ಏನಾಶ್ಚರ್ಯ! ನೀರಿಗೆ ಬಿದ್ದರೂ ತನ್ನಷ್ಟಕ್ಕೆ ರಿಪೇರಿಗೊಳ್ಳುವ ಐಫೋನ್

By Shwetha
|

ಆಪಲ್ ಅತ್ಯಾಧುನಿಕ ಪೇಟೆಂಟ್ ಒಂದನ್ನು ಸಿದ್ಧಪಡಿಸಿದೆ. ಈ ತಂತ್ರಜ್ಞಾನವು ಬಳಕೆದಾರರು ನಿದ್ದೆ ಹೋಗಿರುವಾಗ ತನ್ನಷ್ಟಕ್ಕೆ ತನ್ನುನ್ನು ರಿಪೇರಿ ಮಾಡಿಕೊಳ್ಳು ಕೌಶಲ್ಯವನ್ನು ಐಫೋನ್‌ಗೆ ನೀಡಲಿದೆ. ಬಳಕೆದಾರರ ನಿದ್ದೆ ಹೋಗಿದ್ದ ಸಂದರ್ಭದಲ್ಲಿ ಐಫೋನ್ ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳಬಹುದಾದ ಅಂಶವನ್ನು ಪಡೆದುಕೊಂಡಿದ್ದು ಅವರಿಂದ ಆಗದೇ ಇರುವ ಕೆಲಸವನ್ನು ತನ್ನಷ್ಟಕ್ಕೆ ತಾನೇ ಮಾಡಿಕೊಳ್ಳಬಹುದಾದ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ.

ಓದಿರಿ: ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

ಹೆಚ್ಚಿನ ವಾತಾವರಣ ದೋಷಗಳು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಹಾಳುಮಾಡಿಬಿಡುತ್ತವೆ. ಅಂದರೆ ನೀರು, ಧೂಳು, ಗಾಳಿ, ಶಾಕ್, ಇಲೆಕ್ಟ್ರಾನಿಕ್ ಇಂಟರ್ಫೇಸ್ ಕಾರ್ಯಕ್ಷಮತೆಯ ಮೇಲೆ ಪರಿಣಾಮವನ್ನು ಬೀರಬಹುದು. ಇದರಿಂದಾಗಿ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ಆಪಲ್ ಸ್ಟೋರ್‌ಗೆ ತೆಗೆದುಕೊಂಡು ಹೋಗಿ ಅದನ್ನು ರಿಪೇರಿ ಮಾಡುವಂತಹ ತೊಂದರೆ ಇರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಐಫೋನ್ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ವಿಧಾನ ಹೇಗಿದೆ ಎಂಬದನ್ನು ನೋಡೋಣ.

ಐಫೋನ್ ಒದ್ದೆ

ಐಫೋನ್ ಒದ್ದೆ

ಹೆಚ್ಚು ಕಡಿಮೆ ನಮ್ಮ ಐಫೋನ್ ಒದ್ದೆಯಾಗುವಂತಹ ಪರಿಸ್ಥಿತಿಗಳು ಉಂಟಾಗುತ್ತಿರುತ್ತದೆ. ಆಗ ಪೇಟೆಂಟ್ ಅಪ್ಲಿಕೇಶನ್ ಸ್ಪೀಕರ್‌ನಿಂದ ನೀರನ್ನು ಹೊರಕ್ಕೆ ಹಾಕುವ ವಿಶೇಷ ಟೋನ್ ಒಂದನ್ನು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ. ಇದು ಬಳಕೆದಾರರಿಗೆ ಕಿರಿಕಿರಿಯನ್ನುಂಟು ಮಾಡಬಹುದು ಆದ್ದರಿಂದಲೇ ಪ್ರತೀಕೂಲ ಸಮಯವನ್ನು ಕಂಡು ಐಫೋನ್ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ಐಫೋನ್‌ನ ಆಡಿಯೊ ಶ್ರೇಣಿ

ಐಫೋನ್‌ನ ಆಡಿಯೊ ಶ್ರೇಣಿ

ಐಫೋನ್‌ನ ಆಡಿಯೊ ಶ್ರೇಣಿಯಿಂದ ಬಳಕೆದಾರರು ದೂರವಿದ್ದಾಗ, ಬಳಕೆದಾರರು ಮತ್ತು ಐಫೋನ್ ಹೆಚ್ಚಿನ ಜನನಿಬಿಡ ಸ್ಥಳದಲ್ಲಿದ್ದಾಗ, ಶಬ್ಧದ ಜಾಗದಲ್ಲಿ ಅಂದರೆ ರಸ್ತೆಗಳು, ಸಭೆಸಮಾರಂಭಗಳನ್ನು ಇದಕ್ಕಾಗಿ ಐಫೋನ್ ಬಳಸಿಕೊಳ್ಳುತ್ತದೆ.

ಹೊಸ ತಂತ್ರಜ್ಞಾನ

ಹೊಸ ತಂತ್ರಜ್ಞಾನ

ಐಫೋನ್ ಕೊಳದಲ್ಲಿ ಬಿದ್ದಾಗ, ಮಳೆಗೆ ಒದ್ದೆಯಾದಾಗ ಕೂಡ ಈ ಹೊಸ ತಂತ್ರಜ್ಞಾನ ಐಫೋನ್ ಅನ್ನು ಹಾನಿಗೀಡಾಗದಂತೆ ಕಾಪಾಡಲು ಸಹಾಯ ಮಾಡುತ್ತದೆ.

