ಮಾರುಕಟ್ಟೆಗೆ ಕಾಲಿಟ್ಟ ಮೊದಲ ಲಿನೊವೊ ಡ್ಯುಯಲ್ ಕ್ಯಾಮೆರಾ ಫೋನ್..!
ಮಾರುಕಟ್ಟೆಯಲ್ಲಿ ಫುಲ್ ಸ್ಕ್ರಿನ್ ಡಿಸ್ ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಆಗಿದ್ದು, ಎಲ್ಲಾ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಈ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿತ್ತು. ಆದರೆ ಲಿನೊವೊ ಮಾತ್ರವೇ ಈ ಮಾದರಿಯ ಫೋನ್ ಬಿಡುಗಡೆ ಮಾಡಿರಲಿಲ್ಲ. ಈ ಕಾರಣಕ್ಕಾಗಿಯೇ ತುಂಬ ದಿನಗಳ ಕಾಲದ ನಂತರ ಲಿನೊವೊ ಈ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.

ಚೀನಾದಲ್ಲಿ ಲಿನೊವೊ K320t ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ಇದು ಫುಲ್ ಸ್ಕ್ರಿನ್ ಡಿಸ್ ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಬೆಲೆ ರೂ. 10000ದ ಅಸುಪಾಸಿನಲ್ಲಿ ಇರಲಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಡಿಸೈನ್ ಡಿಸ್ ಪ್ಲೇ:
ಲಿನೊವೊ K320t ಸ್ಮಾರ್ಟ್ ಫೋನ್ ಪಾಲಿಕಾರ್ಬನ್ ಬಾಡಿ ಹೊಂದಿದ್ದು, 5.7ಇಂಚಿನ HD ಡಿಸ್ ಪ್ಲೇಯೊಂದಿಗೆ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ಕಾಣಬಹುದು. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದೆ.

ಪ್ರೋಸೆಸರ್:
1.3GHz ವೇಗದ ಕ್ವಾಡ್ ಕೋರ್ ಸೆರೆಡ್ರಮ್ ಪ್ರೋಸೆಸರ್ ಜೊತೆಗೆ 2GB RAM ಕಾಣಬಹುದಾಗಿದೆ. ಇದರೊಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಇದನ್ನು 128 GBವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ

ಕ್ಯಾಮೆರಾ:
ಲಿನೊವೊ K320t ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 8MP+2MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ. ಅಲ್ಲದೇ ಆಂಡ್ರಾಯ್ಡ್ ನ್ಯಾಗದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಜೊತೆಗೆ 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.


ಇತರೆ:
ಇದಲ್ಲದೇ ಲಿನೊವೊ K320t ಸ್ಮಾರ್ಟ್ ಫೋನ್ 4G ಯಲ್ಲಿ ಕಾರ್ಯನಿರ್ವಹಿಸಲಿದ್ದು, ವೈಫೈ, ಬ್ಲೂಟೂತ್, ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.


Click it and Unblock the Notifications








