟ್ಟುವುದಕ್ಕಾಗಿ ಐಪಿಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಮೊಬೈಲ್‌

ಮೊಬೈಲ್‌ ಟವರ್‌ ಫ್ರಾಡ್‌ ಇನ್‌ಸ್ಟಾಲೇಶನ್‌ ತಡೆಗಟ್ಟುವುದಕ್ಕಾಗಿ ಟೋಲ್-ಫ್ರೀ ಸಂಖ್ಯೆಗಳು, ವೆಬ್‌ಸೈಟ್‌ಗಳು, ಇ-ಮೇಲ್‌ ಮೂಲಕ ಸಂಭಾವ್ಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ವಿವಿಧ ವಿಧಾನಗಳನ್ನು ರೂಪಿಸಿವೆ. ಇದರ ಜೊತೆಗೆ, DIPA ಟವರ್ ವಂಚನೆಗಳ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಲು ಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆ ಪ್ರಕಟಿಸಲು ಮುಂದಾಗಿದೆ ಎಂದು ಡಿಐಪಿಎ ಡಿಜಿ ಟಿಆರ್ ದುವಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಮೊಬೈಲ್ ಟವರ್‌ಗಳಿಗೆ ಸಂಬಂಧಿಸಿದ ವಂಚನೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನಿಜವಾದ ಟೆಲಿಕಾಂ ಸಿಬ್ಬಂದಿಯನ್ನು ಕೂಡ ಅಪನಂಬಿಕೆಯಿಂದ ನೋಡಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

ಸ್ಥಾಪಿಸಲಾಗಿರುತ್ತದೆ

ಇನ್ನು ನಿಮಗೆಲ್ಲಾ ತಿಳಿದಿರುವ ಹಾಗೇ ಮೊಬೈಲ್ ಟವರ್‌ಗಳು ತಡೆರಹಿತ ಸಂಪರ್ಕವನ್ನು ನೀಡುವುದಕ್ಕಾಗಿ ಸ್ಥಾಪಿಸಲಾಗಿರುತ್ತದೆ. ಇದರಿಂದ ವಿವಿಧ ನಿರ್ಣಾಯಕ ಸೇವೆಗಳನ್ನು ಬೆಂಬಲಿಸಲು ಮತ್ತು ರಾಜ್ಯಗಳಾದ್ಯಂತ ಸಂವಹನವನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಅಲ್ಲದೆ ಟೆಲಿಕಾಂ ಉದ್ಯಮವು ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದಕ್ಕೆ ಅವಕಾಶ ಸಿಗಲಿದೆ. ಆದರೆ ಫ್ರಾಡ್‌ ಟವರ್‌ಗಳಿಂದ ಮೊಬೈಲ್‌ ಟವರ್‌ಗಳನ್ನು ಇನ್‌ಸ್ಟಾಲೇಶನ್‌ ಮಾಡುವಲ್ಲಿ ತೊಂದರೆಯಾಗುತ್ತಿದೆ.

ಮೊಬೈಲ್

ದೇಶದಲ್ಲಿ ಮೊಬೈಲ್ ಟವರ್‌ಗಳನ್ನು ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಅಥವಾ ಮೂಲಸೌಕರ್ಯ ಪೂರೈಕೆದಾರರು (ಐಪಿ) ಸ್ಥಾಪಿಸುತ್ತಾರೆ. ಒಂದು ವೇಳೆ ನಿಮ್ಮನ್ನು ಮೊಬೈಲ್‌ ಟವರ್‌ ಇನ್‌ಸ್ಟಾಲೇಶನ್‌ ಮಾಡುತ್ತೇವೆ ಎಂದು ಯಾರಾದರೂ ಕೇಳಿಕೊಂಡು ಬಂದರೆ ಅವರಲ್ಲಿರುವ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಅಲ್ಲದೆ ನೀವು TSP ಅಥವಾ IP ಮೂಲಕ ಸಂಪರ್ಕಿಸಿದ್ದರೆ, dot.gov.in ನಲ್ಲಿ ದೂರಸಂಪರ್ಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಅನುಮೋದಿತ TSP ಗಳು ಮತ್ತು IP ಗಳ ನವೀಕರಿಸಿದ ಪಟ್ಟಿಯನ್ನು ನೋಡಬಹುದು. ಈ ಲಿಸ್ಟ್‌ನಲ್ಲಿ ನಿಮ್ಮನ್ನು ಬೇಟಿ ಮಾಡಿದ ಸಿಬ್ಬಂದಿ ಕಂಪೆನಿಯ ಹೆಸರಿದ್ದರೆ ಅದು ನಕಲಿಯೋ ಅಸಲಿಯೋ ಎಂದು ತಿಳಿಯುವುದು ಸುಲಭವಾಗಲಿದೆ.