ಎಲ್‌ಇಡಿ ಬರ್ನ್

ಎಲ್‌ಇಡಿ ಬರ್ನ್

ಎಲ್‌ಇಡಿ ಬರ್ನ್ ಇನ್ನೊಂದು ವಿಶೇಷತೆಯಾಗಿದೆ. ಲೈಟ್ ಎಮಿಟಿಂಗ್ ಡಿಯೋಡ್ ಎಂಬುದು ಇದರ ವಿಸ್ತೃತ ರೂಪವಾಗಿದೆ. ಐಫೋನ್ ಡಿಸ್‌ಪ್ಲೇಯಲ್ಲಿ ಡಾರ್ಕ್ ಪಿಕ್ಸೆಲ್ ಅಥವಾ ಮಿಸ್ಸಿಂಗ್ ಲೈನ್ಸ್ ಅನುಭವವನ್ನು ಬಳಕೆದಾರರು ಕಂಡುಕೊಂಡಿರಬಹುದು.

ರಿಪೇರಿ ವಿಧಾನ

ರಿಪೇರಿ ವಿಧಾನ

ಈ ರಿಪೇರಿ ವಿಧಾನವು ಹಲವಾರು ಬೆಳಕಿನ ಬಣ್ಣಗಳನ್ನು ಮತ್ತು ಪ್ಯಾಟ್ರನ್‌ಗಳನ್ನು ಸೈಕ್ಲಿಂಗ್ ಮಾಡುತ್ತದೆ. ಬಳಕೆದಾರರು ಐಫೋನ್‌ನ ಡಿಸ್‌ಪ್ಲೇಯನ್ನು ನೋಡುತ್ತಿರುವಾಗ ಇದು ತೊಂದರೆಯನ್ನುಂಟು ಮಾಡುವುದು ಸಹಜವೇ.ಅದಕ್ಕಾಗಿಯೇ ಸರಿಯಾದ ಸಮಯವೆಂದರೆ ಬಳಕೆದಾರರ ನಿದ್ದೆಹೋಗಿರುವ ಸಮಯ ಇಲ್ಲವೇ ಜನನಿಬಿಡ ಪ್ರದೇಶಗಳು.

ಸ್ವಯಂಚಾಲಿತ

ಸ್ವಯಂಚಾಲಿತ

ಬಳಕೆದಾರರು ಐಫೋನ್ ಅನ್ನು ಕೊಠಡಿಯಲ್ಲೇ ಬಿಟ್ಟು ಹೋಗಿರುವ ಸಮಯವನ್ನು ಇದಕ್ಕಾಗಿ ಐಫೋನ್ ಬಳಸಿಕೊಳ್ಳುತ್ತದೆ.ಸೈಕ್ಲಿಂಗ್ ನಡೆಯುತ್ತಿದ್ದ ವೇಳೆ ಬಳಕೆದಾರರು ಫೋನ್ ಅನ್ನು ಬಳಸಿದಲ್ಲಿ ಇದು ಸ್ವಯಂಚಾಲಿತವಾಗಿ ತಾನು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿ ಬಳಕೆದಾರರಿಗೆ ಯೋಗ್ಯವಾದ ಸಮಯವನ್ನು ತೆಗೆದುಕೊಂಡು ತನ್ನ ಕಾರ್ಯವನ್ನು ನಡೆಸುತ್ತದೆ.

ಕರೆ ಸಂಪರ್ಕ ದೋಷ

ಕರೆ ಸಂಪರ್ಕ ದೋಷ

ಕರೆ ಸಂಪರ್ಕ ದೋಷಗಳನ್ನು ಬಳಕೆದಾರರಿಗೆ ತೊಂದರೆಯಾಗದಂತಹ ರೀತಿಯಲ್ಲಿ ಐಫೋನ್ ತನ್ನಷ್ಟಕ್ಕೆ ತಾನೇ ಸರಿಪಡಿಸಿಕೊಳ್ಳತ್ತದೆ. ಆಪಲ್ ತನ್ನ ಹೊಸ ಅನ್ವೇಷಣೆಯನ್ನು ಇನ್ನೂ ಅಭಿವೃದ್ಧಿಪಡಿಸುತ್ತಿದ್ದು ತನ್ನ ಮುಂದಿನ ಐಫೋನ್‌ನಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ನಿರ್ಧಾರದಲ್ಲಿದೆ.

ಆಪಲ್ ಸ್ಟೋರ್‌

ಆಪಲ್ ಸ್ಟೋರ್‌

ಈ ತಂತ್ರಜ್ಞಾನ ಐಫೋನ್‌ಗೆ ಬಂದಲ್ಲಿ ಆಗಾಗ್ಗೆ ಆಪಲ್ ಸ್ಟೋರ್‌ಗೆ ಭೇಟಿ ಕೊಡುವ ಬಳಕೆದಾರರ ಕಷ್ಟವನ್ನು ಇದು ಸಂಪೂರ್ಣವಾಗಿ ನಿವಾರಿಸಲಿದೆ. ಈ ತಂತ್ರಜ್ಞಾನ ಅತ್ಯುತ್ತಮವಾಗಿದ್ದು ಕಾರ್ಯರೂಪಕ್ಕೆ ಬಂದಲ್ಲಿ ಬಳಕೆದಾರರಿಗೆ ಇದು ಉತ್ತಮ ಕೊಡುಗೆಯಾಗಿ ಸಹಕಾರಿಯಾಗಲಿದೆ.

Best Mobiles in India

English summary
Apple has filed an interesting new patent. This technology would allow the iPhone to maintain and repair itself while the user is asleep, in a loud environment, or away from the phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X