Just In
Don't Miss
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ 'ಹುವಾವೆ ಎಂಜಾಯ್ ಪ್ಲಸ್ 10'!
ಹುವಾವೆ ಸಂಸ್ಥೆಯು ತನ್ನ ವಿವಿಧ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿಗೆ ಸ್ವಂತ ಹೊಸ ಓಎಸ್ ಲಾಂಚ್ ಮಾಡಿ ವ್ಯಾಪಕ ಸುದ್ದಿ ಮಾಡಿತು. ಈ ನಿಟ್ಟಿನಲ್ಲಿ ಸಂಸ್ಥೆಯು ಈಗ ಮಿಡ್‌ರೇಂಜ್ ಮಾದರಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಮತ್ತು ಹಿಂಬದಿಯಲ್ಲಿ 48ಎಂಪಿ ಸೆನ್ಸಾರ್ ಕ್ಯಾಮೆರಾ ಈ ಸ್ಮಾರ್ಟ್‌ಫೋನ್ ಕೀ ಫೀಚರ್ಸ್‌ಗಳಾಗಿವೆ.

ಹೌದು, ಹುವಾವೆ ಸಂಸ್ಥೆಯು ತನ್ನ ನೂತನ 'ಹುವಾವೆ ಎಂಜಾಯ್ ಪ್ಲಸ್ 10' ಸ್ಮಾರ್ಟ್‌ಫೋನ್ ಇದೇ ಸೆಪ್ಟಂಬರ್ 5ರಂದು ಚೀನಾ ಮಾರುಕಟ್ಟೆಗೆ ಪರಿಚಿಸಲಿದೆ. ಈ ಸ್ಮಾರ್ಟ್‌ಫೋನ್ ಹಿಸಿಲಿಕಾನ್ ಕಿರಿನ್ 710 SoC ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು, ಆಂಡ್ರಾಯ್ಡ್ v9.0 ಪೈ ಓಎಸ್ ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 4GB + 64GB, 4GB + 128GB, 6GB + 128GB, ಮತ್ತು 8GB + 128GB ವೇರಿಯಂಟ್‌ಗಳ ಆಯ್ಕೆ ಹೊಂದಿದೆ.

ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ಕ್ಯಾಮೆರಾಗಳಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸಾಮರ್ಥ್ಯದಲ್ಲಿರಲಿದೆ. ಹಾಗೆಯೇ ಬ್ಲ್ಯಾಕ್, ಜಾಡ್ ಗ್ರೀನ್, ಫ್ಲೆಮ್ ರೆಡ್ ಮತ್ತು ಗ್ರಾಡಿಯಂಟ್ ವೈಟ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಾದರೇ ಹುವಾವೆ ಎಂಜಾಯ್ ಪ್ಲಸ್ 10 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

1,080 x 2,340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.59 ಇಂಚಿನ ಫುಲ್‌ಸ್ಕ್ರೀನ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಇರಲಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 391 ppi ಆಗಿದೆ. ಡಿಸ್‌ಪ್ಲೇಯ ಸುತ್ತಳತೆಯು 163.5 mm x 77.3 mm x 8.8 mmರಷ್ಟಿದ್ದು, ಹಾಗೆಯೇ ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅಂತರ ಶೇ.84.17 % ರಷ್ಟಾಗಿದೆ.

ಹುವಾವೆ ಎಂಜಾಯ್ ಪ್ಲಸ್ 10 ಸ್ಮಾರ್ಟ್‌ಫೋನ್ ಹಿಸಿಲಿಕಾನ್ ಕಿರಿನ್ 710 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ v9.0 ಪೈ ಓಎಸ್ ಬೆಂಬಲವನ್ನು ಪಡೆದಿದೆ. ಹಾಗೆಯೇ ಈ ಫೋನ್ ನಾಲ್ಕು ವೇರಿಯಂಟ್‌ಗಳ ಆಯ್ಕೆಯನ್ನು ಹೊಂದಿದ್ದು, ಅವುಗಳು ಕ್ರಮವಾಗಿ 4GB + 64GB, 4GB + 128GB, 6GB + 128GB, ಮತ್ತು 8GB + 128GB ವೇರಿಯಂಟ್‌ಗಳಾಗಿವೆ.

ಹುವಾವೆ ಎಂಜಾಯ್ ಪ್ಲಸ್ 10 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೆನ್ಸಾರ್ ಲೆನ್ಸ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿರಲಿದೆ. ಹಾಗಾಯೇ ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ನೀಡಲಾಗಲಿದೆ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಆಯ್ಕೆ ಇರಲಿದೆ.

ಹುವಾವೆ ಎಂಜಾಯ್ ಪ್ಲಸ್ 10 ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿರಲಿದ್ದು, ಆದ್ರೆ ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹಾಗೆಯೇ ಇದರೊಂದಿಗೆ ಬ್ಲೂಟೂತ್ 5, ವೈಫೈ, ಜಿಪಿಎಸ್, ಆಂಬಿಯಂಟ್ ಮೋಡ್, ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್ ಇರಲಿವೆ. ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಸಹ ಇರಲಿದೆ ಎನ್ನಲಾಗಿದೆ.

ಹುವಾವೆ ಎಂಜಾಯ್ ಪ್ಲಸ್ 10 ಸ್ಮಾರ್ಟ್‌ಫೋನ್ ಒಮದು ಮಿಡ್‌ರೇಂಜ್ ಮಾದರಿಯ ಫೋನಾಗಿದ್ದು, ಇದೇ ಸೆಪ್ಟಂಬರ್ 5ರಂದು ಮೊದಲು ಚೀನಾದಲ್ಲಿ ಲಾಂಚ್ ಆಗಲಿದೆ. ಭಾರತೀಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಕಂಪನಿ ನಿಖರ ಮಾಹಿತಿ ಹೊರಹಾಕಿಲ್ಲ. ಈ ಸ್ಮಾರ್ಟ್‌ಫೋನ್ ಹೈ ವೇರಿಯಂಟ್ ಬೆಲೆಯು 21,999ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470