ಹಾನರ್ ವಿವ್ 10 Vs ಒನ್‌ಪ್ಲಸ್ 5T: ಯಾವುದು ಬೆಸ್ಟ್..? ಕೊಡುವ ಬೆಲೆಗೆ ಯಾವುದು ಸೂಕ್ತ..?

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಗಳ ಆರ್ಭಟವು ಹೆಚ್ಚಾಗಿದೆ. ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಹಾನರ್ ಮತ್ತು ಒನ್‌ಪ್ಲಸ್ ಕಂಪನಿಗಳು ಟಾಪ್‌ ಎಂಡ್ ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಗಳು ಗ್ರಾಹಕರಿಗೆ ಒಂದೇ ಮಾದರಿಯಲ್ಲಿ ಕಾಣಿಸಿಕೊಂಡಿವೆ ಈ ಹಿನ್ನಲೆಯಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳ ಕುರಿತ ಸಂಫೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

 ಹಾನರ್ ವಿವ್ 10 Vs ಒನ್‌ಪ್ಲಸ್ 5T: ಯಾವುದು ಬೆಸ್ಟ್..? ಯಾವುದು ಸೂಕ್ತ..?

ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಎರಡು ಸಹ ಫುಲ್‌ಸ್ಕ್ರಿನ್ ಡಿಸ್‌ಪ್ಲೇ, ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೇರಿದಂತೆ ಒಂದೇ ಮಾದರಿಯ ವಿಶೇಷತೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ರೂ.32,999ರಿಂದ ಆರಂಭವಾಗಲಿದೆ, ಇದೇ ಮಾದರಿಯಲ್ಲಿ ಹಾನರ್ ವಿವ್ 10 ಸ್ಮಾರ್ಟ್‌ಫೋನ್ ರೂ.29,999ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ಮುಂದಿನಂತೆ ನೋಡುವ.

ಓದಿರಿ: ಬರಲಿದೆ ಭಾರತದ್ದೇ ಕ್ರಿಪ್ಟೋಕರೆಸ್ಸಿ: 'ಜಿಯೋ ಕಾಯಿನ್' ಅಂಬಾನಿ ಬಿಗ್ ಪ್ರಾಜೆಕ್ಟ್‌..!

ಡಿಸೈನ್ ಮತ್ತು ಡಿಸ್‌ಪ್ಲೇ:

ಡಿಸೈನ್ ಮತ್ತು ಡಿಸ್‌ಪ್ಲೇ:

ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಾಗಿದ್ದು, ಎರಡು ಸಹ ಮೆಟೆಲ್ ಬಾಡಿಯನ್ನು ಹೊಂದಿವೆ. ಕಡಿಮೆ ಅಂಚುಗಳ ವಿನ್ಯಾಸದಿಂದ ಕೂಡಿವೆ. ಆದರೆ ವಿವ್ 10 ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ, ಇದು ಸ್ಮಾರ್ಟ್‌ಫೋನ್ ಲುಕ್‌ ಹೆಚ್ಚಿಸಿದೆ. ಆದರೆ ಒನ್‌ಪ್ಲಸ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ ಕಾಣಿಸಿಕೊಂಡಿದೆ.

ಎರಡು ಸ್ಮಾರ್ಟ್‌ಫೋನಿನಲ್ಲಿ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಎರಡರಲ್ಲೂ 18:9 ಅನುಪಾತದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಹಾನರ್ ವಿವ್ 10ನಲ್ಲಿ LED ಡಿಸ್‌ಪ್ಲೇ ಇದ್ದರೇ ಒನ್ ಪ್ಲಸ್ 5Tಯಲ್ಲಿ 6.1 ಇಂಚಿನ OLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ.

ಹಾರ್ಡ್‌ವೇರ್:

ಹಾರ್ಡ್‌ವೇರ್:

ಈ ಎರಡು ಟಾಪ್ ಎಂಡ್ ಆಂಡ್ರಾಯ್ಡ್ ಫೋನಿನಲ್ಲಿ ಬೇರೆ ಬೇರೆ ಮಾದರಿಯ ಫಾಗ್‌ಶಿಪ್ ಚಿಪ್‌ಸೆಟ್ ಕಾಣಬಹುದಾಗಿದೆ. ಇದರಲ್ಲಿ ಹಾನರ್ ವಿವ್ 10 ಸ್ಮಾರ್ಟ್‌ಫೋನಿನಲ್ಲಿ ಕಿರನ್ 970 AI ಚಿಪ್‌ಸೆಟ್‌ ಅನ್ನು ಒಳಗೊಂಡಿದ್ದು, ಇದು NPU ಹೊಂದಿದೆ. ಇದು ಪೋಟೋಗ್ರಫಿ, ಮೀಡಿಯಾ ಪ್ಲೇ ಬ್ಯಾಕ್, ಬ್ಯಾಟರಿ ಬಾಳಿಕೆ, ಗೇಮಿಂಗ್ ಅನ್ನು ಉತ್ತಮ ಪಡಿಸಲಿದೆ ಎನ್ನಲಾಗಿದೆ.

ಕಿರನ್ 970 AI ಚಿಪ್‌ಸೆಟ್‌ ಎಲ್ಲಾ ಮಾದರಿಯಲ್ಲೂ ಉತ್ತಮವಾಗಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ 5Tಯಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಒಳಗೊಂಡಿದೆ.

ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಎರಡು ಸಹ 6GB RAMನೊಂದಿಗೆ ಕಾಣಿಸಿಕೊಂಡರೂ ಸಹ AI ಚಿಪ್‌ಸೆಟ್‌ ಹಾನರ್ ವಿವ್ 10 ಹೆಚ್ಚಿನ ಬ್ಯಾಟರಿ ಮತ್ತು ವೇಗವನ್ನು ಹೊಂದಲು ಸಹಕಾರಿಯಾಗಿದೆ.

ಕ್ಯಾಮೆರಾ ವಿಚಾರ:

ಕ್ಯಾಮೆರಾ ವಿಚಾರ:

ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಲೆನ್ಸ್ ಅನ್ನು ಕಾಣಬಹುದಾಗಿದೆ. ಎರಡು ಸಹ ಉತ್ತಮ ಪೋಟ್ರೆಟ್ ಗಳನ್ನು ಸೆರೆಹಿಡಿಯಲು ಶಕ್ತವಾಗಿವೆ ಎನ್ನಲಾಗಿದೆ. ಹಾನರ್ ವಿವ್ 10ನಲ್ಲಿ 20MP ಮೊನೊಕ್ರೋಮ್ ಲೆಲ್ಸ್ ಮತ್ತು 16MP RGB ಲೆನ್ಸ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಇರುವ AI ಫೋಟೋಗ್ರಫಿಯನ್ನು ಉತ್ತಮಪಡಿಸಲಿದೆ. ಆದರೆ ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದರೂ AI ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ಸಾಫ್ಟ್‌ವೇರ್:

ಸಾಫ್ಟ್‌ವೇರ್:

ಹಾನರ್ ವಿವ್ 10 ಮತ್ತು ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ಗಳೇರಡು ಬೆಸ್ಟ್‌ ಸಾಫ್ಟ್‌ವೇರ್‌ಗಳನ್ನು ಹೊಂದಿದೆ ಎನ್ನಬಹುದಾಗಿದೆ. ಎರಡರಲ್ಲೂ ಆಂಡ್ರಾಯ್ಡ್ ಒರಿಯೋ 8.0ವನ್ನು ಕಾಣಬಹುದಾಗಿದೆ. ಒನ್‌ಪ್ಲಸ್ 5T ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸಿದರೆ ಹಾನರ್ ವಿವ್ 10 ಸ್ಮಾರ್ಟ್‌ಫೋನ್ ಆಂಡ್ರಾಂಯ್ಡ್ ಮೇಲೆ ತನ್ನದೇ EMUI 8.0ವನ್ನು ಹೊಂದಿದ್ದು, ಹೆಚ್ಚು ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಬ್ಯಾಟರಿ ಮತ್ತು ಕನೆಕ್ಟಿವಿಟಿ:

ಬ್ಯಾಟರಿ ಮತ್ತು ಕನೆಕ್ಟಿವಿಟಿ:

ಹಾನರ್ ವಿವ್ 10 ಬ್ಯಾಟರಿ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳಲಿದೆ. AI ಚಿಪ್‌ ಸೆಟ್ ಈ ಸ್ಮಾರ್ಟ್ ಫೋನ್ ಬ್ಯಾಟರಿಯ ಬಾಳಿಕೆಯನ್ನು ಹೆಚ್ಚು ಮಾಡುತ್ತಿದೆ. ಇದಲ್ಲದೇ ಈ ಫೋನಿನಲ್ಲಿ 3,750mAh ಬ್ಯಾಟರಿಯನ್ನು ನೀಡಲಾಗಿದ್ದು, ಒನ್‌ಪ್ಲಸ್ 5Tಯಲ್ಲಿ 3,300mAh ಬ್ಯಾಟರಿಯನ್ನು ಹೊಂದಿದೆ.

ಹಾನರ್ ವಿವ್ 10 ಸ್ಮಾರ್ಟ್‌ಫೋನ್‌ನಲ್ಲಿ ಎರಡು 4G VoLTE ಸಿಮ್‌ ಹಾಕಬಹುದಾಗಿದೆ. ಆದರೆ ಒನ್‌ಪ್ಲಸ್‌ನಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಕೊನೆಯದಾಗಿ:

ಕೊನೆಯದಾಗಿ:

ಹಾನರ್ ವಿವ್ 10 ಸ್ಮಾರ್ಟ್ ಫೋನ್ ಬೆಲೆ, ಬ್ಯಾಟರಿ, ಕೆನ್ಟಿವಿಟಿ, ಕ್ಯಾಮೆರಾ ಎಲ್ಲಾ ವಿಭಾಗದಲ್ಲಿಯೂ ಮುಂದಿದೆ. ಗ್ರಾಹಕರ ಆಯ್ಕೆಗೆ ಎರಡು ಸ್ಮಾರ್ಟ್‌ ಫೋನ್ ಗಳು ಬೆಸ್ಟ್ ಆಗಬಹುದು. ಯಾವ ವಿಶೇಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನುವುದರ ಮೇಲೆ ಅದು ನಿರ್ಧಾರವಾಗಲಿದೆ.

Best Mobiles in India

English summary
Honor View 10 vs OnePlus 5T: Which offers better value for your money. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X