ಆನ್‌ಲೈನ್‌ ಶಾಪಿಂಗ್‌ ವ್ಯವಹಾರಕ್ಕೆ ಎಂಟ್ರಿ ಕೊಡಲಿರುವ ರಿಲಾಯನ್ಸ್‌

Written By:

ಭಾರತದಲ್ಲಿ ಆನ್‌ಲೈನ್‌ ವಹಿವಾಟು ಹೆಚ್ಚಾಗುತ್ತಿದ್ದಂತೆ ವಿದೇಶಿ ಕಂಪೆನಿಗಳ ಜೊತೆಗೆ ಭಾರತದ ಕಂಪೆನಿಗಳು ಆನ್‌ಲೈನ್‌ ಶಾಪಿಂಗ್‌ ತಾಣಗಳನ್ನು ಆರಂಭಿಸಲು ಮುಂದಾಗುತ್ತಿವೆ. ಈಗ ರಿಲಾಯನ್ಸ್‌ ಕಂಪೆನಿ ಆನ್‌ಲೈನ್‌ ಶಾಪಿಂಗ್‌ ವ್ಯವಹಾರ ಆರಂಭಿಸಲು ಯೋಜನೆ ರೂಪಿಸುತ್ತಿದ್ದು, ಯೋಜನೆ ಪೂರ್ಣ‌ಗೊಂಡರೆ ಮುಂದಿನ ಎಂಟು ತಿಂಗಳೊಳಗೆ ರಿಲಾಯನ್ಸ್‌ ಆನ್‌ಲೈನ್‌ ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸಬಹುದು.

ದೇಶದಲ್ಲಿ ಇಂಟರ್‌ನೆಟ್‌ ಬಳಕೆ ಹೆಚ್ಚುತ್ತಿದ್ದಂತೆ ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವ ಸಂಖ್ಯೆ ಹೆಚ್ಚುತ್ತಿದ್ದು ಈಗಾಗಲೇ ವಿದೇಶಿ ಕಂಪೆನಿಗಳಾದ ಇ ಬೇ, ಅಮೆಜಾನ್‌.ಕಾಂ ಗಳು ಭಾರತದಲ್ಲಿ ತನ್ನ ಆನ್‌ಲೈನ್‌ ಶಾಪಿಂಗ್‌ ತಾಣಗಳನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಈ ಉದ್ಯಮ ಮತ್ತಷ್ಟು ಬೆಳೆಯುವ ಸಾಧ್ಯತೆ ಇರುವುದರಿಂದ ಬಿಲಿಯನೇರ್‌ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಹ ಸಂಸ್ಥೆ ರಿಲಾಯನ್ಸ್‌ ರೀಟೆಲ್‌ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

 ಆನ್‌ಲೈನ್‌ ಶಾಪಿಂಗ್‌ ವ್ಯವಹಾರಕ್ಕೆ ಎಂಟ್ರಿ ಕೊಡಲಿರುವ ರಿಲಾಯನ್ಸ್‌

ದೇಶದ ರಿಟೇಲ್‌ ಕ್ಷೇತ್ರಕ್ಕೆ 2006ರಲ್ಲಿ ಕಾಲಿರಿಸಿದ ರಿಲಾಯನ್ಸ್‌‌‌ ಈಗಾಗಲೇ ವಿವಿಧ ಮಹಾನಗರಗಳಲ್ಲಿ 1,500 ರಿಟೇಲ್‌ ಮಳಿಗೆಗಳನ್ನು ತೆರೆದಿದೆ. ಬಟ್ಟೆ, ಗೃಹೋಪಯೋಗಿ,ಎಲೆಕ್ಟ್ರಾನಿಕ್ಸ್‌‌, ತರಕಾರಿ, ಜುವೆಲ್ಲರಿ ಸ್ಟೋರ್‌‌ಗಳನ್ನು ತೆರೆಯವ ಮೂಲಕ ರಿಟೇಲ್‌ ಉದ್ಯಮದಲ್ಲಿ ದೊಡ್ಡ ಕಂಪೆನಿಯಾಗಿ ಬೆಳೆದಿದೆ.

ಭಾರತದ ಇ ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡಿರುವ ಟೆಕ್ನೋಪಾರ್ಕ್‌‌ ಆನ್‌ಲೈನ್‌ ಶಾಪಿಂಗ್‌ ಮಾರುಕಟ್ಟೆ ಸದ್ಯ 600 ಮಿಲಿಯನ್‌ ಡಾಲರ್‌ ವಹಿವಾಟು ನಡೆದರೆ, 2020ಕ್ಕೆ ಈ ಕ್ಷೇತ್ರ‍ದಲ್ಲಿ 70 ಬಿಲಿಯನ್‌ ಡಾಲರ್‌ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ.

ದೇಶದಲ್ಲಿ ಈಗಾಗಲೇ ಸ್ನಾಪ್‌ಡೀಲ್‌,ಫ್ಲಿಪ್‌ಕಾರ್ಟ್‌‌,ಸಾಹೋಲಿಕ್‌,ಇನ್‌ಫಿಬಿಮ್‌.ಕಾಂ ಸೇರಿದಂತೆ ವಿದೇಶದ ಇ ಬೇ. ಮತ್ತು ಅಮೆಜಾನ್‌.ಕಾಂ ಆನ್‌ಲೈನ್‌ ಶಾಪಿಂಗ್‌ ತಾಣಗಳು ಜನರಿಗೆ ಸೇವೆ ನೀಡುತ್ತಿವೆ. ಈ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶವಿರುವುದರಿಂದ ವಿದೇಶದ ಮತ್ತಷ್ಟು ಕಂಪೆನಿಗಳು ದೇಶದಲ್ಲಿ ಆನ್‌ಲೈನ್‌ ಶಾಪಿಂಗ್‌ ತೆರೆಯುವ ಸಾಧ್ಯತೆ ಇದೆ. ಹೀಗಾಗಿ ಅದಷ್ಟು ಶೀಘ್ರದಲ್ಲೇ ರಿಲಾಯನ್ಸ್‌ ಆನ್‌ಲೈನ್‌ ಶಾಪಿಂಗ್‌ ತೆರೆಯುವ ಸಾಧ್ಯತೆ ಇದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot