10 ಸಾವಿರ ರೂಪಾಯಿಗಳಿಗೆ ಲಭ್ಯವಿರುವ ಲ್ಯಾಪ್‌ಟಾಪ್‌ಗಳು ಇವು!!

ಆರ್‌ಡಿಪಿ 1130 ಮತ್ತು 1430 ಎಂಬ ನೂತನ ಮಾದರಿಯ ಆರ್‌ಡಿಪಿ ಕಂಪೆನಿಯ ತಿನ್‌ಬುಕ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇವುಗಳ ಬೆಲೆಗಳು ಕ್ರಮವಾಗಿ 10,499 ಮತ್ತು 12,000 ರೂಪಾಯಿಗಳಾಗಿವೆ.

|

ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬೇಕು ಎಂದು ಹುಡುಕುತ್ತಿದ್ದರೆ ಇಂದಿನ ಲೇಖನದಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಆರ್‌ಡಿಪಿ ತಿನ್‌ಬುಕ್‌ ಲ್ಯಾಪ್‌ಟಾಪ್‌ಗಳ ಬಗ್ಗೆ ತಿಳಿಯಿರಿ. ಏಕೆಂದರೆ ಟು-ಇನ್-ಒನ್ ಕಾಲದಲ್ಲಿಯೂ ಹಳೆಯ ಲ್ಯಾಪ್‌ಟಾಪ್‌ಗಳ ರೀತಿಯಲ್ಲಿ ಕಡಿಮೆ ಬೆಲೆಗೆ ಆರ್‌ಡಿಪಿ ಕಂಪೆನಿಯ ತಿನ್‌ಬುಕ್‌ಗಳು ಬಿಡುಗಡೆಯಾಗಿವೆ.!!

ಹೌದು, ಆರ್‌ಡಿಪಿ 1130 ಮತ್ತು 1430 ಎಂಬ ನೂತನ ಮಾದರಿಯ ಆರ್‌ಡಿಪಿ ಕಂಪೆನಿಯ ತಿನ್‌ಬುಕ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇವುಗಳ ಬೆಲೆಗಳು ಕ್ರಮವಾಗಿ 10,499 ಮತ್ತು 12,000 ರೂಪಾಯಿಗಳಾಗಿವೆ. ಹಾಗಾದರೆ, ಈ ತಿನ್‌ಬುಕ್‌ ಲ್ಯಾಪ್‌ಟಾಪ್‌ಗಳು ಹೇಗಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಿನ್‌ಬುಕ್‌ಗಳ ಗುಣಮಟ್ಟ ಹೇಗಿದೆ?

ತಿನ್‌ಬುಕ್‌ಗಳ ಗುಣಮಟ್ಟ ಹೇಗಿದೆ?

ಆರ್‌ಡಿಪಿ 1130 ಮತ್ತು 1430 ಮಾದರಿ ತಿನ್‌ಬುಕ್‌ಗಳು ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳು ಎಂದು ಕೈಯಲ್ಲಿ ಹಿಡಿದಾಗಲೆ ತಿಳಿಯುತ್ತದೆ. ಕೇವಲ ಪ್ಲಾಸ್ಟಿಕ್ ಮೂಲಕವೇ ಇವುಗಳ ತಯಾರಿಕೆ ಮಾಡಲಾಗಿದ್ದು, ಪರದೆ ಕೂಡ ಕಡಿಮೆ ಬೆಲೆಯದ್ದಾಗಿದೆ.! ಹಾಗಾಗಿ, ಎಚ್ಚರಿಕೆಯಿಂದ ಬಳಸದಿದ್ದರೆ ಇವುಗಳು ಸುದೀರ್ಘ ಕಾಲ ಬಾಳಿಕೆ ಬರುವುದು ಅನುಮಾನ.!!

ತಿನ್‌ಬುಕ್‌ಗಳ ವಿನ್ಯಾಸ ಹೇಗಿದೆ?

ತಿನ್‌ಬುಕ್‌ಗಳ ವಿನ್ಯಾಸ ಹೇಗಿದೆ?

ಎರಡು ಯುಎಸ್‌ಬಿ ಪೋರ್ಟ್, ಮಿನಿ ಎಚ್‌ಡಿಎಂಐ ಪೋರ್ಟ್, 3.5 ಮಿ.ಮೀ ಇಯರ್‌ಫೋನ್ ಜಾಕ್ ಹಾಗೂ ಮೆಮೊರಿ ಕಾರ್ಡ್‌ ಹಾಕಲು ತಿನ್‌ಬುಕ್‌ ಲ್ಯಾಪ್‌ಗಳಲ್ಲಿ ಸಾಧ್ಯವಿದೆ. ಮಧ್ಯಭಾಗದಲ್ಲಿ ಟಚ್‌ಪ್ಯಾಡ್ ಇರದ್ದು, ಪ್ಯಾಡ್ಗಿಂತ ಮೌಸ್ ಮೂಲಕ ಕಾರ್ಯನಿರ್ವಹಣೆ ಉತ್ತಮವಾಗಿದೆ.!!

