ವಾಟ್ಸ್‌ಆಪ್‌ನಲ್ಲಿ ಮಾರ್ಕ್‌ ಆಸ್ ರೀಡ್ ಫೀಚರ್ ಬಳಸುವುದು ಹೇಗೆ?

By GizBot Bureau
|

ಇತ್ತೀಚೆಗಷ್ಟೇ ಫಾರ್ವಡ್ ಲೇಬಲ್, ಗ್ರೂಪ್ ವೀಡಿಯೋ ಕಾಲಿಂಗ್ ವೈಶಿಷ್ಟ್ಯತೆಯನ್ನು ವಾಟ್ಸ್ ಆಪ್ ನಲ್ಲಿ ಪಡೆದಿರುವುದಾಗಿದೆ. ಇದೀಗ ಫೇಸ್ ಬುಕ್ ಮಾಲೀಕತ್ವದ ಇನ್ಸ್ ಟೆಂಟ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ವಾಟ್ಸ್ ಆಪ್ ನಲ್ಲಿ ಹೊಸ ವೈಶಿಷ್ಟ್ಯತೆಯೊಂದು ಬರುವ ಬಗ್ಗೆ ತಿಳಿದುಬಂದಿದೆ. ಇತ್ತೀಚೆಗೆ ವಾಟ್ಸ್ ಆಪ್ ನಲ್ಲಿ ಹಲವಾರು ಹೊಸ ವೈಶಿಷ್ಟ್ಯತೆಗಳು ಕಾಣಿಸುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರವೇ ಆಗಿದೆ. ನಿನ್ನೆ ಅಷ್ಟೇ ಮಾರ್ಕ್ ಆಸ್ ರೀಡ್ ಅನ್ನೋ ವೈಶಿಷ್ಟ್ಯತೆಯು ಬರಲಿದೆ ಎಂಬ ಬಗ್ಗೆ ನಾವೇ ನಿಮಗೆ ತಿಳಿಸಿದ್ದೆವು.

ವಾಟ್ಸ್‌ಆಪ್‌ನಲ್ಲಿ ಮಾರ್ಕ್‌ ಆಸ್ ರೀಡ್ ಫೀಚರ್ ಬಳಸುವುದು ಹೇಗೆ?

ಇದು ನಿಮಗೆ ನೋಟಿಫಿಕೇಷನ್ ಬಾರ್ ನಲ್ಲೇ ಮೆಸೇಜ್ ನ್ನು ತೆರೆಯದೇ ಓದಿದ್ದೀರಿ ಎಂದು ಮಾರ್ಕ್ ಮಾಡಲು ಅವಕಾಶ ನೀಡುತ್ತದೆ ಮತ್ತು ನಿಮಗೆ ಮೆಸೇಜ್ ನೀಡಿದವರಿಗೆ ನೀಲಿ ಟಿಕ್ ಮೂಲಕ ನೀವು ಮೆಸೇಜ್ ಓದಿರುವ ಸಂಕೇತವನ್ನು ರವಾನಿಸುತ್ತದೆ. ಇದುವರೆಗೂ ಒಂದು ಮೆಸೇಜ್ ಓದಬೇಕು ಎಂದರೆ ಅದನ್ನು ಆಪ್ ತೆರೆದೇ ನೋಡಬೇಕಿತ್ತು. ಈಗ ಹಾಗಲ್ಲ, ಮೆಸೇಜ್ ಬಂದ ನೋಟಿಫಿಕೇಷನ್ ಸಿಕ್ಕಿದೊಡನೆ ಅಲ್ಲಿಯೇ ಮಾರ್ಕ್ ಮಾಡಿ ಬಿಡಬಹುದು ಅದಕ್ಕಾಗಿ ನೀವು ಮೆಸೇಜ್ ನ್ನು ಸಂಪೂರ್ಣವಾಗಿ ತೆರೆದು ನೋಡಬೇಕಾಗಿರುವ ಅಗತ್ಯವಿಲ್ಲ.

ಹಾಗಾದ್ರೆ ಈ ಹೊಸ ವೈಶಿಷ್ಟ್ಯ ಮಾರ್ಕ್ ಆಸ್ ರೀಡ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ನಿಮಗೆ ಕುತೂಹಲಗಳಿರಬಹುದು. ಆ ಬಗೆಗಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಗಮನಿಸಿ.