ದೇಶದಲ್ಲಿ

ಇದಲ್ಲದೆ ದೇಶದಲ್ಲಿ ಸಿಗ್ನಲ್ ಬೂಸ್ಟರ್‌ಗಳು ಮತ್ತು ವಾಯರ್‌ಲೆಸ್ ಜಾಮರ್‌ಗಳ ಬಳಕೆಯ ಬಗ್ಗೆ ಕೂಡ ದೂರಸಂಪರ್ಕ ಇಲಾಖೆ (DoT) ಹೊಸ ಸಲಹೆಯನ್ನು ನೀಡಿದೆ. ವಾಯರ್‌ಲೆಸ್ ಜಾಮರ್ ಅಥವಾ ಸಿಗ್ನಲ್ ಜಾಮರ್, ಜಿಪಿಎಸ್ ಬ್ಲಾಕರ್ ಅಥವಾ ಇತರ ಸಿಗ್ನಲ್ ಜ್ಯಾಮಿಂಗ್ ಡಿವೈಸ್‌ಗಳ ಬಳಕೆಯ ಬಗ್ಗೆ ಹೊಸ ಸೂಚನೆ ನೀಡಿದೆ. ಈಗಾಗಲೇ ಭಾರತ ಸರ್ಕಾರ ನಿರ್ಧಿಷ್ಟವಾಗಿ ಅನುಮತಿಸಿರುವ ಸಂಸ್ಥೆಗಳು ಹೊರತು ಪಡಿಸಿ ಖಾಸಗಿಯವರು ಬಳಕೆ ಮಾಡಿದರೆ ಅದು ಕಾನೂನುಬಾಹಿರವಾಗಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.

ದೇಶದಲ್ಲಿ

ಸದ್ಯ ದೇಶದಲ್ಲಿ ಪೊಲೀಸ್ ಪಡೆಗಳು, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಮತ್ತು ರಕ್ಷಣಾ ಪಡೆಗಳು ಮಾತ್ರ ಕೇಂದ್ರ ಸರ್ಕಾರದಿಂದ ಅನುಮೋದಿಸಲಾದ ಸಿಗ್ನಲ್ ಜಾಮರ್ ಮಾದರಿಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಖಾಸಗಿ ವಲಯದ ಯಾವುದೇ ಸಂಸ್ಥೆಗಳು ಅಥವಾ ವ್ಯಕ್ತಿಗಳು ಸಿಗ್ನಲ್ ಜಾಮರ್‌ಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ಇಂತಹ ಖಾಸಗಿ ಉತ್ಪನ್ನಗಳ ಬಗ್ಗೆ ಜಾಹಿರಾತಿ ಮಾಡುವುದು ಕೂಡ ಅಪರಾದ ಎಂದು ಹೇಳಲಾಗಿದೆ. ಈ ರೀತಿ ಅನಧಿಕೃತವಾಗಿ ಸಿಗ್ನಲ್‌ ಜಾಮರ್‌ಗಳನ್ನು ಬಳಕೆ ಮಾಡುವುದರಿಂದ ಸಾರ್ವಜನಿಕ ದೂರಸಂಪರ್ಕ ಸೇವೆಗಳ ಅಡ್ಡಿಗೆ ಕಾರಣವಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ.

Best Mobiles in India

English summary
Telecom industry warns regarding fake mobile tower installation

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X