ಆರಂಭಕ್ಕೂ ಮುನ್ನವೇ ಪೇಮೆಂಟ್ ಸೇವೆ ಬಳಕೆಗೆ ಮಿತಿ ವಿಧಿಸಿದ ವಾಟ್ಸ್‌ಆಪ್‌..!

|

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಭಾರತೀಯ ಡಿಜಿಟಲ್ ಪೇಮೆಂಟ್ ಮಾರುಕಟ್ಟೆಗೆ ಎಂಟ್ರಿಯನ್ನು ಪಡೆದುಕೊಂಡಿದೆ. ಈಗಾಗಲೇ ಪರೀಕ್ಷೆ ಹಂತದಲ್ಲಿರುವ ಪೇಮೆಂಟ್ ಸೇವೆಯೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ದೇಶದಲ್ಲಿ ಡಿಜಿಟಲ್ ಪೇಮೆಂಟ್ ಸೇವೆಯೂ ಅಧಿಕವಾಗುತ್ತಿರುವ ಸಂದರ್ಭದಲ್ಲಿಯೇ ಮಾರುಕಟ್ಟೆಯನ್ನು ಪ್ರವೇಶಿಸಿರುವ ವಾಟ್ಸ್ಆಪ್ ಪೇಮೆಂಟ್ ಕೊಂಚ ವಿಭಿನ್ನವಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ.

ಆರಂಭಕ್ಕೂ ಮುನ್ನವೇ ಪೇಮೆಂಟ್ ಸೇವೆ ಬಳಕೆಗೆ ಮಿತಿ ವಿಧಿಸಿದ ವಾಟ್ಸ್‌ಆಪ್‌..!

ದೇಶದಲ್ಲಿ ಮೊಬೈಲ್ ಪೇಮೆಂಟ್ ಆಪ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಇದೇ ಮಾದರಿಯಲ್ಲಿ ಸದ್ಯ ಪರೀಕ್ಷೆಯ ಹಂತದಲ್ಲಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯು ದಿನಕ್ಕೊಂದು ಹೊಸ ಆಪ್‌ಡೇಟ್ ಅನ್ನು ಬಳಕೆದಾರರಿಗೆ ನೀಡುತ್ತಿದೆ. ಈ ಮೂಲಕ ಹೊಸ ಹಾಗೂ ಸುಧಾರಿತ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಸದ್ಯ ಹೆಚ್ಚಿನ ಬ್ಯಾಂಕ್‌ಗಳು ವಾಟ್ಸ್‌ಆಪ್ ಪೇಮೆಂಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ UPI ಪೇಮೆಂಟ್ ಅನ್ನು ದಿನಕ್ಕೆ ಕೇವಲ 20 ಬಾರಿ ಮಾಡುವ ಮಿತಿಯನ್ನು ವಿಧಿಸಿದೆ ಎನ್ನಲಾಗಿದೆ.

ಇದಲ್ಲದೇ ಹಣ ಕಳುಹಿಸುವುದಕ್ಕೂ ಮಿತಿಯನ್ನು ವಿಧಿಸಿರುವ ವಾಟ್ಸ್‌ಆಪ್, ದಿನವೊಂದಕ್ಕೆ ರೂ.1,00,000 ಮಾತ್ರವೇ ಕಳುಹಿಸಲು ಅನುಮತಿಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿರುವ ಬೇರೆ ಆಪ್‌ಗಳು ಯಾವುದೇ ಮಿತಿ ಇಲ್ಲದೇ ಹಣವನ್ನು ಕಳುಹಿಸುವ ಮತ್ತು ಮಿತಿ ಇಲ್ಲದೇ ಪೇಮೆಂಟ್ ಮಾಡುವ ಅವಕಾಶವನ್ನು ಬಳಕೆದಾರರಿಗೆ ನೀಡಿವೆ. ಇದರಿಂದ ವಾಟ್ಸ್‌ಆಪ್‌ಗೆ ಹಿನ್ನಡೆಯಾಗುವ ಸಾಧ್ಯತೆ ಅಧಿಕವಾಗಿದೆ.

ಓದಿರಿ: ವರ್ಷಕ್ಕೆ 1000 GB ಜಿಯೋ ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

ಈಗಾಗಲೇ ವಾಟ್ಸ್‌ಆಪ್ 200 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಈ ಮೂಲಕ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಪೇಮೆಂಟ್ ಆಪ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಗೂಗಲ್ ತೇಜ್, ಫೋನ್ ಪೇ ಮತ್ತು ಪೇಟಿಎಂ ನೊಂದಿಗೆ ಸ್ಪರ್ಧೆಯನ್ನು ನೀಡುತ್ತಿದೆ. ಆದರೆ ಬಳಕೆದಾರರ ಸಂಖ್ಯೆಯಲ್ಲಿ ಇತರೇ ಎಲ್ಲಾ ಆಪ್‌ಗಳಿಗಿಂತಲೂ ವಾಟ್ಸ್‌ಆಪ್ ಹೆಚ್ಚಿನದನ್ನು ಪಡೆದುಕೊಂಡಿದೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

ಈ ಹೊಸ ಆಯ್ಕೆಯೊಂದಿಗೆ ವಾಟ್ಸ್‌ಆಪ್ ತನ್ನ ಗ್ರೂಪ್‌ಗಳ ಕುರಿತು ವಿವರಣೆಯನ್ನು ನೀಡುವ ಹೊಸ ಆಯ್ಕೆಯನ್ನು ನೀಡಿದ್ದು, ಇದರಲ್ಲಿ ಗ್ರೂಪ್ ಆಡ್‌ಮಿನ್‌ಗಳು ತಮ್ಮ ಗ್ರೂಪ್‌ ಹೇಗೆ ಕಾರ್ಯನಿರ್ವಹಿಸಲಿದೆ, ಗೂಪ್ ನಿಯಮಗಳೇನು ಎಂಬುದನ್ನು 500 ಪದಗಳಲ್ಲಿ ವಿವರಿಸಲು ಅವಕಾಶವನ್ನು ಮಾಡಕೊಟ್ಟಿದೆ.

ಓದಿರಿ: ಕನ್ನಡದಲ್ಲೇ ಇಂಗ್ಲೀಷ್ ಕಲಿಸುವ ಆಪ್: ಹಲೋ ಹೇಳಿ ಇಂಗ್ಲೀಷ್‌ಗೆ..!

Best Mobiles in India

English summary
WhatsApp likely lets you do 20 UPI payments per day. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X