ಮೊದಲು ಬಂದದ್ದಕ್ಕೆ ಮೊದಲು ಆದ್ಯತೆ:

ಸದ್ಯಕ್ಕೆ ಈ ವೈಶಿಷ್ಟ್ಯವು ಆಪ್ ನ ಬೆಟಾ ವರ್ಷನ್ ನಲ್ಲಿ ಮಾತ್ರ ಲಭ್ಯವಿದೆ. ಇದಕ್ಕಾಗಿ ಬಳಕೆದಾರರು ವಾಟ್ಸ್ ಆಪ್ ನ ಬೆಟಾ ಪ್ರೊಗ್ರಾಮ್ ನ್ನು ಎನ್ರೋಲ್ ಮಾಡಿಕೊಳ್ಳಬೇಕಾಗುತ್ತದೆ. ಆಂಡ್ರಾಯ್ಡ್ ನ ವಾಟ್ಸ್ ಆಪ್ ಬೆಟಾ ಪ್ರೊಗ್ರಾಮ್ ವಾಟ್ಸ್ ಆಪ್ ನಲ್ಲಿ ಮುಂಬರುವ ವೈಶಿಷ್ಟ್ಯತೆಗಳ ಟೆಸ್ಟಿಂಗ್ ಗೆ ಅವಕಾಶ ನೀಡುತ್ತದೆ.

ಮಾರ್ಕ್ ಆಸ್ ರೀಡ್ ವೈಶಿಷ್ಟ್ಯತೆ ಹೇಗಿದೆ?

1. ನಿಮ್ಮ ಫೋನಿನ ನೋಟಿಫಿಕೇಷನ್ ಪೆನಲ್ ನ್ನು ಫೋನಿನ ಮೇಲಿನಿಂದ ಸ್ವೈಪ್ ಮಾಡಿ ತೆರೆಯಿರಿ. ಸದ್ಯ ಎಲ್ಲರೂ ಬಳಕೆ ಮಾಡುತ್ತಿರುವ ವಿಧಾನ ಇದು.

2. ವಾಟ್ಸ್ ಆಪ್ ನೋಟಿಫಿಕೇಷನ್ ನ್ನು ಎಕ್ಸ್ ಪಾಂಡ್ ಮಾಡಿ.

4. ಇಲ್ಲಿ ನೀವು ಮಾರ್ಕ್ ಆಸ್ ರೀಡ್ ಆಯ್ಕೆ ಯನ್ನು ಗಮನಿಸಬಹುದು .

4. ಮಾರ್ಕ್ ಆಸ್ ರೀಡ್ ಆಯ್ಕೆಯನ್ನು ಟ್ಯಾಪ್ ಮಾಡಿ.

5. ಬಳಕೆದಾರರಿಗೆ ವಾಟ್ಸ್ ಆಪ್ ನೋಟಿಫಿಕೇಷನ್ ಪೆನಲ್ ನಲ್ಲೇ ಒಮ್ಮೆಲೆ ಎಲ್ಲಾ ಮೆಸೇಜ್ ಗಳನ್ನು ಮಾರ್ಕ್ ಆಸ್ ರೀಡ್ ಮಾಡಲು ಅವಕಾಶ ನೀಡುತ್ತದೆ.

ವಾಟ್ಸ್ ಆಪ್ ನ ಬೆಟಾ ಸದಸ್ಯರಾಗುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ಗೂಗಲ್ ಪ್ಲೇ ಸ್ಟೋರ್ ನ್ನು ತೆರೆಯಿರಿ ಮತ್ತು ವಾಟ್ಸ್ ಆಪ್ ನ್ನು ಹುಡುಕಾಡಿ.

2. ಈಗ ವಾಟ್ಸ್ ಆಪ್ ಆಯ್ಕೆಯನ್ನು ಟ್ಯಾಪ್ ಮಾಡಿ

3. 'Become a beta tester’ ಆಯ್ಕೆ ಸಿಗುವವರೆಗೆ ಸ್ಕ್ರೋಲ್ ಡೌನ್ ಮಾಡಿ.

4. ಎನ್ರೋಲ್ ಮಾಡಲು 'I’m in’ ಬಟನ್ ನ್ನು ಟ್ಯಾಪ್ ಮಾಡಿ.

ಈಗ ನೀವು ವಾಟ್ಸ್ ಆಪ್ ನ ನೂತನ ವಾಟ್ಸ್ ಆಪ್ ಬೆಟಾ ಅಪ್ ಡೇಟ್ ನ್ನು ಪಡೆಯುತ್ತೀರಿ.

Best Mobiles in India

English summary
How to use the new ‘mark as read’ feature in WhatsApp. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X