ಲೀಕೊ ಡ್ರೈವರ್‌ಲೆಸ್‌ ಕಾರು: ತಿಳಿಯಲೇ ಬೇಕಾದ 7 ವಿಶೇಷತೆಗಳು!!

By Suneel
|

ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಲೀಕೊ ತನ್ನ ಸ್ಮಾರ್ಟ್‌ಫೋನ್‌ ತಯಾರಿಕೆ ಜೊತೆಗೆ ಡ್ರೈವರ್‌ ರಹಿತ ಕಾರು ಅಭಿವೃದ್ದಿಪಡಿಸಿದೆ. ಅಂದಹಾಗೆ ಲೀಕೊ ತನ್ನ ಸೂಪರ್‌ ಕಾರನ್ನು ಬೀಜಿಂಗ್ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿತ್ತು. ಆದರೆ ಸೂಪರ್‌ ಪವರ್‌ನ ಈ ಎಲೆಕ್ಟ್ರಿಕ್‌ ಕಾರಿನ ಬಗ್ಗೆ ವಿಶೇಷತೆಗಳು ಬಹುಸಂಖ್ಯಾತರಿಗೆ ತಿಳಿದಿಲ್ಲಾ. ಅಲ್ಲದೇ ಇದು ಪರಿಸರ ಸ್ನೇಹಿ ಕಾರ್‌ ಆಗಿದೆ. ಶಾರ್ಟ್‌ ಅಂಡ್‌ ಸ್ವೀಟ್‌ ಆಗಿ ಇದನ್ನ SEE (Super Electric Ecosystem) ಎಂದು ಕರೆಯುತ್ತಾರೆ. ಸೂಪರ್‌ ಎಲೆಕ್ಟ್ರಿಕ್‌ ಕಾರಿನ ಬಗ್ಗೆ ಬಹುಸಂಖ್ಯಾತರು ತಿಳಿಯದ ವಿಶೇಷ ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿರಿ.

ಲೀಕೊ

ಲೀಕೊ

ಲೀಕೊ ತನ್ನ ಸೂಪರ್‌ ಕಾರು "LeSee" ಅಭಿವೃದ್ದಿಗಾಗಿ ಅಸ್ಟಾನ್‌ ಮಾರ್ಟಿನ್‌ ಮತ್ತು ಫ್ಯಾರಡೆ ಫ್ಯೂಚರ್‌ ಪಾಲುದಾರಿಕೆ ಹೊಂದಿತ್ತು.

ಎಲ್‌ಇಡಿ ಡಿಸ್‌ಪ್ಲೇ

ಎಲ್‌ಇಡಿ ಡಿಸ್‌ಪ್ಲೇ

"LeSee" LED ಡಿಸ್‌ಪ್ಲೇ ಹೊಂದಿದ್ದು, ಹೇಗೆ ಚಲಿಸುತ್ತದೆ ಎಂದು ಡಿಸ್‌ಪ್ಲೇನಲ್ಲಿ ತೋರಿಸುತ್ತದೆ. ಈ ಕಾರು ಸ್ವತಃ 130 km/h ವೇಗದಲ್ಲಿ ಚಲಿಸುತ್ತದೆ.

ಆಟೋಮೆಟಿಕ್‌ ಡ್ರೈವಿಂಗ್

ಆಟೋಮೆಟಿಕ್‌ ಡ್ರೈವಿಂಗ್

"LeSee" ಕಾರು ಆಟೋಮೆಟಿಕ್‌ ಡ್ರೈವಿಂಗ್‌, ಪಾರ್ಕಿಂಗ್‌ ನಿಯಂತ್ರಣ, ವಾಯ್ಸ್ ಸಲಹೆಗಳನ್ನು ಸಹ ಹೊಂದಿದೆ. ಮುಖ ಗುರುತಿಸುವಿಕೆ, ಮಾರ್ಗ ಗುರುತಿಸುವಿಕೆ ಮತ್ತು ಭಾವನೆಯ ಗುರುತಿಸುವಿಕೆ ಫೀಚರ್ ಹೊಂದಿದೆ.

 ಮಡಿಚಿಕೊಳ್ಳುವ ಫೀಚರ್

ಮಡಿಚಿಕೊಳ್ಳುವ ಫೀಚರ್

ಸೂಪರ್ ಕಾರು ಸ್ಟೀರಿಂಗ್ ಚಕ್ರಗಳನ್ನು ಮಡಿಚಿಕೊಳ್ಳುವ ಫೀಚರ್ ಹೊಂದಿದೆ. ಸ್ಟೀರಿಂಗ್ ಒಮ್ಮೆ ಮಡಿಚಿಕೊಂಡರೆ ಕಾರು ಸೆಲ್ಪ್‌ ಡ್ರೈವಿಂಗ್ ಮೋಡ್‌ ಪಡೆಯುತ್ತದೆ.

ಸ್ಪರ್ಧೆ

ಸ್ಪರ್ಧೆ

ಲೀಕೊ ಎಲೆಕ್ಟ್ರಿಕ್‌ ಬ್ಯಾಟರಿ ಕಾರು ತೆಸ್ಲಾ ಮೋಟರ್‌ ಕಂಪನಿಯ ಮಾಡೆಲ್‌ 'ಎಸ್‌' ಜೊತೆ ಸ್ಪರ್ಧೆಯಾಗಿ ನಿಲ್ಲಬಲ್ಲದು ಎಂದು ನಿರೀಕ್ಷೆ ಹೊಂದಿದೆ.

 ಕಾರಿನಲ್ಲಿ ವೀಡಿಯೋ, ಸಂಗೀತ

ಕಾರಿನಲ್ಲಿ ವೀಡಿಯೋ, ಸಂಗೀತ

ಕಾರಿನಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಸ್ಥಳ ವಿಶಾಲವಾಗಿದ್ದು, ಇತರರಿಗೆ ಸಮಸ್ಯೆ ಆಗದಂತೆ ಸಂಗೀತ ಕೇಳಬಹುದು ಮತ್ತು ವೀಡಿಯೋ ವಾಚ್ ಮಾಡಬಹುದಾಗಿದೆ.

ಸೆಲ್ಫ್‌ ಡ್ರೈವಿಂಗ್  ಟ್ಯಾಕ್ಸಿ

ಸೆಲ್ಫ್‌ ಡ್ರೈವಿಂಗ್ ಟ್ಯಾಕ್ಸಿ

"LeSee" ಸ್ವತಃ ಸೆಲ್ಫ್‌ ಡ್ರೈವಿಂಗ್ ಟ್ಯಾಕ್ಸಿಯಾಗಿಯೂ ಸಹ ಕಾರ್ಯನಿರ್ವಹಿಸಬಲ್ಲದು. ಈ ವಿನ್ಯಾಸ ಸಣ್ಣ ಲೈಟ್ ಹೊಂದಿದ್ದು, ಇತರರನ್ನು ಪಿಕ್‌ ಮಾಡುವುದಾದರೆ ಲೈಟ್‌ ಸೂಚನೆ ನೀಡುತ್ತದೆ ಎಂದು ಲೀಕೋ ಹೇಳಿದೆ.

ಮೆಸೇಜ್‌ ಮಾಡ..." data-gal-src="kannada.gizbot.com/img/600x100/img/2016/04/22-1461323962-21-1453372019-19-1453216417-technology.jpg">
ಗಿಜ್‌ಬಾಟ್‌

ಗಿಜ್‌ಬಾಟ್‌

<strong>ಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕ</strong>ಮೆಸೇಜ್‌ ಮಾಡಿ 15 ಜನರ ಪ್ರಾಣ ಕಾಪಾಡಿದ 7 ವರ್ಷದ ಬಾಲಕ

ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

Best Mobiles in India

English summary
7 things to know about LeEco's first driverless car. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X