ಪ್ರತಿ 3 ಕಿ.ಮೀ.ಗೆ ಒಂದು ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್: ಕೇಂದ್ರ ಸರ್ಕಾರ

|

ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕ್ರಮವಾಗಿ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಮೂರು ಕಿ.ಮೀ.ಗೆ ಒಂದು ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗುತ್ತದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 50 ಕಿ.ಮೀ.ಗೆ ಒಂದು ಚಾರ್ಜಿಂಗ್ ಕೇಂದ್ರ ಆರಂಭಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಇಂಧನ ವಾಹನಗಳಿಗಿಂತ ವಿದ್ಯುತ್ ಚಾಲಿತ ವಾಹನಗಳನ್ನು ಪ್ರೋತ್ರಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಮುಂದಾಗಿದೆ. ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಸಂಬಂಧ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಇಂಧನ ಸಚಿವಾಲಯದ ಜತೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರತಿ 3 ಕಿ.ಮೀ.ಗೆ ಒಂದು ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್!!

ವಿದ್ಯುತ್‌ ಚಾಲಿತ ವಾಹನಗಳನ್ನು ಪ್ರೋತ್ರಾಹಿಸುವ ಸಲುವಾಗಿ ರಾಜ್ಯ ಸರ್ಕಾರದ ಇ ಮೊಬಿಲಿಟಿ ಸೇವೆಗಳು ಸೇರಿದಂತೆ ಕೇಂದ್ರ ಸರ್ಕಾರದ ಹಲವು ಮಹತ್ವಾಕಾಂಕ್ಷೆ ಯೋಜನೆಗಳು ಇಂದು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಿಲು ಅತ್ಯುತ್ತಮ ಸಮಯವನ್ನು ಸೃಷ್ಟಿಸಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಿಲು ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ? ವಿದ್ಯುತ್ ಚಾಲಿತ ಕಾರುಗಳ ವಿಶೇಷತೆ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ

2030ರ ಹೊತ್ತಿಗೆ ದೇಶದಲ್ಲಿನ ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳು ಮತ್ತು ಖಾಸಗಿ ಬಳಕೆಯ ಶೇ 40ರಷ್ಟು ವಾಹನಗಳು ವಿದ್ಯುತ್‌ ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಗುರಿಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಸಬ್ಸಿಡಿ ಸೇರಿಂದರೆ ಹಲವು ಸಾರ್ವನಿಕ ಸುಲಭ ನಿಯಮಗಳನ್ನು ಸಹ ಜಾರಿಗೆ ತಂದಿದೆ.

ಫೇಮ್ ಇಂಡಿಯಾ ಸ್ಕೀಮ್‌

ಫೇಮ್ ಇಂಡಿಯಾ ಸ್ಕೀಮ್‌

ಕೇಂದ್ರ ಸರ್ಕಾರವು 2015ರಲ್ಲಿಯೇ ರೂಪಿಸಿರುವ ವಿದ್ಯುತ್‌ಚಾಲಿತ ವಾಹನಗಳ ತ್ವರಿತ ಅಳವಡಿಕೆ ಮತ್ತು ತಯಾರಿಕಾ ನೀತಿ ಇದಾಗಿದೆ.ವಿದ್ಯುತ್‌ ತಂತ್ರಜ್ಞಾನ ಆಧಾರಿತ ವಾಹನಗಳ ತಯಾರಿಕೆ ಮತ್ತು ಮಾರಾಟಕ್ಕೆ ಹಣಕಾಸು ಉತ್ತೇಜನಾ ಕ್ರಮಗಳನ್ನು ನೀಡಲು ಈ ನೀತಿಯನ್ನು ರೂಪಿಸಲಾಗಿದೆ.

ವಿದ್ಯುತ್‌ಚಾಲಿತ ವಾಹನ ಅಭಿವೃದ್ಧಿ!

ವಿದ್ಯುತ್‌ಚಾಲಿತ ವಾಹನ ಅಭಿವೃದ್ಧಿ!

ಪರಿಸರಸ್ನೇಹಿ ವಿದ್ಯುತ್‌ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳು ವಾಗ್ದಾನ ಮಾಡಿವೆ. ಮಾರುತಿ ಸುಜುಕಿ, ಮಹೀಂದ್ರಾ ಎಲೆಕ್ಟ್ರಿಕ್ ಸೇರಿ ಹಲವು ಕಾರು ತಯಾರಕಾ ಕಂಪೆನಿಗಳು ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆಗೆ ಮುಂದಾಗಿವೆ.

ಹೊಸ ರಾಷ್ಟ್ರೀಯ ವಾಹನ ನೀತಿ

ಹೊಸ ರಾಷ್ಟ್ರೀಯ ವಾಹನ ನೀತಿ

ವಿದ್ಯುತ್‌ ಚಾಲಿತ ಮತ್ತು ಇಂಧನ ಮತ್ತು ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಾಹನ ನೀತಿಯನ್ನು ಶೀಘ್ರದಲ್ಲಿಯೇ ರೂಪಿಸುವುದಾಗಿ ತಿಳಿಸಿದೆ. ವಿದ್ಯುತ್‌ ಚಾಲಿತ ವಾಹನ ಉತ್ಪಾದಕರು ಮತ್ತು ಗ್ರಾಹಕರಿಗೆ ತೆರಿಗೆ ಪದ್ಧತಿ ಸರಳಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಶೇ 80 ರಷ್ಟು ತೆರಿಗೆ ಇಳಿಕೆ!

ಶೇ 80 ರಷ್ಟು ತೆರಿಗೆ ಇಳಿಕೆ!

ವಿದ್ಯುತ್‌ಚಾಲಿತ ವಾಹನ ಮತ್ತು ಇಂತಹ ವಾಹನಗಳ ತಯಾರಿಗೆ ಬೇಕಾಗಿರುವ ವಸ್ತುಗಳ ಆಮದು ಸುಂಕ ಕಡಿತಕ್ಕೆ ಸರ್ಕಾರ ಆಲೋಚಿಸಿದೆ. ಇದೇ ವೇಳೆಯಲ್ಲಿ ವಿದ್ಯುತ್‌ಚಾಲಿತ ವಾಹನ ಖರೀದಿಸುವ ಗ್ರಾಹಕರಿಗೆ ಶೇ 80ರಷ್ಟು ತೆರಿಗೆ ಇಳಿಕೆ ಮಾಡುವ ದೂರದೃಷ್ಟಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ.

ರಾಜ್ಯದಿಂದಲೂ ಕೊಡುಗೆ

ರಾಜ್ಯದಿಂದಲೂ ಕೊಡುಗೆ

ಬೆಂಗಳೂರು ನಗರದ ಪ್ರಮುಖ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಸೇರಿದಂತೆ ಹಲವು ಉದ್ಯಾನವನಗಳಲ್ಲಿ ಒಟ್ಟು 124 ಕಡೆಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಭಾರೀ ಕೊಡುಗೆಗಳನ್ನು ನೀಡುವ ಮೂಲಕ ವಿದ್ಯುತ್ ಚಾಲಿತ ವಾಹನಗಳ ಪ್ರಚಾರಕ್ಕೆ ನಿಂತಿದೆ.!

ಇ–ಮೊಬಿಲಿಟಿ ಸೇವೆ.

ಇ–ಮೊಬಿಲಿಟಿ ಸೇವೆ.

ವಿದ್ಯುತ್‌ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರ ‘ಇ-ಮೊಬಿಲಿಟಿ' ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ. ಈ ಪ್ರಚಾರದ ಭಾಗವಾಗಿ ನಗರದ ಖಾಸಗಿ ಉದ್ಯೋಗಿಗಳಿಗೆ 1,000 ವಿದ್ಯುತ್‌ಚಾಲಿತ ಕಾರುಗಳ ಸೇವೆಯನ್ನು ನೀಡಲು ಮುಂದಾಗಿದೆ. ನೂತನ ಚಾರ್ಜಿಂಗ್ ಪಾಯಿಂಟ್‌ಗಳು ಇವರಿಗೆ ಸಹಾಯಕವಾಗಲಿವೆ.

ಮೂಲ ಸೌಕರ್ಯಗಳು ಇವೆಯೇ?

ಮೂಲ ಸೌಕರ್ಯಗಳು ಇವೆಯೇ?

ವಿದ್ಯುತ್‌ಚಾಲಿತ ವಾಹನಗಳ ಬಳಕೆ ಹೆಚ್ಚಿದಂತೆ ಚಾರ್ಜಿಂಗ್ ಕೇಂದ್ರಗಳಂತಹ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ನಗರ, ಪಟ್ಟಣಗಳಲ್ಲದೇ ಹಳ್ಳಿಗಳಲ್ಲಿಯೂ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬೇಕಿದೆ. ವಿದ್ಯುತ್‌ಚಾಲಿತ ವಾಹನಗಳಿಗೆ (electric vehicles- ಇ.ವಿ) ಚಾರ್ಜಿಂಗ್‌ ಮಾಡಿಸುವ ರಾಜ್ಯದ ಮೊದಲ ಕೇಂದ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ.

Best Mobiles in India

English summary
The government proposes to set up charging stations for electric vehicles every three kilometres in cities. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X