ತಿನ್‌ಬುಕ್‌ಗಳ ಮೆಮೊರಿ.!!

ತಿನ್‌ಬುಕ್‌ಗಳ ಮೆಮೊರಿ.!!

ಈ ಲ್ಯಾಪ್‌ಟಾಪ್‌ಗಳು ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆ ಮೆಮೊರಿ ಶಕ್ತಿಯನ್ನು ಹೊಂದಿವೆ.! 2GB RAM ಮತ್ತು 32GB ಮೆಮೊರಿ ಈ ತಿನ್‌ಬುಕ್ ಲ್ಯಾಪ್‌ಟಾಪ್‌ಗಳಲ್ಲಿದ್ದು, ಎಸ್‌ಡಿ ಮೆಮೊರಿ ಕಾರ್ಡ್ ಮೂಲಕ 128 ವರೆಗೂ ಮೆಮೊರಿ ಹೆಚ್ಚಿಸಬಹುದು. ಜೊತೆಗೆ ಯುಎಸ್‌ಬಿ ಮೂಲಕ ಹಾರ್ಡ್‌ಡಿಸ್ಕ್ ಜೋಡಿಸಿಕೊಳ್ಳಬಹುದು.!!

ಸಾಮಾನ್ಯ ಕೆಲಸಕ್ಕೆ ಮಾತ್ರ!!

ಸಾಮಾನ್ಯ ಕೆಲಸಕ್ಕೆ ಮಾತ್ರ!!

ವಿಂಡೋಸ್ 10 ಮೂಲಕ ಕಾರ್ಯನಿರ್ವಹಣೆ ನೀಡುವ ಈ ತಿನ್‌ಬುಕ್ ಲ್ಯಾಪ್‌ಟಾಪ್‌ಗಳು ಅಧಿಕ ಪ್ರಾಸೆಸಿಂಗ್ ಕೆಲಸಕ್ಕೆ ಉತ್ತಮವಲ್ಲ ಎನ್ನಬಹುದು. ಅಂತರಜಾಲ ವೀಕ್ಷಣೆ, ಇಮೇಲ್, ಆಫೀಸ್ ಕೆಲಸಗಳಿಗೆ ಮಾತ್ರ ಈ ತಿನ್‌ಬುಕ್ ಲ್ಯಾಪ್‌ಟಾಪ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ, ಅಷ್ಟು ಅವಶ್ಯಕತೆ ಇದ್ದರಷ್ಟೆ ಇವುಗಳನ್ನು ಖರೀದಿಸಬಹುದು.!!

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ತಿನ್‌ಬುಕ್‌ಗಳ ಬ್ಯಾಟರಿ ಹೇಗಿದೆ?

ತಿನ್‌ಬುಕ್‌ಗಳ ಬ್ಯಾಟರಿ ಹೇಗಿದೆ?

ಎಲ್ಲದರಲ್ಲಿಯೂ ಬಹುತೇಕ ಎಡವಿರುವ ತಿನ್‌ಬುಕ್‌ಗಳು ಉತ್ತಮ ಬ್ಯಾಟರಿ ಶಕ್ತಿ ಹೊಂದಿವೆ. ಸುಮಾರು 8 ರಿಂದ 9 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. 4k ವಿಡಿಯೊಗಳ ವೀಕ್ಷಣೆ ಅನುಭವ ಕೂಡ ಪರವಾಗಿಲ್ಲ ಎನ್ನಬಹುದಾಗಿದ್ದು, ನೀಡುವ ಹಣಕ್ಕೆ ತೃಪ್ತಿದಾಯಕವಾಗಿದೆ ಎನ್ನಬಹುದು.

ಒಂದೇ ದಿನದಲ್ಲಿ ವಿಶ್ವದೆಲ್ಲೆಡೆ ಹೆಸರಾಯ್ತು ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!ಒಂದೇ ದಿನದಲ್ಲಿ ವಿಶ್ವದೆಲ್ಲೆಡೆ ಹೆಸರಾಯ್ತು ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

Best Mobiles in India

English summary
Get all the latest news and updates on X Rdp Thinbook 1430p Launch only on gizbot.com. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X